ಕೊಲ್ಕತ್ತಾ ಕಲಾವಿದರ ಕೈಚಳಕದಲ್ಲಿ ವಿನಾಯಕ


Team Udayavani, Aug 30, 2018, 12:55 PM IST

dvg-1.jpg

ದಾವಣಗೆರೆ: ವಿಘ್ನ ನಿವಾರಕ ವಿನಾಯಕನ ಹಬ್ಬಕ್ಕೆ ಇನ್ನು ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ದೇವನಗರಿಯಲ್ಲಿ ವೈವಿಧ್ಯಮಯ ಗಣೇಶಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ. ಪಿ.ಬಿ. ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನ
ಆವರಣ, ಹೊಳೆಹೊನ್ನೂರು ತೋಟದ ಉಮಾಮಹೇಶ್ವರಿ ದೇವಸ್ಥಾನದ ಬಳಿ ಸೇರಿದಂತೆ ನಾಲ್ಕಾರು ಕಡೆ ಕೊಲ್ಕತ್ತಾ ಮೂಲದ ಕಲಾವಿದರು 5ರಿಂದ 12 ಅಡಿಗಿಂತ ದೊಡ್ಡ ದೊಡ್ಡ ಪರಿಸರ ಸ್ನೇಹಿ ಗಣೇಶಮೂರ್ತಿಗಳ ತಯಾರಿಕೆಯಲ್ಲಿ
ನಿರತರಾಗಿದ್ದಾರೆ.

ಅಂಬಾರಿಯಲ್ಲಿ ಆಸೀನ, ಶ್ರೀಕೃಷ್ಣ ಅರ್ಜುನನ ಸಾರಥಿಯಾಗಿ, ಛತ್ರಪತಿ ಶಿವಾಜಿ, ಆಕಳು ಮೇಲೆ ಈಶ್ವರ ಗಣಪ, ಡಮರು, ಶಂಕು, ತಬಲ, ಕಾಳಿಂಗ ಸರ್ಪದ ಮೇಲೆ ನೃತ್ಯ ಮಾಡುವ ಗಣಪ….ಹೀಗೆ ವಿವಿಧ ಅವತಾರದ ಗಣೇಶಮೂರ್ತಿಗಳು ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕೊಲ್ಕತ್ತಾ ಮೂಲದ ರಂಜಿತ್‌ಪಾಲ್‌ ಅವರ ನೇತೃತ್ವದ ತಂಡದಿಂದ ರೂಪುಗೊಳ್ಳುತ್ತಿವೆ. ಮೂರ್ತಿ ತಯಾರಿ…. ಭತ್ತದ ಹುಲ್ಲು, ಬಿದಿರು, ಮಣ್ಣು ಹಾಗೂ ನೈಸರ್ಗಿಕ ಬಣ್ಣ ಬಳಸಿಕೊಂಡು 8 ಜನರ ತಂಡ ಮೂರ್‍ನಾಲ್ಕು ತಿಂಗಳಿನಿಂದಲೇ 5ರಿಂದ 14 ಅಡಿಗಳವರೆಗಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದೆ.

5ರಿಂದ 8 ಅಡಿ ಎತ್ತರದ ಮೂರ್ತಿಗೆ 8 ರಿಂದ 10 ಸಾವಿರ ರೂ., 10ರಿಂದ 14 ಅಡಿ ಎತ್ತರದ ಗಣಪತಿಗಳಿಗೆ 10ರಿಂದ 30 ಸಾವಿರ ರೂ. ವರೆಗೂ ಬೆಲೆ ನಿಗದಿ ಮಾಡಲಾಗಿದೆ. ಗ್ರಾಹಕರು ಕೇಳುವ ಮಾದರಿಯ ಸುಂದರ ಗಣಪತಿ ಮೂರ್ತಿ ತಯಾರು ಮಾಡಿಕೊಡುತ್ತೇವೆ. ಈಗ ಪ್ಲಾಸ್ಟ್‌ರ್‌ ಆಫ್‌ ಪ್ಯಾರಿಸ್‌ ಗಣಪತಿಗಳ ನಿರ್ಮಾಣ ಸ್ವಲ್ಪ ಕಡಿಮೆಯಾಗಿರುವ
ಬೆನ್ನಲ್ಲೇ ಮಣ್ಣಿನ ಗಣೇಶ ಮೂರ್ತಿಗಳಿಗೆ ಡಿಮ್ಯಾಂಡ್‌ ಇದೆ. ಹಾಗಾಗಿ ಮಣ್ಣಿನ ಗಣೇಶ ಮೂರ್ತಿ ನಿರ್ಮಾಣದಲ್ಲಿ ತೊಡಗಿರುವ ಬಹುತೇಕ ಕಲಾವಿದರು ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಮೂರ್ತಿ ತಯಾರಕರು.

ಕೆಲವರಿಗೆ ಮೂರ್ತಿ ತಯಾರಿಯೇ ಕಾಯಕ… ನಗರದ ಹೊಂಡದ ಸರ್ಕಲ್‌ ಬಳಿಯ ಚಿತ್ರಗಾರಗಲ್ಲಿ, ಜಾಲಿನಗರ, ಅಶೋಕನಗರ, ವಿನೋಬನಗರ ಸೇರಿದಂತೆ ಹಲವೆಡೆ ಮನೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ 35ಕ್ಕಿಂತ ಹೆಚ್ಚು ಕುಟುಂಬಗಳು ಹಬ್ಬಕ್ಕೂ ಆರು ತಿಂಗಳ ಮುಂಚಿತವಾಗಿ ಮೂರ್ತಿಗಳ ತಯಾರಿಸುತ್ತಾ ತಮ್ಮ ಬದುಕು ರೂಪಿಸಿಕೊಳ್ಳುವ ಕಾಯಕದಲ್ಲಿ ತೊಡಗಿವೆ.

ಜೇಡಿಮಣ್ಣು ದುಬಾರಿ…. ಗಣೇಶ ಮೂರ್ತಿಗಳ ತಯಾರಿಕೆಗೆ ಬೇಕಾದ ಜೇಡಿಮಣ್ಣು ಎಲ್ಲೆಡೆ ಸಿಗದು. ನದಿ ಪಾತ್ರದ ತಟಗಳಲ್ಲಿ ದೊರೆಯುವ ಜೇಡಿಮಣ್ಣಿನ ಟ್ರ್ಯಾಕ್ಟರ್‌ ಲೋಡ್‌ ಒಂದಕ್ಕೆ 7 ಸಾವಿರ ರೂ. ನೀಡಬೇಕಿದೆ. ಈ ಮೊತ್ತ ಸಣ್ಣ ಸಣ್ಣ ಮೂರ್ತಿ ತಯಾರಕರಿಗೆ ಹೊರೆ ಎನಿಸುತ್ತದೆ. ಆದರೆ ದೊಡ್ಡ ಮೂರ್ತಿಗಳ ತಯಾರಕರ ಮೇಲೆ ಈ ಬೆಲೆ ಹೆಚ್ಚಳದ ಪರಿಣಾಮ ಕಡಿಮೆ ಎನ್ನುತ್ತಾರೆ ಚಿತ್ರಗಾರ ಗಲ್ಲಿಯ ಗಣೇಶ ಮೂರ್ತಿ ತಯಾರಕ ವಿಜಯ್‌.

ಪಿಒಪಿ ಹಾವಳಿ ನಿಂತಿಲ್ಲ… ಮಣ್ಣು , ಹತ್ತಿ, ನಾರು, ಬಣ್ಣ ಸೇರಿದಂತೆ ಇತರೆ ಪರಿಕರಗಳ ಬೆಲೆ ದುಬಾರಿ ಆಗಿವೆ. ಆದ್ದರಿಂದ ಸಣ್ಣ ಸಣ್ಣ ಮೂರ್ತಿಗಳಿಗೆ 100ರಿಂದ 300 ರೂ. ವರೆಗೆ ಹಾಗೂ ನಾಲ್ಕೈದು ಅಡಿಗಿಂತ ದೊಡ್ಡ ಮೂರ್ತಿಗಳನ್ನು 5ರಿಂದ 8 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುವುದು ಎನ್ನುತ್ತಾರೆ ಅವರು.  ಇದೀಗ ಮಾರುಕಟ್ಟೆಯಲ್ಲಿ ಪಿಒಪಿ ಗಣಪತಿಗಳು ಹೆಚ್ಚು ಕಂಡು ಬರದೇ ಇದ್ದರೂ ಹಬ್ಬ ಎರಡು ದಿನ ಇರುವಾಗ ಮಹಾರಾಷ್ಟ್ರ, ಕೊಲ್ಲಾಪುರ ಮುಂತಾದ ಕಡೆಗಳಿಂದ ಮಾರುಕಟ್ಟೆಗೆ ಪಿಒಪಿ ಗಣೇಶ ಮೂರ್ತಿಗಳು ಲಗ್ಗೆ ಇಡುತ್ತವೆ. ಹೀಗಾಗಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ಮೂರ್ತಿ ತಯಾರಕರು.

ಪರಿಸರದ ಬಗ್ಗೆ ಇತ್ತೀಚೆಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಬಹುತೇಕ ಜನರು ಮಣ್ಣಿನ ಗಣೇಶ ಮೂರ್ತಿ ಖರೀದಿಸಲು ಮುಂಗಡವಾಗಿ ಹೆಸರು ಬರೆಸುತ್ತಾರೆ. ಇನ್ನೂ ಕೆಲವರು ಯಾವುದೇ ರೀತಿ ಬಣ್ಣ ಲೇಪನ ಮಾಡದೇ ಇರುವ ಮೂರ್ತಿಗಳನ್ನು ಖರೀದಿಸಲು ಉತ್ಸಾಹ ತೋರಿಸುತ್ತಿದ್ದಾರೆ ಎನ್ನುತ್ತಾರೆ ಮೂರ್ತಿ ತಯಾರಕ ಸಂತೋಷ್‌.

ಸಾರ್ವಜನಿಕರ ಸಹಕಾರ ಬೇಕು ಪಿಒಪಿ ಮೂರ್ತಿಗಳ ಮಾರಾಟದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣಪತಿ ತಯಾರಕರು ಎಲ್ಲಿಯಾದರೂ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತರಬೇಕು. ಆಗ ಸಂಸ್ಥೆಗಳು ಪರಿಶೀಲನೆ ನಡೆಸಿ, ವಶಕ್ಕೆ ಪಡೆಯಲಿವೆ. ಇನ್ನು ಸಾರ್ವಜನಿಕರು ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಬೇಕು. ಇದರಿಂದ ಹಬ್ಬದ ಆಚರಣೆ ಕಳೆಗಟ್ಟುವ ಜೊತೆಗೆ ಪರಿಸರ ಮಾಲಿನ್ಯ ತಡೆಗೆ ಕೈಜೋಡಿಸಿದಂತಾಗಲಿದೆ.
 ಕೆ.ಬಿ. ಕೊಟ್ರೇಶ್‌, ಜಿಲ್ಲಾ ಪರಿಸರ ಅಧಿಕಾರಿ

ಬಿಗಿ ಕ್ರಮ ಬೇಕಿದೆ
ಜಿಲ್ಲಾ ಗುರುಭವನದಲ್ಲಿ ಜಿಲ್ಲಾ ಮಣ್ಣಿನ ಗಣಪತಿಗಳ ತಯಾರಕರ ಸಂಘ ಹಾಗೂ ಪರಿಸರ ವೇದಿಕೆ ಸಹಯೋಗದಲ್ಲಿ ಈ ಬಾರಿ ಪರಿಸರ ಸ್ನೇಹಿ ಗಣಪತಿಗಳ ಮಾರಾಟ ಮಳಿಗೆ ತೆರೆಯುವ ಚಿಂತ ನೆ ಇದೆ. ವಿವಿಧ ಜಿಲ್ಲೆ, ತಾಲೂಕುಗಳಿಂದ ಮಾರಾಟಗಾರರು ಬರಲಿದ್ದಾರೆ. ಅಲ್ಲದೇ ಬ್ಯಾನ್‌ ಆದರೂ ಸಹ ನೆರೆ ರಾಜ್ಯಗಳಿಂದ ಬರುವ ಪಿಒಪಿ ಗಣೇಶಮೂರ್ತಿ ನಿಯಂತ್ರಿಸಲು ಹಬ್ಬದ ಒಂದು ವಾರಕ್ಕೂ ಮುನ್ನ ನಗರ ಪ್ರವೇಶಿಸುವ ಮಾರ್ಗ ಗಳಲ್ಲಿ ಸೂಕ್ತ ಪೊಲೀಸ್‌
ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. 
 ಗಿರೀಶ್‌ ದೇವರಮನೆ, ಪರಿಸರ ಸಂರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ

„ವಿಜಯ ಸಿ. ಕೆಂಗಲಹಳ್ಳಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.