ಕಲ್ಯಾಣ ಕರ್ನಾಟಕ ಶರಣರ ಪರಿಕಲ್ಪನೆಯಲ್ಲಿ

ಹೈದ್ರಾಬಾದ ಕರ್ನಾಟಕಕ್ಕಿದೆ ಪ್ರತ್ಯೇಕ ಸಾಹಿತ್ಯ ಚರಿತ್ರೆನಾವು ಪಾಶ್ಚಾತ್ಯರಿಂದ ಪ್ರಭಾವಿತರಾಗಿಲ್ಲ

Team Udayavani, Sep 27, 2019, 5:37 PM IST

ಕಲಬುರಗಿ: ಕಲ್ಯಾಣ ಕರ್ನಾಟಕ ಶರಣರ ಪರಿಕಲ್ಪನೆಯಲ್ಲ. ಯಾವ ಪುರುಷಾರ್ಥಕ್ಕಾಗಿ ನಾಮಕರಣ ಮಾಡಲಾಗಿದೆ ಎನ್ನುವುದು ತಿಳಿದಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ|ಬಸವರಾಜ ಸಬರದ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಕನ್ನಡ ವಿಭಾಗ ಸರಕಾರಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಗುಲ್ಬರ್ಗ ವಿವಿ ಹರಿಹರ ಸಭಾಂಗಣದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಸುವರ್ಣ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅರಿವಂ ಪಸರಿಸುವುದೇ ಧರ್ಮಂ, ಅದಂ ಕೆಡಿಪುದೇ ಅಧರ್ಮಂ’ ಎನ್ನುವ ಪಂಪನ ಉಕ್ತಿ ಹೆಸರಿಸುತ್ತಾ ಕಲ್ಯಾಣ ಕರ್ನಾಟಕ ಎನ್ನುವುದಕ್ಕಿಂತ ಅವರ ತ್ಯಾಗ, ಬಲಿದಾನವನ್ನು ನಾವು ಸ್ಮರಿಸಬೇಕೇ ವಿನಃ ಅವುಗಳನ್ನು ಉತ್ಸವಗಳನ್ನಾಗಿ ಮಾಡಬಾರದು.

ಹೈದ್ರಾಬಾದ ಕರ್ನಾಟಕಕ್ಕೆ ಪ್ರತ್ಯೇಕ ಸಾಹಿತ್ಯ ಚರಿತ್ರೆ
ಇದೆ. ನಾವು ಪಾಶ್ಚಾತ್ಯದಿಂದ ಪ್ರಭಾವಿತರಾದವರಲ್ಲ
ಅದನ್ನು ಸಾಹಿತ್ಯ ಚರಿತ್ರೆಕಾರರು ಮತ್ತು ವಿಮರ್ಶಕರು ತಪ್ಪಾಗಿ ಪ್ರತಿಪಾದಿಸಿದ್ದಾರೆ. ನಮ್ಮ ಚರಿತ್ರೆ ನಾವು ಕಟ್ಟಿಕೊಳ್ಳಬೇಕು. ವಚನ, ಕೀರ್ತನ, ಸೂಫಿ ತತ್ವಪದ ನಮ್ಮ ಸಾಹಿತ್ಯ ಚರಿತ್ರೆಯ ಮೂಲಬೇರು ಎಂದು ಪ್ರತಿಪಾದಿಸಿದರು.

ಸಿದ್ಧಲಿಂಗೇಶ್ವರ ಪ್ರಕಾಶನದ ಮಾಲೀಕ ಬಸವರಾಜ
ಕೊನೇಕ್‌ ಪಠ್ಯಪುಸ್ತಕ ಕುರಿತು ವಿವರಿಸಿದರು. ಪ್ರಭಾರ
ಕುಲಪತಿ ಪ್ರೊ| ಪರಿಮಳ ಅಂಬೇಕರ್‌ ಅಧ್ಯಕ್ಷತೆ ವಹಿಸಿ, ವಿಚಾರ ಸಂಕಿರಣಗಳು- ಉಪನ್ಯಾಸ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿವೆ ಎಂದರು.

ಡಾ| ಸುರೇಶ ಎಲ್‌. ಜಾಧವ, ಡಾ| ರೊಲೇಕರ್‌  ನಾರಾಯಣ ಹಾಗೂ ಮುಂತಾದವರು ಇದ್ದರು. ಡಾ| ಸಂತೋಷ ಕಂಬಾರ ನಿರೂಪಿಸಿದರು, ಡಾ| ಎಂ.ಬಿ ಕಟ್ಟಿ ವಂದಿಸಿದರು.

ಗೋಷ್ಠಿ ಒಂದು: ಡಾ| ಶ್ರೀಶೈಲ ನಾಗರಾಳ ಜಾನಪದ
ಕುರಿತು ಮಾತನಾಡಿದರು. ಡಾ| ಅಮೃತಾ ಕಟಕೆ ವಿಚಾರ ವಿಮರ್ಶೆ ಕುರಿತು ಮಾತನಾಡಿದರು.

ಡಾ| ಕಲ್ಯಾಣರಾವ ಪಾಟೀಲ ಸಂಪಾದನೆ ಕುರಿತು ಮಾತನಾಡಿದರು. ಡಾ| ಕೆ. ರವೀಂದ್ರನಾಥ ವಚನ, ದಾಸ, ತತ್ಪಪದ ಕುರಿತು ಮಾತನಾಡಿದರು, ಡಾ|
ಪಂಡಿತ ಬಿ.ಕೆ., ಡಾ| ನಾಗಪ್ಪ ಗೋಗಿ ಸಂವಾದದಲ್ಲಿ
ಪಾಲ್ಗೊಂಡಿದ್ದರು.

ಗೋಷ್ಠಿ ಎರಡು: ಕಥೆ-ಪ್ರಬಂಧ ಕುರಿತು ಡಾ|
ದಸ್ತಗೀರಿಸಾಬ ದಿನ್ನಿ ವಿಷಯ ಮಂಡಿಸಿದರು. ಸಂಶೋಧನೆ ಕುರಿತು ಡಾ| ಮಹಾದೇವ ಬಡಿಗೇರ ಮಾತನಾಡಿದರು. ನಾಟಕ ಕುರಿತು ಡಾ|ಸೂರ್ಯಕಾಂತ ಸುಜ್ಯಾತ್‌, ಡಾ| ವಿಕ್ರಮ ವಿಸಾಜಿ
ಕಾವ್ಯ ಕುರಿತು ಮಾತನಾಡಿದರು. ಡಾ| ಮಹಾದೇವಿ
ಹೆಬ್ಟಾಳೆ ಮತ್ತು ಡಾ| ಎಂ.ಬಿ. ಕಟ್ಟಿ ಸಂವಾದ ನಡೆಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮ ನಿರ್ವಾಹಕರಾದ ಆಕಾಶವಾಣಿ ಕಲಬುರಗಿಯ ಡಾ| ಸದಾನಂದ ಪೆರ್ಲಾ ಅವರು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಪ್ರಕಟಣೆಗಳು ಇಡೀ ಕನ್ನಡ ಸಾಹಿತ್ಯಕ್ಕೆ ಮಾದರಿಗಳಾಗಿವೆ. ಇವು ಅಪರೂಪದ ಯೋಜನೆಗಳಾಗಿವೆ ಎಂದು ಬಣ್ಣಿಸಿದರು.

ಪ್ರೊ| ಎಚ್‌.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು. ಡಾ| ನಾರಾಯಣ ರೊಲೇಕರ, ಬಸವರಾಜ ಕೊನೇಕ್‌ ವೇದಿಕೆ ಮೇಲಿದ್ದರು. ಡಾ| ಹಣಮಂತ ಮೇಲಕೇರಿ ನಿರೂಪಿಸಿದರು, ಡಾ| ಸಿದ್ಧಲಿಂಗ ದಬ್ಟಾ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ