Udayavni Special

ಮೋದಿ ಹಸಿ ಸುಳ್ಳಿನ ಸರದಾರ: ಮುಖ್ಯಮಂತ್ರಿ ಚಂದ್ರು


Team Udayavani, Apr 17, 2019, 4:38 PM IST

dvg-1

ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಸಿ ಸುಳ್ಳಿನ ಸರದಾರ, ಮಾತಿನ ಮೋಡಿಗಾರ ಎಂದು ಕಾಂಗ್ರೆಸ್‌ ಮುಖಂಡ, ಚಿತ್ರನಟ ಮುಖ್ಯಮಂತ್ರಿ ಚಂದ್ರು ದೂರಿದ್ದಾರೆ.

ಮೋದಿಯವರ ಯೋಜನೆಗಳು ಶ್ರೀಮಂತರಿಗೆ ಸಿಹಿ, ಬಡವರಿಗೆ ಕಹಿ ಎನ್ನುವಂತೆ ಇವೆ. ಕಾಂಗ್ರೆಸ್‌ ಬರೀ ಪಕ್ಷ ಅಲ್ಲ. ದೇಶದ ಆತ್ಮ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್‌ನವರು 70 ವರ್ಷದಲ್ಲಿ ಮಾಡಲಿಕ್ಕೆ ಆಗದೇ ಇರುವುದನ್ನ ಐದು ವರ್ಷದಲ್ಲಿ ಮಾಡಿದ್ದೇವೆ ಎಂಬುದಾಗಿ ನರೇಂದ್ರ ಮೋದಿ ಹೇಳಿಕೊಳ್ಳುವುದು ಬರೀ ಹಸಿ ಸುಳ್ಳು.

ಹಿಂದಿನ ಎಲ್ಲಾ ಸರ್ಕಾಗಳು ಗಟ್ಟಿ ಭಾರತವನ್ನ ಕಟ್ಟಿರುವ ಕಾರಣದಿಂದಾಗಿಯೇ ಪ್ರಧಾನಿ ಆಗಿರುವುದನ್ನ ಮೋದಿ ಅವರು ಮರೆಯಬಾರದು ಎಂದು ಹೇಳಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಕಡ್ಡಾಯ ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಕಾಯ್ದೆ, ಎನ್‌ಆರ್‌ಎಚ್‌ಎಂ, ಮಧ್ಯಾಹ್ನದ ಬಿಸಿಯೂಟ, ಹಸಿರೇ ಉಸಿರು, ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಯಾರು ಎಂಬುದಕ್ಕೆ ಮೋದಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಆಧಾರ್‌, ಜಿಎಸ್‌ಟಿಗೆ ಪ್ರಬಲ ವಿರೋಧ ಮಾಡಿದ್ದಂತಹ ಮೋದಿ ಅವರು ಈಗ ಅವುಗಳನ್ನೇ ಮುಂದುವರಿಸಿದ್ದಾರೆ. ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ಸ್ವಿಸ್‌ ಬ್ಯಾಂಕ್‌ನಿಂದ ಕಪ್ಪುಹಣ ತಂದು ಜನರ ಖಾತೆಗೆ 15 ಲಕ್ಷ ಹಾಕಲಿಲ್ಲ. ಐದು ವರ್ಷ ಅಧಿಕಾರದಲ್ಲಿದ್ದಾಗ ರಾಮಮಂದಿರ ಕಟ್ಟಬೇಡ ಎಂದವರು ಯಾರು.  ರಾಮಮಂದಿರ ಕಟ್ಟಲಿಲ್ಲ. ಚುನಾವಣೆ ಬಂದಾಗ ರಾಮಮಂದಿರ ಎನ್ನುತ್ತಾರೆ.

ಚುನಾವಣೆ ಮುಗಿದ ಮೇಲೆ ಅಲ್ಲಿ ಒಂದು ಕಲ್ಲನ್ನೂ ಇಡುವುದಿಲ್ಲ. ಇಂತಹ ದ್ವಂದ್ವ ಏಕೆ ಪ್ರಶ್ನಿಸಿದರು. ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಪರ್ಯಾಯ ವ್ಯವಸ್ಥೆ ಬೇಕಾಗಿದೆ. ಮೋದಿ ಸರ್ಕಾರ ಬೀಳಿಸಬೇಕಾಗಿದೆ. ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ಹಾಗಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿ, ಬಹುತ್ವ ಭಾರತದಲ್ಲಿ ಏಕ ಸಂಸ್ಕೃತಿ, ಏಕ ಆಹಾರ ಪದ್ಧತಿ, ಏಕ ಭಾಷಾ ಹೇರಿಕೆ ಬಹು ದೊಡ್ಡ ಅಪಾಯಕಾರಿ.

ಸ್ವಾಯತ್ತ ಸಂಸ್ಥೆಗಳು ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಮೋದಿ ಬಿಡದೇ ಇರುವ ಸರ್ವಾಧಿಕಾರಿ ಧೋರಣೆ ನೋಡಿದರೆ ಮುಂದೆ ಚುನಾವಣೆಗಳೇ ನಡೆಯುವುದಿಲ್ಲ ಎಂದೆನಿಸುತ್ತದೆ. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಮಂಜಪ್ಪ ಅವರನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

19 ಕದ್ದ ಯೋಜನೆಗಳು ಕಾಂಗ್ರೆಸ್‌ನ 23 ಯೋಜನೆಗಳಲ್ಲಿ 19 ಯೋಜನೆಯನ್ನ ಕದ್ದಿರುವ ಬಿಜೆಪಿಯವರು, ಅದಕೊಂದಿಷ್ಟು ಸುಣ್ಣ ಬಣ್ಣ ಬಳೆದು ಬೇರೆ ಹೆಸರಿಟ್ಟಿದ್ದಾರೆ. ಹೆಚ್ಚಿನ ಅನುದಾನ ನೀಡಿರಬಹುದು. ಆ ಎಲ್ಲವೂ ಕಾಂಗ್ರೆಸ್‌ ಯೋಜನೆಗಳು. ನಿರ್ಮಲ ಭಾರತ್‌ ಕಾಂಗ್ರೆಸ್‌ ಜಾರಿ ಮಾಡಿದ್ದು ಅದೀಗ ಸ್ವತ್ಛ ಭಾರತ್‌ ಆಗಿದೆ. ರಾಷ್ಟ್ರೀಯ ಮಹಿಳಾ ದಿನಾಚರಣೆ ಈಗ ಬೇಟಿ ಪಡಾವೋ ಬೇಟಿ ಬಚಾವೋ…, ಜನೌಷಧಿ… ಈಗ ಪ್ರಧಾನ ಮಂತ್ರಿ ಜನೌಷಧಿ, ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆ ಪರಾಂಪರಗತ್‌ ಕೃಷಿ ಅಭಿವೃದ್ಧಿ ಯೋಜನೆ, ಮೂಲ ಠೇವಣಿ ಉಳಿತಾಯ ಈಗ ಜನ್‌ಧನ್‌ ಆಗಿದೆ. ಐದು ವರ್ಷದಲ್ಲಿ ಮೋದಿ ಸಂಸತ್‌ಗೆ ಹಾಜರಾಗಿರುವುದು ಕೇವಲ 19 ದಿನ ಮಾತ್ರ ಎಂದು ಕಾಂಗ್ರೆಸ್‌ ಮುಖಂಡ, ಚಿತ್ರನಟ ಮುಖ್ಯಮಂತ್ರಿ ಚಂದ್ರು ದೂರಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ದ್ವಿಶತಕದತ್ತ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ

ದ್ವಿಶತಕದತ್ತ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

09-April-4

ವಾಹನ ಸೀಜ್‌ ಆದ್ರೆ ಕಷ್ಟ ಕಷ್ಟ

09-April-3

ಮಲ್ಲಾಪುರ ಕೆರೆಯಲ್ಲಿ ಮೀನುಗಳ ಸಾವು

08-April-4

ಹಳ್ಳಿಗಳಿಗೆ ಭೇಟಿ ನೀಡಿ ಕೊರೊನಾ ಜಾಗೃತಿ

08-April-3

ಲಾಕ್‌ಡೌನ್‌ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ

ವಿಂಬಲ್ಡನ್‌ ರದ್ದು : ಕ್ಲಬ್‌ಗ 100 ಮಿ. ಡಾಲರ್‌ ವಿಮಾ ಹಣ

ವಿಂಬಲ್ಡನ್‌ ರದ್ದು : ಕ್ಲಬ್‌ಗ 100 ಮಿ. ಡಾಲರ್‌ ವಿಮಾ ಹಣ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಬೆಳೆಗಾರ-ಗ್ರಾಹಕ ಮಧ್ಯೆ ಸಂಪರ್ಕ ಕಲ್ಪಿಸುತ್ತಿರುವ ರೈತ ಸೇತು

ಬೆಳೆಗಾರ-ಗ್ರಾಹಕ ಮಧ್ಯೆ ಸಂಪರ್ಕ ಕಲ್ಪಿಸುತ್ತಿರುವ ರೈತ ಸೇತು

ಲಾಕ್‌ಡೌನ್‌ ತೆರವಿನ ವರೆಗೆ ಆಹಾರ ವಿತರಣೆ: ಭರತ್‌ ಶೆಟ್ಟಿ

ಲಾಕ್‌ಡೌನ್‌ ತೆರವಿನ ವರೆಗೆ ಆಹಾರ ವಿತರಣೆ: ಭರತ್‌ ಶೆಟ್ಟಿ

ಮೃಗಾಲಯಗಳಲ್ಲಿ ಸುರಕ್ಷತೆ ಕೈಗೊಳ್ಳಲಾಗಿದೆ: ಸರ್ಕಾರದಿಂದ ಮಾಹಿತಿ

ಮೃಗಾಲಯಗಳಲ್ಲಿ ಸುರಕ್ಷತೆ ಕೈಗೊಳ್ಳಲಾಗಿದೆ: ಸರ್ಕಾರದಿಂದ ಮಾಹಿತಿ