ಲಕ್ಷ್ಮೇಶ್ವರ: 2-3 ದಿನಕ್ಕೊಮ್ಮೆ ನೀರು ಪೂರೈಸದಿದ್ದರೆ ಪ್ರತಿಭಟನೆ

Team Udayavani, May 24, 2023, 6:25 PM IST

ಲಕ್ಷ್ಮೇಶ್ವರ: 2-3 ದಿನಕ್ಕೊಮ್ಮೆ ನೀರು ಪೂರೈಸದಿದ್ದರೆ ಪ್ರತಿಭಟನೆ

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣಕ್ಕೆ 12-15 ದಿನಗಳಿಗೊಮ್ಮೆ ನೀರು ಬರುತ್ತಿದ್ದು, ರೈತಾಪಿ ವರ್ಗವೇ ಹೆಚ್ಚಿರುವ ವಾರ್ಡ್‌ಗಳಲ್ಲಂತೂ ಜಾನುವಾರುಗಳ ರಕ್ಷಣೆಗಾಗಿ ಅನ್ನದಾತರು ನಿತ್ಯ ಪರದಾಡುವಂತಾಗಿದೆ. 15 ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿ 2-3 ದಿನಕ್ಕೊಮ್ಮೆ ನೀರು ಕೊಡದಿದ್ದರೆ ಜನ-ಜಾನುವಾರು-ಎತ್ತು-ಚಕ್ಕಡಿ ಮತ್ತು ಖಾಲಿ ಕೊಡಗಳೊಂದಿಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಎಚ್ಚರಿಕೆ ನೀಡಿದರು.

ಮಂಗಳವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣಕ್ಕೆ ತುಂಗಭದ್ರಾ
ನದಿಯಿಂದ ಸರಬರಾಜಾಗುವ ಪೈಪ್‌ಲೈನ್‌ ಸಂಪೂರ್ಣ ಹಾಳಾಗಿ ವರ್ಷಗಳೇ ಕಳೆದಿವೆ. ಪಟ್ಟಣದಲ್ಲಿನ 120 ಬೋರ್‌ವೆಲ್‌ಗ‌ಳಲ್ಲಿ 75 ಬೋರ್‌ ವೆಲ್‌ ಸುಸ್ಥಿತಿಯಲ್ಲಿವೆ. ಅಲ್ಲದೇ, ಎಲ್‌ಎನ್‌ಟಿ ಯೋಜನೆಯ ನೀರನ್ನು ಬಳಕೆ ಮಾಡಿಕೊಂಡಿಲ್ಲ. ಈ ಎಲ್ಲ ನಿರ್ಲಕ್ಷ್ಯ ದಿಂದ ನೀರಿನ ಸಮಸ್ಯೆ ಉಂಟಾಗಿದೆ ಎಂದರು.

ಪಟ್ಟಣದಲ್ಲಿ ಕಳೆದ 10 ವರ್ಷದಿಂದ ಆಶ್ರಯ ಫಲಾನುಭವಿಗಳ ಆಯ್ಕೆ ಕಗ್ಗಂಟಾಗಿದೆ. ತಮ್ಮ  ಅ ಧಿಕಾರಾವಧಿ ಯಲ್ಲಿ ಲಕ್ಷೆ¾àಶ್ವರದಲ್ಲಿ 64, ಶಿರಹಟ್ಟಿ-10 ಮತ್ತು ಮುಂಡರಗಿಯಲ್ಲಿ 20 ಎಕರೆ ಆಶ್ರಯ ನಿವೇಶನ ಜಾಲಿಕಂಟೆ ಬೆಳೆದು ಹಾಳಾಗುತ್ತಿದೆ. ಬಡವರ ಹೊಸ ಮನೆಯ ಕನಸು ನುಚ್ಚು ನೂರಾಗುತ್ತಿದೆ. ಗದಗ-ಲಕ್ಷ್ಮೇಶ್ವರ ಸೇರಿ ತಾಲೂಕಿನ ರಸ್ತೆಗಳು, ಪಟ್ಟಣದ ನಗರೋತ್ಥಾನ ಯೋಜನೆಯ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದರು.

ಹೊಸ ವಸತಿ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಸೇರಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ಶಾಸಕರು ಮತ್ತು ಸ್ಥಳೀಯ ಪುರಸಭೆಯವರು ಕಾಳಜಿಪೂರ್ವಕ ಕೆಲಸ ಮಾಡಬೇಕು. ಜನ ಕೊಟ್ಟ ತೀರ್ಪನ್ನು ಸ್ವಾಗತಿಸುತ್ತೇವೆ. ಕ್ಷೇತ್ರದ ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದರು.

140 ಕೋಟಿ ರೂ. ಅನುದಾನದ ಕೆರೆಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಜಾಲವಾಡಗಿ, ಇಟಗಿ ಯೋಜನೆಗಳು
ಸಾಕಾಗೊಳ್ಳುವ ಹಂತದಲ್ಲಿದ್ದು, ಪದೇ ಪದೆ ಇದನ್ನೇ ಹೇಳುವುದು ಬಿಟ್ಟು ಕೃಷ್ಣ ಬಿ ಸ್ಕೀಂ ಯೋಜನೆಯಲ್ಲಿ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕ್ಷೇತ್ರದ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸದಾ ಜನಪರ ಹೋರಾಟ ಮಾಡುತ್ತೇವೆ ಎಂದರು.

ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಪುರಸಭೆಯಿಂದ ಪಟ್ಟಣದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು, ಆಶ್ರಯ ಫಲಾನುಭವಿಗಳ ಆಯ್ಕೆ, ಕೈಗೊಳ್ಳುವ ತೀರ್ಮಾನಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಇರುವುದಿಲ್ಲ. ಎಲ್ಲೋ
ಕುಳಿತು ಕಾಣದ ಕೈಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಪುರಸಭೆ ಸದಸ್ಯರು ತಲೆದೂಗುವ ಕೆಟ್ಟ ಸಂಪ್ರದಾಯ ಪಟ್ಟಣದಲ್ಲಿದೆ. ಸಂಸದರು ಕ್ಷೇತ್ರದತ್ತ ಮುಖ ಮಾಡಿಲ್ಲ. ಶಾಸಕರಿಗೆ ಕೆಲಸ ಮಾಡಲು ಬಿಟ್ಟಿಲ್ಲ. ಇನ್ನು ಮುಂದೆ ಇದರ ವಿರುದ್ಧ ಧನಿ ಎತ್ತುವ ಮೂಲಕ ರಾಮಕೃಷ್ಣ ದೊಡ್ಡಮನಿ ಅವರ ಸ್ವಾಭಿಮಾನಿ ಬಣದ ಹೋರಾಟಕ್ಕೆ ಕೈ ಜೋಡಿಸುತ್ತೇವೆ ಎಂದರು.

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ ಪಡಗೇರಿ, ಪಿ.ಬಿ. ಖರಾಟೆ, ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ, ಪಂಚಮಸಾಲಿ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ, ಮಹಾದೇವಪ್ಪ ಅಂದಲಗಿ, ನಾಗರಾಜ ಚಿಂಚಲಿ, ಅಬ್ದುಲ್‌ ರಿತ್ತಿ, ಶಿವಾನಂದ ಲಿಂಗಶೆಟ್ಟಿ, ನಿಂಗಪ್ಪ ಗದ್ದಿ, ಸಿರಾಜ ಡಾಲಾಯತ್‌ ಇತರರಿದ್ದರು.

ಟಾಪ್ ನ್ಯೂಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

arrested

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

1——dsad

Women’s Reservation Bill ಮೂಲಕ ‘ಶಕ್ತಿ’ಯನ್ನು ಪೂಜಿಸುವ ಭಾವನೆ: ಪ್ರಧಾನಿ ಮೋದಿ

Asian Games: Gold for India in Shooting Trap Men’s Team Event

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

8-social-anxiety-disorder

Health: ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ಸಚಿವ ಎಚ್.ಕೆ. ಪಾಟೀಲ ಅವರಿಂದ ಜಿಲ್ಲೆಯ ಮೊದಲ ಜನತಾ ದರ್ಶನಕ್ಕೆ ಚಾಲನೆ

Gadag; ಸಚಿವ ಎಚ್.ಕೆ. ಪಾಟೀಲರಿಂದ ಜಿಲ್ಲೆಯ ಮೊದಲ ಜನತಾ ದರ್ಶನಕ್ಕೆ ಚಾಲನೆ

Gadag; ಬಸ್-ಕಾರು ನಡುವೆ ಅಪಘಾತ: ಇಬ್ಬರು ಸಾವು

Gadag; ಬಸ್-ಕಾರು ನಡುವೆ ಅಪಘಾತ: ಇಬ್ಬರು ಸಾವು

Gadag: ಡಾ| ಪಂ| ಪುಟರಾಜ ಕವಿ ಗವಾಯಿ 13ನೇ ಪುಣ್ಯ ಸ್ಮರಣೋತ್ಮವ

Gadag: ಡಾ| ಪಂ| ಪುಟರಾಜ ಕವಿ ಗವಾಯಿ 13ನೇ ಪುಣ್ಯ ಸ್ಮರಣೋತ್ಮವ

Gadag; ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ

Gadag; ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ

Gadaga:ಕ್ರೀಡೆಯಲ್ಲಿ ಸೋಲೇ ಗೆಲುವಿನ ಮೆಟ್ಟಿಲು: ಉಷಾ

Gadaga:ಕ್ರೀಡೆಯಲ್ಲಿ ಸೋಲೇ ಗೆಲುವಿನ ಮೆಟ್ಟಿಲು: ಉಷಾ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

arrested

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

13-bhatkal

Bhatkal: ಸ್ವಚ್ಛತಾ ಕಾರ್ಯಕ್ರಮಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.