5.65 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ

Team Udayavani, Sep 10, 2019, 12:16 PM IST

ಹಾವೇರಿ: ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗದ ಶಾಸನಬದ್ಧ ಅಭಿವೃದ್ಧಿ ಅನುದಾನದಲ್ಲಿ 2019-20ನೇ ಸಾಲಿನ 5.65 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

176 ಸಾಮಾನ್ಯ ಕಾಮಗಾರಿಗಳಿಗೆ 387.85 ಲಕ್ಷ ರೂ., 49 ಎಸ್‌ಸಿಪಿ ಕಾಮಗಾರಿಗಳಿಗೆ 97.20 ಲಕ್ಷ ರೂ., 32 ಟಿಎಸ್‌ಪಿ ಕಾಮಗಾರಿಗಳಿಗೆ 39.55 ಲಕ್ಷ ರೂ., 7 ವಿಕಲಚೇತನರ ಅಭಿವೃದ್ಧಿ ಕಾಮಗಾರಿಗಳಿಗೆ 33.90 ಲಕ್ಷ ರೂ. ಹಾಗೂ 3 ಮುಂದುವರೆದ ಕಾಮಗಾರಿಗಳಿಗೆ 6.50 ಲಕ್ಷ ರೂ. ಸೇರಿದಂತೆ 267 ಕಾಮಗಾರಿಗಳಿಗೆ 5.65 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಪಂಚಾಯತ್‌ ರಾಜ್‌ ಎಂಜಿನಿಯರ್‌ ವಿಭಾಗದಿಂದ ರೂಪಿಸಲಾದ ಕ್ರಿಯಾಯೋಜನೆಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಬ್ಯಾಡಗಿ ತಾಲೂಕಿನ ಅಂಗರಗಟ್ಟಿಗೆ 2.47 ಲಕ್ಷ ರೂ., ಮೋಟೆಬೆನ್ನೂರಿಗೆ 2 ಲಕ್ಷ ರೂ., ಗುಮ್ಮನಹಳ್ಳಿಗೆ 1 ಲಕ್ಷ ರೂ., ಛತ್ರ 2ಲಕ್ಷ ರೂ., ಕಲ್ಲೇದೇವರ 2ಲಕ್ಷ ರೂ., ತಿಪಲಾಪೂರ 1.50ಲಕ್ಷ ರೂ., ಕೊಲ್ಲಾಪುರ 1.50 ಲಕ್ಷ ರೂ., ಬನ್ನಿಹಟ್ಟಿ 1 ಲಕ್ಷ ರೂ., ಲಕಮಾಜಿಕೊಪ್ಪ 1.50 ಲಕ್ಷ ರೂ., ಕುಮ್ಮೂರ 3ಲಕ್ಷ ರೂ., ಚಿಕ್ಕಬಾಸೂರು 2.50ಲಕ್ಷ ರೂ., ಹಾನಗಲ್ಲಿನ ಗಿರಿಸಿನಕೊಪ್ಪ 1.97ಲಕ್ಷ ರೂ., ಕ್ಯಾಸನೂರ 2.27 ಲಕ್ಷ ರೂ., ಹನುಮನಕೊಪ್ಪ 2.47 ಲಕ್ಷ ರೂ., ಕೂಸನೂರು 2 ಲಕ್ಷ ರೂ., ಮಲಗುಂದ 2.970ಲಕ್ಷ ರೂ., ಅಕ್ಕಿಆಲೂರು 2.970 ಲಕ್ಷ ರೂ., ಹಾವೇರಿ ತಾಲೂಕಿನ ಹೊಸರಿತ್ತಿ 2 ಲಕ್ಷ ರೂ., ಚೆನ್ನೂರು 3.66 ಲಕ್ಷ ರೂ., ಗೂಡೂರ 1ಲಕ್ಷ ರೂ., ಕೊರಡೂರ 2 ಲಕ್ಷ ರೂ., ಹೊಸಮೇಲ್ಮುರಿ 1ಲಕ್ಷ ರೂ., ಕೆರೆಕೊಪ್ಪ 2ಲಕ್ಷ ರೂ., ಹಳೇಮೇಲ್ಮೂರಿ 91 ಸಾವಿರ, ಭೂವೀರಾಪೂರ 5ಲಕ್ಷ ರೂ., ಕನವಳ್ಳಿ 3.56ಲಕ್ಷ ರೂ., ದೇವಗಿರಿ 4ಲಕ್ಷ ರೂ., ಕೋಳ್ಳೋರು 3.48ಲಕ್ಷ ರೂ., ಹಿರೇಲಿಂಗದಳ್ಳಿ 3ಲಕ್ಷ ರೂ., ದಿಡಗೂರು 1.91ಲಕ್ಷ ರೂ., ಹೀರೆಕೆರೂರು ರಾಣೆಬೆನ್ನೂರು ಸೇರಿದಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಈ ವರ್ಷ ಅನುದಾನ ಒದಗಿಸಲಾಗಿದೆ.

ರಸ್ತೆ ಅಭಿವೃದ್ಧಿ: ಬ್ಯಾಡಗಿಯ ಹಳೇ ಶಿಡೇನೂರ-ಕೆರವಡಿ ಕ್ರಾಸ್‌ ರಸ್ತೆಗೆ 251 ಲಕ್ಷ ರೂ., ಕದರಮಂಡಲಗಿ-ಬೇಳಕೆರಿ ಕ್ರಾಸ್‌ ರಸ್ತೆ 146 ಲಕ್ಷ ರೂ., ಬಿದರಕಟ್ಟಿ 2 ಲಕ್ಷ ರೂ., ಮಲ್ಲೂರು ಗ್ರಾಮ 2.99ಲಕ್ಷ ರೂ., ಕಳಗೊಂಡದ ಎಸ್‌.ಟಿ ಕಾಲೋನಿ 1.16 ಲಕ್ಷ ರೂ., ಹಾನಗಲ್ನ ಹುಲಗಿನಹಳ್ಳಿಗೆ 1ಲಕ್ಷ ರೂ., ಜಂಗಿನಕೊಪ್ಪ 1995ಲಕ್ಷ ರೂ., ಉಪ್ಪಣಸಿ 975ಲಕ್ಷ ರೂ., ಡೊಳ್ಳೇಶ್ವರ 275ಲಕ್ಷ ರೂ., ಹನಕನಹಳ್ಳಿ 3 ಲಕ್ಷ ರೂ., ಹಾವೇರಿ ತಾಲೂಕಿನ ಬಸಾಪೂರ 3.05ಲಕ್ಷ ರೂ., ಕೊರಡೂರ 3.05ಲಕ್ಷ ರೂ., ಕನವಳ್ಳಿಯ ಎಸ್‌ಸಿ 3.06ಲಕ್ಷ ರೂ., ಬಸಾಪೂರ ಗ್ರಾಮದ ಎಸ್‌ಟಿ 2.65 ಲಕ್ಷ ರೂ., ಹಿರೇಕೆರೂರಿನ ಚಿನ್ನಮುಳಗುಂದ ಎಸ್‌ಸಿ ಓಣಿಗೆ 2.992 ಲಕ್ಷ ರೂ., ನಿಟ್ಟೂರು 1.164 ಲಕ್ಷ ರೂ., ರಾಣಿಬೆನ್ನೂರಿನ ಬಿಲ್ಲಹಳ್ಳಿ 2.738 ಲಕ್ಷ ರೂ., ಹಿರೇಬಿದರಿ 2.6ಲಕ್ಷ ರೂ., ಮೆಣಸಿನಹಾಳ 2.69ಲಕ್ಷ ರೂ., ಹನುಮಾಪುರ ಎಸ್‌ಟಿ 1.16ಲಕ್ಷ ರೂ., ನಿಟ್ಟೂರಿನ ಎಸ್‌ಟಿ ಓಣಿಗೆ 1.16ಲಕ್ಷ ರೂ., ಕರೂರು ಎಸ್‌ಟಿ ಓಣಿಗೆ 1.16ಲಕ್ಷ ರೂ., ಕುದರಿಹಾಳ 1.32 ಎಸ್‌ಟಿ ಓಣಿಗೆ 1.16ಲಕ್ಷ ರೂ.,ಶಿಗ್ಗಾವಿ ಗುಡ್ಡದ ಚನ್ನಾಪೂರ 2.74 ಲಕ್ಷ ರೂ., ಸುರಪಗಟ್ಟಿ ಎಸ್‌ಸಿ ಕಾಲೋನಿಗೆ 1 ಲಕ್ಷ ರೂ. ಗಳ ಅನುದಾನ ಒದಗಿಸಲಾಗಿದೆ.

ಬೀದಿ ದೀಪ ಅಳವಡಿಕೆ: ಶಿಗ್ಗಾವಕಿ ತಾಲೂಕಿನ ಗುಡ್ಡದಚನ್ನಾಪೂರ 1 ಲಕ್ಷ ರೂ., ಲಕ್ಕಿಕೊಪ್ಪ 1ಲಕ್ಷ ರೂ., ಕಲ್ಯಾಣ 1ಲಕ್ಷ ರೂ., ಚಂದಾಪೂರ 1.50 ಲಕ್ಷ ರೂ., ಅಂದಲಗಿ 1.9675 ಲಕ್ಷ ರೂ., ಕೋಣನಕೇರಿ 2 ಲಕ್ಷ ರೂ., ಬಸವನಾಳ 1 ಲಕ್ಷ ರೂ., ಸುರಪಗುಟ್ಟಿ 1ಲಕ್ಷ ರೂ., ಮುಗಳಿ 1 ಲಕ್ಷ ರೂ., ಕಬನೂರು 1 ಲಕ್ಷ ರೂ., ಬನ್ನೂರು 1 ಲಕ್ಷ ರೂ., ಹಿರೇಬೆಂಡಿಗೇರಿ ಎಸ್‌.ಸಿ 1 ಲಕ್ಷ ರೂ., ತಿಮ್ಮಾಪೂರ 1 ಲಕ್ಷ ರೂ., ಹಿರೇಮಲ್ಲೂರು 1 ಲಕ್ಷ ರೂ., ಕುನ್ನೂರು 99 ಸಾವಿರ, ಮೂಕಬಸರಿಕಟ್ಟಿ 1 ಲಕ್ಷ ರೂ., ಮಲ್ಲನಾಯಕನಕೊಪ್ಪ 99 ಸಾವಿರ, ಬೆಳವಲಕೊಪ್ಪ 1 ಲಕ್ಷ ರೂ., ಬಸವನಾಳ ಜನತಾ -ಪ್ಲಾಟ್ 99 ಸಾವಿರ, ಹಿರೆಮಲ್ಲೂರು 1.1625 ಲಕ್ಷ ರೂ., ಅನುದಾನ ಒದಗಿಸಲಾಗಿದೆ.

ಸಮುದಾಯ ಭವನ ನಿರ್ಮಾಣದಲ್ಲಿ ಬ್ಯಾಡಗಿಯ ನೆಲ್ಲಕೊಪ್ಪ 2.52 ಲಕ್ಷ ರೂ., ಹಾನಗಲ್ಲಿನ ಸಾಂವಸಗಿ 4.80 ಲಕ್ಷ ರೂ., ಹಾವೇರಿ ತಾಲೂಕಿನ ಹಾವನೂರಿನ ಕುರುಬಗೇರಿ 4.95 ಲಕ್ಷ ರೂ., ಹಾಗೂ ಅಂಬಿಗೇರಿ 4.96 ಲಕ್ಷ ರೂ., ಕಬ್ಬೂರು 1.50 ಲಕ್ಷ ರೂ., ದೇವಗಿರಿ 2 ಲಕ್ಷ ರೂ., ಶಿಗ್ಗಾವಿ ಕ್ಯಾಲಕೊಂಡ 1.1625 ಲಕ್ಷ ರೂ., ಅನುದಾನ ಒದಗಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ