ಉತ್ತಮ ಪುಸ್ತಕ ಜೀವನಕ್ಕೆ ಮಾರ್ಗದರ್ಶಕ: ಕಾವ್ಯ
Team Udayavani, Sep 28, 2018, 10:37 AM IST
ಕಲಬುರಗಿ: ವಿದ್ಯಾರ್ಥಿಗಳು ಪಠ್ಯ ಪುಸ್ತಕ ಓದುವುದರ ಜತೆಗೆ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ
ಮುಂದೆ ಉತ್ತಮ ಸಾಹಿತಿಗಳಾಗಬಹುದು. ಒಳ್ಳೆಯ ಪುಸ್ತಕಗಳು ಉತ್ತಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತವೆ ಎಂದು ಸಾಹಿತಿ ಕಾವ್ಯ ಮಹಾಗಾಂವಕರ್ ಹೇಳಿದರು.
ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ-ವಾಣಿಜ್ಯ ಮಹಿಳಾ ವಿದ್ಯಾಲಯ, ಕನ್ನಡ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಣ ಜಾಣೆಯರ ಬಳಗದ “ನನ್ನ ನೆಚ್ಚಿನ ಪುಸ್ತಕ’ ಅಭಿಪ್ರಾಯ ಮಂಡನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ವೆಂಕಣ್ಣ ಡೊಣ್ಣೇಗೌಡ್ರ ಮಾತನಾಡಿ, ಹತ್ತಾರು ಪುಸ್ತಕಗಳನ್ನು ಓದಿದಾಗ ವಿಮರ್ಶೆ ಪ್ರಜ್ಞೆ ಬೆಳೆಯುತ್ತದೆ ಎಂದರು. ನಿರ್ಣಾಯಕ ಸಾಹಿತಿ ಚಿ.ಸಿ.ನಿಂಗಣ್ಣ ಮಾತನಾಡಿ, ಸ್ಪರ್ಧೆಯಲ್ಲಿ ಗೆದ್ದ ಸ್ಥಾನಗಳು ಮುಖ್ಯವಲ್ಲ. ಸಾಹಿತ್ಯ , ಕಲೆ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿರುವುದರಿಂದ ಪ್ರತಿಯೊಬ್ಬ ಸ್ಪರ್ಧಿಯು ಇಲ್ಲಿ ಮುಖ್ಯವಾಗಿರುತ್ತಾನೆ. ಈ ನಿಟ್ಟಿನಲ್ಲಿ ಪ್ರಾಧಿಕಾರವು ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಭಾವಿ ಸಾಹಿತಿಗಳು
ಎಂದರು. ವೀರ ಸಾವರ್ಕರ್, ಎ.ಪಿ.ಜೆ. ಅಬ್ದುಲ್ ಕಲಾಂ, ಅಪ್ಪ ಎಂದರೆ ಅಕಾಶ, ಕಿತ್ತೂರ ರಾಣಿ ಚೆನ್ನಮ್ಮ, ಅಮ್ಮ ಹೇಳಿದ
ಎಂಟು ಸುಳ್ಳುಗಳು, ಕನ್ನಡ ಭಾಷಾ ಚರಿತ್ರೆ ಮುಂತಾದ ಕೃತಿಗಳ ಕುರಿತು 10 ವಿದ್ಯಾರ್ಥಿನಿಯರು ವಿಮರ್ಶತ್ಮಕವಾಗಿ ತಮ್ಮ
ಅಭಿಪ್ರಾಯ ಮಂಡಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸಿದ ವಿದ್ಯಾರ್ಥಿನಿಯರಿಗೆ ಪುಸ್ತಕ ನೀಡಿ ಸನ್ಮಾನಿಸಲಾಯಿತು. ಪ್ರೊ| ಶಾಂತಲಾ ನಿಷ್ಠಿ, ಡಾ| ಇಂದಿರಾ ಶೆಟಗಾರ, ಡಾ| ಸೀಮಾ ಪಾಟೀಲ ಇದ್ದರು. ಡಾ| ಪುಟ್ಟಮಣಿ
ದೇವಿದಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಕಿತಾ ಸ್ವಾಗತಿಸಿದರು, ಮೇಘಾ ಬಿ. ವಂದಿಸಿದರು, ಮಹಾದೇವಿ ನಿರೂಪಿಸಿದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ವೀಕೆಂಡ್ನಲ್ಲಿ ಮತ್ತೆ ಕಿಚ್ಚನ ಎಂಟ್ರಿ
ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್, ಡಿಸಿಪಿ!
ಯುವರತ್ನನ “ಊರಿಗೊಬ್ಬ ರಾಜ..” ಡ್ಯಾನ್ಸ್ ನಂಬರ್ಗೆ ಮೆಚ್ಚುಗೆ
ಈ ರಾಶಿಯವರಿಗಿಂದು ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆಯು ತೋರಿ ಬಂದೀತು, ಕಾಳಜಿ ವಹಿಸಿರಿ
ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ 2,100 ಕೋ. ರೂ. ದೇಣಿಗೆ ಸಂಗ್ರಹ : ಪೇಜಾವರ ಶ್ರೀ