1,204 ರೌಡಿಶೀಟರ್‌ ಮನೆ ಮೇಲೆ ದಾಳಿ


Team Udayavani, Oct 14, 2019, 10:41 AM IST

Udayavani Kannada Newspaper

ಹುಬ್ಬಳ್ಳಿ: ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ಅಪರಾಧ ಕೃತ್ಯಗಳು ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಕಾನೂನು-ಸುವ್ಯವಸ್ಥೆ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್‌ ಕಮಿಷನರೇಟ್‌ ಘಟಕ ಈಗಾಗಲೇ 1200ಕ್ಕೂ ಅಧಿಕ ರೌಡಿಶೀಟರ್‌ಗಳ ಮನೆಗಳ ಶೋಧ ನಡೆಸಿ ಬಿಸಿ ಮುಟ್ಟಿಸಿದೆ.

ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಸರಣಿ ಚಾಕು ಇರಿತ ಮತ್ತು ಓರ್ವನ ಕೊಲೆ ಪ್ರಕರಣ, ನಂತರದ ದಿನಗಳಲ್ಲಿ ಅವಳಿ ನಗರದಲ್ಲಿ ನಡೆದ ಶೂಟೌಟ್‌, ಕೊಲೆ, ಚಾಕು ಇರಿತದಂತಹ ಪ್ರಕರಣಗಳಿಂದ ಅವಳಿ ನಗರದ ಜನ ಆತಂಕಕ್ಕೊಳಗಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಭೀತಿಗೊಂಡಿದ್ದರು. ಅಲ್ಲದೆ ಪೊಲೀಸ್‌ ವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸತೊಡಗಿದ್ದರು.

ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡ ಆಯುಕ್ತ ಆರ್‌. ದಿಲೀಪ್‌ ಅವರು ತಮ್ಮ ಮುಂದಾಳತ್ವದಲ್ಲಿಯೇ ಸೆ. 24ರಿಂದ ಅ. 12ರ ವರೆಗೆ ಒಟ್ಟು 1204 (ಪೊಲೀಸ್‌ ಇಲಾಖೆಯ ಮಾಹಿತಿ ಅನುಸಾರ) ರೌಡಿಶೀಟರ್‌ಗಳ ಮನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ 355 ರೌಡಿಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಜೊತೆಗೆ ಪ್ರಮುಖ ರೌಡಿಶೀಟರ್‌ಗಳಾದ ನಾಗಶೆಟ್ಟಿಕೊಪ್ಪದ ಅಲ್ತಾಫ ಎಂ. ಬೇಪಾರಿ, ಶಾಂತಿನಗರದ ಶಿವಕುಮಾರ ಬಾಲಸುಬ್ರಮಣ್ಯಂ, ಗೋಪನಕೊಪ್ಪ ವಡ್ಡರ ಓಣಿಯ ಮಂಜುನಾಥ ಎಸ್‌. ಪೂಜಾರ, ನಾಗಶೆಟ್ಟಿಕೊಪ್ಪ ವಡ್ಡರ ಓಣಿಯ ಕಿರಣ ಎಂ. ಮಾನೆ, ವಿಶಾಲ ಜಾಧವ ಬಂಧಿಸುವ ಮೂಲಕ ರೌಡಿಶೀಟರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದುವರೆಗೆ ಒಟ್ಟಾರೆ ಹುಬ್ಬಳ್ಳಿಯಲ್ಲಿ 1118 ಹಾಗೂ ಧಾರವಾಡದಲ್ಲಿ 86 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

 ಅಕ್ರಮ ಹಣಕಾಸು ವ್ಯವಹಾರಗಳಿಗೆ ರೌಡಿಗಳ ನೆರವು ಬಳಕೆ? : ನಗರದಲ್ಲಿ ಅಕ್ರಮ ದಂಧೆ ಹಾಗೂ ಮೀಟರ್‌ ಬಡ್ಡಿ ಕುಳಗಳು ತಮ್ಮ ವ್ಯವಹಾರ ಸಲೀಸಾಗಿ ನಡೆಯಲು ರೌಡಿಗಳನ್ನು ಬಳಸಿಕೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಸಾಲಗಾರರು ಬಡ್ಡಿ ಹಣ ಕೊಡಲು ವಿಳಂಬ ಮಾಡಿದಾಗ ಇಲ್ಲವೆ ಅಸಲು ಕೊಡಲು ಅವರನ್ನು ತಡಕಾಡಿಸಿದಾಗ ಬಡ್ಡಿಕೋರರು ರೌಡಿಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಾರೆ. ಅದೇರೀತಿ ಅಣ್ಣಾಗಳೆನಿಸಿಕೊಂಡ ಕೆಲವರು ತಮ್ಮ ಹಫ್ತಾ ವಸೂಲಿಗಾಗಿ ರೌಡಿಗಳ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬಡ್ಡಿ ಕುಳಗಳ, ಹಫ್ತಾ ವಸೂಲಿದಾರರ ಹಾಗೂ ಅಕ್ರಮ ದಂಧೆಕೋರರಿಗೆ ಪೂರಕವಾಗಿ ಕೆಲಸ ಮಾಡುವ ಸಲುವಾಗಿಯೇ ಕೆಲ ರೌಡಿಗಳು ಹುಟ್ಟಿಕೊಂಡಿದ್ದಾರೆ. ನಗರದಲ್ಲಿ ಪ್ರತಿಷ್ಠಿತರೆಂದೆನಿಸಿಕೊಂಡ ಕೆಲವರು ಬಡ್ಡಿ ವ್ಯವಹಾರವನ್ನೇ ತಮ್ಮ ಕಸುಬನ್ನಾಗಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸ್‌ ಆಯುಕ್ತರು ರೌಡಿಶೀಟರ್‌ಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಅಕ್ರಮ ದಂಧೆಕೋರರು, ಬಡ್ಡಿ ಕುಳಗಳು ಹಾಗೂ ಹಫ್ತಾ ವಸೂಲಿಗಾರರನ್ನು ಮಟ್ಟ ಹಾಕಿದರೆ ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆಗಳು ತನ್ನಂದತಾನೇ ಹತೋಟಿಗೆ ಬರಲು ಸಾಧ್ಯವೆಂಬ ಮಾತುಗಳು ಕೇಳಿಬರುತ್ತಿವೆ.

ಅಕ್ರಮ ದಂಧೆ-ಬಡ್ಡಿ ಕುಳಗಳ ಮೇಲೂ ಕ್ರಮ : ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಅವರು ರೌಡಿಶೀಟರ್‌ಗಳ ಮೇಲೆ ಮಾತ್ರ ಕ್ರಮಕೈಗೊಳ್ಳದೆ ಅಕ್ರಮ ದಂಧೆ, ಮೀಟರ್‌ ಬಡ್ಡಿ, ಹಫ್ತಾ ವಸೂಲಿ ಹಾಗೂ ಬೇರೆಯವರ ಹೆಸರನಲ್ಲಿನ ಆಸ್ತಿ ಮಾರಾಟ ಮಾಡುತ್ತಿದ್ದ ವಂಚಕರ ಬಾಲ ಕತ್ತರಿಸುತ್ತಿದ್ದಾರೆ. ಬೇರೆಯವರ ಆಸ್ತಿಯನ್ನು

ಜಿಪಿಎ ಆಧಾರಿಸಿ ಮಾರಾಟ ಮಾಡುತ್ತಿದ್ದ ನರೇಶ ರಾವಲ್‌ ಹಾಗೂ ಸಾರ್ವಜನಿಕರು ಮತ್ತು ತರಕಾರಿ, ಹಣ್ಣು ವ್ಯಾಪಾರಿಗಳನ್ನು ಹೆದರಿಸಿ ಅಕ್ರಮ ದಂಧೆ ನಡೆಸುತ್ತಿದ್ದ ಫ್ರೂಟ್‌ ಇರ್ಫಾನ್‌ನನ್ನು ಬಂಧಿಸುವ ಮೂಲಕ ಇತರೆ ಮೀಟರ್‌ ಬಡ್ಡಿ ಕುಳಗಳು, ಹಫ್ತಾ ವಸೂಲಿಗಾರರು, ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

ಅವಳಿ ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆ, ಮೀಟರ್‌ ಬಡ್ಡಿ, ಹಫ್ತಾ ವಸೂಲಿ ಸೇರಿದಂತೆ ಇನ್ನಿತರೆ ಅನೈತಿಕ ಚಟುವಟಿಕೆಗಳನ್ನು ಬುಡಸಮೇತ ಕಿತ್ತು ಹಾಕಲು ಯೋಜಿಸಲಾಗಿದೆ. ಯಾರಾದರೂ ಅಮಾಯಕರು, ಸಾರ್ವಜನಿಕರು ಇಂತಹ ದಂಧೆಕೋರರಿಂದ ವಂಚನೆ, ಅನ್ಯಾಯಕ್ಕೊಳಗಾಗಿದ್ದರೆ ಇಲಾಖೆಗೆ ಮಾಹಿತಿ ಕೊಟ್ಟರೆ ಅಂಥವರನ್ನು ಯಾವುದೇ ಒತ್ತಡ, ಮುಲಾಜಿಲ್ಲದೆ ಮಟ್ಟಹಾಕಲಾಗುವುದು. ಇಂಥವರಿಂದಲೇ ಸಮಾಜದಲ್ಲಿ ರೌಡಿಗಳು ಹುಟ್ಟಿಕೊಳ್ಳುತ್ತಿದ್ದಾರೆ.  –ಆರ್‌. ದಿಲೀಪ್‌, ಹು-ಧಾ ಪೊಲೀಸ್‌ ಆಯುಕ್ತ

 

-ಶಿವಶಂಕರ ಕಂಠಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.