ಪ್ರವಾಸಿ ತಾಣವಾಗದ ಬೌದ್ಧ ನೆಲೆ

Team Udayavani, Sep 24, 2018, 10:37 AM IST

ವಾಡಿ: ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿರುವ ಬುದ್ಧನ ಶಿಲ್ಪಗಳ ರಕ್ಷಣೆಗೆ ಸರ್ಕಾರ ಭದ್ರತೆ ಒದಗಿಸಿದೆ. ಆದರೆ ನೆಲದ ಮೇಲೆ ಬಿದ್ದಿರುವ ಸಾವಿರಾರು ಬೌದ್ಧ ಶಿಲ್ಪಗಳು ಕಳೆದ 20 ವರ್ಷಗಳಿಂದ ಬಿಸಿಲು, ಮಳೆ, ಗಾಳಿ, ಧೂಳಿಗೆ ಮೈಯೊಡ್ಡಿ ಹಾಳಾಗುತ್ತಿವೆ.

ಸನ್ನತಿ ಗ್ರಾಮ ಹೊರ ವಲಯದ ಕನಗನಹಳ್ಳಿ ಪ್ರದೇಶದ ಭೀಮಾ ನದಿ ದಂಡೆಯ ಜಮೀನೊಂದರಲ್ಲಿ ಬುದ್ಧನ ಮೂರ್ತಿಗಳೊಂದಿಗೆ ದೊರೆತಿರುವ ಬೌದ್ಧವಿಹಾರ ಕ್ರಿ.ಪೂ. ಮೂರನೇ ಶತಮಾನದ ಕಥೆ ಹೇಳುತ್ತಿದೆ.
 
ಭಾರತದಲ್ಲಿ ಬೌದ್ಧ ಧರ್ಮ ಮರುಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್‌ ಅಶೋಕನ ಕಾಲಘಟ್ಟದ್ದು ಎನ್ನಲಾಗಿರುವ ಈ ಬೌದ್ಧ ಕುರುಹುಗಳು, ಸೂಕ್ತ ರಕ್ಷಣೆಯಿಲ್ಲದೆ ಸೊರಗುತ್ತಿವೆ.

ದೇಶದ ವಿವಿಧ ರಾಜ್ಯಗಳಿಂದ ಬೌದ್ಧ ಭಿಕ್ಷುಗಳು, ಇತಿಹಾಸ ಸಂಶೋಧಕರು, ಸಾಹಿತಿಗಳು ಹಾಗೂ ರಾಜಕಾರಣಿಗಳು ಬಂದು ಭೇಟಿ ನೀಡುತ್ತಿದ್ದಾರೆ. ಸರಕಾರ ಮಾತ್ರ ಈ ಸ್ಥಳವನ್ನು ಪ್ರವಾಸಿತಾಣವಾಗಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.

ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆದಿರುವ ಸನ್ನತಿಯ ಈ ಬೌದ್ಧ ನೆಲದ ವೀಕ್ಷಣೆಗೆ ನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ. ಹತ್ತಾರು ಎಕರೆ ಜಾಗದಲ್ಲಿ ಹರಡಿಕೊಂಡಿರುವ ಬುದ್ಧವಿಹಾರ, ಬೌದ್ಧ ಧಮ್ಮದ ಶಿಲ್ಪಗಳ ಸ್ಥಳಕ್ಕೆ ಹೋಗಲು ಪ್ರವಾಸಿಗರು ತಮ್ಮ ವಿವರ ನೀಡಿ ಮುಂದೆ ಹೋಗಬೇಕಾಗುತ್ತದೆ. 

ಪ್ರವೇಶಕ್ಕೆ ಶುಲ್ಕವಿಲ್ಲ, ಛಾಯಾಚಿತ್ರಕ್ಕೆ ಅವಕಾಶವಿಲ್ಲ. ಕ್ಯಾಮರಾಗಳನ್ನು ಹೊರಗೆ ತೆಗೆಯುವಂತಿಲ್ಲ. ಎಲ್ಲೆಡೆ ಸಿಸಿ ಕ್ಯಾಮರಾಗಳಿವೆ. ಐದಾರು ಜನ ಸೆಕ್ಯೂರಿಟಿಗಳು ಪ್ರವಾಸಿಗರ ಅಕ್ಕಪಕ್ಕದಲ್ಲಿರುತ್ತಾರೆ.

ಇಲ್ಲಿನ ಮೂರ್ತಿಗಳ ಕುರಿತು ಮಾಹಿತಿ ನೀಡಲು ಪ್ರವಾಸಿ ಮಾರ್ಗದರ್ಶಿ ವ್ಯವಸ್ಥೆಯಿಲ್ಲ. ಸೆಕ್ಯೂರಿಟಿಗಳು ಮತ್ತು ಈ
ಸ್ಥಳದ ಮೇಲ್ವಿಚಾರಕರು ಹೇಳುವ ಅರೆಬರೆ ಕಥೆಯನ್ನೆ ಕೇಳಿ ಅತೃಪ್ತಿಯಿಂದ ಮರಳುತ್ತಿದ್ದಾರೆ. 

ಉತನನದಲ್ಲಿ ದೊರೆತ ಇಲ್ಲಿನ ಸಾವಿರಾರು ಶಿಲ್ಪಗಳನ್ನು ಪ್ರವಾಸಿಗರ ವೀಕ್ಷಣೆಗಾಗಿ ಸಂಗ್ರಹಿಸಿಡಲು ವಸ್ತು ಸಂಗ್ರಾಹಲಯ ಕಟ್ಟಡ ನಿರ್ಮಿಸಿ ಐದು ವರ್ಷ ಕಳೆದರೂ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರವಾಗಿಲ್ಲ. ಪರಿಣಾಮ
ಮಹತ್ವದ ಬುದ್ಧನ ಮೂರ್ತಿಗಳು, ಕಲ್ಲಿನ ಬೇಲಿ, ಶಾಸನ, ವಿಹಾರ ಗೋಪುರ ನೆಲದಲ್ಲಿಯೇ ಬಿದ್ದು ಹಾಳಾಗುತ್ತಿದೆ. ಸರಕಾರದಿಂದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕೋಟಿ ಕೋಟಿ ಹಣ ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು,
ಐತಿಹಾಸಿಕ ಬೌದ್ಧ ನೆಲೆ ಅಭಿವೃದ್ಧಿ ಮಾತ್ರ ನೆಲಕಚ್ಚಿದೆ.

ಮಡಿವಾಳಪ್ಪ ಹೇರೂರ


ಈ ವಿಭಾಗದಿಂದ ಇನ್ನಷ್ಟು

 • ಕಲಬುರಗಿ: ತೀವ್ರ ಕುತೂಹಲ ಮೂಡಿಸಿದ ಲೋಕಸಭಾ ಚುನಾವಣೆ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ತೆರೆ ಬಿದ್ದಿದೆ. ಬುಧವಾರ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ...

 • ಕಲಬುರಗಿ: ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಕಲಬುರಗಿ ಕ್ಷೇತ್ರದ ಜನತೆ ಐತಿಹಾಸಿಕ ತೀರ್ಪು ಕೊಟ್ಟಿದ್ದಾರೆ. ಸೋಲಿಲ್ಲದ ಸರದಾರ ಖ್ಯಾತಿಯ ಕಾಂಗ್ರೆಸ್‌ ಹಿರಿಯ...

 • ಯಾದಗಿರಿ: ಸೋಲಿಲ್ಲದ ಸರದಾರನಿಗೆ ಈ ಬಾರಿ ಗುರುಮಠಕಲ್ ಮತಕ್ಷೇತ್ರದ ಜನರು ಕೈ ಹಿಡಿಯಲಿಲ್ಲವೇ? ಎನ್ನುವ ಚರ್ಚೆ ಎಲ್ಲೆಡೆ ಶುರುವಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ...

 • ಕಲಬುರಗಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ತಮ್ಮ ಪುತ್ರನನ್ನು ಪ್ರಥಮ ಸಲ ಸ್ಪರ್ಧಿಸಿದ್ದ...

 • ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ 2019-2024ನೇ ಸಾಲಿನ ಅಧ್ಯಕ್ಷರಾಗಿ ಸಿದ್ದಣ್ಣ ಬಸಣ್ಣ ಸಿಕೇದ್‌ ಕೋಳಕೂರ, ಉಪಾಧ್ಯಕ್ಷರಾಗಿ...

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...