ಉತ್ಸಾಹ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌

ಕ್ವಾಂಟಿಟಿ-ಕ್ವಾಲಿಟಿ ಕೊರತೆ ದೂರು

Team Udayavani, Apr 5, 2021, 4:31 PM IST

ಉತ್ಸಾಹ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕನಸಿನ ಕೂಸಾಗಿದ್ದ ಬಡವರ ಹೊಟ್ಟೆ ತುಂಬಿಸಬೇಕಾದ ಇಂದಿರಾ ಕ್ಯಾಂಟೀನ್‌ಗಳು ಇಂದು ಜನರೇ ಇಲ್ಲದೆ ಭಣಗುಡುತ್ತಿವೆ. ಹೆಚ್ಚಿನ ಭರವಸೆ ಮೂಡಿಸಿ ಇದೀಗ ಉತ್ಸಾಹ ಕಳೆದುಕೊಂಡಂತೆ ಭಾಸವಾಗುತ್ತಿವೆ.

ಒಂದೆಡೆ ಜನರ ನಿರಾಸಕ್ತಿಯಾದರೆ, ಇನ್ನೊಂದೆಡೆ ಆರಂಭದಲ್ಲಿ ನೀಡುತ್ತಿದ್ದಗುಣಮಟ್ಟ ಹಾಗೂ ಪ್ರಮಾಣದಲ್ಲಿಇಳಿಕೆಯಾಗಿದೆ. ಇದರಿಂದ ಜನರುಸಹ ಕ್ಯಾಂಟೀನ್‌ ಬಳಿ ಸುಳಿಯುತ್ತಿಲ್ಲ.ನಗರದಲ್ಲಿ 7 ಇಂದಿರಾ ಕ್ಯಾಂಟೀನ್‌ಗಳುಇದ್ದು, ಬೆಳಗ್ಗೆಯಿಂದ ರಾತ್ರಿಯವರೆಗೆಕೇವಲ 2 ಕ್ಯಾಂಟೀನ್‌ಗಳು ಮಾತ್ರ ಕೆಲಸನಿರ್ವಹಿಸುತ್ತಿವೆ. ಇನ್ನುಳಿದ ಕ್ಯಾಂಟೀನ್‌ಗಳು ಸಂಜೆಯಾಗುತ್ತಿದ್ದಂತೆ ಬಾಗಿಲು ಹಾಕುತ್ತಿವೆ.

ವಿದ್ಯುತ್‌ ಕಟ್‌ ನೀರು ಬಂದ್‌: ಎರಡು ಕ್ಯಾಂಟೀನ್‌ಗಳಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದೆತಿಂಗಳುಗಳೇ ಉರುಳಿವೆ. ವಿದ್ಯುತ್‌ ಸಂಪರ್ಕಇಲ್ಲದೇ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಅಲ್ಲದೆ ಕ್ಯಾಂಟೀನ್‌ಗಳಲ್ಲಿರುವ ಸಿಸಿ ಕ್ಯಾಮರಾಗಳು ಸಹ ಬಂದ್‌ ಆಗಿವೆ.ನ್ಯೂ ಇಂಗ್ಲಿಷ್‌ ಸ್ಕೂಲ್‌ ಬಳಿಯ ಇಂದಿರಾಕ್ಯಾಂಟೀನ್‌ನಲ್ಲಿ ಕುಡಿಯಲು ನೀರು ಇಲ್ಲದೆಹೊರಭಾಗದಲ್ಲಿರುವ ನೀರಿನ ಸಂಪಿನಲ್ಲಿನೀರು ತೆಗೆದುಕೊಂಡು ಕುಡಿಯುವ ಸ್ಥಿತಿ ಬಂದಿದೆ. ಕ್ಯಾಂಟೀನ್‌ ನಿರ್ವಹಣೆಗೂ ನೀರು ಹೊತ್ತು ತರುವ ಸ್ಥಿತಿ ಬಂದಿದೆ.

ಆರಂಭದಲ್ಲಿದ್ದ ಉತ್ಸಾಹ ಈಗಿಲ್ಲ :

ಕ್ಯಾಂಟೀನ್‌ ಆರಂಭ ಆದ ಸಮಯದಲ್ಲಿ ಹೆಚ್ಚಿನ ಜನರುಆಗಮಿಸುತ್ತಿದ್ದರು, ಹೆಚ್ಚಿನಉಪಾಹಾರ, ಊಟ ವಿತರಣೆ ಮಾಡಲಾಗುತ್ತಿತ್ತು. ಆದರೆಸದ್ಯ ಅಂತಹ ಸ್ಥಿತಿ ಇಲ್ಲವಾಗಿದೆ.ಬೆಳಗ್ಗೆ ಉಪಾಹಾರ 300ಕ್ಕೂಹೆಚ್ಚು ಪ್ಲೇಟ್‌, ಮಧ್ಯಾಹ್ನ ಊಟ 300 400 ಪ್ಲೇಟ್‌ ಹಾಗೂ ರಾತ್ರಿಊಟಕ್ಕೆ 150ರಿಂದ ಸುಮಾರು 200ಪ್ಲೇಟ್‌ನಷ್ಟು ವಿತರಿಸಲಾಗುತ್ತಿತ್ತು.ಆದರೆ ಇದೀಗ ಎಸ್‌.ಎಂ. ಕೃಷ್ಣನಗರ,ಸೋನಿಯಾ ಗಾಂಧಿ  ನಗರ, ನ್ಯೂ ಇಂಗ್ಲಿಷ್‌ ಸ್ಕೂಲ್‌, ಉಣಕಲ್ಲ ಹಾಗೂಬೆಂಗೇರಿ ಕ್ಯಾಂಟೀನ್‌ಗಳು ಬೆಳಗ್ಗೆ 7ಗಂಟೆಗೆ ಆರಂಭಗೊಂಡು ಮಧ್ಯಾಹ್ನದಹೊತ್ತಿಗೆ ಬಾಗಿಲು ಹಾಕುತ್ತಿವೆ.ನಗರದಲ್ಲಿರುವ 7 ಇಂದಿರಾ ಕ್ಯಾಂಟೀನ್‌ಗಳಲ್ಲಿ ಎರಡು ಕ್ಯಾಂಟೀನ್‌ಗಳು ಮಾತ್ರ ಉತ್ತಮವಾಗಿ ನಡೆಯುತ್ತಿದ್ದು, ಇನ್ನುಳಿದವು ಅಷ್ಟಕಷ್ಟೇ ಎನ್ನುವಂತಿವೆ.ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿಸಿಬ್ಬಂದಿ ಕೊರತೆ ಜೊತೆಯಲ್ಲಿಯೇ ಮೂಲಸೌಕರ್ಯಗಳ ಕೊರತೆ ಇದ್ದು, ಸಂಬಂಧಿಸಿದವರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.

ಕ್ಯಾಂಟೀನ್‌ಗಳ ಸದ್ಯದ ಸ್ಥಿತಿ :

­ ನ್ಯೂ ಇಂಗ್ಲಿಷ್‌ ಸ್ಕೂಲ್‌ ಬಳಿ: ಬೆಳಗ್ಗೆ 100ಪ್ಲೇಟ್‌ ಉಪಾಹಾರ, ಮಧ್ಯಾಹ್ನ 30ರಿಂದ35 ಊಟ, ರಾತ್ರಿ ಊಟ ಇಲ್ಲ, ಆರೇಳು ತಿಂಗಳಿಂದ ವಿದ್ಯುತ್‌ ಸಂಪರ್ಕ ಕಡಿತ.ಎಸ್‌.ಎಂ. ಕೃಷ್ಣ ನಗರ: ಬೆಳಗ್ಗೆ 100ಪ್ಲೇಟ್‌ ಉಪಾಹಾರ, ಮಧ್ಯಾಹ್ನ 100 ಊಟ, ರಾತ್ರಿ ಊಟ ಇಲ್ಲ. ಆರೇಳುತಿಂಗಳಿಂದ ವಿದ್ಯುತ್‌ ಸಂಪರ್ಕ ಕಡಿತ.

­ಸೋನಿಯಾ ಗಾಂಧಿ ನಗರ: ಬೆಳಗ್ಗೆ 100 ಪ್ಲೇಟ್‌ ಉಪಾಹಾರ, ಮಧ್ಯಾಹ್ನ 30ರಿಂದ50 ಊಟ, ರಾತ್ರಿ ಊಟ ಇಲ್ಲ.

ಬೆಂಗೇರಿ: ಬೆಳಗ್ಗೆ 150 ಪ್ಲೇಟ್‌ ಉಪಾಹಾರ, ಮಧ್ಯಾಹ್ನ 30 ಊಟ, ರಾತ್ರಿಊಟ ಇಲ್ಲ. ಶನಿವಾರದಂದು ಹೆಚ್ಚಿನಉಪಾಹಾರ ಹಾಗೂ ಊಟ ವಿತರಣೆ. ಹೊಸ ಬಸ್‌ ನಿಲ್ದಾಣ: ಬೆಳಗ್ಗೆ 300ರಿಂದ350 ಉಪಾಹಾರ, ಮಧ್ಯಾಹ್ನ 400ರಿಂದ 500 ಊಟ, ರಾತ್ರಿ ಅಲ್ಪ ಪ್ರಮಾಣದಲ್ಲಿ ಊಟ ವಿತರಣೆ.

­ಕಿಮ್ಸ್‌ ಆವರಣ: ಬೆಳಗ್ಗೆ 450ರಿಂದ 500 ಉಪಾಹಾರ, ಮಧ್ಯಾಹ್ನ 300ರಿಂದ 400 ಊಟ, ರಾತ್ರಿ 100ರಿಂದ 150 ಊಟ ವಿತರಣೆ.

­ಉಣಕಲ್ಲ ಕೆರೆ ಉದ್ಯಾನ: ಬೆಳಗ್ಗೆ 100 ಉಪಾಹಾರ, ಮಧ್ಯಾಹ್ನ 50 ಊಟ, ರಾತ್ರಿ ಊಟ ಇಲ್ಲ.

ನಗರದ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನರು ಇಲ್ಲದೇ ಇರುವುದರಿಂದಮಧ್ಯಾಹ್ನವೇ ಮುಚ್ಚಿರುವುದು ಗಮನಕ್ಕೆ ಬಂದಿದೆ. ಕ್ಯಾಂಟೀನ್‌ಗಳಲ್ಲಿವಿದ್ಯುತ್‌ ಸಂಪರ್ಕ ಇಲ್ಲದಿರುವುದು, ಕುಡಿಯುವ ನೀರು ಇಲ್ಲದಿರುವುದರ ಕುರಿತು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. – ಡಾI ಸುರೇಶ ಇಟ್ನಾಳ, ಹು ಧಾ ಪಾಲಿಕೆ ಆಯುಕ್ತ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಆರಂಭದಲ್ಲಿ ನೀಡುತ್ತಿದ್ದ ಕ್ವಾಂಟಿಟಿ ಹಾಗೂ ಕ್ವಾಲಿಟಿ ಈಗ ಇಲ್ಲವಾಗಿದೆ. ಆರಂಭದಲ್ಲಿ ಉತ್ತಮವಾಗಿ ಹಾಗೂ ವಿವಿಧ ಬಗೆಯ ಉಪಾಹಾರ ನೀಡಲಾಗುತ್ತಿತ್ತು. ಆದರೆ ಇದೀಗ ಇಡ್ಲಿ, ಗುರುವಾರ ಪಲಾವ್‌ ಹಾಗೂರವಿವಾರ ಉಪ್ಪಿಟ್ಟು ಶಿರಾ ಮಾತ್ರ ನೀಡಲಾಗುತ್ತಿದೆ. ಮೊದಲಿನಂತೆ ಪೊಂಗಲ್‌,ಬಿಸಿಬೇಳೆಬಾತ್‌, ಪುಳಿಯೋಗರೆ ಯಾವುದನ್ನು ನೀಡಲಾಗುತ್ತಿಲ್ಲ. – ಜಾಫರ್‌ ಮೊರಬ, ಗ್ರಾಹಕ

 

-ಬಸವರಾಜ ಹೂಗಾರ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.