ಶ್ರೀಧರ ಸ್ವಾಮಿಗಳ ಪ್ರವಚನ ಮಾಲಿಕೆ ಬಿಡುಗಡೆ

ಬೆಂಗಳೂರಿನ ನಿತ್ಯಾನಂದ ಪ್ರಿಂಟರ್ನಿಂದ ಪ್ರಕಟಣೆ

Team Udayavani, Jan 5, 2020, 4:13 PM IST

5-January-19

ಹೊನ್ನಾವರ: ದತ್ತಾವತಾರಿ ಎಂದು ಭಕ್ತರು ನಂಬುವ ಶ್ರೀಧರ ಸ್ವಾಮಿಗಳ ಪ್ರವಚನ, ಚಿಂತನೆಗಳನ್ನು ದಾಖಲಿಸಿ ಅದನ್ನು ಯಥಾವತ್ತಾಗಿ ಅಕ್ಷರ ರೂಪದಲ್ಲಿ ತಂದು ಸುಂದರ ಪುಸ್ತಕ ರೂಪಕೊಡುವ ಕಾರ್ಯಕ್ಕೆ ಪೂರ್ಣ ವಿರಾಮ ಹಾಕಲಾಗಿದೆ.

ಕನ್ನಡದಲ್ಲಿ 15ಕ್ಕೂ ಹೆಚ್ಚು ಕೃತಿಗಳನ್ನು, ಮರಾಠಿ ಮತ್ತು ಇಂಗ್ಲಿಷ್‌ ಕೃತಿಗಳನ್ನು ರಾಮತೀರ್ಥದ ಶ್ರೀಧರ ನಿವಾಸ ಪ್ರಕಟಿಸಿದೆ. ಶ್ರೀಧರರಿಗೆ ಇಂದಿಗೂ ಲಕ್ಷಾಂತರ ಭಕ್ತರಿದ್ದಾರೆ. ಇವರಲ್ಲಿ 30ವರ್ಷಕ್ಕೂ ಹೆಚ್ಚುಕಾಲ ಅವರ ಹತ್ತಿರ ಇದ್ದು ಸೇವೆ ನಡೆಸಿ, ಯೋಗಕ್ಷೇಮ ನೋಡಿಕೊಳ್ಳುತ್ತ ಶ್ರೀಧರರಿಗೆ ಲೋಕದ ಯೋಗಕ್ಷೇಮದ ಕುರಿತು ತಪಸ್ಸು ಮಾಡಲು ಅವಕಾಶ ಮಾಡಿಕೊಟ್ಟವರು ಹೊನ್ನಾವರ ಗಾಣಗೆರೆಯ ಜನಾರ್ದನ ಭಟ್ಟರು ಮತ್ತು ಸಿದ್ಧಾಪುರದ ಜಾನಕಕ್ಕನವರು.

ಯಾರೋ ದಾನ ನೀಡಿದ ಸ ಲ್‌ ರೆಕಾರ್ಡಿಂಗ್‌ ಉಪಕರಣದಲ್ಲಿ ಶ್ರೀಧರರ ಏಕಾಂತದ ಪ್ರವಚನಗಳನ್ನು ದಾಖಲೆ ಮಾಡಿಕೊಳ್ಳುತ್ತಿದ್ದ ಜನಾರ್ದನರು ಶ್ರೀಧರರನ್ನು ಕೇಳಿದಾಗ ಇದನ್ನು ಪುಸ್ತಕ ರೂಪದಲ್ಲಿ ಮಾಡು, ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿ ಎಂದು ಸುವರ್ಣ ಮಂತ್ರಾಕ್ಷತೆ ಕೊಟ್ಟರಂತೆ. ಶ್ರೀಧರರು ಸಮಾಧಿಸ್ತರಾದ ಮೇಲೆ ಆ ಎಲ್ಲಾ ಉಪಕರಣಗಳನ್ನು ರಾಮತೀರ್ಥದಲ್ಲಿ ತಂದು ಇರಿಸಿಕೊಂಡು ಶ್ರೀಧರರು ತಪಸ್ಸು ಮಾಡುತ್ತಿದ್ದ ಆ ಸ್ಥಳದಲ್ಲಿ ಉಳಿದುಕೊಂಡರು.

ಧ್ವನಿ ದಾಖಲಿಸಿದ ಚಕ್ರಗಳಿದ್ದವು (ಸೂಲ್‌) ಇದನ್ನು ಕೇಳಿಸುವ ಉಪಕರಣವನ್ನು ದಾನ ಪಡೆದರು. ಹೊನ್ನಾವರದ ಮದನ್‌ ಕಾಮತ್‌ ಪ್ರಥಮ ಪುಸ್ತಕಕ್ಕೆ ನೆರವಾದರು. ಪುಣ್ಯಕ್ಕೆ ನಾಡಿನ ಹಿರಿಯ ವಿದ್ವಾಂಸರಾದ ಸೋ.ತಿ. ನಾಗರಾಜ ಮಾರ್ಗದರ್ಶನದಲ್ಲಿ ವೆಂಕಟರಮಣ ತಿಮ್ಮಣ್ಣ ಭಟ್ಟ, ವೆಂಕಟರಮಣ ದೇವರು ಭಟ್ಟ ಎಂಬ ವೈದಿಕರು ಲಿಪಿ ರೂಪದಲ್ಲಿ ಬರೆದುಕೊಟ್ಟರು. ಯೋಗಾಯೋಗ ಎಂಬಂತೆ ಆಧ್ಯಾತ್ಮಿಕವಾಗಿ ಪ್ರಕಟಿಸಿ, ಪ್ರಸಿದ್ಧರಾದ ಬೆಂಗಳೂರಿನ ನಿತ್ಯಾನಂದ ಪ್ರಿಂಟರ್ನ ನಟರಾಜ ಬಹುಸುಂದರವಾಗಿ ಮುದ್ರಿಸಿಕೊಟ್ಟರು. ಎಂ.ಎನ್‌. ಭಟ್‌ ಮದ್ಗುಣಿ, ವಿನಾಯಕ ಸ್ಥಿತಿಗಾರ 18ವರ್ಷಗಳ ಹಿಂದೆ ನೀಡಿದ ಸಹಕಾರವನ್ನು ಇಂದಿಗೂ ಮುಂದುವರಿಸಿದ್ದಾರೆ.

ಆದ್ದರಿಂದ ಪರಿಷ್ಕೃತ 13ನೇ ಗೀತಾ ಸಾರಸುಧೆಯೊಂದಿಗೆ ಶ್ರೀಧರ ವಚನಾಮೃತದ 15ಧಾರೆಗಳು ಲೋಕಾರ್ಪಣೆಗೊಂಡಿವೆ. ವರದಹಳ್ಳಿಯ ಶ್ರೀಧರಾಶ್ರಮ ಮತ್ತು ಶ್ರೀಧರ ಹೆಗಡೆ ಕಾನ್ಲ ಇವರ ಸಂಪೂರ್ಣ ಬೆಂಬಲ ದೊರೆತಿದೆ.

ಭವತಿ ಭಿಕ್ಷಾಂದೇಹಿ ಎಂಬ ಸಮರ್ಥ ರಾಮದಾಸರ ಸಂಪ್ರದಾಯದಲ್ಲಿ ಆಶ್ರಮ ನಡೆಸುವ ಜನಾರ್ದನ ರಾಮದಾಸಿ ಮತ್ತು ಜಾನಕಕ್ಕ ಶ್ರೀಧರರ ಭಕ್ತರ ಸಹಕಾರದಿಂದ ಪುಟ್ಟ ಆಶ್ರಮ ನಿರ್ಮಿಸಿಕೊಂಡು ವರ್ಷಕ್ಕೆರಡು ಬಾರಿ ಶ್ರೀಧರರ ಸ್ಮರಣೆ ಕಾರ್ಯಕ್ರಮ ಮಾಡುತ್ತ ಭವಿಷ್ಯತ್ತಿನಲ್ಲಿ ಶ್ರೀಧರರು ಪವಾಡ ಪುರುಷ, ಮೂರ್ತಿರೂಪಿ ಮಾತ್ರ ಆಗದೆ ಮಹಾನ್‌ ಧಾರ್ಮಿಕ ಚಿಂತಕರು ಎಂಬುದನ್ನು ಶಾಶ್ವತಗೊಳಿಸಿದ್ದಾರೆ. ಅವಧೂತ ಪರಂಪರೆಯ ಶ್ರೀಧರರು ತಮ್ಮ ಸಂಕಲ್ಪದಂತೆ ಜೀವನದುದ್ದಕ್ಕೂ ಎಲ್ಲ ಸ್ತ್ರೀಯರನ್ನು ತಾಯಿಯಂತೆ ಕಂಡರು.

ಹಣವನ್ನು ಕೈಯಿಂದ ಮುಟ್ಟಲಿಲ್ಲ. ಕಾಣಿಕೆ ಹಣವನ್ನು ಆಯಾ ಊರಿನ ದೇವಾಲಯದ ಅಭಿವೃದ್ಧಿಗೆ ಬಳಸಿ ಮುಂದಿನೂರಿಗೆ ಪ್ರಯಾಣ ಬೆಳೆಸುತ್ತ ದೇಶ ತಂಬ ಓಡಾಡಿದವರು. ಸತ್ಛರಿತರಾದ ಜನರಿಂದ ಸಂಗ್ರಹಿಸಲ್ಪಟ್ಟ, ಬರೆಯಲ್ಪಟ್ಟ ಎಲ್ಲಾ ವೈದಿಕ ಧರ್ಮ ಗ್ರಂಥಗಳು ಧರ್ಮಪ್ರಾಣರಾದ ಎಲ್ಲ ಸಜ್ಜನರಿಗಾಗಿ ಆನಂದ ಮಂಗಳವಾದವು. ಕರ್ಮ, ಜ್ಞಾನ ಮತ್ತು ಉಪಾಸನೆಗಳೆಂಬ ಮೂರು ಬಗೆಯುಳ್ಳ ವೈದಿಕ ಧರ್ಮ ವಿಜೃಂಭಿಸಲಿ ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ರಾಮತೀರ್ಥ ಶ್ರೀಧರಾಶ್ರಮ ಧನ್ಯವಾಗಿದೆ, ಭವಿತವ್ಯದ ಪುಣ್ಯವಾಗಿದೆ.

„ಜೀಯು, ಹೊನ್ನಾವರ

ಟಾಪ್ ನ್ಯೂಸ್

Car Catches Fire: ಮಡಿಕೇರಿ ಬಳಿ ಬೆಂಕಿಗಾಹುತಿಯಾದ ಕಾರು!

Kalyana-Karnataka

Hyderbad-Karnataka 371(J) ಸಮರ್ಪಕ ಅನುಷ್ಠಾನಕ್ಕಾಗಿ ಜು.22, 23ರಂದು ಪ್ರತಿಭಟನೆ

1-asdsadsa-a

Mangaluru; MSPC ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಚಿವೆ ಹೆಬ್ಬಾಳ್ಕರ್

Rain-M

Heavy Rain: ಉಡುಪಿ, ದಕ್ಷಿಣ ಕನ್ನಡ ಸೇರಿ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

9

Imran Khan: ಅಕ್ರಮ ವಿವಾಹ ಕೇಸ್‌; ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖುಲಾಸೆ

1-reee

Mangaluru; ಟ್ರಾಫಿಕ್ ದಟ್ಟಣೆಯಿಂದ ಕಂಗೆಟ್ಟ ಸ್ಪೀಕರ್: ತ್ವರಿತ ಕ್ರಮಕ್ಕೆ ಆದೇಶ

Bommai BJP

MUDA ಹಗರಣವಾಗದಿದ್ದಲ್ಲಿ ತನಿಖೆಗೆ ಯಾಕೆ ಹಿಂಜರಿಕೆ: ಬೊಮ್ಮಾಯಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-sirsi

Sirsi: ಸರಕಾರದಿಂದ ಸಂಸ್ಕೃತ ಕ್ಷೇತ್ರಕ್ಕೆ ಉತ್ತೇಜನ ಸಿಗಬೇಕು: ಸ್ವರ್ಣವಲ್ಲೀ ಶ್ರೀ

1-bheema

BJP ಸಂಸದ ಕಾಗೇರಿ ಅವರನ್ನು ಅಭಿನಂದಿಸಿದ ಕಾಂಗ್ರೆಸ್ ಶಾಸಕ ಭೀಮಣ್ಣ!

Bhatkal: ಕೋಮು ಗಲಭೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ: ಎಸ್ಪಿ ಎಂ. ನಾರಾಯಣ

Bhatkal: ಕೋಮು ಗಲಭೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ: ಎಸ್ಪಿ ಎಂ. ನಾರಾಯಣ

Bhatkal: ಹೃದಯಾಘಾತದಿಂದ ಚಿತ್ರಾಪುರ ಮಠದ ಹಿರಿಯ ಅರ್ಚಕ ರಾಮೇಶ್ವರ ಗಂಗಾಧರ ಹರಿದಾಸ ನಿಧನ

Bhatkal: ಹೃದಯಾಘಾತದಿಂದ ಚಿತ್ರಾಪುರ ಮಠದ ಹಿರಿಯ ಅರ್ಚಕ ರಾಮೇಶ್ವರ ಗಂಗಾಧರ ಹರಿದಾಸ ನಿಧನ

6-sirsi

Sirsi: 800 ವರ್ಷಗಳ ಹಿಂದಿನ ವೀರಗಲ್ಲು ಶಾಸನ ಪತ್ತೆ!

MUST WATCH

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

ಹೊಸ ಸೇರ್ಪಡೆ

Car Catches Fire: ಮಡಿಕೇರಿ ಬಳಿ ಬೆಂಕಿಗಾಹುತಿಯಾದ ಕಾರು!

11

Padubidri: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Kalyana-Karnataka

Hyderbad-Karnataka 371(J) ಸಮರ್ಪಕ ಅನುಷ್ಠಾನಕ್ಕಾಗಿ ಜು.22, 23ರಂದು ಪ್ರತಿಭಟನೆ

1-asdsadsa-a

Mangaluru; MSPC ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಚಿವೆ ಹೆಬ್ಬಾಳ್ಕರ್

Rain-M

Heavy Rain: ಉಡುಪಿ, ದಕ್ಷಿಣ ಕನ್ನಡ ಸೇರಿ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.