ಕಾಲುಜಾರಿ ನಾಲೆಗೆ ಬಿದ್ದು ವಿದ್ಯಾರ್ಥಿ ಸಾವು
Team Udayavani, Apr 3, 2021, 6:23 PM IST
ಹೊಳೆನರಸೀಪುರ: ತಾಲೂಕಿನ ತಟ್ಟೆಕರೆ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2ನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಪೃಥ್ವೀಶ್ (16) ನಾಲೆಯ ಲ್ಲಿ ಸ್ನಾನಕ್ಕೆ ತೆರಳಿದಾಗ ಕಾಲುಜಾರಿ ಬಿದ್ದು ಸಾವಿಗೀಡಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಪೃಥ್ವೀಶ್ ಮೂಲತಃ ರಾಮನಗರದ ಚನ್ನಪಟ್ಟಣ ಗ್ರಾಮದವನಾಗಿದ್ದಾನೆ. ಕಳೆದ ಎರಡು ದಿನಗಳಿಂದ ಪಾಲಿಟೆಕ್ನಿಕ್ ಕಾಲೇಜಿನ ವಸತಿಗೃಹದಲ್ಲಿ ನೀರು ಇಲ್ಲದಿರುವ ಕಾರಣ ಶುಕ್ರವಾರ ತನ್ನ ಮೂವರು ಸ್ನೇಹಿತರೊಡನೆ ಸಮೀಪದ ನಾಲೆಗೆ ಸ್ನಾನಕ್ಕೆ ತೆರಳಿದ್ದಾನೆ. ಆಗ ಕಾಲುಜಾರಿ ಬಿದ್ದು, ಮೃತಪಟ್ಟಿದ್ದಾನೆ.
ಸ್ನೇಹಿತರು ಆತನನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ. ಅದು ವಿಫಲವಾಗಿದ್ದು ವಾಪಸ್ ಕಾಲೇಜಿಗೆ ಬಂದು ಮಾಹಿತಿ ಮುಟ್ಟಿಸಿದ್ದಾರೆ. ಕಾಲೇಜಿನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆತನ ಶವವನ್ನು ಹೊರಕ್ಕೆ ಎಳೆದಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಆತನಕ ಕುಟುಂಬಕ್ಕೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಷ್ಟಗಿ : ತಡೆಗೋಡೆಗೆ ಢಿಕ್ಕಿ ಹೊಡೆದ ಬೈಕ್ : ತಂದೆ ಮಗಳು ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ
ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ : ಹಳ್ಳದಲ್ಲಿ ಕೊಚ್ಚಿ ಹೋದ 7 ವರ್ಷದ ಬಾಲಕಿ
ಗಂಗಾವತಿ : ಕುಮ್ಮಟ ದುರ್ಗದ ಸುತ್ತ ಗಣಿಗಾರಿಕೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ
ಅಧಿಕಾರಿಗಳ ಅಂಧಾ ದರ್ಬಾರ್: ಪಾಂಡವಪುರ ತಾಲೂಕು ಕಚೇರಿ ದುರ್ಬಳಕೆ ಆರೋಪ
ಅಂಕೋಲಾ: ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಗುದ್ದಿದ ಕಾರು; ಓರ್ವ ಸಾವು