ಬಾಹುಬಲಿ ಭಾರತೀಯ ಕಲೆ, ವಾಸ್ತುಶಿಲ್ಪದ ಹಿರಿಮೆಯ ಪ್ರತೀಕ

Team Udayavani, Feb 8, 2018, 6:00 AM IST

180107kpn94.jpg

ಹಾಸನ: ತ್ಯಾಗದ ಸಂಕೇತವಾಗಿರುವ ಬಾಹುಬಲಿ ವಿಶ್ವದ ಕಲ್ಯಾಣಕ್ಕೆ ನೀಡಿರುವ ಸಂದೇಶದಿಂದಾಗಿ ಶ್ರವಣಬೆಳಗೊಳ ಆಕರ್ಷಣೀಯ ಕೇಂದ್ರವಷ್ಟೇ ಅಲ್ಲ, ಭಾರತೀಯ ಸಂಸ್ಕೃತಿಯ ಕೇಂದ್ರವಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಭಿಪ್ರಾಯಪಟ್ಟಿದ್ದಾರೆ.

ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಬುಧವಾರ ನಡೆದ ಬಾಹುಬಲಿಮೂರ್ತಿಯ 88ನೇ ಮಹಾಮಸ್ತಕಾಭಿಷೇಕ ಉದ್ಘಾಟಿಸಿ ಅವರು ಮಾತನಾಡಿದರು. ಬಾಹುಬಲಿ ಸ್ವಾಮಿಯ ಅಹಿಂಸೆ, ಶಾಂತಿ, ಮೈತ್ರಿ, ತ್ಯಾಗದ ಸಂದೇಶಗಳು ಇಂದು ವಿಶ್ವಶಾಂತಿಗೆ ಪ್ರೇರಣೆಯಾಗಿವೆ. ಬಾಹುಬಲಿ ಮೂರ್ತಿಯ ದರ್ಶನದಿಂದ ಪ್ರಸನ್ನಭಾವದ ಅನುಭವವಾಗುತ್ತದೆ. ಶಾಂತ ಮೂರ್ತಿಯ ದರ್ಶನವೇ ಪವಿತ್ರ ಕಾರ್ಯ ಮಾಡಿದ ಸಂತೃಪ್ತಿ ನೀಡುತ್ತದೆ ಎಂದರು.

ಮಧ್ಯ ಪ್ರದೇಶದ ಉಜ್ಜಯಿನಿಯಿಂದ ಬಂದ ಭದ್ರಬಾಹು, ಬಿಹಾರದ ಪಾಟ್ನಾದಿಂದ ಬಂದ ಸಾಮ್ರಾಟ ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳದ ಚಂದ್ರಗಿರಿಯಲ್ಲಿ ದೇಹತ್ಯಾಗ ಮಾಡಿದ್ದಾರೆ. ಅಹಿಂಸೆ, ಶಾಂತಿ, ತ್ಯಾಗದ ಪ್ರತೀಕವಾಗಿರುವ ಅಂತಹ ಆದರ್ಶ ಪುರುಷರ ಸಂದೇಶ ಪ್ರತಿಪಾದಿಸುವ ಜೈನ ಧರ್ಮ ದೇಶವನ್ನು ಒಂದುಗೂಡಿಸಿ ಶಾಂತಿಯ ಬೀಡು ನಿರ್ಮಿಸಿದೆ ಎಂದು ಹೇಳಿದರು.

ದರ್ಶನದಿಂದ ಸಂಸ್ಕಾರ ನೆಲೆಸುತ್ತದೆ:
ರಾಜ್ಯಪಾಲ ವಜುಭಾಯಿವಾಲಾ ಅವರು ಮಾತನಾಡಿ, ಬಾಹುಬಲಿ ಮೂರ್ತಿಯ ದರ್ಶನ ಪಡೆದು ತೆರಳಿದರೆ ಮುಂದಿನ 12 ವರ್ಷಗಳವರೆಗೆ ನಮ್ಮಲ್ಲಿ ಸಂಸ್ಕಾರ ನೆಲಸುತ್ತದೆ. ಬಾಹುಬಲಿ ಮೂರ್ತಿಯ ಸಂದೇಶವೇ ಸ್ವತ್ಛ ಜೀವನದ, ಚೈತನ್ಯದ ಸಂಕೇತ. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ನೀಡುವ ಜೈನ ಮುನಿಗಣದ ಉಪದೇಶಗಳನ್ನು ಕೇಳಿ, ಅದರಂತೆ ನಡೆದುಕೊಂಡರೆ ಬಾಹುಬಲಿ ಸ್ವಾಮಿಯ ಭಕ್ತರಾಗುವುದರಲ್ಲಿ ಸಂದೇಹವಿಲ್ಲ. ಬಾಹುಬಲಿ ಸ್ವಾಮಿಯ ದರ್ಶನ ಮಾಡುವುದರ ಜೊತೆಗೆ ಅವರ ಸಂದೇಶಗಳನ್ನೂ ಪಾಲಿಸುವ ಮೂಲಕ ಪುನೀತರಾಗಬೇಕು ಎಂದು ಕರೆ ನೀಡಿದರು. ಧರ್ಮ ಎಂದರೆ ಪೂಜೆ, ಪುನಸ್ಕಾರ, ಹೋಮ, ಹವನ ಮಾಡುವುದಷ್ಟೇ ಅಲ್ಲ. ಅದು ಸಂಸ್ಕಾರದಿಂದ ಬರುವಂತದ್ದುಎಂದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಷ್ಟ್ರಪತಿ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕನ್ನಡದಲ್ಲಿ ಭಾಷಣ ಆರಂಭಿಸಿ ಮಹಾಮಸ್ತಕಾಭಿಷೇಕ ಮಹೋತ್ಸವದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಸಭಿಕರಲ್ಲಿ ಪುಳಕವನ್ನುಂಟು ಮಾಡಿದರು.

ಸಹೋದರ, ಸಹೋದರಿಯರೇ ನಿಮಗೆಲ್ಲಾ ಸಪ್ರೇಮ ನಮಸ್ಕಾರಗಳು ಎಂದು ಕನ್ನಡಲ್ಲಿ ಭಾಷಣ ಆರಂಭಿಸಿ, ನಂತರ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ತಾವು ರಾಜ್ಯಕ್ಕೆ 3ನೇ ಬಾರಿ ಆಗಮಿಸಿರುವುದನ್ನು ರಾಷ್ಟ್ರಪತಿಯರು ಉಲ್ಲೇಖೀಸಿದರು.

ಸ್ವಾಗತ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು, ರಾಷ್ಟ್ರದ ಪ್ರಥಮ ಮಹಿಳೆ ಸವಿತಾ ಕೋವಿಂದ್‌ ಅವರ ಹೆಸರನ್ನು ಸರಿತಾ ಎಂದು ತಪ್ಪಾಗಿ ಉಚ್ಚರಿಸಿ ಮುಜುಗರಕೊÛಳಗಾದರು. 

ಬೆಳಗ್ಗೆ 10.45ಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ವೇದಿಕೆಗೆ ಆಗಮಿಸಿದರು. ಕಾರ್ಯಕ್ರಮವನ್ನು 11 ಗಂಟೆಗೆ ರಾಷ್ಟ್ರಪತಿಯವರು ಉದ್ಘಾಟಿಸಿದರು. ಶಿಲ್ಪಕಲಾ ವೈಭವದ ಹಿನ್ನಲೆಯ ಆಕರ್ಷಕ ವೇದಿಕೆಯ ಪರದೆಯಲ್ಲಿ ಎಲ್‌ಇಡಿ ಪರದೆಯ ಮೇಲೆ ಕಾರ್ಯಕ್ರಮದ ಸ್ಪಷ್ಟ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇದು ಕಾರ್ಯಕ್ರಮಕ್ಕೆ ಮೆರಗು ನೀಡಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.