ಕಲಬುರಗಿ: ಸೌದಿಯಿಂದ ಬಂದ ಇಬ್ಬರೂ ಸೇರಿ 39 ಜನರಿಗೆ ಕೋವಿಡ್ ದೃಢ
Team Udayavani, Jun 7, 2020, 6:33 PM IST
ಕಲಬುರಗಿ: ಜಿಲ್ಲೆಯಲ್ಲಿ ರವಿವಾರ ಸೌದಿ ಅರೇಬಿಯಾದಿಂದ ಬಂದ ಇಬ್ಬರು ಸೇರಿ 39 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 660ಕ್ಕೆ ಏರಿಕೆಯಾಗಿದೆ.
ಸೌದಿ ಅರೇಬಿಯಾದಿಂದ ವಾಪಸ್ ಆಗಿರುವ 33 ವರ್ಷದ ಮಹಿಳೆ (ಪಿ-5239) ಮತ್ತು ನಾಲ್ಕು ವರ್ಷದ ಮಗು (ಪಿ-5240) ವಿಗೆ ಸೋಂಕು ಕಾಣಿಸಿಕೊಂಡಿದೆ. 65 ವರ್ಷದ ವೃದ್ಧೆ (ಪಿ-5222) ಗೂ ಕೋವಿಡ್ ಪತ್ತೆಯಾಗಿದೆ. ಈ ಅಜ್ಜಿಗೆ ಹೀಗೆ ಮತ್ತು ಯಾರಿಂದ ಸೋಂಕು ಹರಡಿದೆ ಎಂಬುವುದು ಇನ್ನೂ ಗೊತ್ತಾಗಿಲ್ಲ.
ಉಳಿದಂತೆ ಮಹಾರಾಷ್ಟ್ರದಿಂದ ಮರಳಿದ ಮತ್ತೆ 36 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 16 ವರ್ಷದೊಳಗಿನ ಎಂಟು ಮಕ್ಕಳು ಸೇರಿದ್ದು, ಒಬ್ಬ 72 ವರ್ಷದ ಅಜ್ಜಿಗೂ ಸೋಂಕು ಕಾಣಿಸಿಕೊಂಡಿದೆ.
ಒಟ್ಟು 660 ಸೋಂಕಿತರಲ್ಲಿ ಇದುವರೆಗೆ 166 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 487 ಜನ ಸೋಂಕಿತರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು