ಕೊಳಚೆ ನೀರು ನದಿ ಸೇರದಂತೆ ಕ್ರಿಯಾ ಯೋಜನೆ ರೂಪಿಸಿ

Team Udayavani, Jul 3, 2019, 3:00 AM IST

ಹಾಸನ: ನದಿಗಳಿಗೆ ಕಲುಷಿತ ನೀರು ಸೇರ್ಪಡೆಯಿಂದ ಯಗಚಿ ಜಲಾಶಯ ಮಲಿನಗೊಂಡಿದ್ದು ಅದನ್ನು ಸರಿಪಡಿಸಲು ಶೀಘ್ರವಾಗಿ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ನಗರ ನೀರು ಸರಬರಾಜು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಗೆ ಜಿಲ್ಲಾಧಿಕಾರಿ ಅಕ್ರಂ ಷಾಷ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಸರ ಸಂರಕ್ಷಣಾ ಟಾಸ್ಕ್ ಪೋರ್ಸ್‌ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಯಗಚಿ ನದಿಗೆ ವಿವಿಧ ಮೂಲಗಳಿಂದ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ಅಗತ್ಯ ಕ್ರಮವ‌ನ್ನು ಹಾಸನ ಮತ್ತು ಬೇಲೂರು ನಗರ ಸ್ಥಳಿಯ ಸಂಸ್ಥೆಗಳು ಕೈಗೊಳ್ಳಬೇಕು ಎಂದು ತಿಳಿಸಿದರು.

ಕೊಳಚೆ ನೀರು ಶುದ್ಧೀಕರಿಸಿ: ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಯಗಚಿ ನದಿಗೆ ಕೊಳಚೆ ನೀರು ಸೇರ್ಪಡೆಗೊಳ್ಳುತ್ತಿರುವ ಎಲ್ಲಾ ಪ್ರದೇಶಗಳು ಮತ್ತು ಅದರ ಮೂಲಗಳನ್ನು ಪತ್ತೆ ಮಾಡಿ ಅವುಗಳನ್ನು ಶುದ್ದಿಕರಿಸುವ ವ್ಯವಸ್ಥೆ ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳ ಕೊಳಚೆ ನೀರು ಶುದ್ಧೀಕರಣ ಘಟಕವ‌ನ್ನು ಮುಂದಿನ 15 ರಿಂದ 20 ವರ್ಷಗಳ ಜನ ಸಂಖ್ಯೆ ಬೆಳೆವಣಿಗೆಯನ್ನ ಗುರುತಿಸಿ ಮೇಲ್ದಜೇìಗೆ ಎರಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಒಳಚರಂಡಿ ವ್ಯವಸ್ಥೆ ಅಗತ್ಯ: ಸಭೆಯಲ್ಲಿ ಹಾಜರಿದ್ದ ನಗರಸಭಾ ಆಯುಕ್ತ ಪರಮೇಶ್‌ ಮಾತನಾಡಿ, ನಗರಕ್ಕೆ ಹೊಂದಿಕೊಂಡಿರುವ ವಿದ್ಯಾನಗರ, ಜಯನಗರ ಹಾಗೂ ಕೆಲವು ಪ್ರದೇಶಗಳಿಂದ ಕೊಳಚೆ ನೀರು ಹುಣಸಿನಕೆರೆ ಸೇರಿದಂತೆ ವಿವಿಧ ಕೆರೆಯ ಒಡಲು ಸೇರುತ್ತಿದೆ. ಕೆರೆಗಳು ತುಂಬಿದ ಮೇಲೆ ಹೆಚ್ಚುವರಿ ನೀರು ಕೆರೆ ಕೋಡಿ ಮೂಲಕ ಯಗಚಿ ನದಿ ಸೇರುತ್ತಿದೆ. ಈ ಎಲ್ಲಾ ಪ್ರದೇಶಗಳನ್ನು ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಆಗಬೇಕಿದೆ. ಅದಕ್ಕೆ ಪೂರಕವಾಗಿ ಶುದ್ಧೀಕರಣ ಘಟಕಗಳು ಸ್ಥಾಪನೆಯಾಗಬೇಕು ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಪೈಪ್‌ಲೈನ್‌ ಸರಿಪಡಿಸಿ: ನಗರದ ವಿದ್ಯಾನಗರ, ಜಯನಗರ ಹಾಗೂ ಕೆಲವು ಕೊಳಚೆ ಪ್ರದೇಶಗಳಲ್ಲಿನ ಮನೆಯ ಶೌಚಗೃಹದ ಕೊಳಚೆ ನೀರಿನ ಪೈಪುಗಳನ್ನು ಒಳ ಚರಂಡಿಗೆ ಸಂರ್ಪಕಿಸಬೇಕಿದೆ. ಹಲವು ಕಡೆಗಳಲ್ಲಿ ಪೈಪ್‌ ಲೈನ್‌ಗಳು ಹಾಳಾಗಿ ಕಲುಷಿತ ನೀರು ಸೋರಿಕೆಯಾಗುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.

ಹಾಸನ ನಗರದ ಕೊಳಚೆ ನೀರು ಶುದ್ಧೀಕರಣಕ್ಕೆ ಕೇವಲ 10 ಎಂಎಡಿ ಸಾಮಥ್ಯದ ಘಟಕ ಇದೆ, ಅಮೃತ ಯೋಜನೆ ಕೂಡ ಅನುಷ್ಠಾನವಾಗುತ್ತಿರುವುದು ಹಾಗೂ ನಗರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು 40 ಎಂಎಲ್‌ಡಿ ಸಾಮರ್ಥ್ಯದ ಘಟಕ ಸ್ಥಾಪಿಸಬೇಕಾಗಿದ್ದೆ ಅದಕ್ಕಾಗಿ ಕ್ರಮ ವಸಲಾಗುವುದು ಎಂದರು.

ನಂತರ ಮಾತನಾಡಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಜಗದೀಶ್‌, ಬೇಲೂರು ಪಟ್ಟಣದ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ನಾಲ್ಕು ಕಲುಪಿತ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದ್ದು ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಹಾಸನ ಜಿಲ್ಲೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ಪಡೆದರು. ಉಪವಿಭಾಗಾಧಿಕಾರಿ ಡಾ. ಎಚ್‌.ಎಲ್‌.ನಾಗರಾಜು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ