ಕನಕದಾಸ ಅಲ್ಲ, ನಾಯಕ ಅನ್ನಿ: ಪ್ರೊ ಅಂಬಿಕಾ

ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಹೋರಾಡಿ ಮೀಸಲಾತಿ ವಿಷಯ ಗುರಿಯಾಗಿರಿಸಿಕೊಂಡು ಟೀಕೆ ಮಾಡುವುದು ಸಲ್ಲ

Team Udayavani, Nov 25, 2019, 3:45 PM IST

25-November-15

ಹುಮನಾಬಾದ: ಪರಿಶಿಷ್ಟ ಜಾತಿ-ಪಂಗಡ ಗುಂಪಿನ ಜನರನ್ನು ಕಡೆಗಣಿಸುವ ಏಕೈಕ ಉದ್ದೇಶದಿಂದ ಶ್ರೇಷ್ಠ ಕೀರ್ತನಕಾರ ಕನಕರು ಸೇರಿದಂತೆ ಇನ್ನುಳಿದ ಕೀರ್ತನಕಾರರ ಹಿಂದೆ ಮನುವಾದಿಗಳು ದಾಸ ಪದ ಬಳಸಿದ್ದಾರೆ. ಎಲ್ಲರೂ ಅದನ್ನು ತೀವ್ರವಾಗಿ ಖಂಡಿಸಿ, ಕನಕ ನಾಯಕ ಎಂದೇ ಹೇಳಬೇಕು ಎಂದು ಪ್ರೊ| ಅಂಬಿಕಾ ಭೋಜಗೊಂಡ ಹೇಳಿದರು.

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿ ಹುಮನಾಬಾದ ಬಿಆರ್‌ಸಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕನಕ ನಾಯಕರ 53ನೇ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಟೀಕೆ ಸಲ್ಲದು: ಸಾಹಿತಿ ಮಾಣಿಕಪ್ಪ ಬಕ್ಕನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡ ಸಮುದಾಯದವರು ಇಲ್ಲದಿದ್ದರೆ ಸ್ವಸ್ಥ ಸಮಾಜ ನಿರ್ಮಾಣ ಕಷ್ಟಸಾಧ್ಯ. ಸಂವಿಧಾನ ಬದ್ಧವಾಗಿ ಸರ್ಕಾರ ಎಲ್ಲ ಸಮುದಾಯಗಳಿಗೂ ಮೀಸಲಾತಿ ಕಲ್ಪಿಸಿದೆ. ಆದರೆ ಏಳ್ಗೆ ಸಹಿಸದ ಮೇಲ್ವರ್ಗದವರು ಪ.ಜಾತಿ-ಪಂಗಡ ಸಮುದಾಯಕ್ಕೆ ನೀಡಿದ ಮೀಸಲಾತಿ ವಿಷಯ ಗುರಿಯಾಗಿರಿಸಿಕೊಂಡು ಟೀಕೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಎಂದರು.

ಸಮಾಜೋದ್ಧಾರಕ: ಉಪನ್ಯಾಸಕ ತಿಪ್ಪಣ್ಣ ಕೆಂಪೆನೋರ್‌ ಮಾತನಾಡಿ, ಬಸವ-ಬುದ್ಧ-ಡಾ| ಅಂಬೇಡ್ಕರ್‌ ಸಮಾನತೆ ಸಮಾಜ ನಿರ್ಮಾಣ ಕನಸು ಕಂಡಿದ್ದರು. ಸಮಾಜೋದ್ಧಾರಕ್ಕಾಗಿ ಕೀರ್ತನಕಾರರು ಸ್ವತಃ ವಿಷ ಉಂಡಿದ್ದರು ಎಂದರು.

ಆನಂದ ಶಿವನಾಯಕ ಮಾತನಾಡಿ, ತಿರುಚಿರುವ ಕೀರ್ತನಕಾರರ ಮೂಲ ಇತಿಹಾಸ ಪುನಃಶ್ಚೇತನಕ್ಕೆ ನಮ್ಮವರು ಕಂಕಣಬದ್ಧರಾಗಬೇಕು ಎಂದರು. ಜಗದೀಶ ಸೇಡೋಳ್ಕರ್‌ ಸೇರಿದಂತೆ ಇತರರು ಮಾತನಾಡಿದರು. ಡಿ.8ಕ್ಕೆ ಸಂವಿಧಾನ ಸಮರ್ಪಣಾ ದಿನ: ಸಮನ್ವಯ ಸಮಿತಿ ಅಧ್ಯಕ್ಷ ವಿಜಯಕುಮಾರ ಚಾಂಗ್ಲೇರಿ ಅಧ್ಯಕ್ಷತೆವಹಿಸಿ ಮಾತನಾಡಿ, ತಾಲೂಕಿನಲ್ಲಿ ಈ ಗುಂಪಿಗೆ ಸೇರಿದ 400 ಜನರ ಪೈಕಿ ಕೇವಲ 40 ಜನ ಮಾತ್ರ ಬಂದಿರುವುದು ತರವಲ್ಲ. ಸಮಿತಿ ವತಿಯಿಂದ ಡಿ.8ಕ್ಕೆ ಸಂವಿಧಾನ ಸಮರ್ಪಣಾ ದಿನ ಆಚರಿಸಲು ನಿರ್ಧರಿಸಲಾಗಿದ್ದು, ಆ ದಿನ ಕನಿಷ್ಠ 300 ಜನರಾದರೂ ಭಾಗವಹಿಸಬೇಕು ಎಂದರು. ಶಿವರಾಜ ಮೇತ್ರೆ, ಶಶಿಕಾಂತ ಘಾವಲ್ಕರ್‌, ರಮೇಶ ಕಲ್ಯಾಣಿ, ಗೌತಮ್‌ ಕೀರ್ತಿಕರ್‌, ಮಾರ್ತಾಂಡ ಕೆಳಗೇರಿ, ಮಾಣಿಕಪ್ಪ ಗೋಖಲೆ, ಮೋಜಸ್‌, ಲೋಕೇಶ, ಝೆರೆಪ್ಪ, ಕಂಟೆಪ್ಪ, ರಮೇಶ ಬಾಗವಾಲೆ, ಗಣಪತಿ ಇತರರು ಇದ್ದರು. ಶರದ್‌ಕುಮಾರ ಸ್ವಾಗತಿಸಿದರು. ಅರವಿಂದ ಹುಡಗೀಕರ್‌ ವಂದಿಸಿದರು.

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.