Udayavni Special

ಅಕ್ಕಲಕೋಟದಲ್ಲಿ 19ರಿಂದ ಬೃಹತ್‌ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮ

50 ಸಂಘ-ಸಂಸ್ಥೆಗಳಿಗೆ ಶಿವಾಜಿ ಮೂರ್ತಿ ವಿತರಣೆ

Team Udayavani, Feb 17, 2020, 10:39 AM IST

17-February-1

ಸೊಲ್ಲಾಪುರ: ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಅಕ್ಕಲಕೋಟ ಮತ್ತು ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳ ಅಕ್ಕಲಕೋಟ ಸಹಯೋಗದಲ್ಲಿ ಫೆ. 19ರಿಂದ 22ರ ವರೆಗೆ ಅಕ್ಕಲಕೋಟ ನಗರದ ಫತ್ತೆಸಿಂಹ ಚೌಕ್‌ನಲ್ಲಿ ಶಿವಜಯಂತಿ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವಜನ್ಮೋತ್ಸವ ಯುವಕ ಮಂಡಳಿ ಅಧ್ಯಕ್ಷ ಮನೋಜ್‌ ನಿಕಮ್‌ ಹೇಳಿದರು.

ಅಕ್ಕಲಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸಲೆ, ಸುರೇಶ್ಚಂದ್ರ ಸೂರ್ಯವಂಶಿ, ಅಮೋಲರಾಜೆ ಭೋಸಲೆ, ಮಹೇಶ ಇಂಗಳೆ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಶಿವಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿವರ್ಷದಂತೆ ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳಿ ವತಿಯಿಂದ ಫೆ. 19ರಂದು, ಬೃಹತ್‌ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ, ಲೆಜಿಮ್‌ ತಂಡದಿಂದ ಅದ್ಧೂರಿ ಪ್ರದರ್ಶನ ಮೂಲಕ ಶಿವಜಯಂತಿ ಮೆರವಣಿಗೆ ನಡೆಯಲಿದೆ. ಪಟ್ಟಣದ ಖಂಡೋಬಾ ಮಂದಿರದಿಂದ ಮುಖ್ಯ ರಸ್ತೆಗಳ ಮೂಲಕ ಫತ್ತೆಸಿಂಹ ಚೌಕ್‌ ವರೆಗೆ ಬೃಹತ್‌ ಮೆರವಣಿಗೆ ನಡೆಯಲಿದೆ. ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸಲೆ ಮೆರವಣಿಗೆ ಉದ್ಘಾಟಿಸುವರು ಎಂದು ಹೇಳಿದರು.

ಸೊಲ್ಲಾಪುರ ನಗರಸೇವಕ ಅಮೋಲ ಶಿಂಧೆ, ಚೇತನ ನರೂಟೆ, ಮಾಜಿ ಶಿಕ್ಷಣ ಸಭಾಪತಿ ಸಂಕೇತ ಪಿಸೆ, ಮಂಡಳಿಯ ಖಜಾಂಚಿ ಲಾಲಾ ರಾಠೊಡ, ಆರ್‌ಎಸ್‌ಪಿ ಜಿಲ್ಲಾಧ್ಯಕ್ಷ ಸುನೀಲ ಬಂಡಗರ್‌, ನಗರಸೇವಕ ಮಿಲನ್‌ ಕಲ್ಯಾಣಶೆಟ್ಟಿ, ಸದ್ದಾಂ ಶೆರಿಕರ್‌, ಆರ್‌ಪಿಐ ತಾಲೂಕು ಅಧ್ಯಕ್ಷ ಅವಿನಾಶ ಮಡಿಖಾಂಬೆ, ವಡ್ಡರ್‌ ಸಮಾಜದ ತಾಲ್ಲೂಕು ಅಧ್ಯಕ್ಷ ಅಂಕುಶ್‌ ಚೌಗುಲೆ, ಬಂಜಾರಾ ಸಮುದಾಯದ ಮುಖಂಡ ಋತುರಾಜ (ಬಂಟಿ) ರಾಠೊಡ, ಸಂದೀಪ ಮಡಿಖಾಂಬೆ, ಆರ್‌ಪಿಐ (ಎ) ಮುಸ್ಲಿಂ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸೊಹೇಲ್‌ ಬಾಗವಾನ್‌ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಅಂದು ಸಂಜೆ 7 ಗಂಟೆಗೆ ನಗರಾಧ್ಯಕ್ಷೆ ಶೋಭಾ ಖೇಡಗಿ, ತಾ.ಪಂ ಅಧ್ಯಕ್ಷೆ ಸುನಂದಾ ಗಾಯಕವಾಡ ಸಮ್ಮುಖದಲ್ಲಿ ಹಿರಕಣಿ ಮಹಿಳಾ ಬಹು ಉದ್ದೇಶಿತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ಅಲಕಾತಾಯಿ ಭೋಸಲೆ ಹಸ್ತದಿಂದ ಬೃಹತ್‌ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ. ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ್‌ ಅಂಜಲಿ ಮರೋಡ್‌, ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ಡಾ| ಸಂತೋಷ ಗಾಯಕವಾಡ, ಮುಖ್ಯಾಧಿ ಕಾರಿ ಆಶಾ ರಾವುತ್‌, ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ್‌ ದೇವಸ್ಥಾನದ ಅಧ್ಯಕ್ಷ ಮಹೇಶ ಇಂಗಳೆ, ಎನ್‌ಸಿಪಿ ನಾಯಕ ದಿಲೀಪ ಸಿದ್ಧೆ, ಉತ್ತರ ಪೊಲೀಸ್‌ ಠಾಣೆ ಪೊಲೀಸ್‌ ನಿರೀಕ್ಷಕ ಕಲ್ಲಪ್ಪ ಪೂಜಾರಿ, ದಕ್ಷಿಣ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ವಿಜಯ ಜಾಧವ, ಸುರೇಶ ಸೂರ್ಯವಂಶಿ, ಫತ್ತೆಸಿಂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಾಬಾಸಾಹೇಬ್‌ ನಿಂಬಾಳಕರ್‌ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಫೆ. 20ರಂದು ಸಂಜೆ 6 ಗಂಟೆಗೆ ಮಾಜಿ ಸಚಿವ ಸಿದ್ಧರಾಮ ಮ್ಹೇತ್ರೆ ಹಸ್ತಯಿಂದ ಸುಮಾರು 50 ವಿವಿಧ ಸಂಘ-ಸಂಸ್ಥೆಗಳಿಗೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿ.ಪಂ ಮಾಜಿ ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ನಗರಸೇವಕ ಬಸಲಿಂಗಪ್ಪ ಖೇಡಗಿ, ಅಶ್ಪಾಕ್‌ ಬಳ್ಳೋರಗಿ, ಉತ್ತಮ ಗಾಯಕವಾಡ, ಬಾಳಾಸಾಹೇಬ ಮೋರೆ, ಆನಂದ ತಾನವಡೆ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.

ಫೆ. 21ರಂದು ಸಂಜೆ 6 ಗಂಟೆಗೆ ಶಹಾಜಿ ಪ್ರಾಥಮಿಕ ಶಾಲೆಯಲ್ಲಿ “ಯುಗ ಪ್ರವರ್ತಕ ರಾಜಾ ಶಿವಛತ್ರಪತಿ’ ವಿಷಯ ಕುರಿತು ಸುರೇಶ ಪವಾರ ಉಪನ್ಯಾಸ ನೀಡುವರು. ಶಿವಸೇನಾ ತಾಲೂಕು ಅಧ್ಯಕ್ಷ ಸಂಜಯ ದೇಶಮುಖ, ಉಪನಗರಾಧ್ಯಕ್ಷ ಯಶವಂತ ಧೋಂಗಡೆ, ವಕೀಲ ವಿಜಯ ಹಾರ್ಡಿಕರ್‌, ವಕೀಲ ಸಂತೋಷ ಖೋಬರೆ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದೆ. ಫೆ. 22ರಂದು ಸಂಜೆ 6 ಗಂಟೆಗೆ ಶಹಾಜಿ ಪ್ರಾಥಮಿಕ ಶಾಲೆಯಲ್ಲಿ “ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ’ ಕುರಿತು ಪಾಣಿಪತಕಾರ್‌ ಮತ್ತು ಇತಿಹಾಸಕಾರ ವಿಶ್ವಾಸರಾವ್‌ ಪಾಟೀಲ (ಐಎಎಸ್‌, ಮುಂಬೈ) ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.

ಶಾಸಕ ಸಚಿನ್‌ ಕಲ್ಯಾಣಶೆಟ್ಟಿ, ಸೊಲ್ಲಾಪುರ ಮಾಜಿ ನಗರಸೇವಕ ಕಿರಣ ಪವಾರ, ಮಾಜಿ ಉಪ ಮೇಯರ್‌ ದಿಲೀಪ ಕೊಲ್ಹೆ, ಎನ್‌ಸಿಪಿ ಶಹರ ಅಧ್ಯಕ್ಷ ಸಂತೋಷ ಪವಾರ, ರಾಜನ್‌ ಜಾಧವ, ಮಾವೂಲಿ ಪವಾರ, ಅರುಣ ರೋಡಗೆ, ಮಹೇಶ ಹಿಂಡೋಳೆ, ಶ್ರೀಕಾಂತ ಘಾಡಗೆ, ಅಭಿನಂದನ ಗಾಂಧಿ , ವಿಶಾಲ ದೋಶಿ, ಸಂಜಯ ಶಿಂಧೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

ನಾವೀಗ ಯುದ್ಧ ಪರಿಸ್ಥಿತಿಯಲ್ಲಿದ್ದೇವೆ;ಬಡವರಿಗೆ ನೆರವಾಗಿ, ಮಾನವೀಯತೆ ತೋರಿಸಿ:ಪ್ರಧಾನಿ ಅಭಿಮತ

ನಾವೀಗ ಯುದ್ಧ ಪರಿಸ್ಥಿತಿಯಲ್ಲಿದ್ದೇವೆ;ಬಡವರಿಗೆ ನೆರವಾಗಿ, ಮಾನವೀಯತೆ ತೋರಿಸಿ:ಪ್ರಧಾನಿ ಅಭಿಮತ

ಒಂದೇದಿನ 704 ಪ್ರಕರಣ, 30 ಸಾವು; 4 ಸಾವಿರಕ್ಕೂ ಅಧಿಕ ಸೋಂಕಿತರು; ಈ ಪೈಕಿ 1,445 ತಬ್ಲಿಘಿಗಳು

ಒಂದೇದಿನ 704 ಪ್ರಕರಣ, 30 ಸಾವು; 4 ಸಾವಿರಕ್ಕೂ ಅಧಿಕ ಸೋಂಕಿತರು; ಈ ಪೈಕಿ 1,445 ತಬ್ಲಿಘಿಗಳು

ಸಂಸದರ ವೇತನಕ್ಕೆ ಕೋವಿಡ್ 19 ಕತ್ತರಿ

ಸಂಸದರ ವೇತನಕ್ಕೆ ಕೋವಿಡ್ 19 ಕತ್ತರಿ

ಲಾಕ್ ಡೌನ್ ಎಫೆಕ್ಟ್ : ಪೆಟ್ರೋಲ್‌, ಡೀಸೆಲ್‌ ಮಾರಾಟ ಕುಸಿತ

ಲಾಕ್ ಡೌನ್ ಎಫೆಕ್ಟ್ : ಪೆಟ್ರೋಲ್‌, ಡೀಸೆಲ್‌ ಮಾರಾಟ ಕುಸಿತ

ಪ್ರಾಣಿಗಳ ಮೇಲೂ ಕೋವಿಡ್ 19 ನಿಗಾ

ಪ್ರಾಣಿಗಳ ಮೇಲೂ ಕೋವಿಡ್ 19 ನಿಗಾ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್‌ ಮನನ ತರಗತಿ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್‌ ಮನನ ತರಗತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ಮಸೀದಿಗೆ ಹೋದವ್ರು 37 ಜನ?

ದೆಹಲಿ ಮಸೀದಿಗೆ ಹೋದವ್ರು 37 ಜನ?

ತೊಗರಿ 200-ಬೇಳೆ 900 ರೂ. ದರ ಹೆಚ್ಚಳ: ರೈತರಿಗೆ ನಷ್ಟ

ತೊಗರಿ 200-ಬೇಳೆ 900 ರೂ. ದರ ಹೆಚ್ಚಳ: ರೈತರಿಗೆ ನಷ್ಟ

ಶಹಾಬಾದ್‌ ಸಂಪೂರ್ಣ ಬಂದ್‌

ಶಹಾಬಾದ್‌ ಸಂಪೂರ್ಣ ಬಂದ್‌

ಲಾಕ್ ಡೌನ್ ಉಲ್ಲಂಘಿಸಿದವರಿಗೆ ರಸ್ತೆಯಲ್ಲಿ ಯೋಗಾಸನ ಶಿಕ್ಷೆ

ಲಾಕ್ ಡೌನ್ ಉಲ್ಲಂಘಿಸಿದವರಿಗೆ ರಸ್ತೆಯಲ್ಲಿ ಯೋಗಾಸನ ಶಿಕ್ಷೆ

ಮಾಹಿತಿ ನೀಡದವನ ಕುಟುಂಬಕ್ಕೇ ಆಪತ್ತು!

ಮಾಹಿತಿ ನೀಡದವನ ಕುಟುಂಬಕ್ಕೇ ಆಪತ್ತು!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

Sweet-Covid

ಕೋವಿಡ್ ಸ್ವೀಟ್ ತಿನ್ನೋಕೆ ನೀವು ರೆಡೀನಾ?

ನಾವೀಗ ಯುದ್ಧ ಪರಿಸ್ಥಿತಿಯಲ್ಲಿದ್ದೇವೆ;ಬಡವರಿಗೆ ನೆರವಾಗಿ, ಮಾನವೀಯತೆ ತೋರಿಸಿ:ಪ್ರಧಾನಿ ಅಭಿಮತ

ನಾವೀಗ ಯುದ್ಧ ಪರಿಸ್ಥಿತಿಯಲ್ಲಿದ್ದೇವೆ;ಬಡವರಿಗೆ ನೆರವಾಗಿ, ಮಾನವೀಯತೆ ತೋರಿಸಿ:ಪ್ರಧಾನಿ ಅಭಿಮತ

ಜಮಾತ್‌ನಿಂದ ಕೋವಿಡ್ 19 ವೈರಸ್ ಹರಡುವಿಕೆ ಪ್ರಮಾಣ ದ್ವಿಗುಣ ಸಾಬೀತು: ವೈದ್ಯ

ಜಮಾತ್‌ನಿಂದ ಕೋವಿಡ್ 19 ವೈರಸ್ ಹರಡುವಿಕೆ ಪ್ರಮಾಣ ದ್ವಿಗುಣ ಸಾಬೀತು: ವೈದ್ಯ

ವೆನ್ಲಾಕ್  ಹೊಸ ಬ್ಲಾಕ್‌ ಕೋವಿಡ್‌ 19 ಚಿಕಿತ್ಸೆಗೆ ಸಜ್ಜು

ವೆನ್ಲಾಕ್  ಹೊಸ ಬ್ಲಾಕ್‌ ಕೋವಿಡ್‌ 19 ಚಿಕಿತ್ಸೆಗೆ ಸಜ್ಜು