ಸೈಯದ್‌ ಚಿಂಚೋಳಿಯಲ್ಲಿ ಅಂಬೇಡ್ಕರ್‌ ಪುತ್ಥಳಿ

Team Udayavani, Jan 27, 2018, 10:45 AM IST

ಕಲಬುರಗಿ: ತಾಲೂಕಿನ ಸೈಯದ್‌ ಚಿಂಚೋಳಿ ಗ್ರಾಮದ ಜೈ ಭೀಮ ಕಾಲೋನಿಯಲ್ಲಿ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಪಂಚಲೋಹದ ಪುತ್ಥಳಿಯನ್ನು ಶ್ರೀಗುರು ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಡಿಗ್ಗಾಂವಿ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು ಭಾರತ ದೇಶದಲ್ಲಿರುವ ವಿವಿಧ ಜಾತಿ, ಧರ್ಮದವರಿಗೆ ಸಮಾನವಾಗಿ ಬಾಳಲು ಹಾಗೂ ಪ್ರಜೆಗಳೆ ಪ್ರಭುಗಳು ಎಂಬ ಸಂವಿಧಾನವನ್ನು ಬರೆದ ಡಾ| ಬಾಬಾ ಸಾಹೆಬ್‌ ಅಂಬೇಡ್ಕರ್‌ ಅವರ ಆಶಯದಂತೆ ಸರಕಾರ ಹಾಗೂ ಅದರ ಯೋಜನೆಗಳು ನಡೆದು ಎಲ್ಲರಿಗೂ ದೊರಕಬೇಕಾಗಿದೆ ಎಂದರು.

ಪ್ರತಿಭೆಗೆ ಬಡವ ಶ್ರೀಮಂತ ಎನ್ನುವ ಬೇಧ ಭಾವವಿಲ್ಲ. ಆದರೆ ಕಾಣದ ಕೈಗಳಿಂದ ಇಂದು ಸಿಗಬೇಕಾದ ಅವಕಾಶಗಳು ಬಡ ಮಕ್ಕಳ ಕೈತಪ್ಪಿ ಅವುಗಳು ಮರೀಚಿಕೆಯಾಗಿ ಉಳಿಯುತ್ತಿವೆ ಎಂದು ಖಳವಳ ವ್ಯಕ್ತಪಡಿಸಿದರು.

ಇದೆ ವೇಳೆ ಪ್ರತಿಭಾವಂತ ಸಂದೀಪ ಬೆಳಮಗಿ ಎನ್ನುವ ಬಡ ವಿದ್ಯಾರ್ಥಿಯ ಉನ್ನತ ಶಿಕ್ಷಣದ ಖರ್ಚು ವೆಚ್ಚ ತಾವೇ ಸಂಪೂರ್ಣವಾಗಿ ಭರಿಸುವುದಾಗಿ ಪ್ರಕಟಿಸಿದರು. ದಲಿತ ಹಿರಿಯ ಮುಖಂಡ ಡಾ| ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಗ್ಲೋಬಲ್‌ ವಾಯ್‌ ಆಫ್‌ ಲೈಫ್‌ ಮೆಡಿಟೇಷನ್‌ ಮಾಸ್ಟರ್‌ನ ಭಂತೆ ಮಾತಾ ಮೈತ್ರಿ, ಪ್ರಾಧ್ಯಾಪಕ ಆಯ್‌.ಎಸ್‌. ವಿದ್ಯಾಸಾಗರ ಮಾತನಾಡಿದರು.
 
ಮುಖಂಡರಾದ ಮಲ್ಲಿಕಾರ್ಜುನ ಖೇಮಜಿ, ಶಿವರಾಜ ಡಿಗ್ಗಾಂವಿ, ಪ್ರಮೀಳಾಬಾಯಿ ಡಿಗ್ಗಾಂವಿ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಗ್ರಾಮೀಣ ಪೊಲೀಸ ಠಾಣೆ ಸಿಪಿಐ ವಾಜೀದ್‌ ಪಟೇಲ್‌, ಪಿಎಸ್‌ ಐ ಚಂದ್ರಶೇಖರ ತಿಗಡಿ, ಮುಖಂಡರಾದ ಅರ್ಜುನ ಭದ್ರೆ, ಸರ್ಜುನ ಗೋಬ್ಬುರ್‌, ರಾಜಕುಮಾರ ಎಚ್‌. ಕಪನೂರ, ಮಲ್ಲಿಕಾರ್ಜುನ ಗಾಯಕವಾಡ್‌, ಪವನಕುಮಾರ ವಳಕೇರಿ, ಅಂಬಾರಾಯ ಮಹಾಮನಿ, ಭವಾನಿಕುಮಾರ ವಳಕೇರಿ, ಅನೀತಾ ವಳಕೇರಿ, ಬಾಬು ಸಾಗರ, ವಿಜಯಲಕ್ಷ್ಮೀ ಕೋಟೆ, ಶ್ರೀಕಾಂತ ಒಂಟೆ, ಶರಣಬಸಪ್ಪ ಸಂಗೋಳಗಿ, ಮಹಾನಂದಾ
ಮುಗಳನಾಗಾಂವ, ಕಲ್ಯಾಣಿ ಆನಂದ, ವಿಠ್ಠಲ ಗೌಳಿ, ಸರಸ್ವತಿ ಎಲ್‌. ಸಾವಳಗಿ, ಯಶ್ವಂತ ವಾಮನಕರ್‌, ಶರಣು ಎಸ್‌. ಡಾಂಗೆ, ಅವಿನಾಶ ವಾರದ್‌, ಶಂಭುಲಿಂಗ ಡಿಗ್ಗಿ ಇದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೇವರ್ಗಿ: ದೇಶದ ಗಾಳಿ, ನೀರು, ಅನ್ನ ತಿಂದು ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನದ ಬಗ್ಗೆ ಹೊಗಳುವ ಆಂತರಿಕ ಭಯೋತ್ಪಾಕರನ್ನು ಶಿಕ್ಷಿಸುವ ಕೆಲಸವಾಗಬೇಕು ಎಂದು ಶ್ರೀರಾಮಸೇನೆ...

  • ಕಲಬುರಗಿ: ಆಧುನಿಕತೆ ಭರಾಟೆಗೆ ಸಿಲುಕಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಕಳವಳ ವ್ಯಕ್ತಪಡಿಸಿದರು. ಕನ್ನಡ...

  • ಕಲಬುರಗಿ: ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರು) ತಾಂತ್ರಿಕ ಉತ್ತೇಜಕರಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 6500 ಜನರಿಗೆ ಮಾಸಿಕ 10000ರೂ. ಗೌರವ ಧನ ಕೊಡಬೇಕು ಎಂದು...

  • ಮಾದನ ಹಿಪ್ಪರಗಿ: ಇಲ್ಲಿನ ಪಿಕೆಪಿಎಸ್‌ ಕೇಂದ್ರದಲ್ಲಿ ನ್ಯಾಪಾಡ್‌ ಸಂಸ್ಥೆ ಆರಂಭಿಸಿದ ಖರೀದಿ ಕೇಂದ್ರದಲ್ಲಿನ ತೊಗರಿ ಸಾಗಾಟಕ್ಕೆ ಲಾರಿಯವರು ಭತ್ಯೆ ರೂಪದಲ್ಲಿ...

  • ಕಲಬುರಗಿ: ತಾಲ್ಲೂಕಿನ ನಂದೂರ(ಕೆ) ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಂದೂರ (ಬಿ), ಧರ್ಮಾಪುರ ಮತ್ತು ಎಲ್ಲ ತಾಂಡಾಗಳಿಗೆ ಕಾಗಿಣಾ ನದಿಯಿಂದ ಪೈಪ್‌ಲೈನ್‌ ಮುಖಾಂತರ...

ಹೊಸ ಸೇರ್ಪಡೆ