Gadaga: ಹೆಸರು ಹಾಳು ಮಾಡಲು ಬಂದ ಕೊಂಬಿನ ಹುಳು-ಬೆಳೆ ಉಳಿಸಲು ಪರದಾಟ

ಯಂತ್ರ ಕಟಾವಿಗೆ ಬರುವ ಎತ್ತರ ತಳಿಯ ದುಬಾರಿ ಬೀಜ ಬಿತ್ತನೆ ಮಾಡಿದ್ದಾರೆ

Team Udayavani, Aug 8, 2023, 6:09 PM IST

Gadaga: ಹೆಸರು ಹಾಳುಮಾಡಲು ಬಂದ ಕೊಂಬಿನ ಹುಳು-ಬೆಳೆ ಉಳಿಸಲು ಪರದಾಟ

ಲಕ್ಷ್ಮೇಶ್ವರ: ತಾಲೂಕಿನ ರೈತರ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರಿಗೀಗ ಕೊಂಬಿನ ಹುಳು ಕೀಟಬಾಧೆ ಆವರಿಸಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ. ಮುಂಗಾರಿನಲ್ಲಿ ಮೊದಲು ರೈತರ ಕೈ ಸೇರುವ ಹೆಸರು ರೈತರ ಆಶಾದಾಯಕ ಬೆಳೆಯಾಗಿದೆ. ಆದರೆ ಪ್ರಸಕ್ತ ಮುಂಗಾರಿನ ಮೊದಲ ಮಳೆಗಳು ಕೈಕೊಟ್ಟಿದ್ದರಿಂದ ಹೆಸರು ಬಿತ್ತನೆ ತಿಂಗಳು ವಿಳಂಬವಾಯಿತು. ಸರ್ಕಾರ ಪ್ರತಿ ಕ್ವಿಂಟಲ್‌ ಹೆಸರಿಗೆ 8,558 ಬೆಂಬಲ ಘೋಷಣೆ ಮಾಡಿದ್ದರಿಂದ ಕಡಿಮೆ ಇಳುವರಿ ಬಂದರೂ ಪರವಾಗಿಲ್ಲ, ಕಡಿಮೆ ಅವಧಿ ಮತ್ತು ಖರ್ಚಿನಿಂದ ಉತ್ತಮ ಬೆಲೆ ಸಿಗುತ್ತದೆಂಬ ಕಾರಣದಿಂದ ತಾಲೂಕಿನಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ.

ಆದರೆ ಒಂದು ತಿಂಗಳ ಕಾಲಾವಧಿಯ ಹೆಸರು ಬೆಳೆಗೆ ಸಂಪ್ರದಾಯವೇ ಎನ್ನುವಂತೆ ಹಳದಿ ರೋಗದ ಜತೆಗೆ ಕೀಟಬಾಧೆ ಆವರಿಸಿರುವುದು ರೈತರ ನಿದ್ದೆಗೆಡಿಸಿದೆ. ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಟ್ಟಿದ್ದರಿಂದ ಕೃಷಿ ಕೆಲಸಗಳು ಏಕಕಾಲಕ್ಕೆ ಪ್ರಾರಂಭವಾಗಿ ಎಡೆ ಹೊಡೆಯಲು, ಕಳೆ ತೆಗೆಯಲು, ಕ್ರಿಮಿನಾಶ ಸಿಂಪಡಣೆ ಮಾಡಲು ಎತ್ತು, ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ನಡುವೆಯೂ ಕೀಟಬಾಧೆಗೆ ತುತ್ತಾಗಿರುವ ಬೆಳೆಗಳ ಸಂರಕ್ಷಣೆಗೆ ಯಂತ್ರೋಪಕರಣಗಳಿಗೆ ಮೊರೆ ಹೋಗಿದ್ದಾರೆ. ಇದರಿಂದ ಈ ವರ್ಷವೂ ಖರ್ಚಿಲ್ಲದ ಬೆಳೆಗೆ ಮತ್ತೇ ಹೆಚ್ಚು ಖರ್ಚಿನ ಜತೆಗೆ ಇಳುವರಿ ಕುಂಠಿತವಾಗುವ ಆತಂಕ
ಎದುರಾಗಿದೆ.

ಲಕ್ಷ್ಮೇಶ್ವರ ಸೇರಿ ತಾಲೂಕಿನ ಶಿಗ್ಲಿ, ದೊಡೂxರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ ಬಹುತೇಕ ಕಪ್ಪು ಮಣ್ಣಿನ 8,025 ಎಕರೆ ಪ್ರದೇಶದ ಜಮೀನಿನಲ್ಲಿ ಹೆಸರು ಬಿತ್ತನೆಯಾಗಿದೆ. ರೈತ ಸಂಪರ್ಕ ಕೇಂದ್ರ(45 ಕ್ವಿಂಟಲ್‌) ಮತ್ತು ಖಾಸಗಿ ಬೀಜ ಮಾರಾಟ ಕೇಂದ್ರದಲ್ಲಿ ನೂರಾರು ಕ್ವಿಂಟಲ್‌ ಹೆಸರು ಬೀಜ ಮಾರಾಟವಾಗಿದೆ. ಮುಖ್ಯವಾಗಿ ಯಂತ್ರ ಕಟಾವಿಗೆ ಬರುವ ಎತ್ತರ ತಳಿಯ ದುಬಾರಿ ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಅದು ರೈತರ ಕೈ ಹಿಡಿದಿಲ್ಲ.

ಕಡಿಮೆ ಖರ್ಚು, ಅಲ್ಪಾವಧಿ, ಉತ್ತಮ ಬೆಲೆಯಿಂದ ಸಾಲಶೂಲ, ಬದುಕಿನ ಜತೆಗೆ ಹಿಂಗಾರಿನ ಕೃಷಿ ಚಟುವಟಿಕೆಗಳಿಗೆ ಹೆಸರು ಬೆಳೆ ಆಸರೆಯಾಗುತ್ತದೆ. ಅಲ್ಲದೇ ಈ ವರ್ಷ ಸರ್ಕಾರ 8,858 ರೂ ಬೆಂಬಲ ಬೆಲೆ ಘೋಷಣೆ ಮತ್ತು ಮುಕ್ತ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಇರುವುದರಿಂದ ತಡವಾದರೂ ಹೆಸರು ಬೆಳೆದಿದ್ದೇವೆ. ಅದಕ್ಕಾಗಿ ಈಗಾಗಲೇ ಎಕರೆಗೆ 10 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವು. ಬೆಳೆಗೆ ರೋಗ ತಪ್ಪಿದ್ದಲ್ಲ ಎಂದು ಗೊತ್ತಿದ್ದರೂ ಈ ವರ್ಷ ಹೇಗಾದರೂ ಸರಿ ಕೃಷಿ ಇಲಾಖೆಯ ಸಲಹೆ-ಸೂಚನೆ ಪಾಲಿಸಿ ಬೆಳೆಯನ್ನು ರೋಗದಿಂದ ಕಾಪಾಡಬೇಕು ಎಂದುಕೊಂಡಿದ್ದೇವೆ.

ಆದರೆ ಹಳದಿ ರೋಗಬಾಧೆ ಕಡಿಮೆ ಇದ್ದರೂ ಕೊಂಬಿನ ಹುಳದ ಬಾಧೆ ಆವರಿಸಿರುವುದು ರೈತರ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಸರ್ಕಾರ ಮುಂಗಾರಿನ ಬೆಳೆಗೆ ಬೆಳೆವಿಮೆ, ಬೆಳೆಹಾನಿ ಪರಿಹಾರ ಕಲ್ಪಿಸಬೇಕು.
*ಚನ್ನಪ್ಪ ಷಣ್ಮುಕಿ, ರೈತ ಮುಖಂಡ

ಹೆಸರು ಬೆಳೆಗೆ ಅಲ್ಲಲ್ಲಿ ಕೊಂಬಿನಹುಳು ಬಾಧೆ ಆವರಿಸುತ್ತಿದೆ. ಈ ಹಿನ್ನೆಲೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಸಲಹೆ-ಸೂಚನೆ ನೀಡುತ್ತಿದ್ದೇವೆ. ಹಸಿರು ಬಣ್ಣದ ಮತ್ತು ದೇಹದ ಹಿಂಭಾಗಲ್ಲಿ ಚೂಪಾದ ಕೊಂಬನ್ನು ಹೊಂದಿರುತ್ತದೆ. ಎಲೆಗಳ ಕೆಳಗಿರುವ ಕೀಟವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಪ್ರಾರಂಭದ ಹಂತದಲ್ಲಿಯೇ ಗುರುತಿಸಬೇಕು. ಹೆಸರು, ಉದ್ದು ಬೆಳೆಯಲ್ಲಿ ಹೆಚ್ಚು ಕಂಡುಬರುವ ಈ ಕೀಟ ಎಲೆಯನ್ನೇ ತಿನ್ನುತ್ತದೆ ತೀವ್ರತೆ ಹೆಚ್ಚಾದಂತೆ ನಿಯಂತ್ರಿಸಬೇಕು. ಪ್ರತಿ ಲೀ ನೀರಿಗೆ 4 ಗ್ರಾಂ ಕಾರ್ಬರಿಲ್‌ 50 ಡಬ್ಲೂ.ಪಿ ಅಥವಾ 2 ಮಿ.ಲೀ ಕ್ಲೋರೊಪೈರಿಫಾಸ್‌ 20 ಇ.ಸಿ ಬೆರೆಸಿ ಸಿಂಪಡಿಸಬೇಕು. ನೀರಿನ ಅಭಾವವಿದ್ದಲ್ಲಿ ಪ್ರತಿ ಎಕರೆಗೆ 8.ಕಿಲೋದಂತೆ ಕ್ವಿನಾಲ್‌ಫಾಸ್‌ ಅಥವಾ ಫೆನವಲರೇಟ್‌ ಧೂಳೀಕರಣ ಮಾಡಬೇಕು. ಮುಖ್ಯವಾಗಿ ಮುಂಗಾರಿನ ಬೆಳೆಗಳನ್ನು ಬೆಳೆದರ್ಶಕ ಆ್ಯಪ್‌ನಲ್ಲಿ ದಾಖಲೀಕರಣ ಮಾಡಬೇಕು. ಇದರಿಂದ ಬೆಂಬಲ ಬೆಲೆಯಡಿ ಮಾರಾಟ ಮಾಡಲು, ಬೆಳೆವಿಮೆ ಪಾವತಿಸಲು, ಬೆಳೆವಿಮೆ ಮತ್ತು ಬೆಳೆಹಾನಿ ಪರಿಹಾರ ಪಡೆಯಲು ಅನಕೂಲವಾಗುತ್ತದೆ.
*ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ

ಟಾಪ್ ನ್ಯೂಸ್

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-uv-fusion

Movie Review: ಜೀವನ ಒಂದು ಹೋರಾಟ, ಆ ಹೋರಾಟ ನಿರಂತರ

3-uv-fusion

Life Lesson: ಜಾತ್ರೆಯಲ್ಲಿ ಸಿಕ್ಕಾಕೆ ಕಲಿಸಿದ ಪಾಠ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

2-uv-fusion

UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.