ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಿ

ಅಭಿವೃದ್ಧಿಗೆ ಆದ್ಯತೆ ನೀಡಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸೋಣ: ಸ್ಥಾವರಮಠ

Team Udayavani, Jun 6, 2019, 4:24 PM IST

06-June-36

ಹುಣಸಗಿ: ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಶಾಂತಮ್ಮ ಬಸವರಾಜ ಮಲಗಲದಿನ್ನಿ ಅಧ್ಯಕ್ಷತೆಯಲ್ಲಿ ನಡೆಯಿತು.

ಹುಣಸಗಿ: ಇಲ್ಲಿನ ಗ್ರಾಪಂ ಸಾಮಾನ್ಯ ಸಭೆ ಅಧ್ಯಕ್ಷೆ ಶಾಂತಮ್ಮ ಬಸವರಾಜ ಮಲಗಲದಿನ್ನಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಮೇವು ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆ ನಡೆದವು.

ಸದಸ್ಯ ಮಂಜುನಾಥ ದೇಸಾಯಿ ಮಾತನಾಡಿ, ಸರಕಾರದಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಮುಂದಾಗಿದ್ದು, ಹುಣಸಗಿ ತಾಲೂಕಿನ ಒಂದು ಶಾಲೆಯನ್ನು ಆಯ್ಕೆ ಮಾಡಿಲ್ಲ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಗ್ರಾಮ ಪಂಚಾಯಿತಿ ವತಿಯಿಂದ ಶಿಕ್ಷಣ ಇಲಾಖೆಗೆ ಪತ್ರ ಬರೆಯುವಂತೆ ಒತ್ತಾಯಿಸಿದರು.

ಇದಕ್ಕೆ ಬಹುತೇಕ ಸದಸ್ಯರು ಧ್ವನಿಗೂಡಿಸಿದರು. ಸದಸ್ಯ ಚಂದ್ರಶೇಖರ ಗೋನಾಳ ಮಾತನಾಡಿ, ತಾಳಿಕೋಟಿ ರಸ್ತೆಯಲ್ಲಿ ಬರುವ ವಾರ್ಡ್‌ ನಂ. 8ರ ಆಶ್ರಯ ಕಾಲೋನಿಯಲ್ಲಿ ಶೌಚಾಲಯ ಸಮಸ್ಯೆ ಇದ್ದು, ಅದನ್ನು ಕೂಡಲೇ ಅಭಿವೃದ್ಧಿ ಅಧಿಕಾರಿಗಳು ಪರಿಹರಿಸುವಂತೆ ಒತ್ತಾಯಿಸಿದರು.

ಗ್ರಾಮ ದೇವತೆ ದೇವಸ್ಥಾನ ಬಳಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ವಾರ್ಡ್‌ ನಿವಾಸಿಗಳು ತೊಂದರೆ ಪಡುತ್ತಿದ್ದು, ನೀರಿನ ಸೌಲಭ್ಯಕ್ಕಾಗಿ ಒತ್ತಾಯಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ್ದ ಕಾಮಗಾರಿಯನ್ನು ಜಿಪಿಎಸ್‌ ಮಾಡಲು ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲಸ ಪ್ರಗತಿ ಸಾಧಿಸುವಲ್ಲಿ ತೊಂದರೆಯಾಗುತ್ತಿದೆ ಎಂದು ಸದಸ್ಯ ಸಿದ್ದಣ್ಣ ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಸ್ಥಾವರಮಠ ಮಾತನಾಡಿ, ಎಲ್ಲ ಸದಸ್ಯರು ಒಗ್ಗಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ಪ್ರಯತ್ನಿಸೋಣ ಎಂದರು. ಡಾ| ಅನಂತಮೂರ್ತಿ ಮಾತನಾಡಿ, ಹುಣಸಗಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪನೆ ಮಾಡಲಾಗಿದ್ದು, 2 ರೂ. ಕೆಜಿಯಂತೆ ಮೇವು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 19 ಟನ್‌ ಮೇವು ಸಂಗ್ರಹವಿದೆ ಎಂದು ಸಭೆಯ ಗಮನಕ್ಕೆ ತಂದರು. ಕಳೆದ 8 ತಿಂಗಳಿಂದಲೂ ನಮ್ಮ ಸಂಬಳವಾಗಿಲ್ಲ. ಆದ್ದರಿಂದ ಸಂಬಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಭೆಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ, ಅಭಿವೃದ್ಧಿ ಅಧಿಕಾರಿ ರಾಜಶೇಖರನಾಯಕ, ದತ್ತಾತ್ರೇಯ ಕುಲಕರ್ಣಿ, ಸದಸ್ಯರಾದ ಆನಂದಸ್ವಾಮಿ ಮಠ, ಅನಂತ ದೇಶಪಾಂಡೆ, ಅನೀಲ ಬಳಿ, ಬಸವರಾಜ ಹಂಚಲಿ, ನಾಗಯ್ಯಸ್ವಾಮಿ ದೇಸಾಯಿಗುರು, ನೀಲಕಂಠ ಚಿಂಚೊಳಿ, ಪರಶುರಾಮ ದ್ಯಾಪುರ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಗ್ರಾಪಂ ಸದಸ್ಯ ಶಿವಶರಣ ದೇಸಾಯಿ, ಸಂಜೀವಪ್ಪ ಹಾಗೂ ಬಸಣ್ಣ ದೊರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಟಾಪ್ ನ್ಯೂಸ್

ವಾಟ್ಸ್‌ಆ್ಯಪ್‌ ಚಾಟ್‌: ಆಂಡ್ರಾಯ್ಡ್-ಟು- ಆ್ಯಪಲ್‌!

ವಾಟ್ಸ್‌ಆ್ಯಪ್‌ ಚಾಟ್‌: ಆಂಡ್ರಾಯ್ಡ್-ಟು- ಆ್ಯಪಲ್‌!

ಜರ್ಮನಿ ನೌಕಾಪಡೆಯ ಮುಖ್ಯಸ್ಥ ರಾಜೀನಾಮೆ

ಜರ್ಮನಿ ನೌಕಾಪಡೆಯ ಮುಖ್ಯಸ್ಥ ರಾಜೀನಾಮೆ

ಕೇವಲ ಒಂದು ನಿಮಿಷಕ್ಕೆ 109 ಬಾರಿ ಪುಷ್‌ಅಪ್‌! ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ ಯುವಕ

ಕೇವಲ ಒಂದು ನಿಮಿಷಕ್ಕೆ 109 ಬಾರಿ ಪುಷ್‌ಅಪ್‌! ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ ಯುವಕ

ಕೋವಿಡ್‌ ಸೋಂಕು: 2,200 ಹ್ಯಾಮ್‌ಸ್ಟರ್‌ಗಳ ಹತ್ಯೆ

ಕೋವಿಡ್‌ ಸೋಂಕು: 2,200 ಹ್ಯಾಮ್‌ಸ್ಟರ್‌ಗಳ ಹತ್ಯೆ

ಯುಎಇ: ಮುಂದಿನ ಒಂದು ತಿಂಗಳ ಕಾಲ ಡ್ರೋನ್‌ಗೆ ನಿಷೇಧ

ಯುಎಇ: ಮುಂದಿನ ಒಂದು ತಿಂಗಳ ಕಾಲ ಡ್ರೋನ್‌ಗೆ ನಿಷೇಧ

ಭಟ್ಕಳ : ಮನೆಯ ಬೀಗ ಮುರಿದು ನಗ ನಾಣ್ಯ ದೋಚಿ ಪರಾರಿಯಾದ ಕಳ್ಳರು

ಮನೆಗೆ ಕನ್ನ ಹಾಕಿದ ಕಳ್ಳರು, ಅಪಾರ ಪ್ರಮಾಣದ ಸೊತ್ತು ಕಳವು : ಪೊಲೀಸರಿಂದ ಶೋಧ ಕಾರ್ಯ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ, ಓರ್ವ ಸೋಂಕಿತ ಸಾವು

ಭಟ್ಕಳ : ಮನೆಯ ಬೀಗ ಮುರಿದು ನಗ ನಾಣ್ಯ ದೋಚಿ ಪರಾರಿಯಾದ ಕಳ್ಳರು

ಮನೆಗೆ ಕನ್ನ ಹಾಕಿದ ಕಳ್ಳರು, ಅಪಾರ ಪ್ರಮಾಣದ ಸೊತ್ತು ಕಳವು : ಪೊಲೀಸರಿಂದ ಶೋಧ ಕಾರ್ಯ

shivamogga news

ನಂದಿತಾ ಪ್ರಕರಣ ಸಿಬಿಐ ತನಿಖೆ ಈಗ್ಯಾಕೆ

ballari news

ಶಾಲಾ-ಕಾಲೇಜು ಓಪನ್‌: ಡಿಸಿ ಮಾಲಪಾಟಿ

davanagere news

ಮರು ಮತದಾರರ ಪಟ್ಟಿಗೆ ಸೇರಿಸಲು ನಾಗರಿಕರ ಒತ್ತಾಯ

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

ವಾಟ್ಸ್‌ಆ್ಯಪ್‌ ಚಾಟ್‌: ಆಂಡ್ರಾಯ್ಡ್-ಟು- ಆ್ಯಪಲ್‌!

ವಾಟ್ಸ್‌ಆ್ಯಪ್‌ ಚಾಟ್‌: ಆಂಡ್ರಾಯ್ಡ್-ಟು- ಆ್ಯಪಲ್‌!

ಜರ್ಮನಿ ನೌಕಾಪಡೆಯ ಮುಖ್ಯಸ್ಥ ರಾಜೀನಾಮೆ

ಜರ್ಮನಿ ನೌಕಾಪಡೆಯ ಮುಖ್ಯಸ್ಥ ರಾಜೀನಾಮೆ

ಕೇವಲ ಒಂದು ನಿಮಿಷಕ್ಕೆ 109 ಬಾರಿ ಪುಷ್‌ಅಪ್‌! ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ ಯುವಕ

ಕೇವಲ ಒಂದು ನಿಮಿಷಕ್ಕೆ 109 ಬಾರಿ ಪುಷ್‌ಅಪ್‌! ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ ಯುವಕ

ಕೋವಿಡ್‌ ಸೋಂಕು: 2,200 ಹ್ಯಾಮ್‌ಸ್ಟರ್‌ಗಳ ಹತ್ಯೆ

ಕೋವಿಡ್‌ ಸೋಂಕು: 2,200 ಹ್ಯಾಮ್‌ಸ್ಟರ್‌ಗಳ ಹತ್ಯೆ

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ, ಓರ್ವ ಸೋಂಕಿತ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.