ರಕ್ತ ಭಂಡಾರಗಳಲ್ಲಿ ಖಾಲಿಯಾಗ್ತಿದೆ ರಕ್ತ


Team Udayavani, Apr 28, 2021, 3:58 PM IST

uyiyiy7

ವರದಿ: ಹೇಮರಡ್ಡಿ ಸೈದಾಪುರ

ಹುಬ್ಬಳ್ಳಿ: ಕೋವಿಡ್‌ನಿಂದ ಜಿಲ್ಲೆಯ ರಕ್ತ ಭಂಡಾರಗಳಲ್ಲಿ ರಕ್ತ ಹಾಗೂ ಪ್ಲಾಸ್ಮಾ ಕೊರತೆ ಉಂಟಾಗಿದ್ದು, ಮುಂದಿನ ತಿಂಗಳು ಈ ಸಮಸ್ಯೆ ತೀವ್ರಗೊಳ್ಳಲಿದೆ. 18-45 ವಯಸ್ಸಿನವರಿಗೆ ಕೋವಿಡ್‌ ಲಸಿಕೆ ಅಭಿಯಾನದ ಪರಿಣಾಮ ರಕ್ತದ ಅಭಾವ ಮತ್ತಷ್ಟು ಹೆಚ್ಚಾಗಲಿದ್ದು, ಲಸಿಕೆ ಪಡೆಯುವ ಮೊದಲೇ ಆಸ್ಪತ್ರೆಗಳಲ್ಲಿರುವ ರಕ್ತ ಭಂಡಾರಗಳಿಗೆ ತೆರಳಿ ಇದರ ಅಭಾವ ನೀಗಿಸಲು ಮುಂದಾಗಬೇಕಿದೆ.

ಕೋವಿಡ್‌, ಕಾಲೇಜುಗಳು ರಜೆ, ಲಾಕ್‌ ಡೌನ್‌ ಪರಿಣಾಮ ಈಗಾಗಲೇ ಜಿಲ್ಲೆಯ ಎರಡು ಸರಕಾರಿ ರಕ್ತ ಭಂಡಾರಗಳಾದ ಧಾರವಾಡ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್‌ ಸೇರಿದಂತೆ ಖಾಸಗಿ 11 ರಕ್ತ ಭಂಡಾರಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ. ಜನವರಿಯಿಂದ ಮಾರ್ಚ್‌ ಅಂತ್ಯದವರಿಗೆ ಶಿಬಿರಗಳ ಮೂಲಕ ಸಂಗ್ರಹಿಸಿದ ರಕ್ತ ಖಾಲಿಯಾಗುತ್ತಿದೆ. ಅಲ್ಪಸ್ವಲ್ಪ ಉಳಿದಿರುವ ವಿವಿಧ ಗುಂಪುಗಳ ರಕ್ತ 15 ದಿನಗಳಿಗೆ ಸಾಕಾಗಲಿದೆ.  ಸಾಂಪ್ರದಾಯಿಕ ರಕ್ತದಾನಿಗಳಾಗಿರುವ 18-45 ವಯಸ್ಸಿನವರಿಗೆ ಮೇ1 ರಿಂದ ಕೋವಿಡ್‌ ಲಸಿಕೆ ಅಭಿಯಾನ ನಡೆಯುವುದರಿಂದ ಮುಂದಿನ ತಿಂಗಳ ಅಂತ್ಯಕ್ಕೆ ಇದರ ಅಭಾವ ಹೆಚ್ಚಾಗಲಿದೆ ಎನ್ನುವ ಆತಂಕ ಆವರಿಸಿದೆ.

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು 200-250 ಬ್ಯಾಗ್‌, ಕಿಮ್ಸ್‌ನಲ್ಲಿ 300 ಬ್ಯಾಗ್‌, ನವನಗರದ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ 100-120 ಬ್ಯಾಗ್‌, ರಾಷ್ಟ್ರೋತ್ಥಾನದಲ್ಲಿ 1200 ಬ್ಯಾಗ್‌ ಬಳಕೆ ಹಾಗೂ ಸಂಗ್ರಹವಿರುತ್ತಿತ್ತು. ಈಗ ಸಂಗ್ರಹ ಪ್ರಮಾಣ ಎರಡಂಕಿಗೆ ಇಳಿದಿದೆ. ರಕ್ತದಾನ ಮಾಡದಿದ್ದರೂ ನೀಡುತ್ತಿದ್ದ ರಾಷ್ಟ್ರೋತ್ಥಾನ ರಕ್ತ ನಿಧಿಯಲ್ಲಿ ಒಬ್ಬರು ರಕ್ತ ದಾನ ಮಾಡಿದರೆ ಬೇಕಾದ ರಕ್ತ ನೀಡುವ ಪರಿಸ್ಥಿತಿ ಉಂಟಾಗಿತ್ತು. ಇತರೆಡೆ ರೋಗಿಗಳ ಸಂಬಂಧಿ ಕರು ರಕ್ತ ನೀಡಿದರೆ ಮಾತ್ರ ರಕ್ತ ನೀಡುವ ವ್ಯವಸ್ಥೆ ಇರುವುದರಿಂದ ಇದು ಲಾಕ್‌ಡೌನ್‌ ಸಮಯದಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ.

ರಕ್ತಕ್ಕೆ ಬೇಡಿಕೆ: ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಲಾಗಿದೆ. ಆದರೆ ಹೆರಿಗೆ, ಕ್ಯಾನ್ಸರ್‌, ಅಪಘಾತ, ಕೆಲವೊಂದು ಅಗತ್ಯ ಶಸ್ತ್ರ ಚಿಕಿತ್ಸೆ, ಹಿಮೋಫೇಲಿಯಾ, ತಲಸೀಮಿಯಾದಂತಹ ರೋಗಿಗಳಿಗೆ ರಕ್ತ ಅನಿವಾರ್ಯ. ಇದೀಗ ಉಂಟಾಗಿರುವ ಅಭಾವದಿಂದ ಅಗತ್ಯ ಗುಂಪಿನ ಮಾದರಿಯ ರಕ್ತ ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬೇಡಿಕೆ, ಸಂಗ್ರಹಕ್ಕೆ ಸರಿಯಾಗಿದ್ದರೂ ಮುಂದೆ ಕಷ್ಟ ಎನ್ನುವ ಅಭಿಪ್ರಾಯಗಳಿದ್ದು, ಕಿಮ್ಸ್‌, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ರಕ್ತದ ಬೇಡಿಕೆ ಕಡಿಮೆಯಾಗಿಲ್ಲ.

ಟಾಪ್ ನ್ಯೂಸ್

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

90% ಮಂದಿಗೆ ಲಸಿಕೆ ಪೂರ್ಣ

90% ಮಂದಿಗೆ ಲಸಿಕೆ ಪೂರ್ಣ : ಸೋಂಕು ನಿಯಂತ್ರಣಕ್ಕೆ ಜನರ ಬೆಂಬಲ

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

90% ಮಂದಿಗೆ ಲಸಿಕೆ ಪೂರ್ಣ

90% ಮಂದಿಗೆ ಲಸಿಕೆ ಪೂರ್ಣ : ಸೋಂಕು ನಿಯಂತ್ರಣಕ್ಕೆ ಜನರ ಬೆಂಬಲ

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.