ಕೊಂಚೂರ-ಬಳವಡಗಿ ಜಾತ್ರೆ ರದ್ದು


Team Udayavani, Dec 12, 2020, 7:25 PM IST

ಕೊಂಚೂರ-ಬಳವಡಗಿ ಜಾತ್ರೆ ರದ್ದು

ವಾಡಿ: ಏಕಕಾಲಕ್ಕೆ ನಡೆಯುವ ಸುಕ್ಷೇತ್ರ ಕೊಂಚೂರು ಹನುಮಾನ್‌ ರಥೋತ್ಸವ, ಬಳವಡಗಿ ಯಲ್ಲಮ್ಮ (ಏಲಾಂಬಿಕೆ) ದೇವಿಜಾತ್ರೆಯನ್ನು ಪ್ರಸಕ್ತ ವರ್ಷ ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ತಿಳಿಸಿದರು. ಶುಕ್ರವಾರ ಕೊಂಚೂರು ಹನುಮಾನ ದೇವಸ್ಥಾನ ಭವನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಲಾಗಿದ್ದ ಗ್ರಾಮಸ್ಥರ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಂಕ್ರಾಮಿಕ ರೋಗ ಮಹಾಮಾರಿ ಕೋವಿಡ್ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಜಾತ್ರೆ ಹಾಗೂ ಉತ್ಸವ ನಡೆಸಲು ಅವಕಾಶವಿಲ್ಲ. ಗ್ರಾ.ಪಂ ಚುನಾವಣೆನೀತಿಸಂಹಿತೆಯೂ ಜಾರಿಯಲ್ಲಿರುವುದರಿಂದ ಡಿ. 30ರಂದು ನಡೆಯಲಿರುವ ಕೊಂಚೂರು ಹನುಮಾನ ದೇವರ ಜಾತ್ರೆ ಹಾಗೂ ರಥೋತ್ಸವದ ಜತೆಗೆ ಪಕ್ಕದ ಗ್ರಾಮ ಬಳವಡಗಿಯ ಯಲ್ಲಮ್ಮ ದೇವಿ ಜಾತ್ರೆ ರದ್ದುಪಡಿಸಲಾಗಿದೆ. ಡಿ.29 ಮತ್ತು 30ರಂದು ಭಕ್ತರಿಗೆ ಎರಡೂ ದೇವಸ್ಥಾನಗಳ ಪ್ರವೇಶ ನಿರ್ಬಂಧಿ ಸಲಾಗಿದೆ ಎಂದರು.

ಜಿಲ್ಲೆಯ ಭಕ್ತರು ಸೇರಿದಂತೆ ಬೆಂಗಳೂರು, ತೆಲಂಗಾಣದಿಂದ ಹೆಚ್ಚಿನ ಭಕ್ತರು ಪ್ರತಿ ವರ್ಷ ಬರುತ್ತಿದ್ದರು. ಆದರೆ ಈ ವರ್ಷ ಗ್ರಾಮಸ್ಥರು ತಮ್ಮ ನೆಂಟರನ್ನು ಜಾತ್ರೆಗೆ ಆಹ್ವಾನಿಸಬಾರದು. ದೇವಸ್ಥಾನ ಸಮಿತಿಯವರ ಸಮ್ಮುಖದಲ್ಲಿ ಕೇವಲ ಐದು ಅಡಿ ಮಾತ್ರ ರಥ ಎಳೆಯಲು ಅವಕಾಶವಿದೆ. ಹನುಮಾನ ದೇವಸ್ಥಾನ ಮತ್ತು ಯಲ್ಲಮ್ಮದೇವಸ್ಥಾನಗಳಲ್ಲಿ ಅರ್ಚಕರು ಮಾತ್ರ ಪೂಜೆ ನೆರವೇರಿಸಬಹುದು. ನಾಟಕ ಟೆಂಟ್‌, ಮನರಂಜನಾ ಕೇಂದ್ರ, ಬಿಡಾರು ಹಾಕಲು ಅವಕಾಶವಿಲ್ಲ. ಹೊರಗಿನ ಭಕ್ತರು ಕೊಂಚೂರು ಅಥವಾ ಬಳವಡಗಿ ಗ್ರಾಮಗಳನ್ನು ಪ್ರವೇಶಿಸುವಂತಿಲ್ಲ. ಯಲ್ಲಮ್ಮ ದೇವಿಗೆ ಹಡ್ಡಲಗಿ ತುಂಬುವಂತಿಲ್ಲ. 15ರಿಂದ 20 ಜನರು ಮಾತ್ರ ಧಾರ್ಮಿಕ ಆಚರಣೆಗಳನ್ನು ಪೂರ್ಣಗೊಳಿಸುತ್ತಾರೆ. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಪಿಐ ಕೃಷ್ಣಪ್ಪ ಕಲ್ಲದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ, ಬಳವಡಗಿ ಯಲ್ಲಮ್ಮ ದೇವಿ ದೇವಸ್ಥಾನದ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್‌ ಪಾಟೀಲ, ಕೊಂಚೂರು ಹನುಮಾನ ದೇವಸ್ಥಾನ ಟ್ರಸ್ಟ್‌ ಕಾರ್ಯದರ್ಶಿ ವಿಜಯಕುಮಾರ ಕುಲಕರ್ಣಿ, ಖಜಾಂಚಿ ರಾಜಶೇಖರ ಮಠಪತಿ, ಮುಖಂಡರಾದ ಶ್ರೀಮಂತ ತಳವಾರ, ಅರವಿಂದ ದುಮಾಳ,ಭೀಮಯ್ಯ ಒಡೆಯರ, ಗೋವಿಂದಪ್ಪ ಸಾಹು, ದೇವಣ್ಣ ಹೂಗಾರ, ಜುಮ್ಮಣ್ಣ ಪೂಜಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ರುದ್ರಮುನಿ ಮಠಪತಿ, ಖಾದರ್‌ ಪಟೇಲ, ಚನ್ನವೀರಪ್ಪ ಸುಣಗಾರ, ವಿಲಾಸ ಕುಲಕರ್ಣಿ, ರಮೇಶ ಡಿ.ಸಿ ಹಾಗೂ ಗ್ರಾಮಸ್ಥರು ಸಭೆಯಲ್ಲಿದ್ದರು.

ಗಂಗಾ ಸ್ನಾನ-ಪಲ್ಲಕ್ಕಿ ಉತ್ಸವ ಸರಳ :

ಕೊಂಚೂರು ಶ್ರೀ ಹನುಮಾನ ದೇವರ ಜಾತ್ರೆ ನಿಮಿತ್ತ ಡಿ. 14ರಂದು ಚಾಮನೂರ ಭೀಮಾನದಿಯಲ್ಲಿನಡೆಯುವ ಸಾಂಪ್ರದಾಯಿಕ ಪಲ್ಲಕ್ಕಿ ಉತ್ಸವ ಹಾಗೂ ಗಂಗಾ ಸ್ನಾನ ಕಾರ್ಯಕ್ರಮವನ್ನು ಸರಳವಾಗಿ ನಡೆಸಬೇಕು. ಇದರಲ್ಲಿ 20 ಜನ ಕೊಂಚೂರು ಭಕ್ತರು ಮಾತ್ರ ಪಾಲ್ಗೊಳ್ಳಬೇಕು. ನೈವೇದ್ಯ ನೀಡಲು ನದಿಯಲ್ಲಿ ಜಮಾಯಿಸುವ ನರಿಬೋಳ, ಚಾಮನೂರ ಗ್ರಾಮಗಳ ಭಕ್ತರು ಈ ವರ್ಷ ಗಂಗಾಸ್ನಾನ ಪೂಜೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ನೂರಾರು ಸಂಖ್ಯೆಯಲ್ಲಿ ಜನರು ಸೇರಿದರೆ ಕೊಂಚೂರು ಹಾಗೂ ಬಳವಡಗಿ ಗ್ರಾಮಗಳ ದೇವಸ್ಥಾನ ಸಮಿತಿ ಸದಸ್ಯರೆ ಹೊಣೆಗಾರರು. – ಉಮಾಕಾಂತ ಹಳ್ಳೆ, ತಹಶೀಲ್ದಾರ್‌, ಚಿತ್ತಾಪುರ

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.