ನಟ ದರ್ಶನ್‌ ಕರೆಗೆ ಸ್ಪಂದನೆ: ಬಿಂಕದಕಟ್ಟಿ ಸಣ್ಣ ಮೃಗಾಲಯಕ್ಕೆ ಮರುಜೀವ

ನಟ ದರ್ಶನ್‌ ಕರೆಗೆ ಸ್ಪಂದಿಸಿದ ಪ್ರಾಣಿಪ್ರಿಯರಿಂದ ಹರಿದು ಬಂತು ದೇಣಿಗೆ ­ಆರೇ ದಿನಗಳಲ್ಲಿ 2.66 ಲಕ್ಷ ರೂ. ಸಂಗ್ರಹ

Team Udayavani, Jun 12, 2021, 8:44 PM IST

11gadag 1

ವರದಿ: ವೀರೇಂದ್ರ ನಾಗಲದಿನ್ನಿ

ಗದಗ: ಕೊರೊನಾ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಂಕದಕಟ್ಟಿ ಸಣ್ಣ ಮೃಗಾಲಯದ ಸ್ಥಿತಿಗೆ ವನ್ಯಜೀವಿ ಪ್ರಿಯರ ಮನ ಮಿಡಿದಿದೆ. ಇದೇ ವೇಳೆ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕರೆ ನೀಡುತ್ತಿದ್ದಂತೆ ಸಾವಿರಾರು ಜನರು ದೇಣಿಗೆ ನೀಡಲು ಮತ್ತು ವನ್ಯಜೀವಿಗಳನ್ನು ದತ್ತು ಪಡೆಯಲು ಮುಂದಾಗುತ್ತಿದ್ದಾರೆ.

ಕಳೆದ 6 ದಿನಗಳಲ್ಲಿ ಬಿಂಕದಕಟ್ಟಿ ಸಣ್ಣ ಮೃಗಾಲಯಕ್ಕೆ ಬರೋಬ್ಬರಿ 2.66 ಲಕ್ಷ ರೂ. ಸಂಗ್ರಹವಾಗಿದೆ. ಅರಣ್ಯ ಇಲಾಖೆಯಿಂದ 1976ರಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಕಿರು ವನ್ಯಜೀವಿ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಪ್ರವಾಸಿಗರ ಕೇಂದ್ರವಾಗಿದೆ. ಹೀಗಾಗಿ, ಭಾರತ ಸರಕಾರದ ಮೃಗಾಲಯ ಪ್ರಾಧಿಕಾರದಿಂದ ಸಣ್ಣ ಮೃಗಾಲಯ ಎಂಬ ಪಟ್ಟಕ್ಕೂ ಪಾತ್ರವಾಗಿದೆ.

ಮೃಗಾಲಯದಲ್ಲಿ ಸದ್ಯ 37 ಪ್ರಭೇದದ 399 ಪ್ರಾಣಿ ಪಕ್ಷಿಗಳಿವೆ. ಸದ್ಯ ಎರಡು ಸಿಂಹ, ಎರಡು ಹುಲಿ, ನಾಲ್ಕು ಚಿರತೆ ಮತ್ತು ಹೈನಾ, ಜಿಂಕೆ, ಕೃಷ್ಣಮೃಗ, ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆಮೆ, ಹೆಬ್ಟಾವು ಹಾಗೂ ವಿವಿಧ ಜಾತಿಯ 90 ಪಕ್ಷಿಗಳು ಸಂರಕ್ಷಿಸಲಾಗುತ್ತಿದೆ. ಈ ಪೈಕಿ ಸಿಂಹ, ಹುಲಿ ಮತ್ತು ಹೈನಾಗಳಿಗೆ ಗಾಜಿನ ಪಂಜರ ಅಳವಡಿಸಿರುವುದು ಮತ್ತು ಮಕ್ಕಳ ಉದ್ಯಾನ, ಪಕ್ಷಿ ಪಥ ಪ್ರವಾಸಿಗರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿತ್ತು. ಕೋವಿಡ್‌ ಲಾಕ್‌ಡೌನ್‌ಗೂ ಮುನ್ನ ಪ್ರತಿನಿತ್ಯ 100 ರಿಂದ 150, ವಾರಾಂತ್ಯದಲ್ಲಿ 300 ರಿಂದ 350 ಜನರು ಭೇಟಿ ನೀಡುತ್ತಿದ್ದಾರೆ. ಹಬ್ಬ-ಹರಿದಿನಗಳು, ರಾಷ್ಟ್ರೀಯ ಹಬ್ಬಗಳಂದು ಪ್ರವಾಸಿಗರ ಸಂಖ್ಯೆ 800ರ ಗಡಿ ದಾಟುತ್ತಿತ್ತು.

ಮೃಗಾಲಯಕ್ಕೆ ಲಾಕ್‌ಡೌನ್‌ ಬರೆ: ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ಮೃಗಾಲಯಕ್ಕೆ ಪ್ರವಾಸಿಗರ ಭೇಟಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಆಧುನಿಕತೆಯ ಅಳವಡಿಸಿಕೊಳ್ಳುತ್ತಾ ಪ್ರವಾಸಿಗರನ್ನು ಸೆಳೆಯುವ ಮೃಗಾಲಯ ಕಳೆದ ಒಂದೂವರೆ ವರ್ಷದಿಂದ ಬಣಗುಡುತ್ತಿದೆ. ಸಾರ್ವಜನಿಕರ ಪ್ರವೇಶ ಶುಲ್ಕದಿಂದ ಬರುತ್ತಿದ್ದ ಆದಾಯ ಕೈತಪ್ಪಿದ್ದರಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ. ವನ್ಯಜೀವಿಗಳ ಪೋಷಣೆಗೂ ಕೋವಿಡ್‌ ನಿರ್ಬಂಧ ಪರಿಣಾಮ ಬೀರಿದೆ ಎನ್ನಲಾಗಿದೆ.

ಬಿಂಕದಕಟ್ಟಿಗೆ ಪ್ರಾಣಿಪ್ರಿಯರ ಬೆಂಬಲ: ಈ ನಡುವೆ ರಾಜ್ಯದ ಮೃಗಾಲಯಗಳಿಗೆ ನೆರವಾಗಬೇಕು ಎಂಬ ಸ್ಯಾಂಡಲ್‌ವುಡ್‌ನ‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ ಅವರು ಮಾಡಿದ ಮನವಿ ವಿಶೇಷ ಅಭಿಯಾನದ ರೂಪ ಪಡೆದಿದೆ. ಪ್ರಾಣಿಗಳ ದತ್ತು ಮತ್ತು ದೇಣಿಗೆಗೆ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ತರ ಕರ್ನಾಟಕದ ಪುಟ್ಟ ಜಿಲ್ಲೆ ಗದಗಿನ ಮೃಗಾಲಯಕ್ಕೂ ಹೆಚ್ಚಿನ ಒಲವು ತೋರಿದ್ದಾರೆ. ಜೂ.5 ರಿಂದ 10ನೇ ತಾರೀಖೀನವರೆಗೆ ಒಟ್ಟು 183 ಜನರು ದೇಣಿಗೆ ಮತ್ತು ಪ್ರಾಣಿಗಳನ್ನು ದತ್ತು ಪಡೆದು ವನ್ಯಜೀವಿಗಳ ಮೇಲಿನ ಪ್ರೀತಿ ತೋರಿದ್ದರೆ. ಅದರಿಂದ 2.66 ಲಕ್ಷ ರೂ. ಧನ ಸಹಾಯ ಹರಿದು ಬಂದಿದೆ. ದತ್ತು ಮತ್ತು ದೇಣಿಗೆ ವಿಶೇಷ ಅಭಿಯಾನದಲ್ಲಿ ರಾಜ್ಯದ 9 ಮೃಗಾಲಯಗಳ ಪೈಕಿ ಬಿಂಕದಕಟ್ಟಿ 4ನೇ ಸ್ಥಾನದಲ್ಲಿದೆ.

ಈ ಪೈಕಿ ಜಿಲ್ಲೆಯವರಷ್ಟೇ ಅಲ್ಲದೇ, ಅಕ್ಕಪಕ್ಕದ ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಬೆಳಗಾವಿ, ಹಾವೇರಿ ಮತ್ತು ಬಾಗಲ ಕೋಟೆ ಜನರ ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡಿದ್ದಾರೆ. ಜತೆಗೆ ದೂರದ ಮೈಸೂರು, ಬೆಂಗಳೂರು, ದಾವಣಗೆರೆ ಸೇರಿದಂತೆ ಹೊರ ರಾಜ್ಯದವರೂ ಸಹ ಬಿಂಕದಕಟ್ಟಿಗೆ ನೆರವು ನೀಡಿ, ಬೆಂಬಲ ಸೂಚಿಸಿರುವುದು ಗುಣಾತ್ಮಕ ಬದಲಾವಣೆಗೆ ಸಾಕ್ಷಿಯಾಗಿದೆ.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.