ಯುವಕರು ಸಮಾಜ ನೋಡುವ ದೃಷ್ಟಿಕೋನ ಬದಲಾಗಲಿ

Team Udayavani, Feb 7, 2018, 5:23 PM IST

2.jpg

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಯುವ ಜನಾಂಗ ಸಮಾಜವನ್ನ ನೋಡುವಂತಹ ದೃಷ್ಟಿಕೋನ ಬದಲಾಯಿಸಿಕೊಳ್ಳುವ ಅಗತ್ಯತೆ ಇದೆ ಎಂದು ಖ್ಯಾತ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್‌(ಚಂಪಾ) ಅಭಿಪ್ರಾಯಪಟ್ಟಿದ್ದಾರೆ.

ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಆರೋಗ್ಯಕರ ಸಮಾಜ ನಿರ್ಮಾಣ ಮತ್ತು ವೈಚಾರಿಕತೆ… ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆಯಲ್ಲಿ ಸಮಾಜವನ್ನು ನೋಡುವಂತಹ ದೃಷ್ಟಿಕೋನ ಬದಲಾಗಲೇಬೇಕು ಎಂದು ಪ್ರತಿಪಾದಿಸಿದರು. ಯುವಜನಾಂಗದಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸುವ ಮೂಲಕ ಆರೋಗ್ಯಕರ
ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಣದ ಪಾತ್ರ ಅತಿ ಮುಖ್ಯ. ಅಸಮಾನತೆ, ಜಾತಿಪದ್ದತಿಯಿಂದಾಗಿ ಸಾಮಾಜಿಕ ನ್ಯಾಯ ಕಳೆದೇ ಹೋಗಿದೆ. ಇಂತಹ  ಸಮಾಜದಲ್ಲಿರುವ ಯುವಜನತೆ, ಇರುವಂತಹವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಮೂಢರಾಗದೇ ಪ್ರಶ್ನಿಸುವ ಮತ್ತು ಸರಿ -ತಪ್ಪು ಆಲೋಚಿಸುವ
ಮನೋಭಾವನೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬುದ್ಧ, ಬಸವಣ್ಣ, ಅಂಬೇಡ್ಕರ್‌ರಂತಹ ಮಹಾನ್‌ ವ್ಯಕ್ತಿಗಳು ಕನಸು ಕಂಡಂತಹ ಸಮಾನತೆಯ ಸಮಾಜ ಸೃಷ್ಟಿಸಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.

ಯುವಶಕ್ತಿ ಒಗ್ಗಟ್ಟು ಮತ್ತು ಸಮಚಿತ್ತದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಇಂದಿನ ಯುವಜನತೆ ಕೇವಲ ಶಿಕ್ಷಣವಂತರಾದರೆ ಸಾಲದು.
ಸಾಮಾಜಿಕ ಕಳಕಳಿ ಅಲ್ಪ ಮಟ್ಟದಲ್ಲಾದರೂ ಇರಬೇಕು. ಶಿಕ್ಷಣವನ್ನು ಬಳಸಿಕೊಂಡು ಸಾಮಾಜಿಕ ಸ್ವಾಸ್ಥ ಕಾಪಾಡುವಂತಹ ಪ್ರಯತ್ನ ಮಾಡಬೇಕು
ಎಂದು ತಿಳಿಸಿದರು. ಪ್ರಭಾರ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ಯುವಜನತೆಗೆ ಹಿರಿಯ ಸಾಹಿತಿಗಳ ವಿಚಾರಧಾರೆಗಳು ಅವಶ್ಯಕವಾಗಿವೆ. ಹಿರಿಯರ, ಮಾರ್ಗದರ್ಶಕರ ಜೀವನಾನುಭವ ಹಾಗೂ ಅವರು ಕಂಡ ಸಮಾಜವನ್ನು ತಿಳಿಯಲು ಇಂತಹ ಸಂವಾದ ಕಾರ್ಯಕ್ರಮ ಪೂರಕವಾಗಿವೆ ಎಂದು ಹೇಳಿದರು. ಕುಲಸಚಿವ(ಆಡಳಿತ) ಪ್ರೊ| ಶರಣಪ್ಪ ವೈ. ಹಲಸೆ, ಪರೀಕ್ಷಾಂಗ ಕುಲ ಸಚಿವ ಪ್ರೊ. ಗಂಗಾಧರ್‌ನಾಯ್ಕ, ಇಂಗ್ಲಿಷ್‌ ವಿಭಾಗದ ಅತಿಥಿ ಉಪನ್ಯಾಸಕ ಎ.ಎಚ್‌. ಸಾಗರ್‌, ಮಲ್ಲೇಶ್‌, ಹೇಮಾ ಇತರರು ಇದ್ದರು. 

ಸಿದ್ಧಗಂಗಾ ಶ್ರೀ, ಸುತ್ತೂರು ಶ್ರೀ ಪ್ರತ್ಯೇಕ ಧರ್ಮ ಹೋರಾಟಕ್ಕೆ ಬರಲಿ
ದಾವಣಗೆರೆ: ನಾವು ಸಹ ಬಸವಾದಿ ಶರಣ ಚಳವಳಿಯಿಂದಲೇ ಬಂದವರು ಎಂಬ ಸತ್ಯವ ಅರಿತು ವಿರಕ್ತ ಮಠಾಧೀಶರು ಸಹ ಲಿಂಗಾಯತ ಧರ್ಮದ ಹೋರಾಟದ ಆಂದೋಲನಕ್ಕೆ ಬಂದು ಸೇರಬೇಕು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್‌ ಮನವಿ ಮಾಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಬಹು ದೊಡ್ಡ  ವಿರಕ್ತ ಮಠಾಧೀಶರಾದ ಸಿದ್ದಗಂಗೆಯ ಡಾ| ಶಿವಕುಮಾರ ಸ್ವಾಮೀಜಿ, ಸುತ್ತೂರು ಶ್ರೀಗಳು ಸಹ ಬಸವಣ್ಣನವರು ಹೇಳಿದಂತೆ ಅನ್ನ,  ಅಕ್ಷರ ದಾಸೋಹದಲ್ಲಿ ತೊಡಗಿಕೊಂಡಿದ್ದಾರೆ. ನಾವು ಸಹ ಬಸವಾದಿ ಶರಣ ಚಳವಳಿಯ
ಉತ್ಪನ್ನಗಳು ಎಂಬ ದಿಕ್ಕಿನಲ್ಲಿ ಆಲೋಚನೆ ಮಾಡಿ ಹೋರಾಟಕ್ಕೆ ಬರಬೇಕು ಎಂದರು.

ಲಿಂಗಾಯತ ಚಳವಳಿಗೆ 800 ವರ್ಷದ ಇತಿಹಾಸವೇ ಇದೆ. ಬಸವಣ್ಣನವರನ್ನ ಕೇಂದ್ರ ಬಿಂದುವಾಗಿಟ್ಟುಕೊಂಡು ಶರಣರು ಜಾತಿ, ಕುಲ, ಮತ, ಪಂಥ ಮೀರಿದ ವೈಚಾರಿಕ ಆಂದೋಲನ ನಡೆಸಿದರು. ಬಸವಣ್ಣನ ಕಾಲದ ನಂತರ ಶರಣ ಚಳವಳಿಯ ಪ್ರಭಾವ ಅಂತರ್ಗಾಮಿಯಾಗಿಯೇ ಇತ್ತು. ಕೆಲ
ಕಾಲದ ನಂತರ ವೀರಶೈವ ಪೋಷಾಕು ಧರಿಸಿ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯಿತು. ಈಗ ಮತ್ತೆ ಲಿಂಗಾಯತ ಧರ್ಮದ ಒಳ ಸತ್ಯ
ಹೊರ ಬರುತ್ತಿದ್ದು ಆಂದೋಲನದ ರೂಪ ಪಡೆಯುತ್ತಿದೆ. ವೀರಶೈವ, ಜಂಗಮರು ಸಹ ಲಿಂಗಾಯತ ಪಂಗಡದ ಅನೇಕ ಪಂಗಡಗಳಲ್ಲಿ ಒಂದು ಎಂದು ಸಮಿತಿಯ ಮುಂದೆ ದಾಖಲೆ ಹಾಜರಪಡಿಸಲಾಗುತ್ತಿದೆ. ಜಂಗಮೇತರ, ವೀರಶೈವೇತರ ಲಿಂಗಾಯತ ಧರ್ಮದ ಜನಾಂದೋಲನ ಪ್ರಾರಂಭವಾಗಿದೆ.
ಅಲ್ಪಸಂಖ್ಯಾತ ಧರ್ಮ ಮನ್ನಣೆ ಕಾನೂನು ಪ್ರಕಾರ ಬೇಕು ಎಂಬ ಹೋರಾಟ ನಡೆಯುತ್ತಿದೆ ಎಂದರು.

ಟಾಪ್ ನ್ಯೂಸ್

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.