ವಿಕಲಚೇತನರಿಗೆ ಅನುಕಂಪ ಬೇಡ; ಅವಕಾಶ ನೀಡಿ

Team Udayavani, May 5, 2019, 3:24 PM IST

ಹಾನಗಲ್ಲ: ವಿಕಲಚೇತನ ಮಕ್ಕಳಿಗೆ ಅನುಕಂಪ ತೋರಿಸುವುದು ಬೇಡ ಬದಲಾಗಿ ಅವರಿಗೆ ಸಮಾಜದಲ್ಲಿ ಇರುವ ವಿವಿಧ ಕೌಶಲಗಳಲ್ಲಿ ಅವಕಾಶಗಳನ್ನು ನೀಡಬೇಕು. ಅಂದಾಗ ಮಾತ್ರ ಅವರು ತಮ್ಮಲ್ಲಿನ ಕೀಳರಿಮೆಯಿಂದ ಹೊರಬಂದು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದು ಎಂದು ಎಪಿಡಿ ಸಂಸ್ಥೆಯ ಎಂ.ಬಸವರಾಜು ಕರೆ ನೀಡಿದರು.

ತಾಲೂಕಿನ ಹೇರೂರು ಬಿಸಿಎಂ ವಸತಿ ನಿಲಯ, ರೋಶನಿ ಸಮಾಜ ಸೇವಾ ಸಂಸ್ಥೆ, ಹೇರೂರ ಗ್ರಾಪಂ, ಬೆಂಗಳೂರಿನ ಎಪಿಡಿ ಸಂಸ್ಥೆ ಆಶ್ರಯದಲ್ಲಿ ವಿಕಲಚೇತನ ಮಕ್ಕಳಿಗಾಗಿ ಆಯೋಜಿಸಿದ್ದ ಹತ್ತು ದಿನಗಳ ಉಚಿತ ವಸತಿಯುತ ಶೈಕ್ಷಣಿಕ ರಜಾ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿಕಚೇತನ ಮಕ್ಕಳಿಗೆ ಇಂತಹ ವಸತಿಯುತ ಶೈಕ್ಷಣಿಕ ರಜಾ ಶಿಬಿರ ಆಯೋಜಿಸುವುದರಿಂದ ಮಕ್ಕಳು ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಕಲಿತುಕೊಳ್ಳುವುದರ ಜೊತೆಗೆ ಇತರೆ ಮಕ್ಕಳೊಂದಿಗೆ ಬೆರೆಯತ್ತಾರೆ. ಇದರೊಂದಿಗೆ ತಮ್ಮ ಕೌಶಲ ಹೆಚ್ಚಿಸಿಕೊಳ್ಳುತ್ತಾರೆ ಎಂದರು.

ತಾಲೂಕು ಬಿಸಿಎಂ ವಿಸ್ತರಣಾ ಅಧಿಕಾರಿ ಎಸ್‌. ಆನಂದ ಮಾತನಾಡಿ, ವಿಕಲಾಂಗಚೇತನ ಮಕ್ಕಳನ್ನು ಪಾಲಕರು ಮನೆಯಲ್ಲಿ ಇಟ್ಟು ಅವರ ಯೋಗಕ್ಷೇಮ ನೋಡಿಕೊಳ್ಳಲು ಕಷ್ಟಪಡುತ್ತಿರುತ್ತಾರೆ. ಆದರೆ, ರೋಶನಿ ಸಮಾಜ ಸೇವಾ ಸಂಸ್ಥೆ ಅಂತಹ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಮಕ್ಕಳ ಪಾಲಕರಿಗೆ ತರಬೇತಿ ನೀಡುವ ಜತೆಗೆ, ಮಕ್ಕಳನ್ನು ತಮ್ಮೊಂದಿಗೆ 10 ದಿನಗಳವರೆಗೆ ಇಟ್ಟುಕೊಂಡು ಸರಳವಾಗಿ ಸುವ್ಯವಸ್ಥಿತ ರೀತಿಯಿಂದ ನೋಡಿಕೊಂಡು ರಜಾ ಶಿಬಿರದಲ್ಲಿ ಮಕ್ಕಳನ್ನು ಸಮಾಜಮುಖೀಯನ್ನಾಗಿಸುವಲ್ಲಿ ಶ್ರಮಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ ಸಿಂತಿಯಾ ಮಾತನಾಡಿ, ವಿಕಲಚೇತನ ಮಕ್ಕಳ ಸರ್ವತೋಮುಖ ಬೆಳವಣಿಗೆ ನಿಟ್ಟಿನಲ್ಲಿ ಸುಮಾರು 5 ವರ್ಷಗಳಿಂದ ವಿಕಲಚೇತನ ಮಕ್ಕಳಿಗೆ ಶಿಕ್ಷಣ ಜತೆಗೆ ರಜಾ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಮನ್ವಯ ಶಿಕ್ಷಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷೆ ಸುಲೋಚನಾ ದೇವಗಿರಿ, ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ನಾಗರಾಜ ಜೊಗಣ್ಣನವರ, ಸಹದೇವಪ್ಪ ಕಲಾದಗಿ ಮೊದಲಾದವರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ