ಬಾರದ ಅನುದಾನ-ಜನರಿಗಿಲ್ಲ ಸಮಾಧಾನ

ವಿವಿಧ ಯೋಜನೆಯಡಿ ಮನೆ ನಿರ್ಮಿಸಿ ಕಾಯುತ್ತಿರುವ ಫಲಾನುಭವಿಗಳುಸುಮಾರು 8 ಕೋಟಿ ಬಾಕಿ

Team Udayavani, Nov 13, 2019, 11:45 AM IST

13-November-04

ಜಗಳೂರು: ಸರ್ಕಾರದ ವಿವಿಧ ವಸತಿ ಯೋಜನೆಯಡಿ 2000ಕ್ಕೂ ಅಧಿಕ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು 1 ವರ್ಷ ಕಳೆದರೂ ಸಹ ಸರಕಾರದಿಂದ ಅನುದಾನ ಬಿಡುಗಡೆಯಾಗದೇ ಸಾಲ ಸೂಲ ಮಾಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ತಾಲೂಕಿನ ಫಲಾನುಭವಿಗಳಿಗೆ ಬರಬೇಕಾದ ಮೊತ್ತವೇ ಸುಮಾರು 8 ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗುತ್ತಿದೆ. ಸರ್ಕಾರದ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಲ್ಲಿ ಕೆಲವರು ಈಗಾಗಲೇ ಬುನಾದಿ ಹಾಕಿದ್ದು , ಮತ್ತೆ ಕೆಲವರು ಸಜ್ಜಾವರೆಗೆ ಮತ್ತೆ ಕೆಲವರು ಸಂಪೂರ್ಣವಾಗಿ ಮನೆ ನಿರ್ಮಿಸಿಕೊಂಡು ಸರ್ಕಾರದ ಅನುದಾನಕ್ಕೆ ಕಾಯುತ್ತಿದ್ದಾರೆ.

ಸರ್ಕಾರ ವಸತಿ ಯೋಜನೆಗಳಡಿ ಮನೆ ಕಟ್ಟಿಕೊಳ್ಳಲು ನಾಲ್ಕು ಹಂತಗಳಲ್ಲಿ ಹಣ ಬಿಡುಗಡೆ ಮಾಡುತ್ತದೆ. ಫಲಾನುಭವಿಗಳು ಮೊದಲು ಹಣವನ್ನು ಹಾಕಿ ಮನೆ ನಿರ್ಮಿಸಿಕೊಳ್ಳಬೇಕು. ನಂತರ ಮನೆ ನಿರ್ಮಾಣದ ಹಂತ ಗಮನಿಸಿ ಸರಕಾರ ಫಲಾನುಭವಿಯ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಪದ್ಧತಿ ಇದೆ. ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 2017-18 ನೇ ಸಾಲಿನಲ್ಲಿ ಅಂಬೇಡ್ಕರ್‌ ನಿವಾಸ್‌ ಯೋಜನೆಯಡಿ 2169, ಬಸವ ವಸತಿ ಯೋಜನೆಯಡಿ 440 ಫಲಾನುಭವಿಗಳಿದ್ದಾರೆ.

ಅಂಬೇಡ್ಕರ್‌ ನಿವಾಸ ಯೋಜನೆಯಡಿ 2169 ಫಲಾನುಭವಿಗಳಲ್ಲಿ 39 ಫಲಾನುಭವಿಗಳು ಇನ್ನೂಕಾಮಗಾರಿ ಪ್ರಾರಂಭಿಸಿಲ್ಲ. 451 ಜನ ಬುನಾದಿ ಹಾಕಿದ್ದು, 250 ಜನ ಸಜ್ಜಾವರೆಗೆ ನಿರ್ಮಿಸಿಕೊಂಡಿದ್ದು 253 ಫಲಾನುಭವಿಗಳು ಚಾವಣಿವರೆಗೆ, 279 ಫಲಾನುಭವಿಗಳು ಸಂಪೂರ್ಣ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಕಳೆದ 7 ತಿಂಗಳುಗಳಿಂದ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ವಸತಿಯೋಜನೆ ನೊಡಲ್‌ ಅಧಿಕಾರಿ ತಿಮ್ಮೇಶ್‌, ಸಾಲ ಸೂಲ ಮಾಡಿ ಮನೆ ನಿರ್ಮಿಸಿಕೊಂಡು ಒಂದೂವರೆ ವರ್ಷ ಕಳೆದರೂ ಸಹ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಸಾಲ ಪಡೆದವರಿಗೆ ಬಡ್ಡಿ ಕಟ್ಟಲು ಸಹ ಆಗದಿರುವಂತ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕಷ್ಟವನ್ನು ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ಕೆಳಗೊಟೆ ಗ್ರಾಮದ ಫಲಾನುಭವಿ ವಿಶಾಲಮ್ಮ.

ಸಮೀಕ್ಷೆಗೆ ಮಾತ್ರ ಸೀಮಿತವಾದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ: ತಾಲೂಕಿನಲ್ಲಿ 1205 ಜನ ವಸತಿ ರಹಿತರಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ ಸಮೀಕ್ಷೆ ನಡೆದು ಒಂದೂವರೆ ವರ್ಷ ಕಳೆದರೂ ಸಹ ಒಬ್ಬ ಫಲಾನುಭವಿಗೂ ಮನೆ, ನಿವೇಶನ ದೊರೆತಿಲ್ಲ. ಜನಪ್ರತಿನಿ ಧಿಗಳು ಪೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಫಲಾನುಭವಿಗಳು ದೂರಿದ್ದಾರೆ.

ಟಾಪ್ ನ್ಯೂಸ್

ಕಾರಜೋಳ

ತಮಿಳುನಾಡಿಗೆ ಹೊಗೇನೇಕಲ್ ನಲ್ಲಿ ಯೋಜನೆ ಮಾಡಲು ಬಿಡುವುದಿಲ್ಲ: ಕಾರಜೋಳ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

SUNIL-KUMAR

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ಆಗಿದ್ದೇನು?

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿ

1-assads-2

ಪ್ರಧಾನಿ ಮೋದಿ ಹೆಸರಲ್ಲಿ ಸಂಕಲ್ಪ: ಎರಡು ವರ್ಷಗಳಿಂದ ನಿತ್ಯ ಯಾಗ!

ಉಡುಪಿ; OLXನಲ್ಲಿ ಕಿವಿಯೋಲೆ ಮಾರಲು ಹೋಗಿ 93 ಸಾವಿರ ರೂ. ಕಳೆದುಕೊಂಡ ಯುವತಿ

ಉಡುಪಿ; OLXನಲ್ಲಿ ಕಿವಿಯೋಲೆ ಮಾರಲು ಹೋಗಿ 93 ಸಾವಿರ ರೂ. ಕಳೆದುಕೊಂಡ ಯುವತಿ

8CM1

ಸಿದ್ಧಗಂಗಾ ಮಠದಲ್ಲಿ ದಾಸೋಹ ದಿನಕ್ಕೆ ಸಿಎಂ ಬೊಮ್ಮಾಯಿ ಚಾಲನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13childrens-killed

ಮಕ್ಕಳನ್ನು ಬಾವಿಗೆ ನೂಕಿ ಹತ್ಯೆಗೈದ ಹೆತ್ತ ತಾಯಿ

12street

ಬೀದಿ ವ್ಯಾಪಾರಿಗಳು ಸಂಘಟಿತರಾಗಲಿ: ಜಗನ್ನಾಥ

11govt

ಸರ್ಕಾರಿ ಯೋಜನೆ ಸದುಪಯೋಗ ಮಾಡಿಕೊಳ್ಳಿ: ಪಾಟೀಲ

1-fwrrre

ಮಂಗಳೂರು: ಹಣಕ್ಕಾಗಿ ಜ್ಯೋತಿಷಿಯೊಬ್ಬರ ಹನಿ ಟ್ರ್ಯಾಪ್ ಮಾಡಿದ್ದ ದಂಪತಿಗಳ ಬಂಧನ 

10goal

ಕೆಕೆಆರ್‌ಡಿಬಿ ನಿಗದಿತ ಗುರಿ ಸಾಧಿಸದ್ದಕ್ಕೆ ಅಸಮಾಧಾನ

MUST WATCH

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೊಸ ಸೇರ್ಪಡೆ

ಕಾರಜೋಳ

ತಮಿಳುನಾಡಿಗೆ ಹೊಗೇನೇಕಲ್ ನಲ್ಲಿ ಯೋಜನೆ ಮಾಡಲು ಬಿಡುವುದಿಲ್ಲ: ಕಾರಜೋಳ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

13childrens-killed

ಮಕ್ಕಳನ್ನು ಬಾವಿಗೆ ನೂಕಿ ಹತ್ಯೆಗೈದ ಹೆತ್ತ ತಾಯಿ

SUNIL-KUMAR

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ಆಗಿದ್ದೇನು?

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.