ಸವಣೂರು ಗ್ರಾ.ಪಂ ಸದಸ್ಯರಾಗಿ ವಿನೋದ ರೈ ಚೆನ್ನಾವರ ಅವಿರೋಧ ಆಯ್ಕೆ
Team Udayavani, Dec 19, 2020, 4:08 PM IST
ಸವಣೂರು : ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಪಾಲ್ತಾಡಿ ಒಂದನೇ ವಾರ್ಡ್ ನ ಹಿಂದುಳಿದ ವರ್ಗ ಬಿ ಮಹಿಳಾ ಸ್ಥಾನದಿಂದ ವಿನೋದ ರೈ ಚೆನ್ನಾವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗೇಶ್ ಎನ್ ಘೋಷಿಸಿದ್ದಾರೆ.
ಪಾಲ್ತಾಡಿ ಒಂದನೇ ವಾರ್ಡ್‌ನಿಂದ ಹಿಂದುಳಿದ ಬಿ ವರ್ಗ ಮಹಿಳಾ ಸ್ಥಾನದಿಂದ ವಿನೋದ ರೈ ಚೆನ್ನಾವರ ಹಾಗೂ ಸವಿತಾ ಹರೀಶ್ ರೈ ಮಂಜುನಾಥನಗರ ಅವರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಸವಿತಾ ಹರೀಶ್ ರೈ ಮಂಜುನಾಥನಗರ ಅವರು ನಾಮಪತ್ರ ವಾಪಾಸ್ ಹಿಂದಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ:10 ವರ್ಷದಿಂದ ಸ್ಥಳೀಯ ಚುನಾವಣೆಯಿಂದ ದೂರ!
ಇಬ್ಬರೂ ಬಿಜೆಪಿ ಬೆಂಬಲಿತರಾಗಿಯೇ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಸೂಚನೆಯಂತೆ ಸವಿತಾ ಹರೀಶ್ ರೈ ಅವರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ವಿನೋದ ರೈ ಅವರು ಚೆನ್ನಾವರ ಪಟ್ಟೆ ಪಿ.ಎನ್. ಚಂದ್ರಹಾಸ ರೈ ಅವರ ಪತ್ನಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸ್ತ್ರೀ ಶಕ್ತಿ ಸಂಘಗಳಲ್ಲಿ, ಗ್ರಾಮ ವಿಕಾಸ ಸಮಿತಿಗಳಲ್ಲಿ ಸಕ್ರೀಯರಾಗಿದ್ದಾರೆ.