ಬಿಸಿಯೂಟದಲ್ಲಿ ನುಶಿ ಹುಳ-ಕಲ್ಲು

Team Udayavani, Dec 6, 2019, 12:07 PM IST

ರೋಣ: ಪಟ್ಟಣದ ಗೌಡರ ಓಣಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ (ಹುಳ), ಕಲ್ಲು ಇರುವ ಕಳಪೆ ಮಟ್ಟದ ಬಿಸಿಯೂಟ ಪೂರೈಸುತ್ತಿರುವುದರಿಂದ ಮಕ್ಕಳು ಮನೆಯಿಂದಲೇ ಊಟದ (ಬುತ್ತಿ) ಡಬ್ಬಿ ತರುತ್ತಿದ್ದಾರೆ. ಕೆಲವು ಮಕ್ಕಳು ಮನೆಯಿಂದ ತರುವ ಊಟವನ್ನೇ ಮಾಡುತ್ತಿದ್ದರೆ, ಇನ್ನೂ ಕೆಲ ಮಕ್ಕಳು ಅನಿವಾರ್ಯವಾಗಿ ಬಿಸಿಯೂಟವನ್ನೇ ಸೇವಿಸುತ್ತಿದ್ದಾರೆ.

ಶಾಲೆಯ ಎಸ್‌ಡಿಎಂಸಿ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಬಂದು ಪ್ರಭಾರಿ ಮುಖ್ಯೋಪಾಧ್ಯಾಯರನ್ನು ವಿಚಾರಿಸಿದರೆ, ನಮ್ಮ ಶಾಲೆ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಗುಣಮಟ್ಟದ್ದಾಗಿದೆ. ಈ ಹಿಂದೆ ಒಂದು ಬಾರಿ ಊಟದಲ್ಲಿ ಹುಳ (ನುಶಿ) ಬಂದಿತ್ತು. ಅಂದಿನಿಂದ ಅಡುಗೆಯವರು ಸ್ವಚ್ಛಶುಚಿ ಆಹಾರ ನೀಡುತ್ತಿದ್ದಾರೆ. ಆದರೆ 1ನೇ ತರಗತಿ ಮಕ್ಕಳು ಬೇಗ ಹಸಿವಾಗುತ್ತದೆ ಎಂದು ಊಟದ ಡಬ್ಬಿ ತರುತ್ತಾರೆ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ಎಸ್‌.ಎಸ್‌. ಅಕ್ಕಿ ಹೇಳಿದರು. ಆದರೆ ಪಕ್ಕದಲ್ಲಿದ್ದಮಕ್ಕಳು ಸುಳ್ಳ ಯಾಕ್ರೀ ಸರ್‌..ದಿನಾ ಊಟದಾಗ ನುಶಿ ಹುಳಾ ಬರ್ತಾವು ಎಂದ ಕೂಡಲೇ ಬಿಇಒ ಎನ್‌.ನಂಜುಂಡಯ್ಯ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ