Udayavni Special

ನಿರುದ್ಯೋಗಿಗಳಿಗೆ ಆಶಾಕಿರಣವಾದ ಉದ್ಯೋಗ ಮೇಳ


Team Udayavani, Dec 9, 2019, 12:21 PM IST

huballi-tdy-2

ಕಲಘಟಗಿ: ಗ್ರಾಮೀಣ ಭಾಗದ ನಿರುದ್ಯೋಗಿ ಯುವ ಸಮೂಹದಲ್ಲಿ ಉಜ್ವಲ ಭವಿಷ್ಯದ ಬದುಕಿನಲ್ಲಿ ಏನನ್ನಾದರೂ ಸಾಧಿಸಬಲ್ಲೆವು ಎಂಬ ಆಶಾ ಮನೋಭಾವನೆ ತುಂಬಿದ ಆತ್ಮತೃಪ್ತಿ ಈ ಉದ್ಯೋಗ ಮೇಳದ ಯಶಸ್ಸಿನಿಂದ ದೊರಕಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

ಪಟ್ಟಣದ ಗುಡ್‌ ನ್ಯೂಸ್‌ ಕಾಲೇಜು ಆವರಣದಲ್ಲಿ ರವಿವಾರ ನಡೆದ ಬೃಹತ್‌ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾವಿರಾರು ಪ್ರತಿಭಾನ್ವಿತನಿರುದ್ಯೋಗಿ ಯುವಕಯುವತಿಯರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿರುವುದು ನಿರುದ್ಯೋಗ ಸಮಸ್ಯೆ ಎತ್ತಿ ತೋರಿಸುತ್ತಲಿದೆ. ನೋಂದಣಿಯನ್ನು 1934 ಅಭ್ಯರ್ಥಿಗಳು ಮಾಡಿದ್ದು, ಕೊನೆ ಕ್ಷಣದಲ್ಲಿ ಬಂದಂತಹ ನೂರಾರು ಅಭ್ಯರ್ಥಿಗಳಿಗೂ ಸಂದರ್ಶನದ ಅವಕಾಶ ನೀಡಲಾಗಿದೆ. ಸಂದರ್ಶನಕ್ಕೆ ಭಾಗವಹಿಸಿದವರಲ್ಲಿ 784 ನಿರುದ್ಯೋಗ ಯುವಕಯುವತಿಯರಿಗೆ ವಿವಿಧ ಕಂಪನಿಗಳ ಆಯ್ಕೆ ಪತ್ರ ನೀಡಲಾಗಿದೆ ಎಂದರು.

ಪ್ರಥಮ ಬಾರಿ ನಡೆಸಿದ ಉದ್ಯೋಗ ಮೇಳದ ಅಭೂತ ಪೂರ್ವ ಯಶಸ್ಸಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಪಡೆ, ಅಧಿಕಾರಿಗಳು ಹಾಗೂ ಸಂಘಟಿಕರು ಕಳೆದ ಹಲವು ತಿಂಗಳುಗಳಿಂದ ಪಟ್ಟ ಪರಿಶ್ರಮದ ಫಲವೇ ಕಾರಣವಾಗಿದೆ. ಸಣ್ಣ ಪ್ರಯತ್ನಕ್ಕೆ ದೊಡ್ಡ ಯಶಸ್ಸನ್ನು ದೊರಕಿಸಿಕೊಡಲು ಶ್ರಮಿಸಿದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಗುಡ್‌ ನ್ಯೂಸ್‌ ಸಂಸ್ಥೆ ಆವರಣದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಕೇವಲ ತಾಲೂಕು ಹಾಗೂ ಮತಕ್ಷೇತ್ರದವರಲ್ಲದೇ ಕಾರವಾರ, ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಹಳಿಯಾಳ ಮತ್ತು ಶಿರಸಿ ಸೇರಿದಂತೆ ಇತರೆ ಜಿಲ್ಲೆಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾವಂತ ನಿರುದ್ಯೋಗಿಗಳು ಭಾಗವಹಿಸಿದ್ದು ಸಂತಸ ತಂದಿದೆ ಎಂದು ಗುಡ್‌ ನ್ಯೂಸ್‌ ಆಡಳಿತಾಧಿಕಾರಿ ಬ್ರ. ನಿಜು ಥಾಮಸ್‌ ತಿಳಿಸಿದರು.

ಕೌಶಲ ಅಭಿವೃದ್ಧಿ ಸಂಯೋಜಕ ಎ.ಎಂ.ಎಸ್‌. ಗ್ರುಪ್ಸ್‌ನ ಬಿ.ಟಿ. ತೇಜಸ್ವಿ ಮಾತನಾಡಿ, ಈ ಬೃಹತ್‌ ಉದ್ಯೋಗ ಮೇಳಕ್ಕೆ ಪ್ರಮುಖ ಕಾರ್ಪೋರೇಟ್‌ ಕಂಪನಿಗಳಾದ ಇನ್ಫೊಸಿಸ್‌, ಹೊಂಡಾ, ಎಚ್‌. ಆರ್‌.ಎಸ್‌, ಜಿಂದಾಲ್‌, ಟೆಕ್ಸನಾ, ಜಿಟಿಟಿಸಿ ಸೇರಿದಂತೆ 70ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿ ಸಂದರ್ಶನವನ್ನು ನಡೆಸಿರುವುದು ಉದ್ಯೋಗ ಮೇಳ ಯಶಸ್ವಿಗೆ ಸಾಕ್ಷಿಯಾಗಿದೆ. ಕಾರ್ಪೋರೇಟ್‌ ಕಂಪನಿಗಳು ಸಂದರ್ಶನದ ಫಲಿತಾಂಶವನ್ನು ಸ್ಥಳದಲ್ಲಿಯೇ ಪ್ರಕಟಿಸಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ಭರವಸೆ ಪತ್ರ ನೀಡಲಾಗಿದೆ ಎಂದರು.

ಗುಡ್‌ ನ್ಯೂಸ್‌ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಜಿ. ಬಿರಾದರ, ಫ್ರೋ ಬಿ.ಜಿ ಬಿದರಿ,ಪ್ರೊ ಜಿ.ಸಿ.ಗುಮ್ಮಗೋಳಮಠ, ಡಾ| ಮಹೇಶ ಹೊರಕೇರಿ, ಫ್ರೋ| ಕುಸುಗಲ್‌, ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಾಸಕರ ಆಪ್ತ ಸಹಾಯಕ ಮಾರುತಿ  ಹಂಚಿನಮನಿ, ತಾಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, .ಸಿ ಗೋಕುಲ, ಎಸ್‌. ಎಂ. ಚಿಕ್ಕಣ್ಣವರ, ನರೇಶ ಮಲಾ°, ಶಶಿಧರ ಹುಲಿಕಟ್ಟಿ, ಬಸವರಾಜ ಶೇರೆವಾಡ, ವಜ್ರಕುಮಾರ ಮಾದನಭಾವಿ, ಲಿಂಗರಾಜ ತಿರ್ಲಾಪುರ, ರಾಜು ಚಿಕ್ಕಮಠ, ಮಹಾಂತೇಶ ಅಂಬಲಿ, ಬಸವರಾಜ ಹೊನ್ನಳ್ಳಿ, ಪರಶುರಾಮ ರಜಪೂತ, ಸುರೇಶ ಶೀಲವಂತರ, ಅಶೋಕ ಆಡಿನವರ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

RBI57,000 ಕೋ. ರೂ. ಲಾಭಾಂಶ ಪಾವತಿಗೆ ಆರ್‌ಬಿಐ ಅಸ್ತು

57,000 ಕೋ. ರೂ. ಲಾಭಾಂಶ ಪಾವತಿಗೆ ಆರ್‌ಬಿಐ ಅಸ್ತು

ಧೋನಿ ಹಾದಿ ತುಳಿದ ರೈನಾ

ಧೋನಿ ಹಾದಿ ತುಳಿದ ರೈನಾ

ಕೂಲ್‌ ಕ್ಯಾಪ್ಟನ್‌, ಬೆಸ್ಟ್‌ ಫಿನಿಶರ್‌ ಎಂ ಎಸ್ ಧೋನಿ

ಕೂಲ್‌ ಕ್ಯಾಪ್ಟನ್‌, ಬೆಸ್ಟ್‌ ಫಿನಿಶರ್‌ ಎಂ ಎಸ್ ಧೋನಿ

ಕೋವಿಡ್ ಕಳವಳ-ಆಗಸ್ಟ್ 15: 8818 ಹೊಸ ಪ್ರಕರಣ ; 6629 ಡಿಸ್ಚಾರ್ಜ್ ; 114 ಸಾವು

ಕೋವಿಡ್ ಕಳವಳ-ಆಗಸ್ಟ್ 15: 8818 ಹೊಸ ಪ್ರಕರಣ ; 6629 ಡಿಸ್ಚಾರ್ಜ್ ; 114 ಸಾವು

ಧೋನಿ ಹತ್ತಿರದಿಂದ ಕಂಡ ಸ್ಮರಣೀಯ ಇನ್ನಿಂಗ್ಸ್‌

ಧೋನಿ ಹತ್ತಿರದಿಂದ ಕಂಡ ಸ್ಮರಣೀಯ ಇನ್ನಿಂಗ್ಸ್‌

ಬೆಳಗಾವಿ: 100 ವರ್ಷ ಹಳೆಯ ಮನೆ ಗೋಡೆ ಕುಸಿತ: ನಾಲ್ವರ ರಕ್ಷಣೆ

ಬೆಳಗಾವಿ: 100 ವರ್ಷ ಹಳೆಯ ಮನೆ ಗೋಡೆ ಕುಸಿತ: ನಾಲ್ವರ ರಕ್ಷಣೆ

ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ

ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ: ವಿತರಕರು,ಚಿಲ್ಲರೆ ಮಾರಾಟಗಾರರ ಪರವಾನಗಿ ಅಮಾನತ್ತು

ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ: ವಿತರಕರು,ಚಿಲ್ಲರೆ ಮಾರಾಟಗಾರರ ಪರವಾನಗಿ ಅಮಾನತ್ತು

ಸರ್ಕಾರದಿಂದಲೇ ಕೋವಿಡ್‌ ಚಿಕಿತ್ಸಾ ವೆಚ್ಚ ಭರಣ

ಸರ್ಕಾರದಿಂದಲೇ ಕೋವಿಡ್‌ ಚಿಕಿತ್ಸಾ ವೆಚ್ಚ ಭರಣ

Darshan-01

ವಿನಯ್ ಡೈರಿಯಲ್ಲಿ ‘ಯಜಮಾನ’ನ ಭರ್ಜರಿ ಬಂಡಿ ಸವಾರಿ

11 ತರಹ ಸ್ವಾದದ ಬೆಲ್ಲ ತಯಾರಿಸುವ ರೈತ

11 ತರಹ ಸ್ವಾದದ ಬೆಲ್ಲ ತಯಾರಿಸುವ ರೈತ

ಅತಿವೃಷ್ಟಿ ಹಾನಿ ವರದಿ ಶೀಘ್ರ ಸಲ್ಲಿಸಿ

ಅತಿವೃಷ್ಟಿ ಹಾನಿ ವರದಿ ಶೀಘ್ರ ಸಲ್ಲಿಸಿ

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naikಹೊಸ ಸೇರ್ಪಡೆ

RBI57,000 ಕೋ. ರೂ. ಲಾಭಾಂಶ ಪಾವತಿಗೆ ಆರ್‌ಬಿಐ ಅಸ್ತು

57,000 ಕೋ. ರೂ. ಲಾಭಾಂಶ ಪಾವತಿಗೆ ಆರ್‌ಬಿಐ ಅಸ್ತು

ದಲಿತ ನಾಯಕನ ಹತ್ಯೆ ಖಂಡಿಸಿ ಗಲಭೆ: ಕಾಲ್ತುಳಿತಕ್ಕೆ ಬಾಲಕ ಬಲಿ

ದಲಿತ ನಾಯಕನ ಹತ್ಯೆ ಖಂಡಿಸಿ ಗಲಭೆ: ಕಾಲ್ತುಳಿತಕ್ಕೆ ಬಾಲಕ ಬಲಿ

ಹಿರಿಯ ಪತ್ರಕರ್ತ ಉದಯಕುಮಾರ್‌ ಪೈ ಅಸೌಖ್ಯದಿಂದ ನಿಧನ

ಹಿರಿಯ ಪತ್ರಕರ್ತ ಉದಯಕುಮಾರ್‌ ಪೈ ಅಸೌಖ್ಯದಿಂದ ನಿಧನ

ವಂಚಿಸಿ, ನಗದು ದೋಚಿದ ಪ್ರಕರಣ: ಓರ್ವ ಆರೋಪಿ ಬಂಧನ

ವಂಚಿಸಿ, ನಗದು ದೋಚಿದ ಪ್ರಕರಣ: ಓರ್ವ ಆರೋಪಿ ಬಂಧನ

ಧೋನಿ ಹಾದಿ ತುಳಿದ ರೈನಾ

ಧೋನಿ ಹಾದಿ ತುಳಿದ ರೈನಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.