ಸಮೃದ್ಧ ತೊಗರಿಗೆ ಹುಳುಗಳದ್ದೇ ಕಾಟ

Team Udayavani, Nov 8, 2019, 12:46 PM IST

ಗಜೇಂದ್ರಗಡ: ಈ ಬಾರಿ ಸಾಕಷ್ಟು ಮಳೆಯೂ ಆಗಿದೆ, ತೊಗರಿ ಬೆಳೆಸಮೃದ್ಧವಾಗಿ ಬೆಳೆದೂ ನಿಂತಿದೆ ಆದರೆ ಬೆಳಗೆ ಕಾಯಿಕೊರಕ ಹುಳುಗಳ ಕಾಟ ಶುರುವಾಗಿದ್ದು, ಹುಳುಗಳು ನಿಯಂತ್ರಣಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ.

ಪ್ರಸಕ್ತ ಮುಂಗಾರು-ಹಿಂಗಾರು ಮಳೆಗಳು ಉತ್ತಮವಾಗಿ ಸುರಿದ ಪರಿಣಾಮ ಈ ಭಾಗದಲ್ಲಿ ಅವ ಧಿಗೂ ಮುನ್ನವೇ ತೊಗರಿ ಬೆಳೆ ಭರ್ಜರಿಯಾಗಿ ಬೆಳೆದು ನಿಂತಿವೆ. ಹೊಲದ ತುಂಬಾ ಹರಡಿಕೊಂಡಿದೆ. ಇದೀಗ ಕಾಯಿ ಕಟ್ಟುವ ಹಂತಕ್ಕೂ ಬಂದಿದೆ ಆದರೆ ಕಾಯಿ ಕೊರಕ ಹುಳುವಿನ ಕಾಟ ರೈತರ ನಿದ್ದೆಗಡಿಸಿದೆ.

ಇಳುವರಿ ಕುಂಠಿತವಾಗುವ ಭಯ ಆವರಿಸಿದೆ. ಸಾಂಪ್ರದಾಯಿಕ ಬೆಳೆ ಪದ್ಧತಿಯಲ್ಲಿ ಏಕದಳ ಧಾನ್ಯಗಳ ನಡುವೆ ಅಕ್ಕಡಿ ಬೆಳೆ ತೊಗರಿ ಬೆಳೆದರೆ ದ್ವಿದಳ ಧಾನ್ಯವಾಗಿ ಮಣ್ಣಿನ ಪೋಷಕಾಂಶ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ಬಹುತೇಕ ರೈತರು ಮನೆಗೆ ಅಗತ್ಯ ಬೇಳೆ ಕಾಳು ಹಾಗೂ ಉರುವಲಿಗೆ ತೊಗರಿ ಉತ್ಕೃಷ್ಟ ಬೆಳೆಯಾಗಿದೆ. ಈಚೆಗೆ ತೊಗರಿ ಬೆಳೆಯುವ ರೈತರ ಸಂಖ್ಯೆ ಕ್ಷೀಣಿಸಿತ್ತು. ಆದರೆ ಈ ಬಾರಿ ತೊಗರಿ ಬೆಳೆಗೆ ಬಂದ ಬೇಡಿಕೆ, ಬೆಲೆ ಏರಿಕೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಈ ಬಾರಿ 600 ಹೆಕ್ಟೆರ್‌ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆದಿದ್ದಾರೆ.

ಹೆಚ್ಚಿದ ಬೇಡಿಕೆ: ಕೆಂಪು ಜವುಳು ಪ್ರದೇಶದಲ್ಲಿ ಬೆಳೆದ ತೊಗರಿಗೆ ಇದೀಗ ಬೇಡಿಕೆ ಬಂದೊದಗಿದೆ. ಮಳೆರಾಯನ ಕೃಪೆಯಿಂದ ಬೆಳೆಯೂ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಹುಳುಗಳ ನಿಯಂತ್ರಿಸಲು ಅನ್ನದಾತರು ಕ್ರಿಮಿನಾಶಕ ಸಿಂಪರಣೆಗೆ ಮುಂದಾಗಿದ್ದಾರೆ. ಹಿಂಗಾರು ಬೆಳೆಗಳ ಆರೋಗ್ಯ, ಕೀಟಗಳ ನಿಯಂತ್ರಣ ಹವಾಮಾನದಿಂದಲೇ ಸಾಧ್ಯ ಎಂಬುದು ತಲೆ ತಲಾಂತರದಿಂದ ನಂಬಿ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಹಾಗಂತ ಬರೀ ಹವಾಮಾನವಷ್ಟೇ ಅಲ್ಲ, ಅದಕ್ಕೆ ಸಮರ್ಪಕ ಮಳೆಯೂ ಸಹಕಾರಿ. ಆದರೆ ಪ್ರಸ್ತುತ ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಅವಧಿಗೆ ಮೊದಲೇ ತೊಗರಿ ಫಸಲು ಬರುವ ಜತೆಗೆ ಭರ್ಜರಿ ಇಳುವರಿ ಬರಬಹುದೆನ್ನುವ ಲೆಕ್ಕಾಚಾರ ರೈತರದ್ದಾಗಿದೆ.

 

-ಡಿ.ಜಿ. ಮೋಮಿನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನರೇಗಲ್ಲ: ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನದಿಂದ ಖರೀದಿಸುವ ಯಂತ್ರಗಳು ಸಂರಕ್ಷಿಸದಿದ್ದರೆ ಹೇಗೆ ಹಾಳಾಗಿ ಹೋಗುತ್ತಿವೆ ಎನ್ನುವುದಕ್ಕೆ ನರೇಗಲ್ಲ...

  • ಗದಗ: ಸ್ಥಳೀಯರ ಒತ್ತಾಯದ ಮೇರೆಗೆ ಆರಂಭಗೊಂಡಿರುವ ಇಲ್ಲಿನ ಆದರ್ಶ ನಗರದ ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಓದುಗರ ಮೆಚ್ಚುಗೆಯ...

  • ಗದಗ: ಗ್ರಂಥಗಳನ್ನು ಮುಟ್ಟಿದರೆ ಸಾಕು ಕೈಗೆ ಮೆತ್ತಿಕೊಳ್ಳುವ ಧೂಳು. ಜೇಡರ ಬಲೆಯಲ್ಲಿ ಇಣುಕಿ ನೋಡುವ ಗ್ರಂಥಗಳು. ಸ್ವಚ್ಛತೆ ಕೊರತೆಯಿಂದ ಅಸಡ್ಡೆಗೆ ಒಳಗಾದ ಸಾವಿರಾರು...

  • ಗದಗ: ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನ ಅಂಗವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್‌ ಕವರ್‌ ಹಾಗೂ ಪ್ಲಾಸ್ಟಿಕ್‌ ಪೇಪರ್‌ ಮಾರಾಟ ಸಂಪೂರ್ಣ ನಿಷಿದ್ಧವಾಗಿದೆ.ಆದರೆ,...

  • ಗದಗ: ಹಾಡಹಗಲೇ ನಂಬರ್‌ ಪ್ಲೇಟ್‌ ಇಲ್ಲದೇ ಮರಳು ತುಂಬಿರುವ ಟಿಪ್ಪರ್‌ಗಳಓಡಾಟ ಗದಗ-ಬೆಟಗೇರಿ ಅವಳಿನಗರದಲ್ಲಿ ಜೋರಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ...

ಹೊಸ ಸೇರ್ಪಡೆ