ರೈತರ ಚಿತ್ತ ಕದಡಿದ ಚಿತ್ತಾ ಮಳೆ

ನಿರಂತರ ಮಳೆಯಿಂದ ಮೆಕ್ಕೆಜೋಳ, ಭತ್ತಕ್ಕೆ ಹಾನಿ

Team Udayavani, Oct 16, 2020, 5:41 PM IST

dg-tdy-2

ಸಾಂದರ್ಭಿಕ ಚಿತ್ರ

ದಾವಣಗೆರೆ: ಹಲವಾರು ದಿನಗಳಿಂದ ಎಡೆಬಿಡದೆ ಆಗುತ್ತಿರುವ ಮಳೆ ಅನ್ನದಾತರ ಚಿತ್ತವನ್ನೇ ಕದಡುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಬಹುದುಎಂಬ ಆತಂಕ ಕಾಡಲಾರಂಭಿಸಿದೆ.

ಸೆಪ್ಟಂಬರ್‌ ಮಾಹೆಯ ಅಂತ್ಯ ಅಕ್ಟೋಬರ್‌ನಎರಡನೇ ವಾರದಲ್ಲಿನ ಚಿತ್ತಾ ಮಳೆಯಿಂದಾಗಿ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ದಾವಣಗೆರೆ ತಾಲೂಕಿನಆನಗೋಡು, ಮಾಯಕೊಂಡ ಹೋಬಳಿ,ನ್ಯಾಮತಿ, ಹೊನ್ನಾಳಿ ತಾಲೂಕಿನ ಅನೇಕ ಭಾಗದಲ್ಲಿಮಳೆಯಿಂದಾಗಿ ಮೆಕ್ಕೆಜೋಳ ನೆಲಕ್ಕೆ ಬಿದ್ದು,ಮೊಳಕೆಯೊಡುವ ಹಂತ ಕಾಣುತ್ತಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ರೈತರು ಮೆಕ್ಕೆಜೋಳಮರೆಯಬೇಕಾಗುತ್ತದೆ. ಇಳುವರಿಯ ಮೇಲೆ ಹೊಡೆತ ಬೀಳಲಿದೆ.

ಮಾಯಕೊಂಡ ಹೋಬಳಿ ಮಾಯಕೊಂಡ, ಹೆದ್ನೆ, ಬಸಾಪುರ, ಆನಗೋಡು ಹೋಬಳಿಯ ನೇರ್ಲಿಗೆ, ಸುಲ್ತಾನಿಪುರ, ಬಾಡ, ಕೊಡಗನೂರು ಇತರೆ ಭಾಗದಲ್ಲಿ ಮಳೆಗೆ ತುತ್ತಾಗಿರುವ ಮೆಕ್ಕೆಜೋಳ ನೆಲಕ್ಕೆ ಬೀಳುವ ಸ್ಥಿತಿಯಲ್ಲಿದೆ. ಕಷ್ಟಪಟ್ಟು ಬೆಳೆದಂತಹ ಬೆಳೆ ಕೈಗೆ ದೊರೆಯದಂತಾಗುತ್ತಿರುವುದು ರೈತಾಪಿ ವರ್ಗವನ್ನು ಚಿಂತೆಗೀಡು ಮಾಡಿದೆ.

ಈಗಾಗಲೇ ಮೆಕ್ಕೆಜೋಳ ಮುರಿಯುವುದಕ್ಕೆ ಬಂದಿದೆ. ಕಳೆದ ಐದಾರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಗಾಳಿ ಜೊತೆಗೆ ಮಳೆ ಆಗುತ್ತಿರುವುದರಿಂದ, ಜಮೀನುಗಳಲ್ಲಿ ನೀರು ಹರಿಯುತ್ತಿರುವುದರಿಂದ ಮೆಕ್ಕೆಜೋಳ ಒಂದರೆಡು ದಿನಗಳಲ್ಲಿ ನೆಲಕ್ಕೆ ಬೀಳಲಿವೆ. ನೆಲಕ್ಕೆ ಬಿದ್ದುಮೊಳಕೆಯೊಡದರೆ ನಮ್ಮ ಕಥೆ ಮುಗಿದಂತೆಯೇ ಎನ್ನುವ ಮಾಯಕೊಂಡದ ರೈತ ಎಂ.ಸಿ. ಬಾಲರಾಜ್‌ ಮಾತು ಮಳೆ ಉಂಟು ಮಾಡಿರುವಮತ್ತು ಮಾಡಲಿರುವ ತೊಂದರೆಯನ್ನು ಸಾರಿ ಸಾರಿ ಹೇಳುತ್ತವೆ.

ದಿನಾ ಮಳೆ ಬರುತ್ತಿರುವುದರಿಂದ ಜಮೀನುಗಳಲ್ಲಿ ನೀರು ಹರಿದು ಹೋಗುವುದರಿಂದ ಜೌಗು ಹಿಡಿದಂತಾಗಿ ಮೆಕ್ಕೆಜೋಳ ಮುರಿಯವುದಕ್ಕೆ ಮುಂಚೆನೇ ನೆಲ ಕಾಣಲಿವೆ ಎಂದು ಆನಗೋಡು ಹೋಬಳಿಯ ಹೊನ್ನನಾಯ್ಕನಹಳ್ಳಿಯ ರೈತ ಮಲ್ಲೇಶ್‌ ಆತಂಕ ವ್ಯಕ್ತಪಡಿಸುತ್ತಾರೆ.ಮುಂಗಾರು ಹಂಗಾಮಿನ ಪ್ರಾರಂಭಿಕಹಂತದಲ್ಲಿ ಬಾರೋ ಬಾರೋ ಮಳೆರಾಯ ಎಂದು ಪ್ರಾರ್ಥಿಸುತ್ತಿದ್ದವರು ಈಗ ಹೋಗೋ… ಹೋಗೋ… ಮಳೆರಾಯ ಎಂದು ಪ್ರಾರ್ಥಿಸುವಂತಾಗಿದೆ. ಮಳೆ ಬರುವುದು, ಬಿಡುವುದು ನಮ್ಮ ಕೈಯಲ್ಲೇನೂ ಇಲ್ಲ. ಪ್ರಾರ್ಥನೆ ಮಾಡಬಹುದಷ್ಟೇ. ಈಗ ಮಳೆ ನಿಂತರೆ ಎಷ್ಟೋ ಅನುಕೂಲ ಆಗುತ್ತದೆ ಎನ್ನುತ್ತಾರೆ ರೈತರು.ಮಳೆ ಬರುವುದನ್ನೇ ಕಾಯುತ್ತಿದ್ದೆವು. ಹದವಾದ ಮಳೆಯಾದ ಮೇಲೆ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಇನ್ನೇನ್ನಿ ಮೆಕ್ಕೆಜೋಳ ಕೈಗೆ ಬಂತು ಬಿಡು ಅಂದುಕೊಂಡಿದ್ದೆವು. ಅಷ್ಟರೊಳಗೆ ಮಳೆ ಬಂದು ಹೀಗೆಲ್ಲಾ ಆಗುತ್ತಿದೆ. ವರ್ಸಾನೂ ಇದೇ ರೀತಿ ಆಗುತ್ತಾ ಹೋದರೆ ಜೀವನ ನಡೆಸೋದು ಹೇಗೆ ಎಂದು ಪ್ರಶ್ನಿಸುತ್ತಾರೆ.

ಗ್ರಾಮೀಣ ಭಾಷೆಯಲ್ಲಿ ಚಿತ್ತಾ ಮಳೆಯನ್ನು ಕುಲ್ಡ್‌ ಚಿತ್ತ ಮಳೆ ಎನ್ನುತ್ತಾರೆ. ಈ ಮಳೆ ಬಂದರೆ ಜನರ ಚಿತ್ತ (ಹೃದಯ) ವನ್ನೇ ಕದಡುವಂತೆ ಬರುತ್ತದೆ. ಇಲ್ಲವಾದರೆ ಬರುವುದೇ ಇಲ್ಲ. ಈ ಬಾರಿ ಚಿತ್ತಾ ಮಳೆಯ ಅಬ್ಬರ ರೈತರ ಎದೆ ಬಡಿತವನ್ನೇ ಕದಡುವಂತಿದೆ

491.34 ಹೆಕ್ಟೇರ್‌ನಲ್ಲಿ ಬೆಳೆ ನಷ್ಟ : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,26,708 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಇತ್ತು. ಶೇ. 104.24 ಪ್ರಮಾಣದಲ್ಲಿ 1,31,829 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ತೆನೆ ಮುರಿಯುವ ಹಂತಕ್ಕೆಬಂದಿದ್ದ 305.47 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾನಿಯಾಗಿದೆ. ಹೊನ್ನಾಳಿಯಲ್ಲಿ 11.47, ನ್ಯಾಮತಿಯಲ್ಲಿ 2, ಜಗಳೂರಿನಲ್ಲಿ 40 ಹಾಗೂ ಚನ್ನಗಿರಿಯಲ್ಲಿ ಅತೀ ಹೆಚ್ಚು 252 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾನಿಗೀಡಾಗಿದೆ. ಮೆಕ್ಕೆಜೋಳ ಮಾತ್ರವಲ್ಲ, ಭತ್ತ ಸಹ ಅನೇಕ ಕಡೆ ಮಳೆ-ಗಾಳಿಯಿಂದ ಚಾಪೆಯಂತಾಗಿದೆ. ಹರಿಹರ ತಾಲೂಕಿನಲ್ಲಿ ಅತಿ ಹೆಚ್ಚು 175.27 ಹೆಕ್ಟೇರ್‌ ಪ್ರದೇಶದಲ್ಲಿನ ಭತ್ತ ಹಾಳಾಗಿದೆ.ನೆಲಕ್ಕೆ ಬಿದ್ದಿರುವ ಭತ್ತ ಕೈಗೆ ಬರಬೇಕು ಎಂದಾದರೆ ಮಳೆ ನಿಲ್ಲಬೇಕು. ಮಳೆ ಬರದೇ ಹೋದರೂ ಕಷ್ಟ, ಬಂದರೂ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿರುವ ರೈತಾಪಿ ವರ್ಗ ಮಳೆಯಿಂದಾಗಿ ತತ್ತರಿಸುವಂತಾಗಿದೆ. ಹರಿಹರ ತಾಲೂಕಿನಲ್ಲಿ 175.27 ಹೆಕ್ಟೇರ್‌, ಹೊನ್ನಾಳಿಯಲ್ಲಿ 9.60, ನ್ಯಾಮತಿಯಲ್ಲಿ 1 ಹೆಕ್ಟೇರ್‌ನಷ್ಟು ಭತ್ತ ಮಳೆಯಿಂದ ಹಾನಿಗೀಡಾಗಿದೆ. ಒಟ್ಟಾರೆ ಮಳೆಯಿಂದಾಗಿ 491.34 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿ 61.4 ಲಕ್ಷ ರೂ. ನಷ್ಟ ಉಂಟಾಗಿದೆ. ಇದರಿಂದ 518 ರೈತರು ತೊಂದರೆ ಅನುಭವಿಸುಂತಾಗಿದೆ.

 

-ರಾ. ರವಿಬಾಬು

ಟಾಪ್ ನ್ಯೂಸ್

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

ಜೆಇಇ ಮೇನ್ಸ್‌ – 2 ಫ‌ಲಿತಾಂಶ ಪ್ರಕಟ: ಮತ್ತೆ ಸಾತ್ವಿಕ್‌ ಟಾಪರ್‌

ಜೆಇಇ ಮೇನ್ಸ್‌ – 2 ಫ‌ಲಿತಾಂಶ ಪ್ರಕಟ: ಮತ್ತೆ ಸಾತ್ವಿಕ್‌ ಟಾಪರ್‌

ತ್ರಿವರ್ಣದೊಂದಿಗೆ ಹೆಜ್ಜೆ ಹಾಕಿದ ಶರತ್‌ ಕಮಲ್‌, ನಿಖತ್‌ ಜರೀನ್‌

ತ್ರಿವರ್ಣದೊಂದಿಗೆ ಹೆಜ್ಜೆ ಹಾಕಿದ ಶರತ್‌ ಕಮಲ್‌, ನಿಖತ್‌ ಜರೀನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಧಿಕಾರಿಗಳಿಗೆ ರೇಣುಕಾಚಾರ್ಯ ಕ್ಲಾಸ್‌

ಅಧಿಕಾರಿಗಳಿಗೆ ರೇಣುಕಾಚಾರ್ಯ ಕ್ಲಾಸ್‌

ಸಿದ್ದು ಹೊಗಳಿಕೆ ಜತೆಗೇ ನಾಯಕರಿಂದ ಸಾಮೂಹಿಕ ನಾಯಕತ್ವ ಜಪ

ಸಿದ್ದು ಹೊಗಳಿಕೆ ಜತೆಗೇ ನಾಯಕರಿಂದ ಸಾಮೂಹಿಕ ನಾಯಕತ್ವ ಜಪ

ಚುನಾವಣೆಗೆ ಕಾಂಗ್ರೆಸ್‌ ರಣಕಹಳೆ; ಸಿದ್ದು ಹುಟ್ಟುಹಬ್ಬದಲ್ಲಿ ನಾಯಕರ ಒಗ್ಗಟ್ಟು ಪ್ರದರ್ಶನ

ಚುನಾವಣೆಗೆ ಕಾಂಗ್ರೆಸ್‌ ರಣಕಹಳೆ; ಸಿದ್ದು ಹುಟ್ಟುಹಬ್ಬದಲ್ಲಿ ನಾಯಕರ ಒಗ್ಗಟ್ಟು ಪ್ರದರ್ಶನ

ra Ga

ದಾವಣಗೆರೆ: ಸಂಚಾರದ ಒತ್ತಡದಲ್ಲಿ ಸಿಲುಕಿದ ರಾಹುಲ್ ಗಾಂಧಿ

2meals

ಸಿದ್ದರಾಮೋತ್ಸವ: ಊಟಕ್ಕಾಗಿ ನೂಕು ನುಗ್ಗಲು; ಸ್ವಯಂ ಸೇವಕರು ಕಕ್ಕಾಬಿಕ್ಕಿ!

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.