ಆಪ್ತ ಕಾರ್ಯದರ್ಶಿಯಿಂದಲೇ ಕೊಲೆಯಾದರೆ ಚಂದ್ರಶೇಖರ ಗುರೂಜಿ; ಮಹಿಳೆ ಪೊಲೀಸ್ ವಶಕ್ಕೆ
Team Udayavani, Jul 5, 2022, 3:57 PM IST
ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಅವರ ಆಪ್ತ ಕಾರ್ಯದರ್ಶಿ ಮಹಾಂತೇಶ ಶಿರೂರ ಮತ್ತು ಆತನ ಸಹಚರ ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಲಘಟಗಿ ತಾಲೂಕ ಧುಮ್ಮವಾಡ ಗ್ರಾಮದ ಮಹಾಂತೇಶನು ಬೇನಾಮಿ ಆಸ್ತಿ ವಿಷಯವಾಗಿಯೇ ಕೊಲೆ ಮಾಡಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗುರೂಜಿ ಜು. 2ರಂದು ಹೋಟೆಲ್ ನಲ್ಲಿ ರೂಮ್ ನಂ. 220 ಬುಕ್ ಮಾಡಿದ್ದರು. ಜು. 6ರಂದು ರೂಮ್ ಚೆಕೌಟ್ ಮಾಡುವವರಿದ್ದರು ಎಂದು ತಿಳಿದು ಬಂದಿದೆ.
ಚಂದ್ರಶೇಖರ್ ಗುರೂಜಿ ಅವರು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಸಿಂಗಾಪುರದಲ್ಲೂ ತಮ್ಮ ಸಂಸ್ಥೆಯ ಶಾಖಾ ಕಚೇರಿಗಳನ್ನು ತೆರೆದಿದ್ದರು. ತಿಂಗಳಿಗೊಮ್ಮೆ ಸಿಂಗಾಪುರದ ಕಚೇರಿಗೂ ಹೋಗಿ ಅಲ್ಲಿನ ಭಕ್ತರನ್ನು ಭೇಟಿ ಮಾಡಿ ಬರುತ್ತಿದ್ದರು. ಇವರ ಸಂಸ್ಥೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ತನಿಖೆಗೆ ಐದು ತಂಡಗಳ ರಚನೆ
ಗುರೂಜಿಯವರ ಕಗ್ಗೊಲೆ ನಡೆಯುತ್ತಿದಂತೆ ಅಲ್ಲಿಂದ ಜನರು, ಹೊಟೇಲ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.
ಗುರೂಜಿ ಹತ್ಯೆ ಮಾಡುವುದನ್ನು ನೋಡಿದ ಬಾಲಕಿಯೊಬ್ಬಳು ಹೊಟೇಲ್ ನಿಂದ ಅಳುತ್ತಲೇ ಓಡೋಡಿ ಬಂದಳು. ನಮಗೆ ಅವರ ಕುಟುಂಬದವರಿಗೆ ಏನೋ ಆಗಿದೆ ಅಂದುಕೊಂಡಿದ್ದೇವು. ಅಷ್ಟರಲ್ಲಿ ಗುರೂಜಿ ಕೊಲೆ ಆಗಿದೆ ಎಂಬುದು ಗೊತ್ತಾಯಿತು. ಬಾಲಕಿಗೆ ಈ ಘಟನೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದರು.
ಇದನ್ನೂ ಓದಿ:‘ಮಾನವ ಗುರು’ ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ “ಹೆಣ್ಣು – ಮಣ್ಣು” ಶಂಕೆ?