ಹಬ್ಬಕ್ಕೆ ಕಳೆ ತಂದ ಕುಸ್ತಿ

Team Udayavani, Apr 1, 2019, 1:24 PM IST

ಹರಿಹರ: ಗ್ರಾಮದೇವತೆ ಜಾತ್ರೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯಲ್ಲಿ
ಭಾನುವಾರ ಜರುಗಿದ ಪುರುಷ ಹಾಗೂ ಮಹಿಳಾ ಪಟುಗಳ ಕುಸ್ತಿಗಳು ಮೈ ನವಿರೇಳಿಸುವಂತಿದ್ದವು.
ರಾಜ್ಯ-ಹೊರರಾಜ್ಯಗಳಿಂದ ಬಂದಿರುವ ಪೈಲ್ವಾನ್‌ರ ಪಟ್ಟುಗಳನ್ನು ಜನರು ಉಸಿರು ಬಿಗಿ ಹಿಡಿದುಕೊಂಡು ನೋಡಿದರು. ಕುಸ್ತಿ ಪಟುಗಳು ಹಾಕುವ ಪ್ರತಿ ಪಟ್ಟಿಗೂ ಜನರು ಸಿಳ್ಳೆ ಹಾಕಿ, ಕುಣಿದು ಕುಪ್ಪಳಿಸಿದರು.
ಮಹಿಳಾ ಪಟುಗಳ ಜನಾಕರ್ಷಣೆ: ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಅಂದಾಜು 45 ಮಹಿಳಾ ಕುಸ್ತಿ ಪಟುಗಳು
ಆಗಮಿಸಿರುವುದು ಜನಾಕರ್ಷಣೆಗೆ ಕಾರಣವಾಗಿದೆ. ಬೆಂಗಳೂರು, ಮಂಗಳೂರು ಹಾಗೂ ಆಳ್ವಾಸ್‌ ಸಂಸ್ಥೆಯ ರಾಷ್ಟ್ರೀಯ ಕ್ರೀಡಾಪಟುಗಳು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ.
ಆಳ್ವಾಸ್‌ನ ಅಸ್ನಾ ಸರೀನ್‌ ಮತ್ತು ಮಂಗಳೂರಿನ ಸಹನಾ ನಡುವೆ ನಡೆದ ಆಕರ್ಷಕ ಕುಸ್ತಿ ಸೆಣಸಾಟ ನೆರೆದಿದ್ದ ಜನಸಮೂಹಕ್ಕೆ ಸಿಳ್ಳೆ, ಚಪ್ಪಾಳೆಗಳಿಗೆ ಪ್ರೇರಣೆ ನೀಡಿತು. ಬೆಂಗಳೂರಿನ ಡಾಲಿ  ವರ್ಗೀಸ್‌ ಮತ್ತು ಆಳ್ವಾಸ್‌ನ ಅರ್ಷಿತ ಮಧ್ಯೆ ನಡೆದ ರೋಚಕ ಪಂದ್ಯವನ್ನು ಜನರು ತುದಿಗಾಲ ಮೇಲೆ ನಿಂತು ನೋಡಿದರು.
ಮಹರಾಷ್ಟ್ರಾದ ನಾಮದೇವ, ಹರಿಯಾಣದ ಅಜೆಯ್‌, ವಿಜಯ್‌, ಸೇರಿದಂತೆ ಉತ್ತರ ಪ್ರದೇಶ, ಕೊಲ್ಲಾಪುರ ಮತ್ತು ಬೆಳಗಾವಿ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಭಾನುವಾರ ತಡರಾತ್ರಿ ಫಲಿತಾಂಶಗಳು ಘೋಷಣೆಯಾಗಲಿವೆ. ಕಾಗಿನೆಲೆ ಗುರುಪೀಠದ ನಿರಂಜನಾನಂದ ಶ್ರೀ, ಶಾಸಕ ಎಸ್‌.ರಾಮಪ್ಪ ಮತ್ತಿತರೆ ಗಣ್ಯರು ಸೇರಿದಂತೆ ಸಾವಿರಾರು ಜನರು ಕುಸ್ತಿ
ಪಂದ್ಯಾವಳಿ ವೀಕ್ಷಿಸಿದರು.
ಪಂದ್ಯಾವಳಿಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಕ್ರಮವಾಗಿ ಒಂದೂ ಕಾಲು ಕೆ.ಜಿ., ಮುಕ್ಕಾಲು ಕೆ.ಜಿ., ಅರ್ಧ ಕೆ.ಜಿ. ಬೆಳ್ಳಿ ಗದೆಗಳು ಹಾಗೂ ನಗದು ಹಣ ಹಾಗೂ ಪಾರಿತೋಷಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಎಲ್ಇಡಿ ದೀಪಗಳು ಕೇವಲ ಕಾರುಗಳಲ್ಲಿ ಹೆಚ್ಚಿನ ಬಳಕೆಯಲ್ಲಿರುತ್ತವೆ. ಆದರೆ ವಾಸ್ತವದಲ್ಲಿ ಈ ಬಲುºಗಳು ವರ್ಣರಂಜಿತ ಮನೆಗೆ ಹೆಚ್ಚಿನ ಅಂದವನ್ನು ನೀಡುವುದರಲ್ಲಿ...

  • ಮನೆ ಸುಂದರವಾಗಿರಬೇಕು ಎನ್ನುವವರು ಮನೆಯ ಪ್ರತಿ ಅಂಶಗಳ ಮೇಲೂ ಗಮನ ಹರಿಸುತ್ತಾರೆ. ಪ್ರತಿಯೊಂದು ವಸ್ತು ವ್ಯವಸ್ಥಿವಾಗಿರಬೇಕು, ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ....

  • ಮನೆಯ ಹೃದಯಭಾಗವಾದ ಲಿವಿಂಗ್‌ ರೂಮ್‌ನಲ್ಲಿ ಬಹುತೇಕ ಸಮಯವನ್ನು ಕಳೆಯಲಾಗುತ್ತದೆ. ಊಟ, ಹರಟೆ, ಮಾತುಕತೆ ಸಹಿತ ಮತ್ತಿತರ ಸಂಗತಿಗಳು ಜರಗುವುದು ಲಿವಿಂಗ್‌ ರೂಮ್‌ನಲ್ಲಿ....

  • ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ಕೊಟ್ಟು, ಅವುಗಳನ್ನು ಓದುಗ ಸ್ನೇಹಿ ಮತ್ತು ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ...

  • ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ನಡೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ....