ಬೆಳೆ ವಿಮೆ ಹಣ ಬಿಡುಗಡೆಗೆ ಒತ್ತಾಯ


Team Udayavani, Oct 30, 2020, 5:41 PM IST

gadaga-tdy-1

 

ಗದಗ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ(ವಿಮಾ) ಯೋಜನೆಯಡಿ ವಿಮಾ ಕಂತು ತುಂಬಿದ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹಾಲಪ್ಪ ಅರಹುಣಸಿ ಮಾತನಾಡಿ, ಮುಂಗಾರು ಹಂಗಾಮಿಗೆಹೆಸರು, ಸೂರ್ಯಕಾಂತಿ, ಹಿಂಗಾರಿ ಬೆಳೆಗಳಾದ ಜೋಳ, ಕಡಲೆ ಬೆಳೆ ಬೆಳೆಯುತ್ತಾರೆ. ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾ.ಪಂ. ವ್ಯಾಪ್ತಿಯ ವೆಂಕಟಾಪೂರ, ಹಳ್ಳಿಕೇರಿ, ಹಳ್ಳಿಗುಡಿ ಗ್ರಾಮಗಳರೈತರು ಬೆಳೆಗಳ ವಿಮೆ (2019-20) ತುಂಬಿದ್ದಾರೆ. ಈ ನಡುವೆ ಬೆಳೆಗಳು ಸಂಪೂರ್ಣ ಹಾನಿಯಾಗಿದೆ. ಆದರೆ, ರೈತರಿಗೆ ಪರಿಹಾರ ಹಣ ಕೈಸೇರದೇ ಕಂಗಾಲಾಗಿದ್ದಾರೆ ಎಂದು ದೂರಿದರು.

ಸರಕಾರ ಕೂಡಲೇ ವೆಂಕಟಾಪೂರ, ಹಳ್ಳಿಕೇರಿ, ಹಳ್ಳಿಗುಡಿ ಗ್ರಾಮಗಳನ್ನು ಪುನರ್‌  ಪರಿಶೀಲನೆ ಮಾಡಿ, ರೈತರಿಗೆ ಆದ ಅನ್ಯಾಯ ಸರಿಪಡಿಸಬೇಕು. ಮುಂಗಾರು ಬೆಳೆಗಳಾದ ಹೆಸರು, ಸೂರ್ಯಕಾಂತಿ ಹಿಂಗಾರು ಬೆಳೆಗಳಾದ ಕಡಲೆ, ಜೋಳ ಬೆಳೆಗಳಿಗೆ ಸೂಕ್ತ ವಿಮಾ ತುಂಬಲು ಸರ್ಕಾರ ಕಾರ್ಯೋನ್ಮುಖರಾಗಬೇಕು. ಇಲ್ಲವೇ, ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಯೂಸೂಫ್‌ ಡಂಬಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೋರ್ಲಗಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಮುತ್ತಣ್ಣ ಚವಡಣ್ಣವರ, ಬಸವರಾಜ ಕರಿಯವರ, ರೈತರಾದ ವಿರೂಪಾಕ್ಷಗೌಡ ಮರಿಗೌಡರ, ಶರಣಪ್ಪ ತಳಕಲ್ಲ, ಸಂಗಪ್ಪ ತಳಕಲ್ಲ, ಅಂದಾನಯ್ಯ ಹಿರೇಮಠ, ಶರಣಪ್ಪ ಶಿವಶಿಂಪಗೇರ, ಶೇಖಪ್ಪ ತಳಕಲ್ಲ, ಶಿವನಗೌಡ ಮಂಟಗೇರಿ, ಹನಮಪ್ಪ ಬಿ. ಕಿನ್ನಾಳ, ಶಿವಪುತ್ರಪ್ಪ ಸಂಗನಾಳ, ಯಲ್ಲಪ್ಪಗೌರ ಕರಕರೆಡ್ಡಿ, ತಳಕಪ್ಪ ತುಪ್ಪದ, ಮುದಕಪ್ಪ ಸೂರಿ, ಮಲ್ಲಪ್ಪ ಆಲೂರ, ಹ.ಬಿ.ಸೂಡಿ, ಚನ್ನಪ್ಪ ಹಾ. ಕಲ್ಲೂರ, ರುದ್ರಪ್ಪ ಅಸೂಟಿ, ಶರಣಪ್ಪಅಸೂಟಿ, ಕೋಟೆಪ್ಪ ಹೊಸಮನಿ, ವೀರನಗೌಡ ಮೂಗನೂರ,ಶೌಕತ ಪೀರಜಾದೆ, ದಾವಲಸಾಬ ಕಣಕಿ, ಸದ್ದಾಂ ಕರ್ಜಗಿ, ಸಂತೋಷ ಕುರಿ, ಸದ್ದಾಂ ಈ. ಅಕ್ಕಿ, ಮಲ್ಲನಗೌಡ ಹುಲ್ಲೂರ, ದಾವಲಸಾಬ ದಾಯಣ್ಣವರ ಯಲ್ಲಪ್ಪ ಮಾಳೆಕೊಪ್ಪ ಇದ್ದರು.

ಟಾಪ್ ನ್ಯೂಸ್

siddaram

ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅನ್ಯೋನ್ಯತೆಯಿದೆ: ಸಿದ್ದರಾಮಯ್ಯ

1-mang-1

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್‌ ಢಿಕ್ಕಿ; 18 ರ ತರುಣ ಸಾವು

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

h d kumaraswamy

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೆಣಸಿನಕಾಯಿ ಬೆಳೆಗಾರರಿಗೆ ಬರಸಿಡಿಲು

ಮೆಣಸಿನಕಾಯಿ ಬೆಳೆಗಾರರಿಗೆ ಬರಸಿಡಿಲು

35 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಕಣಕ್ಕೆ

35 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಕಣಕ್ಕೆ

ಚುನಾವಣಾ ಅಕ್ರಮಕ್ಕೆ ಅವಕಾಶ ಬೇಡ

ಚುನಾವಣಾ ಅಕ್ರಮಕ್ಕೆ ಅವಕಾಶ ಬೇಡ

ರೈತಪರ ಆಡಳಿತಕ್ಕೆ ಬಿಜೆಪಿಗೆ ಮತ ನೀಡಿ

ರೈತಪರ ಆಡಳಿತಕ್ಕೆ ಬಿಜೆಪಿಗೆ ಮತ ನೀಡಿ

ಬೆಳೆಹಾನಿ ಪರಿಹಾರಕ್ಕೆ ರೈತರ ಒತ್ತಾಯ

ಬೆಳೆಹಾನಿ ಪರಿಹಾರಕ್ಕೆ ರೈತರ ಒತ್ತಾಯ

MUST WATCH

udayavani youtube

ಕಾಫಿನಾಡಲ್ಲಿ ಇಂದಿನಿಂದ ದತ್ತಜಯಂತಿ ಆಚರಣೆ

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

ಹೊಸ ಸೇರ್ಪಡೆ

davanagere news

ವಿದ್ಯಾರ್ಥಿಗಳು ನೇತ್ರದಾನಕ್ಕೆ ಮುಂದಾಗಲಿ

ಎಂಎಲ್ಸಿ ಚುನಾವಣೆ  ಹಿನ್ನೆಲೆ : ಟೆಂಡರ್ ಹರಾಜು ಪ್ರಕ್ರಿಯೆಗೆ ತಡೆ

ಎಂಎಲ್ಸಿ ಚುನಾವಣೆ ಹಿನ್ನೆಲೆ : ಟೆಂಡರ್ ಹರಾಜು ಪ್ರಕ್ರಿಯೆಗೆ ತಡೆ

davanagere news

ತಪ್ಪಿತಸ್ಥರ ಬಂಧನಕ್ಕೆ ಶಿವಕುಮಾರ್‌ ಆಗ್ರಹ

1-fff

ಮಿತಿ ಮೀರಿದೆ ಡಾ| ಜಾಧವ ಸುಳ್ಳು : ರಾಠೊಡ

davanagere news

ಅನುಮಾನಾಸ್ಪದ ಸಾವು ಪ್ರಕರಣ ಸಿಬಿಐಗೆ ವಹಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.