ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಿ

ಶಾಂತಿ ಸುವ್ಯವಸ್ಥೆ ಕಾಪಾಡಲು ಕಾನೂನು ನಿಯಮಗಳನ್ನು ಕಡ್ಡಾಯ ಪಾಲಿಸಿ: ಡಿವೈಎಸ್ಪಿ ನಾಗೇಶ್‌

Team Udayavani, Aug 25, 2019, 3:07 PM IST

ಹರಪನಹಳ್ಳಿ: ಗೌರಿ ಗಣೇಶ ಮತ್ತು ಮೊಹರಂ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಪ್ರಸನ್ನಕುಮಾರ್‌ ಮಾತನಾಡಿದರು.

ಹರಪನಹಳ್ಳಿ: ಗೌರಿ ಗಣೇಶ ಹಾಗೂ ಬಕ್ರೀದ್‌ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಬೇಕು. ದೇವರ ಹೆಸರಿನಲ್ಲಿ ಪೈಪೋಟಿ, ನಿಯಮಬಾಹಿರ ಧ್ವನಿವರ್ಧಕ ಅಳವಡಿಕೆ, ಇಸ್ಪೀಟ್, ಜೂಜಾಟ ಸೇರಿ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಂತಿಪಾಲನೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಡಿವೈಎಸ್ಪಿ ನಾಗೇಶ್‌ ಐತಾಳ್‌ ತಿಳಿಸಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಗೌರಿ ಗಣೇಶ ಮತ್ತು ಮೊಹರಂ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ. ಆದರೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ವಿಸರ್ಜನೆಯನ್ನು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಿ ಶೀಘ್ರವೇ ಮುಕ್ತಾಯಗೊಳಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಪೊಲೀಸ್‌ ಇಲಾಖೆ ಅನುಮತಿ ಪಡೆಯತಕ್ಕದ್ದು. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ಕೆಪಿಟಿಸಿಎಲ್ನಿಂದ ಪರವಾನಗಿ ಪಡೆಯಬೇಕು. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ನಿಗದಿಪಡಿಸಿದ ದಿನದಂದು ಗಣೇಶ ವಿಸರ್ಜನೆ ಮಾಡಬೇಕು. ನಿಗದಿಪಡಿಸಿದ ರಸ್ತೆ ಮಾರ್ಗ ಬದಲಿಸಬಾರದು. ಅಶ್ಲೀಲ ಹಾಡು, ನತ್ಯ ಕಾರ್ಯಕ್ರಮಗಳು ನಡೆದಲ್ಲಿ ಸಂಬಂಧಪಟ್ಟ ಸಂಘ-ಸಂಸ್ಥೆಯ ಪದಾಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಕೋಮುಸೌಹಾರ್ದತೆಗೆ ಧಕ್ಕೆ ತರುವ ಹಾಡುಗಳನ್ನು ಹಾಕಬಾರದು ಎಂದು ಎಚ್ಚರಿಸಿದರು.

ಉಪವಿಭಾಗಾಧಿಕಾರಿ ಕೆ.ವಿ. ಪ್ರಸನ್ನಕುಮಾರ್‌ ಮಾತನಾಡಿ, ಎರಡು ಹಬ್ಬದ ಆಚರಣೆಯ ಹಿನ್ನೆಲೆ ಎರಡು ಧರ್ಮದವರು ಶಾಂತಿ ಸೌಹಾರ್ದತೆಯಿಂದ ವರ್ತಿಸಬೇಕು. ಹಬ್ಬಗಳು ಅನ್ಯ ಧರ್ಮದವರಿಗೆ ಕಿರಿಕಿರಿ, ತೊಂದರೆಯಾಗದಂತೆ ಆಚರಿಸಬೇಕು. ಹಬ್ಬಗಳು ಸಮಾಜದ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯಬೇಕೆಯೇ ಹೊರತು ಯಾವುದೇ ವ್ಯಕ್ತಿಯ ಭಾವನೆಗಳಿಗೆ ಧಕ್ಕೆಯಾಗದಂತೆ ಆಚರಿಸಬಾರದು ಎಂದು ಹೇಳಿದರು.

ಸಿಪಿಐ ಕೆ.ಕುಮಾರ್‌ ಮಾತನಾಡಿ, ಗಣೇಶ ಮತ್ತು ಮೊಹರಂ ಹಬ್ಬದ ಪ್ರಯುಕ್ತ ಇಲಾಖೆಯಿಂದ ಡಿ.ಜಿ.ಗೆ ಅನುಮತಿ ನೀಡಲು ನಮಗೆ ಯಾವುದೇ ಆದೇಶ ಬಂದಿಲ್ಲ. ಮೆರವಣಿಗೆ ಸಂದರ್ಭದಲ್ಲಿ ಭಕ್ತಿ ಗೀತೆ ಮತ್ತು ದೇವರ ನಾಮಗಳ ಗೀತೆಗಳನ್ನು ಹಾಕುವ ಮೂಲಕ ಶಾಂತಿ ಕಾಪಾಡಬೇಕು. ಹಬ್ಬದ ಆಚರಣೆ ವೇಳೆ ಯುವಕರು ಹಿರಿಯರ ಮಾರ್ಗದರ್ಶನ ಪಡೆಯಬೇಕು. ಹಬ್ಬದ ಅಂಗವಾಗಿ ಫ್ಲೆಕ್ಸ್‌ಗಳನ್ನು ಹಾಕಬಾರದು. ಹಾಕಿದರೆ ಅದಕ್ಕೆ ನೀವೇ ಹೋಣೆಗಾರ‌ರಾಗುತ್ತೀರಿ. ಎರಡು ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ಪುರಸಭೆ ಸದಸ್ಯ ಎಸ್‌.ಜಾಕೀರ್‌ ಸರ್ಕಾವಸ್‌ ಮಾತನಾಡಿ, ಪಿಒಪಿಯಿಂದ ತಯಾರು ಮಾಡಿದ ಗಣಪತಿ ಬದಲಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಕೂರಿಸುವ ಮೂಲಕ ಪರಿಸರ ಮಾಲಿನ್ಯ ತಡಗಟ್ಟಲು ಮುಂದಾಗಬೇಕು. ಮುಸ್ಲಿಂರು ಕೂಡ ಎಲ್ಲ ಧರ್ಮವರೊಂದಿಗೆ ಬಾಂಧವ್ಯದಿಂದ ಮೊಹರಂ ಹಬ್ಬ ಆಚರಿಸಬೇಕು ಎಂದರು.

ಹರಪನಹಳ್ಳಿ ಠಾಣೆ ಪಿಎಸ್‌ಐ ಕೆ. ಶ್ರೀಧರ್‌, ಹಲುವಾಗಲು ಠಾಣೆ ಪಿಎಸ್‌ಐ ಸಿ.ಪ್ರಕಾಶ್‌, ಆರೋಗ್ಯ ನಿರೀಕ್ಷಕ ಬಿ.ಮಂಜುನಾಥ್‌, ಪುರಸಭೆ ಸದಸ್ಯರಾದ ಎಂ.ಕೆ.ಜಾವೀದ್‌, ಕಿರಣ್‌, ತಾಲೂಕು ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಆರ್‌.ಲೋಕೇಶ್‌, ಬಿಜೆಪಿ ತಾಲೂಕು ಉಪಾಧ್ಯಕ್ಷ ಸಣ್ಣ ಹಾಲಪ್ಪ, ಅಂಜುಮನ್‌ ಸಮಿತಿಯ ಅಧ್ಯಕ್ಷ ಡಿ.ಮುಜಿಬುರ್‌ರೆಹಮಾನ್‌, ಚಿಕ್ಕೇರಿ ಬಸಪ್ಪ, ಹೆಚ್.ಮಲ್ಲಿಕಾರ್ಜುನ್‌, ಜಾವೀದ್‌, ಅರುಣ್‌ ಪೂಜಾರ್‌, ಈಡಿಗರ ಅಂಜಿನಪ್ಪ ತೆಲಿಗಿ, ಕರವೇ ಅಧ್ಯಕ್ಷ ಬಸವರಾಜ್‌ ಹುಲಿಯಪ್ಪನವರ್‌ ಸೇರಿದಂತೆ ವಿವಿಧ ಇಲಾಖೆ ಅಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು, ಯುವಕರು ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ