ಪೈಪ್‌ಲೈನ್‌ ಕಾಮಗಾರಿ ಅವೈಜ್ಞಾನಿಕ: ಜಿರೊಳ್ಳಿ


Team Udayavani, Jan 25, 2019, 6:48 AM IST

gul-5.jpg

ವಾಡಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಲಕ್ಷಾಂತರ ರೂ. ವೆಚ್ಚದ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ ಸಂಪೂರ್ಣ ಅವೃಜ್ಞಾನಿಕ ಪದ್ಧತಿಯಿಂದ ಕೂಡಿದ್ದು, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪುರಸಭೆ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಭೀಮಶಾ ಜಿರೊಳ್ಳಿ ಆರೋಪಿಸಿದ್ದಾರೆ.

ಪುರಸಭೆ ವ್ಯಾಪ್ತಿಯ ವಾರ್ಡ್‌ 13ರ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ನೇತಾಜಿ ನಗರದಲ್ಲಿ ನಡೆಯುತ್ತಿರುವ ಪೈಪ್‌ಲೈನ್‌ ಕಾಮಗಾರಿ ಪರಿಶೀಲನೆ ನಡೆಸುವ ಮೂಲಕ ಕಾಮಗಾರಿ ಸ್ಥಳದಲ್ಲಿ ಕಿರಿಯ ಅಭಿಯಂತರ ಅಶೋಕ ಪುಟ್ಪಾಕ್‌ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿ ಅವರು ಮಾತನಾಡಿದರು.

ಪೈಪ್‌ಗ್ಳನ್ನು ತಂದು ಐದಾರು ತಿಂಗಳು ರಸ್ತೆ ಮೇಲೆ ಎಸೆಯಲಾಗಿತ್ತು. ನೆಲದ ಮಣ್ಣು ತೆಗೆಯದೆ ಅಡ್ಡಾದಿಡ್ಡಿ ಪೈಪ್‌ಲೈನ್‌ ಜೋಡಣೆ ಮಾಡಿದ್ದೀರಿ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಕ್ಕಳು ಮತ್ತು ವಯಸ್ಕರು ಕಬ್ಬಿಣದ ಪೈಪ್‌ಗ್ಳನ್ನು ಎಡವಿ ಬೀಳುತ್ತಿದ್ದಾರೆ. ಇಡೀ ಕಾಮಗಾರಿ ಕಳಪೆ ಗುಣಮಟ್ಟ, ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ದೂರಿದರು.

ಪುರಸಭೆ ಸದಸ್ಯರೆ ಗುತ್ತಿಗೆದಾರರು: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಆಯಾ ವಾರ್ಡ್‌ ಸದಸ್ಯರೆ ಗುತ್ತಿಗೆದಾರರಾಗಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚರಂಡಿ, ರಸ್ತೆ, ಪೈಪ್‌ಲೈನ್‌, ಶೌಚಾಲಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪುರಸಭೆ ಕಾಂಗ್ರೆಸ್‌ ಸದಸ್ಯರೆ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮೂಲ ಗುತ್ತಿಗೆದಾರನಿಂದ ಕೆಲಸ ಪಡೆದು ತಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ಗುತ್ತಿಗೆದಾರರು ಪುರಸಭೆ ಖಜಾನೆ ಲೂಟಿ ಮಾಡುತ್ತಿದ್ದಾರೆ. ಪುರಸಭೆಯಲ್ಲಿ ಕಾಂಗ್ರೆಸ್‌ ಆಡಳಿತವಿದ್ದು, ಅವರು ಮಾಡಿದ್ದೇ ಕಾನೂನು ಎನ್ನುವಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಭ್ರಷ್ಟಾಚಾರ ನಡೆಸುತ್ತಿದ್ದರೂ ಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆ ಮೌನ ವಹಿಸಿದ್ದಾರೆ. ಕುಡಿಯುವ ನೀರಿನ ಪೈಪ್‌ಗ್ಳನ್ನು ನೆಲದಡಿ ಹಾಕಬೇಕು. ಗುತ್ತಿಗೆದಾರಿಕೆಯಲ್ಲಿ ತೊಡಗಿರುವ ಪುರಸಭೆ ಸದಸ್ಯರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಕಾಂಗ್ರೆಸ್‌ ಸದಸ್ಯರ ಕೈಗೊಂಬೆಯಂತೆ ಕುಣಿಯುತ್ತಿರುವ ಮುಖ್ಯಾಧಿಕಾರಿ ಮತ್ತು ಕಿರಿಯ ಅಭಿಯಂತರರ ವಿರುದ್ಧ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ಭೀಮಶಾ ಜಿರೊಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕಿರಿಯ ಅಭಿಯಂತರ ಅಶೋಕ ಪುಟ್ಪಾಕ್‌, ಪೈಪ್‌ಲೈನ್‌ ಅಳವಡಿಕೆಯಲ್ಲಿ ಗುತ್ತಿಗೆದಾರ ಎಡವಿದ್ದಾನೆ. ಆತನಿಗೆ ಎಚ್ಚರಿಕೆ ನೀಡಿ ಕಾಮಗಾರಿ ಸರಿಪಡಿಸಲಾಗುವುದು ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಮತ್ತಷ್ಟು ಅಸಮಧಾನವಾದ ಭೀಮಶಾ ಜಿರೊಳ್ಳಿ, ಗುತ್ತಿಗೆದಾರನ ಕಾಮಗಾರಿ ಪರಿಶೀಲನೆ ಮಾಡಬೇಕಾದ ನೀವು ಕಚೇರಿಯಲ್ಲಿ, ಹೋಟೆಲ್‌ಗ‌ಳಲ್ಲಿ ಕುಳಿತು ಬಿಲ್‌ ಬರೆಯುತ್ತಿರಿ. ನಿಮಗೆ ಸಾರ್ವಜನಿಕರ ಕಷ್ಟ ಅರ್ಥವಾಗೋದಿಲ್ಲ ಎಂದು ಕಿಡಿಕಾರಿದರು.

ಪುರಸಭೆ ಬಿಜೆಪಿ ಸದಸ್ಯ ಭೀಮರಾಯ ನಾಯ್ಕೋಡಿ, ಗುತ್ತಿಗೆದಾರ ಹಾಜಪ್ಪ ಲಾಡ್ಲಾಪುರ, ಮುಖಂಡರಾದ ಶ್ರವಣಕುಮಾರ ಮೌಸಲಗಿ, ರಘುವೀರ ಪವಾರ ಇದ್ದರು.

ಟಾಪ್ ನ್ಯೂಸ್

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

maruti-suzuki

ಮುಂದಿನ ತಿಂಗಳಿಂದ ಮಾರುತಿ ದುಬಾರಿ

ಸವಾಲು ಸ್ವೀಕರಿಸಿ ಬೆಳಗಾವಿ ಅಧಿವೇಶನ: ಸ್ಪೀಕರ್‌ ಕಾಗೇರಿ

ಸವಾಲು ಸ್ವೀಕರಿಸಿ ಬೆಳಗಾವಿ ಅಧಿವೇಶನ: ಸ್ಪೀಕರ್‌ ಕಾಗೇರಿ

ಸರ್ವಧರ್ಮೀಯರ ಕಲ್ಯಾಣ ಕ್ಷೇತ್ರ ಧರ್ಮಸ್ಥಳ ;ರಾಜ್ಯಪಾಲ ಗೆಹ್ಲೋಟ್ ಬಣ್ಣನೆ

ಸರ್ವಧರ್ಮೀಯರ ಕಲ್ಯಾಣ ಕ್ಷೇತ್ರ ಧರ್ಮಸ್ಥಳ ;ರಾಜ್ಯಪಾಲ ಗೆಹ್ಲೋಟ್ ಬಣ್ಣನೆ

ಮಣಿಪಾಲದಲ್ಲಿ ಮತ್ತೆ ಚಿರತೆ ಸದ್ದು!

ಮಣಿಪಾಲದಲ್ಲಿ ಮತ್ತೆ ಚಿರತೆ ಸದ್ದು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

8bankloan

ಸಾಲ ಪಡೆಯಲು ಜನಜಂಗುಳಿ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ದಾಂಪತ್ಯಕ್ಕೆ ಕಾಲಿಟ್ಟ ಹಿರಿಯ ಪ್ರೇಮಿಗಳು

ದಾಂಪತ್ಯಕ್ಕೆ ಕಾಲಿಟ್ಟ ಹಿರಿಯ ಪ್ರೇಮಿಗಳು

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

maruti-suzuki

ಮುಂದಿನ ತಿಂಗಳಿಂದ ಮಾರುತಿ ದುಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.