ಮತದಾರರ ಸಹಾಯವಾಣಿ 1950ಕ್ಕೆ ಚಾಲನೆ


Team Udayavani, Feb 2, 2019, 5:00 AM IST

dvg-2.jpg

ದಾವಣಗೆರೆ: ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ಅಗತ್ಯ ಮಾಹಿತಿ ಪಡೆಯಲು, ಪ್ರತಿಕ್ರಿಯೆ, ಸಲಹೆ ಹಾಗೂ ದೂರು ಸಲ್ಲಿಸಲು ಅನುಕೂಲ ಆಗುವಂತೆ ಮತದಾರರ ಸಹಾಯವಾಣಿ 1950ಗೆ ಶುಕ್ರವಾರ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಚಾಲನೆ ನೀಡಿದರು.

ಮತದಾರರ ಸಹಾಯವಾಣಿ 1950 ಟೋಲ್‌ಫ್ರೀ ಆಗಿದ್ದು ಮತದಾರರು ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಪಡೆಯಬಹುದಾಗಿದೆ. ಸದ್ಯಕ್ಕೆ ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸಲಿರುವ ಸಹಾಯವಾಣಿಯು ಲೋಕಸಭಾ ಚುನಾವಣೆ ಘೋಷಣೆಯ ನಂತೆ 24×7 ಕಾರ್ಯ ನಿರ್ವಹಿಸಲಿದೆ.

ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಚುನಾವಣಾ ಆಯೋಗದ ಆದೇಶದನ್ವಯ ಉಚಿತ (ಟೋಲ್‌ಫ್ರೀ) ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 1950 ಆಗಿರುತ್ತದೆ. ಜಿಲ್ಲೆ ಅಲ್ಲದೆ ಹೊರ ಜಿಲ್ಲೆಯ ನಾಗರಿಕರು ಸಹ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಮತದಾರರ ಸಹಾಯವಾಣಿ 1950 ರಲ್ಲಿ ಮತದಾರರ ಹೆಸರು ನೋಂದಣಿ, ಅರ್ಜಿಗಳ ಪರಿಶೀಲನೆ, ಮತಗಟ್ಟೆ ಮತ್ತು ಮತಗಟ್ಟೆ ಅಧಿಕಾರಿಗಳ ಬಗ್ಗೆ, ಚುನಾವಣೆ ಕುರಿತು ಮಾಹಿತಿ ಪಡೆಯುವ ಜೊತೆಗೆ ಚುನಾವಣೆಗೆ ಸಂಬಂಧಿಸಿದಂತಹ ದೂರುಗಳಿದ್ದಲ್ಲಿ ಸಲ್ಲಿಸಬಹುದು. ವಿದ್ಯುನ್ಮಾನ ಮತಯಂತ್ರದ ಬಗ್ಗೆಯೂ ತಿಳಿಯಬಹುದು ಎಂದು ತಿಳಿಸಿದರು.

ಬಿಎಸ್ಸೆನ್ನೆಲ್‌ನಿಂದ ಪಿಆರ್‌ಐ ಗೇಟ್ವೇ ದೊರೆತಿದ್ದು, ಯಾವುದೇ ಅಡಚಣೆ ಇಲ್ಲದೇ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸದ್ಯಕ್ಕೆ ನಾಲ್ಕು ಸಿಬ್ಬಂದಿಯನ್ನು ಸಹಾಯವಾಣಿ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಚುನಾವಣೆ ಘೋಷಣೆಯಾದ ನಂತರ ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಇದ್ದರೆ ನಿಯೋಜಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್‌ ಸಹಾಯವಾಣಿಗೆ ನೋಡಲ್‌ ಅಧಿಕಾರಿಯಾಗಿದ್ದಾರೆ ಎಂದು ತಿಳಿಸಿದರು. ಚುನಾವಣಾ ತಹಶೀಲ್ದಾರ್‌ ಪ್ರಸಾದ್‌ ಇತರರು ಇದ್ದರು.

ಟಾಪ್ ನ್ಯೂಸ್

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

virat kohli

ಶೂನ್ಯಕ್ಕೆ ಔಟಾಗಿ ಮತ್ತೊಂದು ದಾಖಲೆ ಪಟ್ಟಿಗೆ ಸೇರಿದ ವಿರಾಟ್ ಕೊಹ್ಲಿ

yatnal

ನಮಗೆ ದಿಲ್ಲಿಗೆ ಹೋಗುವ ಚಟ ಇದೆ;ಯುಗಾದಿ ಹೊತ್ತಿಗೆ ಬದಲಾವಣೆ: ಯತ್ನಾಳ್

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಜಯದೇವ ಆಸ್ಪತ್ರೆ ಸ್ಥಾಪನೆ ಪ್ರಕ್ರಿಯೆ ಶುರು

davanagere news

ವಸತಿ ಸೌಲಭ್ಯ: ಮರು ಭೂಸ್ವಾಧೀನ ಪ್ರಸ್ತಾವನೆ ಸಲ್ಲಿಸಿ

davanagere news

ವೇಮನ ಜಯಂತಿ ಸರಳ ಆಚರಣೆ

honnali news

ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿಸಂಪರ್ಕ: ರೇಣು

davanagere news

979 ಸೋಂಕಿತರಿಗೆ ಹೋಂ ಐಸೋಲೇಷನ್‌

MUST WATCH

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಹೊಸ ಸೇರ್ಪಡೆ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

1-ddsad

ಉಡುಪಿ:ಹಿಜಾಬ್ ವಿವಾದ; ಪ್ರಾಂಶುಪಾಲರ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ

ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.