ಸೇವಾಲಾಲ ಮಾಹಿತಿ ಪಠ್ಯದಲ್ಲಿಲ್ಲ: ರಾಠೋಡ

ಡಾ| ಜಾಧವಗೆ ಕೇಂದ್ರ ಮಂತ್ರಿಯಾಗುವ ಕಾಲಸರ್ಕಾರಗಳಿಂದ ಬಂಜಾರಾ ಸಮುದಾಯಕ್ಕೆ ಅನ್ಯಾಯ

Team Udayavani, Feb 16, 2020, 10:37 AM IST

ವಾಡಿ: ಲಂಬಾಣಿ ಜನಾಂಗದ ಧರ್ಮಗುರು ಸಂತ ಶ್ರೀ ಸೇವಾಲಾಲ ಮಹಾರಾಜರ ಬದುಕಿನ ಕುರಿತು ಒಂದನೇ ತರಗತಿಯಿಂದ ಪಿಎಚ್‌ಡಿ ವರೆಗಿನ ಪಠ್ಯಗಳಲ್ಲಿ ಕನಿಷ್ಟ ಒಂದು ಪುಟದಷ್ಟೂ ಮಾಹಿತಿಯಿಲ್ಲ. ದೇಶದಲ್ಲಿ ಆರು ಕೋಟಿ ಜನಸಂಖ್ಯೆಯಿದ್ದರೂ ಕೇಂದ್ರದಲ್ಲಿ ಬಂಜಾರಾ ಸಮುದಾಯಕ್ಕೆ ಮಂತ್ರಿ ಸ್ಥಾನವಿಲ್ಲ ಎಂದು ಅಖೀಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ, ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬಂಜಾರಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 281ನೇ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಅಪರಾ  ಜನಾಂಗ ಎಂದು ಘೋಷಿಸಿ ಕಾನೂನು ಪಾಸ್‌ ಮಾಡಿದ್ದ ಬ್ರಿಟಿಷ ಸರಕಾರ, ಆರು ವರ್ಷದಲ್ಲಿ ಹತ್ತು ಸಾವಿರ ಲಂಬಾಣಿಗರನ್ನು ಗಲ್ಲಿಗೇರಿಸಿತ್ತು. ಬ್ರಿಟಿಷರ ಹಿಂಸಾತ್ಮಕ ಧೋರಣೆ, ಕ್ರೂರ ದಬ್ಟಾಳಿಕೆಗೆ ನಲುಗಿದ್ದ ಬಂಜಾರಾ ಜನಾಂಗವನ್ನು ಅಂದು ಕಾಪಾಡಿದ್ದು ಸೇವಾಲಾಲ ಮಹಾರಾಜರು. ಬಸವಾದಿ ಶರಣರು ದಾಖಲಿಸಿರುವ ವಚನ ಚಿಂತನೆಗಳಂತೆ ಸೇವಾಲಾಲ ಮಹಾರಾಜರೂ ತಮ್ಮದೆ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಲಂಬಾಣಿ ಸುಮುದಾಯಕ್ಕೆ ಭಾಷೆಯಿದ್ದು, ಲಿಪಿ ಇಲ್ಲದ ಕಾರಣ ಅವು ದಾಖಲಾಗಿಲ್ಲ. ಇಂಥಹ ಮಹಾನ್‌ ಸಂತನ ಬದುಕನ್ನು ಪಠ್ಯಗಳಲ್ಲಿ ಅಳವಡಿಸದೆ ಸರಕಾರಗಳು ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿವೆ ಎಂದು ಆರೋಪಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಬಂಜಾರಾ ಸಮುದಾಯದ ಡಾ| ಉಮೇಶ ಜಾಧವ ಅವರನ್ನು ಸಂಸದರನ್ನಾಗಿ ಮಾಡಲು ಮಾಲೀಕಯ್ಯ ಗುತ್ತೇದಾರ ಮತ್ತು ನಾನು ಜೋಡೆತ್ತಿನಂತೆ ದುಡಿದಿದ್ದೇವೆ. ಸರಳ ವ್ಯಕ್ತಿತ್ವದ ಡಾ| ಉಮೇಶ ಜಾಧವ ಪ್ರಥಮ ಬಾರಿಗೆ ಹತ್ತು ಸಾವಿರ ಜನರನ್ನು ವಿಶೇಷ ರೈಲಿನಲ್ಲಿ ಕರೆದೊಯ್ದು ದೆಹಲಿ ಸಂಸತ್‌ ಭವನದ ಮುಂದೆ ಸೇವಾಲಾಲ ಜಯಂತಿ ಮಾಡುತ್ತಿದ್ದಾರೆ. ಸಂಸದ ಡಾ| ಜಾಧವಗೆ ಕೇಂದ್ರ ಮಂತ್ರಿಯಾಗುವ ಕಾಲ ಸನ್ನಿಹಿತವಾಗಿದೆ. ಅವರನ್ನು ಕೇಂದ್ರ ಮಂತ್ರಿ ಮಾಡುವವರೆಗೂ ನಿದ್ರೆ ಮಾಡುವುದಿಲ್ಲ. ಮುಖ್ಯಂತ್ರಿಗಳಿಂದ ಸೇವಾಲಾಲ ಭವನಕ್ಕೆ ಇನ್ನಷ್ಟು ಅನುದಾನ ಬಿಡುಗಡೆ
ಮಾಡಿಸುವುದಾಗಿ ಭರವಸೆ ನೀಡುವ ಮೂಲಕ ಸೇರಿದ್ದ ಸಾವಿರಾರು ಜನರಿಂದ ಚೆಪ್ಪಾಳೆಗಿಟ್ಟಿಸಿಕೊಂಡರು.

ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು. ಹಳಕರ್ಟಿ ಮಠದ ಶ್ರೀ ಮುನೀಂದ್ರ ಸ್ವಾಮೀಜಿ, ಯಲ್ಲಾಲಿಂಗ ಆಶ್ರಮದ ಶ್ರೀ ಜೇಮಸಿಂಗ್‌ ಮಹಾರಾಜ, ಅಳ್ಳೊಳ್ಳಿಯ ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಹಳಕರ್ಟಿ ದರ್ಗಾ ಶರೀಫ್‌ ಅಬುತುರಾಬಶಹಾ ಖ್ವಾದ್ರಿ, ಯರಗೋಳ ಶ್ರೀ, ಶ್ರೀ ಠಾಕೂರ ಮಹಾರಾಜ ಸಾನ್ನಿಧ್ಯ, ಮಾಜಿ ಶಾಸಕ ವಾಲ್ಮೀಕಿ ನಾಯಕ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಅಧ್ಯಕ್ಷೆ ಮೈನಾಬಾಯಿ ಜಿ. ರಾಠೊಡ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಶಾಸಕ ಡಾ| ಅವಿನಾಶ ಜಾಧವ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ, ಚಿತ್ರನಟಿ ತನುಜಾ ಪವಾರ, ಪಿಎಸ್‌ಐ ವಿಜಯಕುಮರ ಭಾವಗಿ, ಸಂಗೀತಾ ಎಲ್‌.ಪವಾರ, ಜಿ.ಪಂ ಸದಸ್ಯೆ
ಸೋನಿಬಾಯಿ ಚವ್ಹಾಣ, ಎಸಿಸಿ ಮುಖ್ಯಸ್ಥ ಕೆ.ಆರ್‌. ರೆಡ್ಡಿ, ಮುಖಂಡರಾದ ಡಾ| ರಾಮು ಪವಾರ, ಸದಾಶಿವ ಕಟ್ಟಿಮನಿ, ನೀಲಯ್ಯಸ್ವಾಮಿ ಮಠಪತಿ, ಸಿದ್ದಣ್ಣ ಕಲಶೆಟ್ಟಿ, ಬಸವರಾಜ ಪಂಚಾಳ, ರಮೇಶ ಕಾರಬಾರಿ, ತುಕಾರಾಮ ರಾಠೊಡ, ಈಶ್ವರ ರಾಠೊಡ, ಗಣೇಶ ಚವ್ಹಾಣ, ನಾಮದೇವ ಚವ್ಹಾಣ, ರಾಮು ರಾಠೊಡ ಪಾಲ್ಗೊಂಡಿದ್ದರು. ಸುರೇಶ ರಾಠೊಡ ನಿರೂಪಿಸಿದರು. ದೇವಜಿ ನಾಯಕ ವಂದಿಸಿದರು.

ಪ್ರತಿಭಾವಂತ ಬಂಜಾರಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು
ಪಟ್ಟಣದಾದ್ಯಂತ ನಡೆದ ಸೇವಾಲಾಲ ಮಹಾರಾಜರ ಭವ್ಯ ಭಾವಚಿತ್ರ ಮೆರವಣಿಗೆಯಲ್ಲಿ ವಿವಿಧ ತಾಂಡಾಗಳ ಸಾವಿರಾರು ಜನರು ಪಾಲ್ಗೊಂಡಿದ್ದರು. ಮೊಳಕೆಯೊಡೆದ ಸಸಿಗಳನ್ನು ಹೊತ್ತು ಸಾಗಿದ ಲಂಬಾಣಿ ಯುವತಿಯರು ಹಾಗೂ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ