Udayavni Special

ಧರ್ಮಸ್ಥಳ ಸಂಸ್ಥೆಯಿಂದ ಬಡವರಿಗೆ ಪಡಿತರ ಕಿಟ್‌ ವಿತರಣೆ


Team Udayavani, Jun 20, 2021, 11:22 AM IST

ಧರ್ಮಸ್ಥಳ ಸಂಸ್ಥೆಯಿಂದ ಬಡವರಿಗೆ ಪಡಿತರ ಕಿಟ್‌ ವಿತರಣೆ

ಹಾನಗಲ್ಲ: ಧರ್ಮಸ್ಥಳ ಧರ್ಮಾ ಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕೋವಿಡ್‌ ಸೋಂಕಿತರಿಗೆ ವಾಹನ ಸೇವೆ, ಬಡವರಿಗೆ ಆಹಾರ ಸಾಮಗ್ರಿ ವಿತರಣೆ, ಆಸ್ಪತ್ರೆಗಳಿಗೆ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗುತ್ತಿದೆ. ಫಲಾನುಭವಿಗಳಿಗೆ ಇದನ್ನೆಲ್ಲ ಶ್ರೀಕ್ಷೇತ್ರದಿಂದ ಪ್ರಸಾದ ರೂಪದಲ್ಲಿನೀಡಲಾಗುತ್ತಿದೆ ಎಂದು ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ತಿಳಿಸಿದರು.

ಪಟ್ಟಣದ ವೇಂಕಟೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ ಕುಟುಂಬಗಳಿಗೆ ಪಡಿತರ ಸಾಮಗ್ರಿ ಕಿಟ್‌ ಹಾಗೂ ಪತ್ರಿಕಾ ವಿತರಕರು, ವರದಿಗಾರರಿಗೆ ಎನ್‌-95 ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿ ಮಾತನಾಡಿದರು.

800 ವರ್ಷಗಳ ಇತಿಹಾಸ ಹೊಂದಿರುವ ಶ್ರೀಕ್ಷೇತ್ರ, ಅಭಯ ದಾನ, ಅನ್ನದಾನ, ವಿದ್ಯಾದಾನ, ಔಷಧ ದಾನದ ಮೂಲಕ ಪರಂಪರೆಯಾಗಿ ನಿರಂತರ ಸೇವೆ ಸಲ್ಲಿಸುತ್ತ ಬಂದಿದೆ. ನೆರೆ, ಬರ, ಮಾರಕ ಕಾಯಿಲೆಗಳ ಸಂದರ್ಭದಲ್ಲಿ ಧರ್ಮಾಧಿಕಾರಿಗಳು ಅಭಯ ನೀಡುತ್ತ ಬಂದಿದ್ದಾರೆ. ಕಳೆದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ ಶ್ರೀಕ್ಷೇತ್ರದಿಂದ ಸರ್ಕಾರಕ್ಕೆ 25 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿತ್ತು. ಕೊರೊನಾ ಸಂದರ್ಭದಲ್ಲೂ6 ಲಕ್ಷ ಲೀಟರ್‌ ಆಮ್ಲಜನಕ, ವೆಂಟಿಲೇಟರ್‌, ಕಾನ್ಸಂಟ್ರೇಟರ್‌ ಮತ್ತು ಆಸ್ಪತ್ರೆಗಳಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಾಗಿದೆ ಎಂದರು.

ಮೈಸೂರು, ಬೆಳ್ತಂಗಡಿ, ರಜತಾದ್ರಿಯಲ್ಲಿಐಸೋಲೇಷನ್‌ ವಾರ್ಡ್‌ ತೆರೆಯಲಾಗಿದೆ. ನಮ್ಮ ವ್ಯಾಪ್ತಿಯ 40 ತಾಲೂಕುಗಳಲ್ಲಿ 10 ಸಾವಿರ ಆಹಾರ ಕಿಟ್‌ಗಳನ್ನು ಧರ್ಮಾಧಿಕಾರಿಗಳು ಒದಗಿಸಿದ್ದಾರೆ ಎಂದರು.

ಕೊರೊನಾ ಭಯದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸಿದರೆ ನಮ್ಮ ಹಾಗೂ ಬೇರೆಯವರ ಆರೋಗ್ಯ ಕಾಪಾಡಿದಂತಾಗುತ್ತದೆ. ಕೊರೊನಾದಿಂದ ಬಹಳಷ್ಟು ಜನ ನಮ್ಮವರನ್ನು ಕಳೆದುಕೊಂಡಿದ್ದೇವೆ. ಗಂಭೀರ ಸ್ಥಿತಿಗೆ ಬಂದಾಗಲೇ ಆಸ್ಪತ್ರೆಗೆ ತೆರಳುವ ಬದಲು ಆರಂಭದಲ್ಲೇ ಚಿಕಿತ್ಸೆ ಪಡೆದರೆ ಜೀವ ಉಳಿಸಿಕೊಳ್ಳಬಹುದು. ಕೊರೊನಾ ದೇವರು ಕೊಟ್ಟ ಕಾಯಿಲೆಯಲ್ಲ. ಮಾನವ ಸಮುದಾಯ ಮಾಡಿಕೊಂಡ ಸಮಸ್ಯೆ. ಇಂಥ ಇನ್ನೂ 24 ವೈರಸ್‌ಗಳು ಬರುವ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ. ಹಾಗಾಗಿ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧರಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಶ್ರೀಕ್ಷೇತ್ರದ ಧರ್ಮಾ ಧಿಕಾರಿಗಳು ಮಹಿಳೆಯರಿಗೆ ಆರ್ಥಿಕ ಪ್ರೋತ್ಸಾಹ, ಶುದ್ಧ ಕುಡಿಯುವ ನೀರಿನಘಟಕ, ಶೌಚಗೃಹ ನಿರ್ಮಾಣ, ಮಧ್ಯ ವರ್ಜನ ಶಿಬಿರಗಳಿಂದ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ. ಕೊರೊನಾ ಇಲ್ಲಿಗೇ ನಿಲ್ಲುವುದಿಲ್ಲ. ಈಗಾಗಲೇಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಕೊರೊನಾದೊಂದಿಗೇ ಬಾಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯೆ ರಾಧಿಕಾ ದೇಶಪಾಂಡೆ, ಶಿವಲಿಂಗಪ್ಪ ತಲ್ಲೂರ ಅತಿಥಿಗಳಾಗಿದ್ದರು. ವಿಜಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

hjtyt6uty6u

ಉದ್ಯಮಿ ಅಪಹರಣ : 4 ಗಂಟೆಯಲ್ಲಿ ಪತ್ತೆ ಹಚ್ಚಿದ ಧಾರವಾಡ ಪೊಲೀಸ್

fdtetertre

ಹಾಸನದಲ್ಲಿ ಮಂಗಗಳ ಮಾರಣಹೋಮ: ವರದಿ ಕೇಳಿದ ಹೈಕೋರ್ಟ್

gkhyutyuty

ಸಿಎಂ ಬೊಮ್ಮಾಯಿ ರಬ್ಬರ್ ಸ್ಟಾೃಂಪೋ, ಐರನ್ ಸ್ಟಾೃಂಪೋ ಗೊತ್ತಿಲ್ಲ !

ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ

ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ

ghnfttryutr

ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rgrretre

ಹಾವೇರಿ ಜಿಲ್ಲೆಯಲ್ಲಿ ಗರಿಗೆದರಿದ ಸಚಿವ ಸ್ಥಾನ ನಿರೀಕ್ಷೆ

dfgr

ಏಲಕ್ಕಿ ನಾಡಿಗೆ ಭರಪೂರ ಯೋಜನೆ ನಿರೀಕ್ಷೆ

hgnfgdr

ಧುಮ್ಮಿಕ್ಕುತ್ತಿದೆ ಮದಗ ಮಾಸೂರು ಕೆರೆ ಜಲಧಾರೆ

Untitled-699

ಬ್ಯಾಡಗಿಯಲ್ಲಿ ನಟ ದರ್ಶನ್‌ ನೋಡಲು ಜನಸಾಗರ

Untitled-6

ಗೋ ವಧೆ-ಸಾಗಾಣಿಕೆ ತಡೆಗೆ ಮುಂದಾಗಿ

MUST WATCH

udayavani youtube

ಬೀಜವಿಲ್ಲದ ಲಿಂಬೆ ಹಣ್ಣಿನ ಕುರಿತ ಸಂಕ್ಷಿಪ್ತ ಮಾಹಿತಿ

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

ಹೊಸ ಸೇರ್ಪಡೆ

hjtyt6uty6u

ಉದ್ಯಮಿ ಅಪಹರಣ : 4 ಗಂಟೆಯಲ್ಲಿ ಪತ್ತೆ ಹಚ್ಚಿದ ಧಾರವಾಡ ಪೊಲೀಸ್

fdtetertre

ಹಾಸನದಲ್ಲಿ ಮಂಗಗಳ ಮಾರಣಹೋಮ: ವರದಿ ಕೇಳಿದ ಹೈಕೋರ್ಟ್

gkhyutyuty

ಸಿಎಂ ಬೊಮ್ಮಾಯಿ ರಬ್ಬರ್ ಸ್ಟಾೃಂಪೋ, ಐರನ್ ಸ್ಟಾೃಂಪೋ ಗೊತ್ತಿಲ್ಲ !

tytrytr

ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜೆರಾಕ್ಸ್ ಅಂಗಡಿಯ ಲತಾ

gffdgr

ಚಿಂತಾಮಣಿ ನಗರಸಭೆ ಅಧಿಕಾರಿಗಳ ವಿರುದ್ದ ಸದಸ್ಯ ಶಪೀಕ್ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.