Udayavni Special

ಜಾಕ್‌ವೆಲ್‌ ಮೂಲಕ ನೀರು ಹರಿಸುವ ಕಾಮಗಾರಿ ವಿಳಂಬ


Team Udayavani, Jun 9, 2021, 12:00 PM IST

ಜಾಕ್‌ವೆಲ್‌ ಮೂಲಕ ನೀರು ಹರಿಸುವ ಕಾಮಗಾರಿ ವಿಳಂಬ

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಯ ರಂಗೇನಹಳ್ಳಿ ಏತ ನೀರಾವರಿಯಿಂದ 22 ಕೆರೆಗಳಿಗೆ ನೀರು ತುಂಬಿಸಿ ಈ ಭಾಗದ ರೈತರ ಕೃಷಿಗೆ ಸಹಕಾರಿ ಆಗಲೆಂದು ಬೇವಿನಹಳ್ಳಿ ಸಮೀಪ ಹೇಮಾವತಿ ನದಿಯಿಂದ ಜಾಕ್‌ವೆಲ್‌ ಮೂಲಕ ನೀರು ಹರಿಸುವ ಕಾಮಗಾರಿ ವಿಳಂಬವಾಗಿದೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ನುಡಿದರು.

ರಂಗೇನಹಳ್ಳಿ ಏತ ನೀರಾವರಿ ಜಾಕ್‌ವೆಲ್‌ ಬೇವಿನಹಳ್ಳಿ ಸಮೀಪ ಹೇಮಾವತಿ ನದಿ ದಂಡೆಯಲ್ಲಿ ಅರಕಲಗೂಡು ಶಾಸಕ ಎ.ಟಿ.ರಾಮ ಸ್ವಾಮಿ ಅವರು ನೀರಾವರಿ ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು.

ಹಿನ್ನಡೆ: ತಾಲೂಕಿನ ರಂಗೇನಹಳ್ಳಿ ಏತ ನೀರಾವರಿಗೆ ರಾಜ್ಯ ಸರ್ಕಾರ 2017 ರಲ್ಲೇ 46.50 ಕೋಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿತು. ಈ ಯೋಜನೆಯಿಂದ ಹೊಳೆನರಸೀಪುರ ತಾಲೂಕಿನ 12 ಗ್ರಾಮಗಳು ಹಾಗೂ ಕೃಷ್ಣರಾಜಪೇಟೆ ತಾಲೂಕಿನ 2 ಗ್ರಾಮಗಳಿಗೆ ಶಾಶ್ವತ ನೀರೊದಗಿಸುವ ಕಾಮಗಾರಿಯಾಗಿದೆ. ಆದರೆ ಈ ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದರೂ ಸಹ ಭಾಗಶಃ ಕಾಮಗಾರಿ ಗಳು ನಡೆದಿವೆಯೇ ಹೊರೆತು ಪೂರ್ಣಗೊಳ್ಳುವಲ್ಲಿ ಹಿನ್ನಡೆಯಾಗಿದೆ.

ಪಂಪ್‌ಹೌಸ್‌ ಆಗಿಯೇ ಇಲ್ಲ: ಮುಖ್ಯವಾಗಿ ಹೇಮಾವತಿ ನದಿಯಿಂದ ನೀರೆತ್ತಿ ಜಾಕ್‌ವೆಲ್‌ ಕಾಮಗಾರಿ ಮುಗಿದಿಲ್ಲ, ಆದರೆ, ರಂಗೇನಹಳ್ಳಿ ಏತ ನೀರಾವರಿ ಕಾಮಗಾರಿ 27.30 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಇಲಾಖೆ ಮಾಹಿತಿ ತಮ್ಮನ್ನು ದಿಗ್ಮೂಢಗೊಳಿಸಿದೆ. ಕಾಮಗಾರಿ ಕೇವಲ 10 ರಷ್ಟು ಮಾತ್ರ ಆಗಿದೆ. ಈ ಏತ ನೀರಾವರಿ ಕಾಮಗಾರಿಗೆ ಅವಶ್ಯವಾಗಿ ಬೇಕಾಗಿರುವ ಪಂಪ್‌ಹೌಸ್‌ ಇನ್ನೂ ಆಗಿಯೇ ಇಲ್ಲ. ಗುತ್ತಿಗೆದಾರ ಕಳೆದೆರಡು ವರ್ಷಗಳಿಂದ ಕೊರೊನಾ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿರುವುದಾಗಿ ನುಡಿದರು.

ಇಲಾಖೆ ನೀಡಿರುವ ಆರ್ಥಿಕ ಪ್ರಗತಿಯಲ್ಲಿ ಈಗಾಗಲೇ 27.30 ಕೋಟಿಯಷ್ಟು ಪ್ರಗತಿ ಕಂಡಿದೆ ಎಂದು ದಾಖಲಿಸಿದೆ. ಆದರೆ ಈ ಏತ ನೀರಾವರಿಗೆ ಬೇಕಾಗಿರುವ ಕೊಳವೆ ಮತ್ತಿತರೆ ಸಾಮಗ್ರಿಗಳನ್ನು ಕೊಂಡು ತಂದು ಈಗಾಗಲೇ ವರ್ಷಗಳೇ ಕಳೆದುಹೋಗಿದೆ. ಇದರಿಂದ ಆಗುವ ಪ್ರಯೋಜನವಾದರೂ ಏನು ಎಂಬುದನ್ನು ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ ಎಂದರು.

ಏತನೀರಾವರಿ ಜಾಕ್‌ವೆಲ್‌ ಕಾಮಗಾರಿ ಸ್ಥಳಕ್ಕೆ ಶಾಸಕರೊಂದಿಗೆ ಹೇಮಾವತಿ ಜಲಾಶಯದ ಎಕ್ಸಿಕ್ಯು ಟಿವ್‌ ಇಂಜಿನಿಯರ್‌ ಜಯರಾಂ, ದೊಡ್ಡಕಾಡ ನೂರು ಕಾವೇರಿ ನೀರಾವರಿ ನಿಗಮದ ಎಇಇ ಮಹೇಂದ್ರ, ಹಳ್ಳಿಮೈಸೂರು ಕಾವೇರಿ ನೀರಾವರಿ ನಿಗಮದ ಎಇಇ ನವೀನ್‌ಕುಮಾರ್‌, ತಾಪಂ ಇಒ ಕೆ.ಯೋಗೇಶ್‌, ತಹಶೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ, ಜೆಡಿಎಸ್‌ ಮುಖಂಡ ಹಾಗೂ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮುತ್ತಿಗೆ ರಾಜೇಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಎಸ್‌ .ಪುಟ್ಟಸೋಮಪ್ಪ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

ಟಾಪ್ ನ್ಯೂಸ್

ED

ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚನೆ : ಮಹಾರಾಷ್ಟ್ರದ ಮಾಜಿ ಶಾಸಕ ಬಂಧನ

16-14

ಹೆಚ್ಚಾಯ್ತು ಬೇಡಿಕೆ; ಆಗ್ತಿಲ್ಲ ಪೂರೈಕೆ

986

ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

statue

ಕುಡುಕನಿಂದ ಗಾಂಧೀಜಿ ಪ್ರತಿಮೆ ಭಗ್ನ : ಸ್ಥಳಕ್ಕೆ ಡಿಎಸ್‌ಪಿ, ತಹಶೀಲ್ದಾರ್ ಭೇಟಿ, ಪರಿಶೀಲನೆ

730-doctors-died-of-covid-19-in-second-wave-ima-data

ಕೋವಿಡ್ ಎರಡನೇ ಅಲೆಯಿಂದಾಗಿ ದೇಶದಾದ್ಯಂತ 730 ವೈದ್ಯರನ್ನು ಕಳೆದುಕೊಂಡಿದ್ದೇವೆ : ಐಎಂಎ

ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್

ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid news

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ

covid news

120 ಕ್ಕೂ ಹೆಚ್ಚು ಜನರಿಗೆ ಲಸಿಕೆ

covid news

ಕೊರೊನಾದಿಂದ ಮೃತರ ಕುಟುಂಬಕ್ಕೆ ನೆರವು

covid news

ಕೊರೊನಾದಿಂದ ಮೃತರ ಕುಟುಂಬಕ್ಕೆ ನೆರವು

incident held at hasana

ಭಾರೀ ಮಳೆ: ಮನೆ ಮೇಲೆ ಮರ ಕುಸಿತ

MUST WATCH

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

16-22

ಹುಲಿಕಲ್‌ ಘಾಟ್‌ ರಸ್ತೆ ಮಾರ್ಗಕ್ಕೆ ಚಾಲನೆ

Shivamogga

ಮಲೆನಾಡಲ್ಲೂ ವಿಜಯ ಸಂಚಾರ…

16-20

ನ್ಯಾನೋ ಯೂರಿಯಾ ಪರಿಸರ ಸ್ನೇಹಿ

16-19

ಉತ್ತಮ ಜನಸೇವಕನಿಂದ ಸಮಗ್ರ ಅಭಿವೃದ್ಧಿ

16-18

ಒತ್ತುವರಿ ತೆರವಿಗೆ ಶಾಸಕ ತಿಪ್ಪಾರೆಡ್ಡಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.