Udayavni Special

ನೆಲ-ಜಲ, ನಾಡು-ದೇಶ ರಕ್ಷಣೆ ನಿರಂತರವಾಗಿರಲಿ


Team Udayavani, Mar 1, 2021, 4:15 PM IST

ನೆಲ-ಜಲ, ನಾಡು-ದೇಶ ರಕ್ಷಣೆ ನಿರಂತರವಾಗಿರಲಿ

ಗದಗ: ಕರ್ನಾಟಕ ಸರ್ವ ಧರ್ಮಗಳ ಸಮನ್ವಯದ ಬೀಡು. ಸಾಹಿತ್ಯ ಹಾಗೂ ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸದಲ್ಲಿ ಜಿಲ್ಲೆಯ ಪಾತ್ರ ಮಹತ್ವ ಹಾಗೂ ಹೆಮ್ಮಯ ಸಂಗತಿ. ಸಾಹಿತ್ಯಿಕ ಕೆಲಸದೊಂದಿಗೆ ನಮ್ಮ ನೆಲ, ಜಲ, ನಾಡು ಮತ್ತು ದೇಶ ಸಂರಕ್ಷಣೆ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಮುಂಡರಗಿ ನಾಡೋಜ ಡಾ| ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಸಂಜೆ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಕನ್ನಡ ಅತ್ಯಂತ ಅರ್ಥಪೂರ್ಣವಾದ ಭಾಷೆ. ಕನ್ನಡವೇ ಸಂಸ್ಕೃತಿ, ಸಾಹಿತ್ಯ, ಕನ್ನಡವೇ ನಾಡು, ಕನ್ನಡವೇ ನುಡಿ, ಕನ್ನಡವೇ ಸರ್ವಸ್ವ ಆಗಬೇಕು. ಕನ್ನಡ ಎಂಬುದುಮೂರಕ್ಷರಗಳ ಪದಪುಂಜವಯ್ಯ, ಕನ್ನಡ ಕನ್ನಡಾಂಬೆ ಕೀರ್ತಿ ಪ್ರತೀಕ. ಕನ್ನಡತನ ನಮ್ಮದಾಗಬೇಕು. ಕನ್ನಡ ಭಾಷೆ, ನಾಡುಕಟ್ಟುವ ಕೆಲಸಗಳು ಮತ್ತಷ್ಟು ಗಟ್ಟಿಯಾಗಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಯಾರೂಮಾಡದಿರುವ ಕೆಲಸ ಡಾ| ಶರಣು ಗೋಗೇರಿ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾಹಿತ್ಯ ಭವನಗಳು ತಲೆ ಎತ್ತುತ್ತಿವೆ. ಇದರಿಂದ ತಳ ಮಟ್ಟದಲ್ಲಿ ಸಾಹಿತ್ಯಪಸರಿಸುವಿಕೆ ಹಾಗೂ ಸಾಹಿತ್ಯದ ನಿರಂತರ ಬೆಳವಣಿಗೆ ನೆರವಾಗುತ್ತದೆ. ಕನ್ನಡ ಸಾಹಿತ್ಯಿಕ ಕಾರ್ಯಚಟುವಟಿಕೆಗಳಿಗೆಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎಸ್‌.ಎಸ್‌. ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಪಂನಿಂದ ಹಿಡಿದು ಎಲ್ಲಹಂತದ ಚುನಾವಣೆಗಳು ಕಲುಷಿತವಾಗಿದೆ. ಹಣ, ಮದ್ಯ ಆಮಿಷ ಹೆಚ್ಚುತ್ತಿದೆ. ಇಂತಹ ಪ್ರವೃತ್ತಿಯಿಂದ ದೇಶದಲ್ಲಿಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ.ಇದರಿಂದ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯೂ ಹೊರತಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನೂರು ವರ್ಷ ಕಂಡಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಇಂದು ಕೆಲವೇ ಲಕ್ಷಗಳಲ್ಲಿ ಆಜೀವ ಸದಸ್ಯರಿದ್ದಾರೆ. ಸದಸ್ಯತ್ವ ನೋಂದಣಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರೆ, ಇಂದು ಕನಿಷ್ಟ 3 ಕೋಟಿ ಜನ ಸದಸ್ಯತ್ವ ಹೊಂದಿರುತ್ತಿದ್ದರು. ಸದಸ್ಯತ್ವದ ಸಂಖ್ಯೆಹೆಚ್ಚಿದರೆ ಕಸಾಪ ಚುನಾವಣೆಯಲ್ಲಿ ಸ್ಪರ್ಧೆ ಬಿಗಿಯಾಗುತ್ತದೆ ಎಂಬ ಹೆದರಿಕೆಯೇ ಹಿನ್ನಡೆಗೆ ಕಾರಣ ಎಂದು ದೂರಿದರು. ಈ ಬಾರಿ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸುವವರರು ಕೇವಲ ನಾಮಪತ್ರ ಸಲ್ಲಿಕೆಗೆ ಸೀಮಿತವಾಗಬೇಕು. ತಂತ್ರಜ್ಞಾನದ ಮೂಲಕ ಪ್ರಚಾರ ನಡೆಸಿ, ವಿನೂತನ ಮತ್ತುಆದರ್ಶಪ್ರಾಯವಾಗಿ ಚುನಾವಣೆ ಎದುರಿಸುವಂತೆ ಸಲಹೆ ನೀಡಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಮನುಷ್ಯ ಮಾನಸಿಕವಾಗಿಸದೃಢರಾಗಿರುತ್ತಿದ್ದ. ಕೃಷಿ ಹಾಗೂ ಕಾಯಕ ಚಟುವಟಿಕೆಗಳ ದೈಹಿಕವಾಗಿ ಆರೋಗ್ಯವಂತರಾಗಿರುತ್ತಿದ್ದರು. ಆದರೆ, ಅಂತಹಆಹಾರ ಮತ್ತು ಚಟಿವಟಿಕೆಗಳಿಲ್ಲದೇ ನವ ಯುವಕರಲ್ಲಿ ಸಕ್ಕರೆಕಾಯಿಲೆ, ರಕ್ತದೊತ್ತಡ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಎಚ್ಚರಿಸಿದರು. ವೀರೇಶ್ವರ ಪುಣ್ಯಾಶ್ರಮದ ಪೀಠಾ  ಧಿಪತಿ ಕಲ್ಲಯ್ಯಜ್ಜನವರು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ|ಶರಣು ಗೋಗೇರಿ, ಎ.ಓ. ಪಾಟೀಲ, ಪ್ರಕಾಶ ಮಂಗಳೂರು, ಅಶೋಕ ಹಾದಿ, ಡಾ| ಜಿ.ಎಸ್‌. ಯತ್ನಟ್ಟಿ, ಅಶೋಕ ನವಲಗುಂದ ಉಪಸ್ಥಿತರಿದ್ದರು.

ಸಮ್ಮೇಳನದ ನಿರ್ಣಯಗಳು :

  • ಜಿಲ್ಲೆಯ ಎಲ್ಲ ಜನವಸತಿ ಇತರೆ ಪ್ರದೇಶಗಳಲ್ಲಿ ಅಂಗಡಿಗಳ ನಾಮಫಲಕಗಳು ಕನ್ನಡ ಭಾಷೆಯಲ್ಲಿ ಬರೆಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
  • ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
  • ಜಿಲ್ಲೆಯ ಜೀವನಾಡಿಯಾದ ಮಹದಾಯಿ ನದಿ ನೀರಿನ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು.
  • ಜಿಲ್ಲೆಯ ದಿಗ್ಗಜ ಸಾಹಿತಿಗಳಾದ ಕುಮಾರವ್ಯಾಸ, ಚಾಮರಸ, ನಯಸೇನ, ದುರ್ಗಸಿಂಹ ಸ್ಮರಣಾರ್ಥ ಪ್ರತಿಷ್ಠಾನಗಳ ರಚನೆಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು.
  • ಜಿಲ್ಲೆಯ ಹೆಸರಾಂತ ಶಿಲ್ಪಕಲೆಯುಳ್ಳ ದೇವಾಲಯಗಳು, ನಿಸರ್ಗ ತಾಣವಾದ ಕಪ್ಪತಗುಡ್ಡ, ಗಜೇಂದ್ರ ಗಡ ಕೋಟೆ, ನರಗುಂದ ಗುಡ್ಡ, ಶ್ರೀಮಂತಗಡಕೋಟೆಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಎರಡು ದಿನಗಳ ಕಾಲ ನಡೆದ 9ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ತೃಪ್ತಿ ತಂದಿದೆ. ಜಿಲ್ಲಹಾಗೂ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸುದೀರ್ಘ‌ಚರ್ಚೆಯಾಗಿ ಪರಿಹಾರ ಕ್ರಮಗಳ ಬಗ್ಗೆಯೂ ಗಮನ ಸೆಳೆದಿದೆ. ನಾಡು-ನುಡಿ ಬೇರು ಮಟ್ಟದಿಂದಗಟ್ಟಿಗೊಳಿಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.– ಪ್ರೊ| ರವೀಂದ್ರ ಕೊಪ್ಪರ, ಸಮ್ಮೇಳನಾಧ್ಯಕ್ಷ

ಟಾಪ್ ನ್ಯೂಸ್

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ : ಮತಯಂತ್ರ ಸೇರಿದ ಭವಿಷ್ಯ

ಉಪಚುನಾವಣೆ : ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ : ಮತಯಂತ್ರ ಸೇರಿದ ಭವಿಷ್ಯ

ಪಾಲಿಕೆ ನಿರ್ಲಕ್ಷವೇ ಅತ್ತಿಗೆ ಸಾವಿಗೆ ಕಾರಣ : ಹಿರಿಯ ನಟ ರಮೇಶ್‌ ಪಂಡಿತ್‌ ಆರೋಪ

ಪಾಲಿಕೆ ನಿರ್ಲಕ್ಷವೇ ಅತ್ತಿಗೆ ಸಾವಿಗೆ ಕಾರಣ : ಹಿರಿಯ ನಟ ರಮೇಶ್‌ ಪಂಡಿತ್‌ ಆರೋಪ

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

ಐದು ವರ್ಷದ ಹಿಂದೆ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿದ ಬ್ಯಾಟರಾಯನಪುರ ಪೊಲೀಸರು

ಐದು ವರ್ಷದ ಹಿಂದೆ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿದ ಬ್ಯಾಟರಾಯನಪುರ ಪೊಲೀಸರು

ಒಲಿಂಪಿಯನ್‌, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್‌ ಹುಸೇನ್‌ ನಿಧನ

ಒಲಿಂಪಿಯನ್‌, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್‌ ಹುಸೇನ್‌ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mghdgd

ಗ್ರಾಮೀಣರಿಗೆ ಖಾತ್ರಿ ಯೋಜನೆಯೇ ಜೀವಾಳ

fghdger

ಗದಗ ಜಿಲ್ಲೆಯಲ್ಲಿ ಕೋವಿಡ್ ಕೇಸ್‌ ಹೆಚ್ಚಳ

ೊಕಿಜುಹಗ್ದಸ಻

ಆಕಾಂಕ್ಷಿಗಳಲ್ಲಿ ಮೀಸಲು ಕನವರಿಕೆ ಶುರು

nhfghfg

ವದಂತಿಗೆ ಕಿವಿಗೊಡದೇ ಲಸಿಕೆ ಹಾಕಿಸಿಕೊಳ್ಳಿ: ಉದಾಸಿ

ghdgr

ಗದಗ ಜಿಲ್ಲಾದ್ಯಂತ ಸಂಭ್ರಮದ ಯುಗಾದಿ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ

ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಲಿ : ಜೇವರ್ಗಿ ಶಾಸಕ ಡಾ| ಅಜಯ್‌ ಸಿಂಗ್‌

ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಲಿ : ಜೇವರ್ಗಿ ಶಾಸಕ ಡಾ| ಅಜಯ್‌ ಸಿಂಗ್‌

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ಕೈ ಮೀರಿದರೆ ದೇವರು ಸಹ ಏನೂ ಮಾಡಲಾರ : ಶಾಸಕ ಡಾ| ಶಿವರಾಜ್‌ ಪಾಟೀಲ್‌

ಕೈ ಮೀರಿದರೆ ದೇವರು ಸಹ ಏನೂ ಮಾಡಲಾರ : ಶಾಸಕ ಡಾ| ಶಿವರಾಜ್‌ ಪಾಟೀಲ್‌

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.