4 ಗ್ರಾಮಕ್ಕೆ ಟ್ಯಾಂಕರ್‌, 19 ಗ್ರಾಮಕ್ಕೆ ಕೊಳವೆ ಬಾವಿ ನೀರು

ಜಡಿ ಮಳೆಯಿಂದ ಕೃಷಿ ಕಾರ್ಯ ಕುಂಠಿತ •ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ನಿವಾರಣೆ ಎಂದ ಅಧಿಕಾರಿಗಳು

Team Udayavani, Aug 10, 2019, 1:38 PM IST

HASAN-TDY-1

ಚನ್ನರಾಯಪಟ್ಟಣ: ಕಳೆದ 3-4 ದಿನದಿಂದ ಆಶ್ಲೇಷಾ ಮಳೆ ಸುರಿಯುತ್ತಿದ್ದು ಸುಮಾರು 4 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 19 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆ: ರಾಜ್ಯದ ಮಲೆನಾಡು, ಕರಾವಳಿ ಸೇರಿದಂತೆ ಬಯಲು ಸೀಮೆ ಪ್ರದೇಶದಲ್ಲಿ ಮಳೆ ಆರ್ಭಟ ಜೋರಾಗಿದೆ. ನೆರೆ ಸಂಭವಿಸುತ್ತಿದ್ದರೂ ತಾಲೂಕಿನಲ್ಲಿ ಮಾತ್ರ ಭೀಕರ ಬರಗಾಲ ತಾಂಡವವಾಡುತ್ತಿದೆ. ಸಾವಿರಾರು ಮಂದಿ ಕುಡಿ ಯುವ ನೀರಿನ ಸಮಸ್ಯೆಗೆ ಸಿಲುಕಿದ್ದಾರೆ. ಜಾನುವಾರ ಗಳಿಗೆ ಮೇವಿನ ಕೊರತೆ ಉಂಟಾಗಿದೆ. ತಾಲೂಕಿನಲ್ಲಿ ನೀರಿನ ಸಮಸ್ಯೆ ಇದ್ದರೂ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ನಾಲೆ ಮೂಲಕ ಕೆರೆ ಕಟ್ಟೆ ತುಂಬಿಸಲು ಜಿಲ್ಲಾಡಳಿತ ಮುಂದಾಗದೆ ಇರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ.

ಎಲ್ಲೆಲ್ಲಿ ನೀರಿನ ಸಮಸ್ಯೆ?: ತಾಲೂಕಿನ ಬಸವನಹಳ್ಳಿ, ಬಿಳಿಕೆರೆ, ಬಡಕನಹಳ್ಳಿ ಹಾಗೂ ದೊಡ್ಡೇರಿಕಾವಲು ಗ್ರಾಮದ ಜನ ಹಾಗೂ ಜಾನುವಾಗುಗಳಿಗೆ ನಿತ್ಯವೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗು ತ್ತಿದ್ದರೆ ಪೂಮಡಿಹಳ್ಳಿ, ಹುಳಿಗೆರೆ, ಮಲ್ಲೇನಹಳ್ಳಿ, ಮಂಚೇನಹಳ್ಳಿ, ದಿಂಕಕೊಪ್ಪಲು, ಎಂ.ಹೊನ್ನೇನಹಳ್ಳಿ, ದುಗ್ಗೇಹಳ್ಳಿ, ಚನ್ನಗೋನಹಳ್ಳಿ, ಶೆಟ್ಟಿಹಳ್ಳಿ, ಜಿ.ಮಾವಿನ ಹಳ್ಳಿ, ದಾಸಾಪುರ, ಸಾಣೇನಹಳ್ಳಿ, ಪೂಮಡಿಹಳ್ಳಿ ಕಾಲೋನಿ, ದಾಸರಹಳ್ಳಿ, ಚನ್ನೇನಹಳ್ಳಿ, ದಾಸರಹಳ್ಳಿ, ಎಂ.ಕೆ.ಚಿಕ್ಕೇನಹಳ್ಳಿ, ವಡ್ಡರಹಳ್ಳಿ ಅಗ್ರಹಾರ ಗ್ರಾಮಗಳಿಗೆ ಕಳೆದ 3ತಿಂಗಳಿನಿಂದ ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆ ಪಡೆದು ನೀರು ನೀಡಲಾಗುತ್ತಿದೆ.

3 ಲಕ್ಷ ರೂ.ವೆಚ್ಚ: ಟ್ಯಾಂಕರ್‌ ಮೂಲಕ ನೀರು ಸರಬ ರಾಜು ಮಾಡುವವರಿಗೆ ಒಂದು ಟ್ಯಾಂಕರ್‌ ನೀರಿಗೆ 650 ರೂ. ನಿಗದಿ ಮಾಡಿದ್ದು ಪ್ರತಿ ನಿತ್ಯ 2-3 ಟ್ಯಾಂಕರ್‌ ನೀರು ಒಂದು ಗ್ರಾಮಕ್ಕೆ ನೀಡಲಾಗುತ್ತಿದೆ. ಇನ್ನು 19 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗೆ ತಾಲೂಕು ಆಡಳಿತ ತಿಂಗಳಿಗೆ 15 ಸಾವಿರ ಬಾಡಿಗೆ ರೂಪದಲ್ಲಿ ಪಡೆದಿದ್ದು 3 ತಿಂಗಳಿನಿಂದ ನೀರು ಒದಗಿಸಲಾಗುತ್ತಿದೆ. ಈವರೆಗೆ ಸುಮಾರು 3 ಲಕ್ಷ ರೂ. ಕುಡಿಯುವ ನೀರಿಗೆ ವೆಚ್ಚ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ತಾತ್ಕಲಿವಾಗಿ ಸಮಸ್ಯೆ ಇಲ್ಲ: ಆಶ್ಲೇಷಾ ಮಳೆ ತಾಲೂ ಕಿಗೆ ಸುರಿಯದೆ ಇದ್ದರೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈಗ ಸೋನೆ ಮಳೆಯಿಂದ ಸರ್ಕಾರಿ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಆದರೂ ಈ ಸಮಸ್ಯೆ ತಾತ್ಕಲಿಕವಾಗಿ ಮಾತ್ರ ನಿವಾರಣೆಯಾಗಿದೆ. ಇನ್ನು ಮಳೆ ನಿಂತರೆ ಪುನಃ ಕುಡಿಯುವ ನೀರಿಗೆ ಜನರು ಯಾತನೆ ಪಡಬೇಕಾಗುತ್ತದೆ.

ಮೇವು ಬ್ಯಾಂಕ್‌: ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಶ್ರವಣಬೆಳಗೊಳ ಹೋಬಳಿ ಸುಂಡಹಳ್ಳಿ ಗ್ರಾಮದಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ. ಇನ್ನು ಉಳಿದ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್‌ ತೆರೆಯುವ ವಿಶ್ವಾಸವನ್ನು ತಾಲೂಕು ಆಡಳಿತ ರೈತರಿಗೆ ನೀಡಿತ್ತು. ಆದರೆ ಈಗ ವರುಣನ ಕೃಪೆಯಿಂದ ಹೊಲ ಗದ್ದೆಗಳಲ್ಲಿ ಹಸಿರು ಹುಲ್ಲು ಚಿಗುರುತ್ತಿದ್ದು ತಕ್ಕ ಮಟ್ಟಿಗೆ ಮೇವಿನ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆಯಿದ್ದು ತಾಲೂಕು ಆಡಳಿತಕ್ಕೆ ನೆಮ್ಮದಿ ತಂದಿದೆ.

•ನೀರಿನ ಸಮಸ್ಯೆ ಇದ್ದರೂ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ.

•ನಾಲೆ ಮೂಲಕ ಕೆರೆ ಕಟ್ಟೆ ತುಂಬಿಸಲು ಜಿಲ್ಲಾಡಳಿತ ಮುಂದಾಗದೆ ಇರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ.

•ಆಶ್ಲೇಷಾ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆ; ಅಧಿಕಾರಿಗಳ ಮಾಹಿತಿ

ಮಳೆ ಬಿದ್ದರೂ ಕೆರೆ ಕಟ್ಟೆಗೆ ನೀರು ಬಂದಿಲ್ಲ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆ ಆಗುತ್ತಿದೆ. ಆದರೆ ತಾಲೂಕಿನಲ್ಲಿ ಮಾತ್ರ ಕೆರೆ ಕಟ್ಟೆಗೆ ನೀರು ಬರುವ ಮಳೆ ಆಗುತ್ತಿಲ್ಲ. ಕೃಷಿ ಚಟುವಟಿಕೆಗೆ ಅಗತ್ಯ ಇರುವಷ್ಟು ಮಳೆ ಸುರಿಯುತ್ತಿದೆ. ಇನ್ನು ಕೆಲ ಭಾಗದಲ್ಲಿ ತೆಂಗಿನ ಮರಗಳು ಒಣಗುತ್ತಿದ್ದು ಅವುಗಳಿಗೆ ಈಗ ತಕ್ಕ ಮಟ್ಟಿಗೆ ನೀರು ದೊರೆಯುತ್ತಿದೆ. ಇನ್ನು ಕೃಷಿ ಚಟುವಟಿಕೆ ಮಾಡಲು ಕೃಷಿ ಭೂಮಿ ತೇವವಾಗಿವೆ. ಬಿಸಿಲಿನ ತಾಪಕ್ಕೆ ಬೆಂಗಾಡಾಗುತ್ತಿದ್ದ ಅರೆ ಮಲೆನಾಡಿಗೆ ಆಶ್ಲೇಷಾ ಮಳೆ ಆಗಮನದಿಂದ ರೈತರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಆಗಿದೆ.

 

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.