ಭಾಗ್ಯವಂತಿ ಕ್ಷೇತ್ರದಲ್ಲಿ ಜಲ’ಕ್ಷಾಮ’

Team Udayavani, Jun 4, 2019, 11:47 AM IST

ಅಫಜಲಪುರ: ಘತ್ತರಗಿ ಭೀಮಾ ನದಿಯಲ್ಲಿರುವ ಕೊಳಚೆ ನೀರನ್ನೇ ಹಿಡಿದು ಮಗುವಿಗೆ ಪುಣ್ಯಸ್ನಾನ ಮಾಡಿಸುತ್ತಿರುವುದು.

ಅಫಜಲಪುರ: ಭೀಕರ ಬರದಿಂದ ತಾಲೂಕಿನ ಜೀವನದಿ ಭೀಮಾ ನದಿ ಬತ್ತಿರುವುದರಿಂದ ನದಿ ದಡದಲ್ಲಿರುವ ಪುಣ್ಯಕ್ಷೇತ್ರ ಘತ್ತರಗಿಯಲ್ಲೀಗ ಪುಣ್ಯಸ್ನಾನಕ್ಕಲ್ಲ, ಪೂಜೆಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು. ಸದಾ ಭಕ್ತರಿಂದ ಪ್ರತಿ ಅಮಾವಾಸ್ಯೆ ಮತ್ತು ಶುಕ್ರವಾರ ತುಂಬಿರುತ್ತಿದ್ದ ಘತ್ತರಗಿಯಲ್ಲೀಗ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಭಾಗ್ಯವಂತಿ ಕ್ಷೇತ್ರದಲ್ಲಿಗ ಜಲಕ್ಷಾಮ ಉಂಟಾಗಿದೆ. ಭಕ್ತರಷ್ಟೇ ಅಲ್ಲ ಜಾನುವಾರುಗಳು ಪರದಾಡುವಂತಾಗಿದೆ.

ಕೊಳಚೆ ನೀರೇ ಪಾವನ ತೀರ್ಥ: ಎಂತಹ ಬರ ಬಂದರೂ ಭಾಗ್ಯವಂತಿ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಾರೆ. ಆದರೆ ಇತಿಹಾಸದಲ್ಲೇ ಇಷ್ಟೊಂದು ಭೀಕರ ಬರ ಬಂದಿರಲಿಲ್ಲ. ನದಿಗಿಳಿದು ಪುಣ್ಯಸ್ನಾನ ಇಲ್ಲ ಬಿಡಿ, ಪಾವನ ತೀರ್ಥವಾದರೂ ತೆಗೆದುಕೊಂಡು ಹೋಗಬೇಕೆಂದರೆ ನದಿಯಲ್ಲಿ ಕೊಳಚೆ ನೀರು ನಿಂತಿರುವುದರಿಂದ ಬಂದ ಭಕ್ತರಿಗೆ ಈಗ ಕೊಳಚೇ ನೀರೇ ‘ಪಾವನ ತೀರ್ಥ’ವಾಗಿದೆ. ಹೀಗಾಗಿ ಭಕ್ತರು ಇದೇ ನೀರನ್ನು ಬಾಟಲಿಗಳಲ್ಲಿ ಹಿಡಿದುಕೊಂಡು ಭಕ್ತರು ಪಾವನ ತೀರ್ಥವೆಂದು ಕುಡಿಯುವಂತಾಗಿದೆ. ಇದೇ ನೀರನ್ನೇ ಬಾಟಲಿಯಲ್ಲಿ ಹಿಡಿದುಕೊಂಡು ಪುಣ್ಯಸ್ನಾನವೆಂದು ಮಾಡುತ್ತಿದ್ದಾರೆ.

ನದಿಯಲ್ಲೇ ಬಟ್ಟೆ ಬಿಡುವ ಭಕ್ತರು: ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡುವ ಭಕ್ತರು ಬಳಿಕ ಸೀರೆ, ಪ್ಯಾಂಟ್, ಶರ್ಟ್‌ ಸೇರಿದಂತೆ ಬಟ್ಟೆಗಳನ್ನು ಬಿಡುತ್ತಿದ್ದಾರೆ. ಹೀಗಾಗಿ ನದಿ ಮಲೀನವಾಗುತ್ತಿದೆ. ಬಟ್ಟೆ ಬದಲಾಯಿಸಲೆಂದೇ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗಿದ್ದರೂ ಯಾರೂ ಕೋಣೆಗಳಲ್ಲಿ ಬಟ್ಟೆ ಬದಲಾಯಿಸಲ್ಲ. ಸಂಬಂಧಪಟ್ಟವರು ನದಿ ಉಳಿವಿಗೆ ಕ್ರಮ ಕೈಗೊಳ್ಳಬೇಕಿದೆ.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಮನುಷ್ಯ ತನಗೆ ಅರಿವಿಲ್ಲದೆಯೇ ಸೃಷ್ಟಿಸುವ ವಿಸ್ಮಯ ಲೋಕ ಎಲ್ಲರನ್ನು ಸೆಳೆಯುತ್ತದೆ, ಕಾಡುತ್ತದೆ ಹಾಗೂ ಚಿಂತನೆಗೆ ಹಚ್ಚುತ್ತದೆ. ಮಲ್ಲಿಕಾರ್ಜುನ ಕಡಕೋಳ...

  • ಕಾಳಗಿ: ತಾಲೂಕಿನ ರಾಜಾಪುರ ಗ್ರಾಮದಲ್ಲಿ ರೈತರ ಅನುಕೂಲಕ್ಕಾಗಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದ್ದರೂ ಮಳೆನೀರು ನಿಲ್ಲುತ್ತಿಲ್ಲ. ಇತ್ತೀಚೆಗೆ ಸುರಿದ...

  • ಕಲಬುರಗಿ: ವಿಶ್ವ ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಭಾರತ ಪರಿಹಾರ ಮಾರ್ಗ ಹೊಂದಿದೆಯಲ್ಲದೇ, ನೀರಿಗಾಗಿ ರಾಷ್ಟ್ರಗಳ ಮಧ್ಯೆ ಮುಂಬರುವ ಮೂರನೇ ಮಹಾಯುದ್ಧವನ್ನು...

  • „ಶಿವಕುಮಾರ ಬಿ. ನಿಡಗುಂದಾ ಸೇಡಂ: ಈ ದೇವಾಲಯಕ್ಕಿದೆ 1200 ವರ್ಷಗಳ ಇತಿಹಾಸ. ಈ ದೇವನಿಗೆ ಭಕ್ತಿಯಿಂದ ನಮಿಸಿದರೆ ಸರ್ವ ದುಃಖ ಪರಿಹಾರವಾಗಿ, ಸುಖ-ಶಾಂತಿ ನೆಲೆಸುತ್ತದೆ....

  • ಕಲಬುರಗಿ: ಸರ್ಕಾರಿ ಶಾಲೆಗಳ ಬದಲಿಗೆ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು...

ಹೊಸ ಸೇರ್ಪಡೆ