ಎಂವೈಪಿ ಕ್ಷಮೆ ಕೇಳದಿದ್ದರೆ ಧರಣಿ: ಅಗರಖೇಡ
Team Udayavani, Jul 11, 2021, 4:55 PM IST
ಅಫಜಲಪುರ: ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಲ್ಲದೇ ಮಹಿಳೆಯರ ಕುರಿತು ಅವಹೇಳನಕಾರಿ ಪದ ಬಳಕೆ ಮಾಡಿದ್ದಕ್ಕೆ ಶಾಸಕ ಎಂ.ವೈ. ಪಾಟೀಲ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ಮನೆ ಎದುರು ಧರಣಿ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡ ಮಂಜೂರ ಅಹ್ಮದ್ ಅಗರಖೇಡ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ನೇತೃತ್ವದಲ್ಲಿ ಅತನೂರ ಗ್ರಾಮದಲ್ಲಿ ನಡೆದ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಅತನೂರ, ಗೊಬ್ಬೂರ (ಬಿ), ಚವಡಾಪುರ, ಭೋಗನಳ್ಳಿ ಸೇರಿದಂತೆ ಅನೇಕ ಗ್ರಾಮದ ನೂರಾರು ಮುಸಲ್ಮಾನ ಬಾಂಧವರು ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಈ ಕುರಿತು ಶಾಸಕರು ಪ್ರತಿಕ್ರಿಯೆ ನೀಡುವ ಭರದಲ್ಲಿ ಸೇರ್ಪಡೆಗೊಂಡವರು ಮುಸಲ್ಮಾನರೇ ಅಲ್ಲ, ಮುಖಕ್ಕೆ ಕವಚ ಹಾಕಿ ನಿಂತಿದ್ದಾರೆ, ಅವರೆಲ್ಲ ಮುಸಲ್ಮಾನರಲ್ಲ ಎಂದು ನಮ್ಮ ಜಾತಿಯ ಕುರಿತು ಪ್ರಸ್ತಾಪಿಸಿದ್ದು ನಮಗೆಲ್ಲ ನೋವಾಗಿದೆ ಹೀಗಾಗಿ ಅವರು ತಾಲೂಕಿನ ಮುಸಲ್ಮಾನರ ಕ್ಷಮೆ ಕೇಳಬೇಕು. ಅಲ್ಲದೆ ಮಾಲೀಕಯ್ಯರ ಚುನಾವಣೆಯಲ್ಲಿ ಸೋತಿದ್ದಾರೆ.
ಅವರು ಮುತ್ತೆದೆಯಲ್ಲ ಎಂಬ ಹೇಳಿಕೆಯಿಂದ ಮಹಿಳೆಯರಿಗೆ ಅವಮಾನಿಸಿದಂತಾಗಿದೆ. ವಿಧವಾ ಮಹಿಳೆಯರೆಂದರೆ ಇವರಿಗೆ ಅಷ್ಟೊಂದು ಅಸಡ್ಡೆನಾ? ಇಂತಹ ಅಸಂವಿಧಾನಿಕ ಹೇಳಿಕೆಯಿಂದ ಸಂವಿಧಾನಕ್ಕೆ ಅಪಚಾರವಾದಂತಾಗಿದೆ ಕೂಡಲೇ ಶಾಸಕರು ಕ್ಷಮೆ ಕೇಳಲಿ ಎಂದರು. ಹಿರಿಯ ಮುಸ್ಲಿಂ ಮುಖಂಡ ಅಂಜುಮಾನ ಅಧ್ಯಕ್ಷ ಮಹಿಮೂದ್ ಡಾಂಗೆ ಮಣೂರ ಮಾತನಾಡುತ್ತಾ ಸುಮಾರು 30 ವರ್ಷಗಳಿಂದ ಮಾಲೀಕಯ್ಯ ಗುತ್ತೇದಾರ ಕುಟುಂಬದೊಂದಿಗೆ ನಾವುಗಳು ಜೊತೆಯಾಗಿದ್ದೇವೆ. ಬಿಜೆಪಿ ಏನು ಮುಸಲ್ಮಾನರ ವಿರೋ ಪಕ್ಷವಲ್ಲ. ಅನೇಕ ಘಟಾನುಘಟಿಗಳು ಬಿಜೆಪಿಯಲ್ಲಿದ್ದಾರೆ.
ಕಾಂಗ್ರೆಸ್ಸಿಗರು ಸುಮ್ಮನೆ ವಿವಾದ ಸƒಷ್ಟಿಸುವ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದ್ದಾರೆ. ನಾವು ಇವರ ಮಾತಿಗೆ ಸೊಪ್ಪು ಹಾಕುತ್ತಿಲ್ಲ ಹೀಗಾಗಿ ಸುಖಾ ಸುಮ್ಮನೆ ವಿವಾದ ಎಬ್ಬಿಸುವ ಹೇಳಿಕೆ ನೀಡುತ್ತಿದ್ದಾರೆ. ನಾವು ಜಾಗƒತಾಗಿದ್ದೇವೆ. ಮುಂಬರುವಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ. ಮಾಲೀಕಯ್ಯ ಅವರ ಮೇಲೆ ನಮಗೆಲ್ಲ ಬಹಳಷ್ಟು ನಂಬಿಕೆ ಇದೆ. ಹೀಗಾಗಿ ಅವರ ನಾಯಕತ್ವ ನಂಬಿ ಬೆಂಬಲಿಸುತ್ತಿದ್ದೇವೆ ಎಂದರು. ಮುಖಂಡರಾದ ತನ್ವೀರ್ ಮಣೂರ, ಪಾಶಾ ಮಣೂರ ಮಾತನಾಡಿದರು. ಈ ಸಂದರ್ಭದಲ್ಲಿ ನಬಿಲಾಲ್ ಮಾಶಾಳಕರ, ಮಹ್ಮದ ಕರ್ಜಗಿ, ಮನ್ಸೂರ್ ಪಟೇಲ್, ಅನ್ವರ ಶೇಕ್, ಹುಸೇನ್‌ಸಾಬ್ ಶೇಕ್, ರಜಾಕ್, ಸೆ„ಫನ್ ಶಿರೂರ, ಆರೀಫ್ ಜಾಗಿರದಾರ, ಇಬ್ರಾಹಿಂ ಗೌರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ನೆಲ್ಯಾಡಿ: ಕಾರು – ಟಿಪ್ಪರ್ ಢಿಕ್ಕಿ; ಓರ್ವ ಸಾವು
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ