ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌

Team Udayavani, Nov 6, 2019, 2:35 PM IST

ಹಾನಗಲ್ಲ: ಇತ್ತೀಚೆಗೆ ಸಂಭವಿಸಿದ ನೆರೆ ಹಾವಳಿಯಿಂದ ನಿರಾಶ್ರಿತರಾದ ಎಲ್ಲ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ ಕೊಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬಗಳಿಗೂ ಶಾಶ್ವತ ಮನೆ ನಿರ್ಮಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಭರವಸೆ ನೀಡಿದರು.

ಶೀಗಿಹಳ್ಳಿ ಗ್ರಾಮದಲ್ಲಿ ನಿರಾಶ್ರಿತರಿಗಾಗಿ 12 ಲಕ್ಷ ರೂಗಳಲ್ಲಿ ನಿರ್ಮಿಸಿದ 23 ತಾತ್ಕಾಲಿಕ ಶೆಡ್‌ಗಳು, ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಿಸಿದ 14 ಲಕ್ಷ ರೂ.ಗಳ ಪಕ್ಕಾ ಗಟಾರ, ಕಾಂಕ್ರಿಟ್‌ ರಸ್ತೆ, ಶಿಂಗಾಪುರ ಗ್ರಾಮದಲ್ಲಿ 3 ಲಕ್ಷ ರೂ.ಗಳ ಬಸ್‌ ನಿಲ್ದಾಣ, 7 ಲಕ್ಷ ರೂ.ಗಳ ಶೌಚಾಲಯ, 12 ಲಕ್ಷರೂಗಳ ವಾಲ್ಮೀಕಿ ಸಮುದಾಯ ಭವನ, ನರೇಗಾ ಯೋಜನೆಯಡಿಯ 8 ಲಕ್ಷರೂಗಳ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವರದಾ ನದಿಯ ಪ್ರವಾಹದಿಂದಾಗಿ ಶೀಗಿಹಳ್ಳಿ ಗ್ರಾಮದಲ್ಲಿ 30, ಹಳೆಶಿಂಗಾಪುರದಲ್ಲಿ 40 ಕುಟುಂಬಗಳು ಸೇರಿದಂತೆ ಒಟ್ಟು 70 ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ಅವರಲ್ಲಿ ಅತ್ಯಂತ ಸಮಸ್ಯೆಯಲ್ಲಿರುವ 23 ಕುಟುಂಬಗಳನ್ನು ಸ್ಥಳಾಂತರಿಸಿ ತಾತ್ಕಾಲಿಕ ಶೆಡ್‌ ಗಳನ್ನು ನೀಡಲಾಗಿದೆ. ಸರಕಾರ ಮುಂಬರುವ ದಿನಗಳಲ್ಲಿ ತಲಾ 5 ಲಕ್ಷರೂ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತದೆ. ನಿರಾಶ್ರಿತರು ಆತಂಕಪಡುವ ಅಗತ್ಯವಿಲ್ಲ ಎಂದರು. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ಶಿಂಗಾಪುರ ಪ್ಲಾಟ್‌ನ್ನು ಹೊಸ ಗ್ರಾಮವಾಗಿ ವಿಜಯನಗರ ಎಂದು ಘೋಷಿಸಲಾಯಿತು.

ಆದರೆ ಕರಡು ಪ್ರತಿ ಅಂತಿಮ ಹಂತದಲ್ಲಿತ್ತು. ಕಂದಾಯ ಗ್ರಾಮವಾಗಿ ಪರಿವರ್ತನೆಯಾಗಲಿಲ್ಲ. ಇದರಿಂದ ಅನುದಾನ ನೀಡಲು ದಾಖಲೆಗಳು ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಇಲ್ಲಿಯ ಪ್ರತಿ ಮನೆಯನ್ನೂ ಸಮೀಕ್ಷೆ ಕಾರ್ಯ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಇನ್ನೊಂದು ತಿಂಗಳಲ್ಲಿ ಈ ಸಮೀಕ್ಷೆ ಪೂರ್ಣಗೊಳ್ಳಲಿದೆ. ನಂತರ ಕಂದಾಯ ಗ್ರಾಮವಾಗಿ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಗೌರಮ್ಮ ತಿಮ್ಮಣ್ಣನವರ, ಗೌರವ್ವ ಶೇತಸನದಿ, ಬಸವಣ್ಣೆಪ್ಪ ಬೆಂಚಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಮಾಲತೇಶ ಆರೇರ, ಸೋಮಣ್ಣ ಗೋಣಿಗೇರ, ನಾಗನಗೌಡ ಪಾಟೀಲ, ದೇವೇಂದ್ರಪ್ಪ ಸವದತ್ತಿ, ತಿಪ್ಪಣ್ಣ ಕೋರಿ, ಮೊದಲಾದವರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬ್ಯಾಡಗಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಂಬಂಧಿಸಿದ ಮಾತೃ ಇಲಾಖೆ ಕೆಲಸವನ್ನು ಹೊರತುಪಡಿಸಿ, ಇನ್ನಿತರ ಇಲಾಖೆಗಳ ಕೆಲಸಕ್ಕೆ ನಿಯೋಜಿಸದಂತೆ...

  • ಹಿರೇಕೆರೂರು: ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಬ್ಬಿಣಕಂಥಿಮಠದ ಸ್ವಾಮೀಜಿ ಗುರುವಾರ ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ. ರಟ್ಟೀಹಳ್ಳಿ...

  • ಬ್ಯಾಡಗಿ: ಪುರಸಭೆ ವ್ಯಾಪ್ತಿಗೆ ಒಳಪಡುವಂತೆ (ಲಿಮಿಟೇಶನ್‌ ಎಕ್ಸಟೆನ್ಶನ್‌) ಬ್ಯಾಡಗಿ ಹಾಗೂ ಸುತ್ತಲಿನ ಕಂದಾಯ ಗ್ರಾಮ (ಸಾಜಾ) ಗಳಿಂದ ಕೈಬಿಟ್ಟಿದ್ದ ಕೆಲ ರಿಜಿಸ್ಟರ್‌...

  • ಬಂಕಾಪುರ: ಗ್ರಾಮಸ್ಥರ ಸಹಕಾರ, ಶಾಲಾ ಸುಧಾರಣಾ ಸಮಿತಿ ಪ್ರೋತ್ಸಾಹ, ಶಿಕ್ಷಕರಲ್ಲಿಯ ಶಕ್ತಿ, ವಿದ್ಯಾರ್ಥಿಗಳ ಉತ್ಸಾಹ ಒಂದೆಡೆ ಸೇರಿದರೆ ಶಾಲೆ ಅಭಿವೃದ್ಧಿ ಪಥದತ್ತ...

  • ಹಾವೇರಿ: ಜಿಲ್ಲೆಯ ವಿಧಾನಸಭೆ ಉಪಚುನಾವಣೆ ನಡೆಯುವ ಹಿರೇಕೆರೂರು ಹಾಗೂ ರಾಣಿಬೆನ್ನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿರುಸಿನ ಮತ...

ಹೊಸ ಸೇರ್ಪಡೆ