Udayavni Special

ಶ್ರೀ ಬಸವರಾಜ ಗ್ರಂಥಾಲಯ ಶತಮಾನೋತ್ಸವ ಸಂಭ್ರಮ


Team Udayavani, Oct 21, 2019, 2:16 PM IST

gadaga-tdy-1

ಗದಗ: ಸ್ಥಳೀಯರಲ್ಲಿ ಸ್ವಾತಂತ್ರ್ಯಸಂಗ್ರಾಮದ ಕಿಚ್ಚು ಹೊತ್ತಿಸಿದ್ದ, ಸರಕಾರ, ಸಂಘ-ಸಂಸ್ಥೆಗಳ ನೆರವಿನ ಹಂಗಿಲ್ಲದೇ ಸ್ಥಳೀಯರೇ ಟೊಂಕ ಕಟ್ಟಿ ಮುನ್ನಡೆಸಿದ್ದ ಇಲ್ಲಿನ ಶಹಪುರಪೇಟೆಯ ಶ್ರೀ ಬಸವರಾಜ ಗ್ರಂಥಾಲಯ ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿದೆ.

ಇಲ್ಲಿನ ಮಹಾತ್ಮ ಗಾಂಧಿ ವೃತ್ತದಿಂದ ಕೂಗಳತೆ ದೂರದಲ್ಲಿರುವ ಶಹಪುರ ಪೇಟೆಯಲ್ಲಿ 4-10-1919ರಲ್ಲಿ ವೀರಶೈವ ತರುಣ ಸಂಘದ ವಾಚನಾಲಯ ಸ್ಥಾಪನೆಗೊಂಡಿದೆ. ಸ್ವಾತಂತ್ರ್ಯಪೂರ್ವ ಶಹಪುರ ಹಳ್ಳಿಯಾಗಿದ್ದು, ಬಳಿಕ ಕಾಲಾಂತರದಲ್ಲಿ ಅದು ಶಹಪುರ ಪೇಟೆಯಾಗಿ, ಇದೀಗ ಬಸವೇಶ್ವರ ನಗರವೆಂದು ಗುರುತಿಸಿಕೊಂಡಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ನೂರು ವರ್ಷಗಳ ಹಿಂದೆ ಇಲ್ಲಿನ ವೀರಶೈವ ತರುಣ ಸಂಘದ ಪ್ರಮುಖರು ಶ್ರೀ ಶಂಕರಲಿಂಗ ದೇವಸ್ಥಾನ ಶಾಲಾ ಕೊಠಡಿಯೊಂದರಲ್ಲಿ ಗ್ರಂಥಾಲಯ ಆರಂಭಿಸಿದ್ದರು. ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವಂತಹ ಮರಾಠಿ, ಹಿಂದಿ ಹಾಗೂ ಆಂಗ್ಲ ದೈನಿಕಗಳು ಬರುತ್ತಿದ್ದವು. ಆಗಿನ ಕಾಲದಲ್ಲಿ ಓದುಗರ ಸಂಖ್ಯೆಯೂ ಬೆರಳೆಣಿಕೆಯಷ್ಟಿರುತ್ತಿದ್ದರಿಂದ ದಸರಾ ಸೇರಿದಂತೆ ವಿವಿಧ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪಂ|ನಾಗಭೂಷಣ ಶಾಸ್ತ್ರಿಗಳವರಿಂದ ನಡೆಯುವ ಪ್ರವಚನಕ್ಕೆ ಇದೇ ಗ್ರಂಥಾಲಯ ವೇದಿಕೆಯಾಗುತ್ತಿತ್ತು.

ಗ್ರಂಥಾಲಯಕ್ಕಾಗಿ ದೇಣಿಗೆ ಸಂಗ್ರಹ: ಸುಮಾರು ಎರಡೂವರೆ ದಶಕದ ಶಾಲೆಯಲ್ಲಿ ತರಗತಿ ಕೊಠಡಿಗಳ ಸಮಸ್ಯೆ ಎದುರಾಗಿದ್ದರಿಂದ ವಾಚನಾಲಯವನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಮತ್ತೂಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಅದು ಅಚ್ಚುಕಟ್ಟಾಗಿರಲಿಲ್ಲ. ಹೀಗಾಗಿ ಸ್ಥಳೀಯರು ಆಗಿನ ಕಷ್ಟ ಕಾಲದಲ್ಲೂ ವಾಚನಾಲಯ ನಿರ್ಮಾಣಕ್ಕೆ ಒಂದೊಂದು ರೂಪಾಯಿ ವಂತಿಗೆ ಸೇರಿಸಿದರು.

ಸ್ಥಿತಿವಂತರು ಉದಾರತೆ ಮೆರೆದು 10, 20 ರೂ. ದೇಣಿಗೆ ನೀಡಿದ್ದರಿಂದ 1936ರಲ್ಲಿ ದೇವಸ್ಥಾನದ ಖಾಲಿ ಜಾಗೆಯಲ್ಲಿ 50×20 ವಿಸ್ತೀರ್ಣದಲ್ಲಿ ಸುಂದರ ಕಟ್ಟಡ ತಲೆ ಎತ್ತಿತು. ಶರಣ ಸಂಸ್ಕೃತಿ ಹಾಗೂ ಬಸವ ತತ್ವಗಳಲ್ಲಿ ಅಪಾರ ನಿಷ್ಠೆ ಹೊಂದಿದ್ದ ಈ ಭಾಗದ ಜನರು, ವೀರಶೈವ ತರುಣ ಸಂಘದ ಬದಲಾಗಿ ಶ್ರೀ ಬಸವರಾಜ ವಾಚನಾಲಯವನ್ನಾಗಿ ಮರು ನಾಮಕರಣ ಮಾಡಿದರು.

ಹೆಚ್ಚಿದ ಓದುಗರ ಸಂಖ್ಯೆ: ಬಳಿಕ ಮತ್ತೂಮ್ಮೆ ಕೊಡುಗೈ ದಾನಿಗಳು ಲೈಬ್ರರಿ ಜೀರ್ಣೋದ್ಧಾರಕ್ಕಾಗಿ ಕೈಜೋಡಿಸಿದರು. ಅವರ ನೆರವಿನ ಫಲವಾಗಿ ಜ| ತೋಂಟದ ಸಿದ್ಧಲಿಂಗ ಸ್ವಾಮಿಗಳಿಂದ 1976ರಲ್ಲಿ ಮೊದಲ ಮಹಡಿಯೂ ಲೋಕಾರ್ಪಣೆಗೊಂಡಿತು. ವಿದ್ಯಾರ್ಥಿಗಳು-ಓದುಗರ ಅನುಕೂಲಕ್ಕಾಗಿ ಅನೇಕರು ಪುಸ್ತಕ ಖರೀದಿಸಿ ಕೊಡುತ್ತಿದ್ದರು. ಪರಿಣಾಮ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆಯೂ ಹೆಚ್ಚಿತ್ತು. 1976 ರಿಂದ ಈಚೆಗೆ ಪ್ರತಿನಿತ್ಯ ಸರಾಸರಿ 45- 50 ಜನ ಓದುಗರು ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

ಹಲವರಿಗೆ ಜ್ಞಾನದಾಲಯ: ಶಾಲೆ, ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಶಾಲೆ ಬಿಟ್ಟವರು, ಅಕ್ಷರ ಜ್ಞಾನ ಹೊಂದಿದವರಿಗೆ ಇದು ಜ್ಞಾನದ ಆಲಯವಾಗಿತ್ತು. ಸ್ಥಳೀಯರಿಗೆ ದೇಶ-ವಿದೇಶ ಸುದ್ದಿ ತಿಳಿಯಲೆಂದು ರೇಡಿಯೋ ವಾರ್ತೆ ಕೇಳಿಸಲಾಗುತ್ತಿತ್ತು. ಹೀಗಾಗಿ ಇತರೆ ಬಡಾವಣೆಯಿಂದಲೂ ಇಲ್ಲಿಗೆ ಜನ ಬರುತ್ತಿದ್ದರು. ಕೆಲವರು ದಿನವಿಡೀ ಇದೇ ಗ್ರಂಥಾಲಯದಲ್ಲಿ ಕಾಲ ಕಳೆಯುತ್ತಿದ್ದರು.

ಆ ಪೈಕಿ ಗದಗ ದಂಡಪ್ಪ ಮಾನ್ವಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ| ವೀರಣ್ಣ ಹಳೇಮನಿ, ರೋಣ ತಾಲೂಕು ಆಸ್ಪತ್ರೆಯ ಡಾ| ವೀರೇಶ ಶೆಟ್ಟರ್‌, ಅನೇಕರು ಇಂಜಿನಿಯರ್‌ಗಳು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿನ ಗ್ರಂಥಗಳನ್ನು ಬಳಸಿಕೊಂಡು ಡಾ|ರಶ್ಮಿ ಅಂಗಡಿ ಅವರು ಪಿಎಚ್‌ಡಿ ಪೂರ್ಣಗೊಳಿಸಿದರು. ಇಂತಹ ಅನೇಕ ವ್ಯಕ್ತಿಗಳಿಗೆ ಈ ಗ್ರಂಥಾಲಯ ಜ್ಞಾನ ದೀವಿಗೆಯಾಗಿದೆ ಎನ್ನುತ್ತಾರೆ ವಾಚನಾಲಯದ ಆಡಳಿತ ಮಂಡಳಿ ಸದಸ್ಯ ದಾನಪ್ಪ ಬಸಪ್ಪ ತಡಸದ. ನಾನಾ ಕಾರಣಗಳಿಂದ ಸರಕಾರದ ಗ್ರಂಥಾಲಯಗಳು ನಿರ್ವಹಣೆಯಿಲ್ಲದೇ ಸೊರಗುತ್ತಿವೆ. ಆದರೆ, ಯಾರ ನೆರವೂ ಬಯಸದೇ ಸ್ಥಳೀಯರೇ ಈ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ.

ಇಲ್ಲಿವೆ ಎರಡು ಸಾವಿರ ಪುಸ್ತಕಗಳು: ವಾಚನಾಲಯ ಆರಂಭದಲ್ಲಿ ಕೇವಲ 20 ಪುಸ್ತಕಗಳಿದ್ದವು. ಬಳಿಕ ದಾನಿಗಳು ಕೊಡಿಸಿದ ಹೊಸ ಪುಸ್ತಕಗಳು, ವಿದ್ಯಾರ್ಥಿಗಳು ಓದಿ ಮುಗಿಸಿದ ಹಳೆಯ ಪುಸ್ತಕಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಂಗ್ರಹಗೊಂಡಿದ್ದವು. 2007ರಲ್ಲಿ ಜ| ತೋಂಟದಾರ್ಯ ಮಠದವರೂ ಸಾಕಷ್ಟು ಪುಸ್ತಕ ನೀಡಿದ್ದರು. ಆದರೆ, ಕೆಲವರು ಮನೆಗೆ ಕೊಂಡೊಯ್ದು, ಮತ್ತೆ ಹಿಂದಿರುಗಿಸಿಲ್ಲ. ಸದ್ಯ ಕತೆ, ಕಾದಂಬರಿ ಹಾಗೂ ವಚನ ಸಾಹಿತ್ಯಕ್ಕೆ ಸಂಬಂಧಿಸಿ ಸುಮಾರು 2000ಕ್ಕಿಂತ ಹೆಚ್ಚು ಪುಸ್ತಕಗಳು ಇವೆ. ಇಂದಿಗೂ ಪ್ರತಿನಿತ್ಯ ಬೆಳಗ್ಗೆ 7 ರಿಂದ 11, ಸಂಜೆ 4 ರಿಂದ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದೆ.

ಇವರೇ ರೂವಾರಿಗಳು :  ಸ್ವಾತಂತ್ರ್ಯ ಪೂರ್ವದಲ್ಲಿ ವೀರಶೈವ ತರುಣ ಸಂಘ ಕಟ್ಟಿಕೊಂಡಿದ್ದ ಮಹದೇವಪ್ಪ ಪರಪ್ಪ ಮುಧೋಳ ಅವರ ಮುಂದಾಳತ್ವದಲ್ಲಿ ಬಸಪ್ಪ ಗೂಳಪ್ಪ ತಡಸದ, ದುಂಡಪ್ಪ ಕಾಡಪ್ಪ ಮುನವಳ್ಳಿ, ಕೊಟ್ರಬಸಪ್ಪ ಚನ್ನಬಸಪ್ಪ ಬಡಿಗಣ್ಣವರ, ಮುದುಕಯ್ಯ ಮಡಿವಾಳಯ್ಯ ಹಡಗಲಿಮಠ, ವಿರೂಪಾಕ್ಷಪ್ಪ ಪಿಳ್ಳಿ ಅವರು ಸದುದ್ದೇಶದಿಂದ ಗ್ರಂಥಾಲಯ ಇಂದು ಶತಮಾನದ ಹೊಸ್ತಿಲಲ್ಲಿದೆ. ಆಗೊಮ್ಮೆ- ಈಗೊಮ್ಮೆ ಸಮಸ್ಯೆ, ಸವಾಲುಗಳನ್ನು ಕಂಡರೂ, ಎಂದೂ ಬಾಗಿಲು ಮುಚ್ಚಿಲ್ಲ ಎಂಬುದು ಗಮನಾರ್ಹ.

 

-ವೀರೇಂದ್ರ ನಾಗಲದಿನ್ನಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಾವಣಗೆರೆ ಇಂದು ಮತ್ತೆ ಆರು ಮಂದಿಯಲ್ಲಿ ಸೋಂಕು ದೃಢ

ದಾವಣಗೆರೆ ಇಂದು ಮತ್ತೆ ಆರು ಮಂದಿಯಲ್ಲಿ ಸೋಂಕು ದೃಢ

ಕ್ವಾರಂಟೈನ್‌ ಮುಗಿಸಿ ಬಂದ ಕೊರವಡಿಯ ವ್ಯಕ್ತಿಗೆ ಸೋಂಕು ದೃಢ : ಮನೆ ಸೀಲ್‌ ಡೌನ್‌

ಕ್ವಾರಂಟೈನ್‌ ಮುಗಿಸಿ ಬಂದ ಕೊರವಡಿಯ ವ್ಯಕ್ತಿಗೆ ಸೋಂಕು ದೃಢ : ಮನೆ ಸೀಲ್‌ ಡೌನ್‌

ಯಾದಗಿರಿಯಲ್ಲಿ ಒಂದೇ ದಿನ ಶತಕ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

ಯಾದಗಿರಿಯಲ್ಲಿ ಒಂದೇ ದಿನ ಶತಕ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

ಕರ್ನಾಟಕ ಕೋವಿಡ್-19 ಕಳವಳ: ರಾಜ್ಯದಲ್ಲಿಂದು ಜನರಿಗೆ ಸೋಂಕು ದೃಢ

ಕರ್ನಾಟಕ ಕೋವಿಡ್-19 ಕಳವಳ: ರಾಜ್ಯದಲ್ಲಿಂದು 378 ಜನರಿಗೆ ಸೋಂಕು ದೃಢ

ಕೃಷ್ಣನೂರಿನಲ್ಲಿ ನಿಲ್ಲದ ಕೋವಿಡ್ ಪ್ರವಾಹ: ಇಂದು ಮತ್ತೆ ಜನರಿಗೆ ಸೋಂಕು ದೃಢ

ಕೃಷ್ಣನೂರಿನಲ್ಲಿ ನಿಲ್ಲದ ಕೋವಿಡ್ ಪ್ರವಾಹ: ಇಂದು ಮತ್ತೆ121 ಜನರಿಗೆ ಸೋಂಕು ದೃಢ

ಮನೆಮಂದಿಯೊಂದಿಗೆ ಬರ್ತ್ ಡೇ ಆಚರಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಮನೆಮಂದಿಯೊಂದಿಗೆ ಬರ್ತ್ ಡೇ ಆಚರಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಇನ್ಮುಂದೆ ಕೋವಿಡ್ ಚಿಕಿತ್ಸೆ ರೋಗಿಗೆ ದುಬಾರಿಯಾಗಲಿದೆಯಾ?

ಸೋಂಕಿತರ ಸಂಖ್ಯೆ ಹೆಚ್ಚಳ; ಇನ್ಮುಂದೆ ಕೋವಿಡ್ ಚಿಕಿತ್ಸೆ ರೋಗಿಗೆ ದುಬಾರಿಯಾಗಲಿದೆಯಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9 ಜನ ಸೋಂಕಿತರು ಗುಣಮುಖ

9 ಜನ ಸೋಂಕಿತರು ಗುಣಮುಖ

ಹುಡ್ಕೋ ಕಾಲೋನಿ ನಿಯಂತ್ರಿತ ಪ್ರದೇಶ

ಹುಡ್ಕೋ ಕಾಲೋನಿ ನಿಯಂತ್ರಿತ ಪ್ರದೇಶ

ಮುಂಡರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ

ಮುಂಡರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ

117 ಜನರ ವರದಿ ಬರುವುದು ಬಾಕಿ

117 ಜನರ ವರದಿ ಬರುವುದು ಬಾಕಿ

ಕೋವಿಡ್ ಸೋಂಕಿಗೆ ಲಕ್ಕುಂಡಿ ವ್ಯಕ್ತಿ ಬಲಿ

ಕೋವಿಡ್ ಸೋಂಕಿಗೆ ಲಕ್ಕುಂಡಿ ವ್ಯಕ್ತಿ ಬಲಿ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ದಾವಣಗೆರೆ ಇಂದು ಮತ್ತೆ ಆರು ಮಂದಿಯಲ್ಲಿ ಸೋಂಕು ದೃಢ

ದಾವಣಗೆರೆ ಇಂದು ಮತ್ತೆ ಆರು ಮಂದಿಯಲ್ಲಿ ಸೋಂಕು ದೃಢ

WhatsApp Image 2020-06-06 at 6.14.14 PM

ಉದ್ಯಾವರ : ಕಲಾಯಿ ಬೈಲ್ ಸೀಲ್‍ಡೌನ್ ಮುಂಬೈನಿಂದ ಬಂದಾಕೆಗೆ ಪೊಸಿಟಿವ್

ಕ್ವಾರಂಟೈನ್‌ ಮುಗಿಸಿ ಬಂದ ಕೊರವಡಿಯ ವ್ಯಕ್ತಿಗೆ ಸೋಂಕು ದೃಢ : ಮನೆ ಸೀಲ್‌ ಡೌನ್‌

ಕ್ವಾರಂಟೈನ್‌ ಮುಗಿಸಿ ಬಂದ ಕೊರವಡಿಯ ವ್ಯಕ್ತಿಗೆ ಸೋಂಕು ದೃಢ : ಮನೆ ಸೀಲ್‌ ಡೌನ್‌

ಯಾದಗಿರಿಯಲ್ಲಿ ಒಂದೇ ದಿನ ಶತಕ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

ಯಾದಗಿರಿಯಲ್ಲಿ ಒಂದೇ ದಿನ ಶತಕ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

06-June-24

ಸಾಮಾಜಿಕ ಅಂತರ ಅಕ್ಷರಶಃ ಮರೀಚಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.