ಅತ್ಯುತ್ತಮವಾಗಿದೆ ಭಾರತದ ಆರ್ಥಿಕತೆ: ಆರ್‌. ಬಿರಾದಾರ್‌

ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪ್ರಾಧ್ಯಾಪಕ ಡಾ|ಆರ್‌.ಆರ್‌.ಬಿರಾದಾರ್‌ ಅಭಿಮತ

Team Udayavani, Jun 9, 2022, 1:02 PM IST

14

ಹಂಸಭಾವಿ: ಭಾರತದಲ್ಲಿ ಕೋವಿಡ್‌ ನಂತರದಲ್ಲಿ ಕಂಡು ಬಂದ ಆರ್ಥಿಕ ಬೆಳವಣಿಗೆ ಇತರೆ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ|ಆರ್‌. ಆರ್‌. ಬಿರಾದಾರ್‌ ಹೇಳಿದರು.

ಸ್ಥಳೀಯ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳ ವತಿಯಿಂದ ನಡೆದ “ಕೋವಿಡ್‌-19 ಪೆಂಡಮಿಕ್‌ ನಂತರದ ಭಾರತದ ಆರ್ಥಿಕ ಚೇತರಿಕೆ’ (ಇಂಡಿಯಾಸ್‌ ಎಕನಾಮಿಕ್‌ ರಿಕವರಿ ಆಫ್ಟರ್‌ ದ ಕೋವಿಡ್‌ -19 ಪೆಂಡಮಿಕ್‌; ರೋಡ್‌ಮ್ಯಾಪ್‌ ಪಾರ್‌ ಸ ಸ್ಟೈನ್ಡ್‌ ಗ್ರೌಥ್‌ ರಿಕವರಿ) ಕುರಿತ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನಮ್ಮ ದೇಶ ಸುಸ್ಥಿರ ಅಭಿವೃದ್ಧಿಯ ಗುರಿ, ರೈತರ ಆದಾಯ ದ್ವಿಗುಣ ಹಾಗೂ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಎಂಬ ಮೂರು ಪ್ರಮುಖ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ. ಕೋವಿಡ್‌ ಪೂರ್ವದ ಸ್ಥಿತಿಗತಿಯಲ್ಲಿದ್ದ ಅನುಭೋಗ, ಹೂಡಿಕೆ, ಉದ್ಯೋಗ, ರಫ್ತು ಮುಂತಾದವುಗಳ ಮೂಲಕ ಆರ್ಥಿಕತೆಯ ವರ್ತುಲಾಕಾರದ ಚಲನೆ, ನಂತರ ಮೊದಲ ಹಾಗೂ ಎರಡನೇ ಅಲೆಯ ಸಮಯದಲ್ಲಿ ನಲುಗಿದ ಆರ್ಥಿಕ ವ್ಯವಸ್ಥೆಯನ್ನು ವಿಶ್ಲೇಷಿಸಿದರು.

ಜೊತೆಗೆ ಅಂತಾರಾಷ್ಟ್ರೀಯ ಪರಿಣಾಮಗಳು ಮತ್ತು ಚೇತರಿಕೆ ವಿವರಿಸುತ್ತಾ ಅಮೆರಿಕ, ಇಂಗ್ಲೆಂಡ್‌, ಚೀನಾ ಹಾಗೂ ಜರ್ಮನಿ ದೇಶದ ಆರ್ಥಿಕತೆಯ ಉದಾಹರಣೆ ನೀಡಿದರು. ಭಾರತದ ವಿತ್ತ ಆಕಾರದ ಆರ್ಥಿಕ ಚೇತರಿಕೆ ವಿವರಿಸಿದ ಅವರು, ಕೃಷಿ, ಗಣಿಗಾರಿಕೆ, ಉತ್ಪಾದನಾ ವಲಯ, ಎಲೆಕ್ಟ್ರಾನಿಕ್‌, ಗ್ಯಾಸ್‌, ನೀರು ಪೂರೈಕೆ, ಕಟ್ಟಡ ನಿರ್ಮಾಣ, ಹೋಟೆಲ್‌ ಉದ್ಯಮ, ಹಣಕಾಸು ವಲಯ, ರಿಯಲ್‌ ಎಸ್ಟೇಟ್‌, ಸಾರ್ವಜನಿಕ ಆಡಳಿತ ಮುಂತಾದ ವಲಯಗಳ ಸೂಕ್ಷ್ಮ ಅಂಶಗಳ ಬಗ್ಗೆ ಚರ್ಚಿಸಿದರು.

ಕೈಗಾರಿಕಾ ವಲಯ, ಬಂಡವಾಳ ಹೂಡಿಕೆ, ಕೊಳ್ಳುವ ನಿರ್ವಹಣಾ ಸೂಚ್ಯಂಕ, ಗ್ರಾಹಕ ಆತ್ಮವಿಶ್ವಾಸ ಸೂಚ್ಯಂಕ, ದೇಶದ ನಿರುದ್ಯೋಗದ ದರ, ಸಗಟು ಬೆಲೆ ಸೂಚ್ಯಂಕದ ಆಧಾರದ ಕುರಿತು ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೃತ್ಯುಂಜಯ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎನ್‌.ಸಿ.ಅಕ್ಕಿ, ಇತ್ತೀಚಿನ ಕೆಲವೊಂದು ಆರ್ಥಿಕ ವಿಚಾರಗಳು ಸಾಮಾನ್ಯ ವ್ಯಕ್ತಿಗಳಿಗೂ ತಿಳಿಯುತ್ತವೆ. ಆದರೆ, ಒಬ್ಬ ಆರ್ಥಿಕ ತಜ್ಞ ಚಿಂತನೆ ನಡೆಸುವ ವಿಧಾನ ಹಾಗೂ ಒಬ್ಬ ಸಾಮಾನ್ಯ ವ್ಯಕ್ತಿ ಚಿಂತನೆ ನಡೆಸುವ ವಿಧಾನಗಳಲ್ಲಿ ವ್ಯತ್ಯಾಸಗಳಿರಬಹುದು. ಕೋವಿಡ್‌ ಸಮಯದಲ್ಲಿ ಸಮಾಜದ ವಿವಿಧ ವರ್ಗಗಳು ಅನುಭವಿಸಿದ ಕಷ್ಟಗಳು ತುಂಬಾ ಕ್ರೂರವಾಗಿದ್ದವು. ಬಹುಶಃ ವೇತನ ಪಡೆಯುವ ಸರ್ಕಾರಿ ನೌಕರರಿಗೆ ಅಷ್ಟೊಂದು ಸಮಸ್ಯೆಗಳು ಉಂಟಾಗಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಪೀಠದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ವಿ.ಕೆರೂಡಿ, ಅರ್ಥಶಾಸ್ತ್ರ ಒಂದು ಅದ್ಭುತ ವಿಷಯದ ಬಗ್ಗೆ ತಾರ್ಕಿಕ ಚಿಂತನೆ ನಡೆಸುವಂತೆ ಮಾಡುವಂತಹುದು. ವಿಷಯ ಇಂದು ಅದರ ಅವಶ್ಯಕತೆ ಹಾಗೂ ಅನಿವಾರ್ಯತೆ ಎಲ್ಲರಿಗೂ ತಿಳಿಯುವಂತಾಗಿದೆ. ಸಂಪನ್ಮೂಲ ವ್ಯಕ್ತಿಗಳು ಆರ್ಥಿಕತೆಯ ವಿವಿಧ ವಲಯಗಳಲ್ಲಿ ಸಂಭವಿಸಿದಂತಹ ನೈಜ ಏರುಪೇರುಗಳನ್ನು ಬಹಳ ವ್ಯವಸ್ಥಿತವಾಗಿ ವಿವರಿಸಿದ್ದಾರೆ ಎಂದರು.

ರಾಜ್ಯದ ವಿವಿಧ ಮಹಾವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 109 ಅಭ್ಯರ್ಥಿಗಳು ಭಾಗವಹಿಸಿದ್ದರು. ಉಪಪ್ರಾಚಾರ್ಯ ಎಂ.ಜಿ.ಬಂಡಿವಡ್ಡರ್‌, ಡಾ.ಎಸ್‌.ಎಸ್‌.ಮಠಪತಿ, ಪಿ.ವೆಂಕಟೇಶ್‌, ಹಮ್ಮಿಣಿ ಬಸವ್ವ, ಡಾ.ಕೋಟೆಶ್‌ ಬಿ., ಬೋಧಕ-ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಎ.ತಿಪ್ಪೇಶ್‌ ಸ್ವಾಗತಿಸಿ, ಸಂ. ಸಂತೋಷ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೀಪ್‌ ಕುಲಕರ್ಣಿ ಪರಿಚಯಿಸಿದರು. ಹುಸೇನ್‌ ಸಾಬ್‌ ಕಳಗೊಂಡ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಡಾ|ಮಲ್ಲಿಕಾರ್ಜುನ ಕುಂಬಾರ್‌ ವಂದಿಸಿ, ಪಲ್ಲವಿ ಬೋಳಕಟ್ಟಿ ನಿರೂಪಿಸಿದರು.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.