Udayavni Special

ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿ

•ವೈದ್ಯಕೀಯ ಕಾರ್ಯಾಗಾರ-ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ

Team Udayavani, May 19, 2019, 12:01 PM IST

gadaga-tdy-2..

ದಗ: ಜಿಮ್ಸ್‌ ಕಾಲೇಜಿನಲ್ಲಿ ಆಯೋಜಿಸಿದ್ದ ವೈದ್ಯಕೀಯ ಕಾರ್ಯಾಗಾರ ಹಾಗೂ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಡಾ| ಸಿ.ಆರ್‌. ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾಯಿತು.

ಗದಗ: ವೈದ್ಯರಲ್ಲಿ ಸಂವಹನ ಕೊರತೆಯಿಂದಾಗಿ ರೋಗಿಗಳು ಮತ್ತು ವೈದ್ಯರ ನಡುವಿನ ಅಂತರ ಬೆಳೆಯುತ್ತಿದೆ. ರೋಗಿಗಳಿಗೆ ಔಷಧೋಪಚಾರ ನೀಡುವುದರೊಂದಿಗೆ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ತ್ವರಿತಗತಿಯಲ್ಲಿ ಗುಣಮುಖರನ್ನಾಗಿಸಬೇಕು ಎಂದು ಬೆಂಗಳೂರು ನಿಮ್ಹಾನ್ಸ್‌ನ ನಿವೃತ್ತ ಮನೋವೈದ್ಯ ಡಾ| ಸಿ.ಆರ್‌. ಚಂದ್ರಶೇಖರ ಸಲಹೆ ನೀಡಿದರು.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮನೋವೈದ್ಯ ವಿಭಾಗದಿಂದ ನಗರದ ಜಿಮ್ಸ್‌ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯಕೀಯ ಕಾರ್ಯಾಗಾರ ಹಾಗೂ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದಾಗಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ ಹಾಗೂ ರೋಗಿಗಳೊಂದಿಗೆ ಸಂವಹನ ಕಡಿಮೆಯಾಗುತ್ತಿದೆ. ರೋಗಿಗಳಿಂದಲೇ ಕಾಯಿಲೆಗಳ ಗುಣಲಕ್ಷಣ ಅರಿತುಕೊಂಡು ಔಷಧೀಯ ಚೀಟಿ ಬರೆಯುವ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ರೋಗಿಗಳಿಗೆ ಔಷಧೋಪಚಾರಕ್ಕಿಂತ ಅವರ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಆಗಬೇಕಿದೆ. ಇದರಿಂದ ಮಾನಸಿಕವಾಗಿ ಕುಗ್ಗಿರುವ ರೋಗಿಗಳಲ್ಲಿ ಹೊಸ ಭರವಸೆ ಮೂಡಿಸುವುದರೊಂದಿಗೆ ಶೀಘ್ರಗತಿಯಲ್ಲಿ ಅವರನ್ನು ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೋಗಿಗಳ ಕೌನ್ಸೆಲಿಂಗ್‌ ಎಂಬುದು ಚಿಕಿತ್ಸೆಗಿಂತ ಪರಿಣಾಮಕಾರಿ ಆಗುತ್ತದೆ. ಅಲ್ಲದೇ, ಆಧುನಿಕ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕಾಯಿಲೆಗಳು ಗಂಭೀರ ಸ್ವರೂಪ ಪಡೆದುಕೊಳ್ಳದಂತೆ ರೋಗಿಗಳ ಕೌನ್ಸೆಲಿಂಗ್‌ ಮೂಲಕ ಪ್ರಾಥಮಿಕ ಹಂತದಲ್ಲೇ ಹತೋಟಿಗೆ ತರಲು ಮನೋವೈದ್ಯರು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಮ್ಸ್‌ ಕಾಲೇಜಿನ ಉಪನ್ಯಾಸಕ ಪ್ರೊ| ಡಾ| ಎಸ್‌.ಎಸ್‌. ಹರಸೂರ ಮಾತನಾಡಿ, ವೈದ್ಯಕೀಯ ವೃತ್ತಿ ಎಂಬುದು ಸೇವೆಯಾಗಬೇಕೇ ಹೊರತು, ಉದ್ಯಮವಾಗಿ ಬದಲಾಗಬಾರದು. ಆದರೆ, ಶೇ. 2ರಷ್ಟು ಉದ್ಯಮವಾಗಿ ಬೆಳೆದಿದ್ದರೂ ತನ್ನ ಸೇವಾ ಮನೋಭಾವನೆಯಿಂದ ದೂರ ಸರಿದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಸೇವಾ ಮನೋಭಾವವಿದೆ ಎಂಬುದಕ್ಕೆ ನಾಡಿನ ಸರಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆಯೇ ಉತ್ತಮ ಉದಾಹರಣೆಯಾಗಿವೆ. ಒತ್ತಡದ ಜೀವನದಲ್ಲಿ ಸಿಲುಕಿರುವ ನಮಗೆ ನಾನಾ ಕಾಯಿಲೆಗಳು ಕಾಡುತ್ತಿವೆ. ಅವುಗಳನ್ನು ಆರಂಭಿಕ ಹಂತದಲ್ಲೇ ನಿವಾರಿಸಲು ಕುಟುಂಬ ವೈದ್ಯ ಪದ್ಧತಿ ರೂಢಿಸಿಕೊಳ್ಳಬೇಕು. ಇದನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ವೈದ್ಯರು ಶ್ರಮಿಸಬೇಕು ಎಂದರು.

ಬಳಿಕ ಡಾ| ಗಿರೀಶ ಬಾಬು, ಡಾ| ಅನಿಲ ಕಾಕುಂಜೆ, ಡಾ| ಬಿ.ಎಂ. ಸುರೇಶ, ಡಾ| ಶ್ರೀನಿವಾಸ ಟಿ.ಆರ್‌., ಡಾ| ರಜನಿ ಮತ್ತು ಡಾ| ಮಂಜುನಾಥರವರು ವೈದ್ಯಕೀಯ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

ಜಿಮ್ಸ್‌ ನಿರ್ದೇಶಕ ಡಾ| ಪಿ.ಎಸ್‌. ಭೂಸರಡ್ಡಿ, ದಿಮ್ಹಾನ್ಸ್‌ ಧಾರವಾಡದ ನಿರ್ದೇಶಕ ಡಾ| ಮಹೇಶ ದೇಸಾಯಿ, ಭಾರತೀಯ ವೈದ್ಯಕೀಯ ಮಂಡಳಿ ಕರ್ನಾಟಕ ಶಾಖೆ ಅಧ್ಯಕ್ಷ ಡಾ| ಮಧುಸುಧನ ಕರಿಗಾನೂರ, ಭಾರತೀಯ ವೈದ್ಯಕೀಯ ಮಂಡಳಿ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ| ಅಭಯ ಮಠಕರ್‌, ಡಾ| ಅರುಣಕುಮಾರ ಸಿ., ಡಾ| ಜಿತೇಂದ್ರ ಮುಗಳಿ, ಡಾ| ಶಿವಾನಂದ ಹಟ್ಟಿ, ಡಾ| ಶ್ರೀನಿವಾಸ ದೇಶಪಾಂಡೆ, ಡಾ| ರವೀಂದ್ರ ಪಿ.ಎನ್‌, ಡಾ| ರಾಜು ಜಿ.ಎಂ. ಇದ್ದರು.

ಜಿಮ್ಸ್‌ನ ವೈದ್ಯರು ಸೇರಿದಂತೆ 200ಕ್ಕೂ ಹೆಚ್ಚು ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

gvhfghft

ಚಿಂತಾಮಣಿ : ಅಪರಿಚಿತ ವಾಹನ ಡಿಕ್ಕಿ | ಪಾದಚಾರಿ ಸಾವು

hjgutyuty

ಆರ್​​ಎಸ್​ಎಸ್​​​  ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ: ನಾಲ್ವರ ದುರ್ಮರಣ

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ : ನಾಲ್ವರ ದುರ್ಮರಣ

ghghhtyht

ಕೋವಿಡ್: ರಾಜ್ಯದಲ್ಲಿಂದು 326 ಹೊಸ ಪ್ರಕರಣ ಪತ್ತೆ | 380 ಸೋಂಕಿತರು ಗುಣಮುಖ

covid

ಪರಿಸ್ಥಿತಿಯ ಆಧಾರದ ಮೇಲೆ ಮಕ್ಕಳಿಗೆ ಕೋವಿಡ್ ಲಸಿಕೆ :ವಿ.ಕೆ.ಪಾಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijaya Dashami celebration

ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ

gadaga news

ಉ.ಪ್ರ. ರೈತರ ಹತ್ಯೆಗೆ ಆಕ್ರೋಶ

gadaga news

ಹದಿಹರೆಯದವರಲ್ಲಿ ದೈಹಿಕ ಬದಲಾವಣೆ ಸಹಜ

gadaga news

ಜನರ ಮನೆ ಬಾಗಿಲಿಗೇ ಜಿಲ್ಲಾಡಳಿತ

ghgfhtyuy

ಸೂರ್ಯಕಾಂತಿಗೆ ಕೀಟಬಾಧೆ : ರೈತರಿಗೆ ಸಂಕಷ್ಟ  

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

gvhfghft

ಚಿಂತಾಮಣಿ : ಅಪರಿಚಿತ ವಾಹನ ಡಿಕ್ಕಿ | ಪಾದಚಾರಿ ಸಾವು

hjgutyuty

ಆರ್​​ಎಸ್​ಎಸ್​​​  ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

fcgdftgrt

ಬಿಜೆಪಿ ಅವಧಿಯಲ್ಲಿಯೇ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ : ಮುಝಮ್ಮಿಲ್ ಬಾಬು

hfghtyht

ದಾಂಡೇಲಿ :  ಅಪರಿಚಿತ ವಾಹನ ಡಿಕ್ಕಿ : ಪಾದಚಾರಿ ಸಾವು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.