ಮಹಿಳಾ ಸಾಕ್ಷರತೆ ಹೆಚ್ಚಲಿ: ತನುಜಾ

Team Udayavani, Mar 11, 2019, 6:16 AM IST

ಸೇಡಂ: ಶೋಷಣೆಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು ಎಂದು ಕಂಪ್ಯೂಸಿಸ್‌ ಪಾಯಿಂಟ್‌ ತರಬೇತಿ ಕೇಂದ್ರದ ನಿರ್ದೇಶಕಿ ತನುಜಾ ಐನಾಪುರ ಹೇಳಿದರು.

ಪಟ್ಟಣದ ನೃಪತುಂಗ ಪದವಿ ಮಹಾ ವಿದ್ಯಾಲಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬದ ಹೊಣೆ ಹೊತ್ತು ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಈ ಮೂಲಕ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ.

ಮನೋಬಲ ಸದೃಢವಾಗಿಟ್ಟುಕೊಂಡು ಸದಾಕಾಲ ಮುನ್ನುಗ್ಗುತ್ತಿದ್ದರೆ ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರ, ಅನಾಚಾರ ತಡೆಯಬಹುದು ಎಂದರು. 

ನರ್ಮದಾದೇವಿ ಗಿಲಡಾ ಮಹಿಳಾ ಕಾಲೇಜು ಉಪನ್ಯಾಸಕಿ ಆರತಿ ಕಡಗಂಚಿ ಮಾತನಾಡಿ, ದೇಶದಲ್ಲಿ ಅನೇಕ ಮಹಿಳೆಯರು ತಮ್ಮ ಸಾಧನೆಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಜೀವನ ನಮಗೆ ಆದರ್ಶವಾಗಬೇಕು ಎಂದರು. ಪ್ರೊ| ಶೋಭಾದೇವಿ ಚೆಕ್ಕಿ ಸ್ವಾಗತಿಸಿದರು. ಪ್ರಾಚಾರ್ಯ ಡಾ| ಶಶಿಕಾಂತ ಕುಲಕರ್ಣಿ, ಕು. ಸುಹಾಸಿನಿ ಪ್ರಾರ್ಥಿಸಿದರು. ಕು. ಪಲ್ಲವಿ ನಿರೂಪಿಸಿದರು. ಕು. ದೀಪಿಕಾ ಡಾಗಾ ವಂದಿಸಿದರು.

ರಾಜಶ್ರೀ ಕಾರ್ಖಾನೆಯಲ್ಲೂ ಸಂಭ್ರಮ: ತಾಲೂಕಿನ ಮಳಖೇಡದ ರಾಜಶ್ರೀ ಸಿಮೆಂಟ್‌ ಕಾರ್ಖಾನೆಯಲ್ಲೂ ಅದ್ಧೂರಿಯಾಗಿ ಮಹಿಳಾ ದಿನ ಆಚರಿಸಲಾಯಿತು. ಗ್ರಾಮದ ಸುತ್ತಮುತ್ತಲಿನ ನೀಲಹಳ್ಳಿ, ಹಂಗನಹಳ್ಳಿ, ಸ್ಟೇಷನ್‌ ತಾಂಡಾ, ಹೂಡಾ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಸದಸ್ಯರಿಗೆ ಕಬಡ್ಡಿ, ಖೋಖೊ, ಓಟ, ಗನ್ನಿ ಬ್ಯಾಗ್‌, ನಿಂಬೆಹಣ್ಣು ಚಮಚದಲ್ಲಿಟ್ಟುಕೊಂಡು ನಡೆಯುವ ಪಂದ್ಯಗಳನ್ನು ಏರ್ಪಡಿಸಲಾಗಿತ್ತು.

ಆದಿತ್ಯ ಬಿರ್ಲಾ ಪಬ್ಲಿಕ್‌ ಶಾಲೆಯ ಪ್ರಾಚಾರ್ಯೆ ರಿಂಕು ಬೆನರ್ಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಘಟಕ ಅಧ್ಯಕ್ಷ ಸೂರ್ಯ ವೆಳ್ಳುರಿ, ಸರ್ವಮಂಗಳ ಲೇಡಿಸ್‌ ಕ್ಲಬ್‌ ಅಧ್ಯಕ್ಷ ಸುನೀತಾ ವೆಳ್ಳುರಿ, ಜರಾಡ್‌ ರೋಡ್ರಿಕ್ಸ್‌, ವಿಜಯ ಮಾಲಿ ಮತ್ತಿತರರು ಇದ್ದರು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಶ್ರೇಷ್ಠ ಗುಣಮಟ್ಟ ಮತ್ತು ಉತ್ತಮ ಖನಿಜಾಂಶವುಳ್ಳ 'ಗುಲಬರ್ಗಾ ತೊಗರಿ'ಗೆ ಭೌಗೋಳಿಕ ಮಾನ್ಯತೆ ದೊರೆತಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ...

  • ಚಿಂಚೋಳಿ: ತಾಲೂಕಿನ ಶಿವರಾಮಪುರ-ಶಹಾಪುರ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಶಾದೀಪುರ ಗ್ರಾಮದ ಬಳಿ ಇರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ...

  • ಮಡಿವಾಳಪ್ಪ ಹೇರೂರ ವಾಡಿ: ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ತೆರೆಯಲಾದ ಈ ಗ್ರಾಮದ ಸರಕಾರಿ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಉರ್ದು ವಿಷಯ...

  • ಚಿಂಚೋಳಿ: ರಾಜ್ಯದಲ್ಲಿ ಒಂದೆಡೆ ತೀವ್ರ ಬರ, ಇನ್ನೊಂದೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯದಲ್ಲೂ ರೈತನೊಬ್ಬ ಮೆಣಸಿನಕಾಯಿ ಬೆಳೆದು ಆರ್ಥಿಕವಾಗಿ...

  • ಕಲಬುರಗಿ: ಅನಾರೋಗ್ಯದಿಂದ ಶನಿವಾರ ನಿಧನರಾದ ಬಿಜೆಪಿ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಅರುಣ ಜೇಟ್ಲಿ ಅವರಿಗೆ ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಇತರ ಗಣ್ಯರು...

ಹೊಸ ಸೇರ್ಪಡೆ