ನಡೆಯದ ಒಬಿಸಿ ಸಂವಾದ: ಮುಖಂಡರಲ್ಲಿ ಅಸಮಧಾನ

Team Udayavani, Feb 27, 2018, 11:50 AM IST

gul-7.jpg

ಕಲಬುರಗಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕಲಬುರಗಿ ಪ್ರವಾಸದ ವೇಳೆ ದೀನ ದಲಿತರಿಗಾಗಿ, ದುರ್ಬಲರ ಭೇಟಿ ನಿಶಬ್ದವಾಗಿತ್ತು. ಕಾಂಗ್ರೆಸ್‌ನ ಟೀಕೆ ಹೊರತು ಪಡಿಸಿ ಒಬಿಸಿ ಮುಖಂಡರೊಂದಿಗೆ ಮುಖ ಕೊಟ್ಟು ಮಾತನಾಡಲಿಲ್ಲ. ಉದ್ಯಮಿಗಳು ಹಾಗೂ ವ್ಯಾಪಾರಸ್ಥರ ತೊಳಲಾಟವನ್ನು ಕಿವಿಗೊಟ್ಟು ಕೇಳಲಿಲ್ಲ..

ಎರಡು ದಿನಗಳಲ್ಲಿ ಮೊದಲ ದಿನ ಸಿದ್ದು ಹಾಗೂ ಅವರ ಸರಕಾರವನ್ನು ಮತ್ತು ಎರಡನೇಯ ದಿನ  ದಿ| ಧರ್ಮಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆಗೆ ಗುರಿಯಾಗಿಸಿದ  ಅಮಿತ್‌ ಶಾ ಅವರು ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಬಿಜೆಪಿ ಅಭಿಮಾನಿಗಳಿಗೆ ಏನನ್ನು ಹೇಳೆದೆ ಮೌನವಾಗಿ ಇದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ದೀನ ದುರ್ಬಲರ ಹಾಗೂ ಹಿಂದೂಳಿದ ವರ್ಗಗಳ ಮುಖಂಡರ ಜೊತೆಯಲ್ಲಿ ಕುಳಿತು ಮಾತನಾಡುವವರಿದ್ದರು. ಆದರೆ ಏಕಾಏಕಿಯಾಗಿ
ವರಸೆ ಬದಲಿಸಿದರು. ರವಿವಾರ ಉದ್ಯಮಿಗಳ ಸಂವಾದದಲ್ಲಿ ತಡವಾಗಿದೆ ಎಂದು ಪ್ರಶ್ನೆಗಳನ್ನು ಅರ್ಧಕ್ಕೆ ತುಂಡರಿಸಿದರು. ಎಲ್ಲದಕ್ಕೂ ವಿವರವಾಗಿ ಬರೆದು ನನಗೆ ಮೇಲ್‌ ಮಾಡಿ ಎನ್ನುತ್ತಲೇ ಸಾಗಿದರು. ಉದ್ಯಮಿಗಳು ಮನಸ್ಸಿನಲ್ಲಿರುವ ಜಿಎಸ್‌ಟಿ, ಬೆಲೆ ಏರಿಕೆ, ತೊಗರಿ ವಲಯದ ಸಮಸ್ಯೆ, ರೈತರ ಸಮಸ್ಯೆ, ವ್ಯಾಪಾರಿಗಳಿಗೆ ಸಾಲದ ಹಾಗೂ ಬಡ್ಡಿಯ ಕುರಿತು ಏನನ್ನು ಹೇಳಲೇ ಇಲ್ಲ. ಅಪಾರ ನಿರೀಕ್ಷೆ ಇಟ್ಟು ಬಂದಿದ್ದ ಉದ್ಯಮಿಗಳು, ಬುದ್ಧಿ ಜೀವಿಗಳು ಕೇವಲ ಚಪ್ಪಾಳೆ ಹೊಡೆದು ಸುಮ್ಮನೆ ಹೊರ ನಡೆದರು. 

ಎಡರನೇ ದಿನ ಸೋಮವಾರವೂ ಮಠಗಳಿಗೆ ಭೇಟಿ ಮಾಡಿದ ಅವರು, ಗೋಲ್ಡ್‌ ಹಬ್‌ನಲ್ಲಿ ಏರ್ಪಡಿಸಿದ್ದ ಯಾದಗಿರಿ, ಗುಲಬರ್ಗಾ ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರ ಸಂವಾದ ಕಾರ್ಯಕ್ರಮವನ್ನು ತುಂಡರಿಸಿದರು. ತಮ್ಮ ಮಾತಿಗೆ ಸೀಮಿತ ಮಾಡಿ ಜನರ ಪ್ರಶ್ನೆಗಳ ಮುದ್ರಿತ ಪ್ರತಿ ನನಗೆ ಕೊಡಿ ಉತ್ತರಿಸುತ್ತೇನೆ ಎಂದು ಹೇಳಿದರು.

ಪುನಃ ಕಾಂಗ್ರೆಸ್‌ ಸರಕಾರದ ವಿರುದ್ಧ ವಾಗ್ಧಾಳಿ ಮಾಡಿದರು. ಅಪ್ಪಿ ತಪ್ಪಿಯೂ ರೈತರ ಸಮಸ್ಯೆಗಳ ಕುರಿತು ಗಂಭೀರತೆಯಿಂದ ಕೇಳಲೂ ಇಲ್ಲ.. ಮಾತಾಡಲಿಲ್ಲ.. ಇಡೀ ಎರಡು ದಿನಗಳ ಪ್ರವಾಸದಲ್ಲಿ ತುಂಬಾ ಗುಪ್ತಾವಾಗಿ ಇದ್ದರು. ವೇದಿಕೆಯಲ್ಲಿ ಬಹುತೇಕ ನಾಯಕರ ಜೊತೆ ಮಾತನಾಡಿದ್ದು ಕಡಿಮೆ. ಕೆಲವು ಉತ್ತರಗಳಿಗಾಗಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಡೆ ಕೈ ಮಾಡಿದರು.

ದೇಹಭಾಷ್ಯೆಯಲ್ಲೂ ಲಗುಬಗೆ ಇತ್ತೇ ಹೊರತು. ತಂತ್ರಗಳು ಕಾಣಲ್ಲಿಲ್ಲ.. ಹೈಕ ಭಾಗದ ಜನರನ್ನು, ದಲಿತರನ್ನು ಹಾಗೂ ಆಸ್ಪ್ರುಶ್ಯರನ್ನು
ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದರಾದರೂ ಅವರ ಸಮಸ್ಯೆಗಳನ್ನು ಹತ್ತಿರದಿಂದ ಕೇಳಲಿಲ್ಲ. ಭಾವಿ ಮುಖ್ಯಮಂತ್ರಿ
ಯಡಿಯೂರಪ್ಪ ಎನ್ನುವ ಒಂದು ಮಾತು ಮಾತ್ರವೇ ಹೇಳಿದ ಅವರು, ಪಕ್ಷದ ತಂತ್ರಗಳು ಪ್ರಖರವಾಗಿರಲಿಲ್ಲ ಎಂದೇ ಹೇಳಬೇಕಾಗಿದೆ.

ಆದರೂ ಅವರ ಪ್ರವಾಸ ಬಿಜೆಪಿಯಲ್ಲಿ ಚೈತನ್ಯವಂತೂ ತಂದಿದೆ. ಕಾರ್ಯಕರ್ತರಿಗೆ ಹಾಗೂ ಪಕ್ಷದ ಅಭಿಮಾನಿಗಳಿಗೆ ಟಾನಿಕ್‌
ಆಗಿದೆ. ಶಾ ಅವರ ಒಂದು ಮಾತು ಸಿದ್ದು ಸರಕಾರ ಕಿತ್ತೂಗೆಯಿರಿ ಎನ್ನುವುದು ಜನರನ್ನು ಕಾಡಿದ್ದು ಸುಳ್ಳಲ್ಲ.. ಆದರೆ, ಒಬಿಸಿ ಸಂವಾದವನ್ನು ಮೊಟಕುಗೊಳಿಸಿದ್ದು ಮಾತ್ರ ಎರಡು ಜಿಲ್ಲೆಗಳ ಮುಖಂಡರಿಗೆ ತುಂಬಾ ನೋವು ತಂದಿದೆ. 20ಕ್ಕೂ ಹೆಚ್ಚು ಸಮುದಾಯಗಳ ಮುಖಂಡರಿಗೆ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಲಾಗಿತ್ತು. ತಮ್ಮ ಸಮುದಾಯಗಳ ನೋವುಗಳನ್ನು ಹೇಳಿಕೊಳ್ಳುವವರಿದ್ದರು. ಆದರೆ, ಅದು ಆಗಲೇ ಇಲ್ಲ. ಹಿಂದೂಳಿದ ವರ್ಗಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೇಳುತ್ತಾರೆ ಎನ್ನುವ ಕಾರಣಕ್ಕೆ ಮೇಲ್ವರ್ಗದ ಕೆಲವು ನಾಯಕರು ಸಂವಾದಕ್ಕೆ ಕೊಕ್ಕೆ ಹಾಕಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಸೂರ್ಯಕಾಂತ ಎಂ.ಜಮಾದಾರ

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.