ಟ್ರ್ಯಾಕ್ಟರ್ ಪಲ್ಟಿ; ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು
7 ಜನರಿಗೆ ಗಾಯ !ಕಡಲೆ ಕೀಳುವ ಕೆಲಸಕ್ಕೆ ಹೋಗಿದ್ದರು !ಮರಳಿ ಬರುವಾಗ ನಡೆದ ಘಟನೆ
Team Udayavani, Feb 26, 2021, 4:14 PM IST
ಲಕ್ಷ್ಮೇಶ್ವರ: ಪಟ್ಟಣದ ಗುಂಜಳ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮಹಿಳಾ ಕೂಲಿಕಾರರು ಸ್ಥಳದಲ್ಲಿಯೇ ಮೃತಪಟ್ಟು ಏಳು ಜನರು ಗಾಯಗೊಂಡ ಘಟನೆ ಗುರುವಾರ ಜರುಗಿದೆ.
ಕಡಲೆ ಕೀಳುವ ಕೆಲಸ ಮುಗಿಸಿ ಮನೆಗೆ ಬರುವ ವೇಳೆ ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಸರೋಜವ್ವ ಫಕ್ಕೀರಪ್ಪ ಹಿತ್ತಲಮನಿ(35), ಸೋಮವ್ವ ಮುದಕಪ್ಪ ಗಡದವರ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ದುರಗವ್ವ ದೂಳಮ್ಮನವರ, ಬಸವ್ವ ಗಡದವರ, ಗಂಗವ್ವ ಹೊಸಮನಿ, ಬಸವ್ವ ಸಂದಿಮನಿ, ಶೋಭಕ್ಕ ದೂಳಮ್ಮನವರ, ಸುಂದರಮ್ಮ ಗಡದವರ, ಯಲ್ಲವ್ವ ಬೂದಿಹಾಳ ಅವರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ಮೃತ ಮತ್ತು ಗಾಯಾಳುಗಳ ಸಂಬಂ ಧಿಕರು ಆಸ್ಪತ್ರೆಗೆ ಧಾವಿಸಿ ಗೋಳಾಡಿದ ದೃಶ್ಯ ಮನ ಕಲಕುವಂತಿತ್ತು. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಶಿವಯೋಗಿ ಲೋಹಾರ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ